• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ಹರಿದಿರುವ ಕನ್ನಡ ಧ್ವಜದ ಬದಲಾವಣೆಗೆ ಅವಕಾಶ ಕೊಡುತ್ತಿಲ್ಲ ಏಕೆ?

ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ಹರಿದಿರುವ ಕನ್ನಡ ಧ್ವಜದ ಬದಲಾವಣೆಗೆ ಅವಕಾಶ ಕೊಡುತ್ತಿಲ್ಲ ಏಕೆ?

ಭಾವಿ ಅವರ ಏಕಾಂಗಿ ಹೋರಾಟ

ಭಾವಿ ಅವರ ಏಕಾಂಗಿ ಹೋರಾಟ

16 ವರ್ಷಗಳಿಂದ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರೋ ವರಗೆ ಕಾಲಿನಲ್ಲಿ‌‌ ಚಪ್ಪಲಿ ಧರಿಸಲ್ಲ‌ ಎಂದು ಈ ಹಿಂದೆ ಶಪಥ ಮಾಡಿದ್ದರು ಭಾವಿ. ಇದೀಗ‌ ಮತ್ತೆ ಧ್ವಜ ಬದಲಾವಣೆ ಆಗೋ ವರೆಗೆ ಚಪ್ಪಲಿ ಹಾಕಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

  • Share this:

ಬೆಳಗಾವಿ:  ಕುಂದಾನಗರಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕನ್ನಡಿಗರು ಕೆಚ್ಚೆದೆಯಿಂದ ಹೇಳುತ್ತಾರೆ. ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ಧ್ವಜ ಹಾಕೋದು ಸಾಮಾನ್ಯ. ಆದರೆ ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ  ಧ್ವಜ ಸ್ಥಾಪನೆಯಿಂದ ಇಲ್ಲಿಯವರಗೆ ಸದ್ದು ಮಾಡುತ್ತಲೇ ಇದೆ. ಸದ್ಯ ಧ್ವಜ ಬದಲಾವಣೆಗಾಗಿ ಹೋರಾಟಗಾರರು ಧರಣಿ‌ ಮಾಡೋ ಸ್ಥಿತಿ ನಿರ್ಮಾಣವಾಗಿದೆ. ಪಾಲಿಕೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಇರೋ ಅಧಿಕಾರಿಗಳು ಹರಿದು ಧ್ವಜ ನೋಡಿಯೂ ಸುಮ್ಮನೆ ಇರೋದರ ಹಿಂದೆ ಯಾರದೋ ಒತ್ತಡ ತಂತ್ರ ಇದೆ ಎಂದು ಹೋರಾಟಗಾರರ ಆರೋಪ.


ಬೆಳಗಾವಿ ಕನ್ನಡಿಗರ ದಶಕಗಳಿಂದ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಾಡಬೇಕು ಎಂದು ಆಗ್ರಹಿಸಿದ್ದರು. 2020ರ ಡಿಸೆಂಬರ್ 28ರಂದು ಹೋರಾಟಗಾರ ಶ್ರೀನಿವಾಸ್ ತಾಳೂರಕರ್ ನೇತೃತ್ವದಲ್ಲಿ ಕನ್ನಡ ಧ್ವಜ ಪಾಲಿಕೆ ಮುಂದೆ ಸ್ಥಾಪನೆ ಮಾಡಲಾಯಿತು. ಇದನ್ನು ತೆರವುಗೊಳಿಸಂತೆ ತಡೆಯಲು ಹಲವು, ‌ರಾತ್ರಿ ಹೋರಾಟಗಾರರ ಧರಣಿ ಮಾಡಿದ್ರು. ಬಳಿಕ ಕನ್ನಡ ಧ್ವಜ ಅಲ್ಲಿ ಗಟ್ಟಿಯಾಗಿ ಉಳಿದುಕೊಂಡಿದೆ. ಈ ಧ್ವಜ ವಿಚಾರವನ್ನು ಮುಂದಿಟ್ಟಕೊಂಡು ಎಂಇಎಸ್ ರಾಜಕೀಯ ಆರಂಭಿಸಿತು.


ಎಂಇಎಸ್ ಕನ್ನಡ ಧ್ವಜ ತೆರವುಗೊಳಿಸುವಂತೆ ಹಲವು ಸಹ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲಿಸಿತು. ಇಷ್ಟೆಲ್ಲ ಪ್ರಯತ್ನ ನಡೆದರು ಸಮಸ್ಯೆ ಇತ್ಯರ್ಥವಾಗಲಿಲ್ಲ. ಬಳಿಕ ಎಂಇಎಸ್ ಶಿವಸೇನೆ ಸಂಘಟನೆಯ ‌ಜತೆಗೆ ಸೇರಿಕೊಂಡು ಬೆಳಗಾವಿಯ‌ ಮರಾಠಿ ಭಾಷಿಕರು ಇರೋ ಪ್ರದೇಶದಲ್ಲಿ ನಮ್ಮ ಮೇಲೆ ಅನ್ಯಾಯ ನಡೆಯುತ್ತಿದೆ ಎಂದು ಪ್ರಚಾರ ಆರಂಭಿಸಿತು. ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿ ಇರೋ ಶಿವಸೇನೆಯು ಉರಿಯುವ ಬೆಂಕಿಗೆ ತುಪ್ಪ ಸುರಿಯುವ‌ ಯತ್ನ ಸಹ ಮಾಡಿತು.


ಇದನ್ನೂ ಓದಿ: ಅಕ್ಕನ ಮದುವೆಯಾದ ವರ್ಷದೊಳಗೆ ಭಾವನೊಂದಿಗೆ ಪರಾರಿಯಾದ ತಂಗಿ.. ತಂದೆಯ ಕಣ್ಣೀರು!


ಮೇ ತಿಂಗಳಲ್ಲಿ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಎಂಇಎಸ್ ಹಾಗೂ ಶಿವಸೇನೆ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಯೋಜಿಸಿದ್ದರು. ಇದು ಬಿಜೆಪಿ ಪಕ್ಷಕ್ಕೆ ದೊಡ್ಡ ಹಾನಿಯನ್ನು ಮಾಡಿದೆ. ಎಂಇಎಸ್ ಬೆಂಬಲಿಲ ಅಭ್ಯರ್ಥಿ ಲಕ್ಷಕ್ಕೂ ಅಧಿಕ ಮತ ಪಡೆದರು. ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ ‌ಹಾಗೂ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಎಂಇಎಸ್ ಗಣನೀಯ ಸಾಧನೆ ಮಾಡಿತು. ಇದರಿಂದ ಮುಂದಿನ ಪಾಲಿಕೆ ಚುನಾವಣೆ, ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರುವ ಸೂಚನೆ ರಾಜಕೀಯ ನಾಯಕರಿಗೆ ಸಿಕ್ಕಿದೆ.


ಇದನ್ನು ಖಂಡಿಸಿ ಇಂದು ಕನ್ನಡ ಪರ ಹೋರಾಟಗಾರ್ತಿ ಕಸ್ತೂರಿ ಭಾವಿ ಏಕಾಂಗಿ ಧರಣಿ ನಡೆಸಿದರು. ಮಳೆಯಲ್ಲಿ ಧರಣಿ ನಡೆಸುತ್ತಿದ್ದ ಬಾವಿಯನ್ನು ಪೊಲೀಸರು ತಳ್ಳಾಟ, ನೂಕಾಟ ಮಾಡಿಕೊಂಡು ಕರೆದುಕೊಂಡು ಹೋದರು. 16 ವರ್ಷಗಳಿಂದ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರೋ ವರಗೆ ಕಾಲಿನಲ್ಲಿ‌‌ ಚಪ್ಪಲಿ ಧರಿಸಲ್ಲ‌ ಎಂದು ಈ ಹಿಂದೆ ಶಪಥ ಮಾಡಿದ್ದರು ಭಾವಿ. ಇದೀಗ‌ ಮತ್ತೆ ಧ್ವಜ ಬದಲಾವಣೆ ಆಗೋ ವರೆಗೆ ಚಪ್ಪಲಿ ಹಾಕಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಬೆಳಗಾವಿ ಒಂದು ಕನ್ನಡ ಧ್ವಜ‌ ರಾಜಕೀಯ ನಾಯಕರ ನಿದ್ದೆಗೆಡಿಸಿದೆ.

Published by:Kavya V
First published: