Belagavi: ಹಿಜಾಬ್ ಧರಿಸಿಕೊಂಡೇ 16 ಚಿನ್ನದ ಪದಕ ಪಡೆದ ರಾಯಚೂರಿನ ವಿದ್ಯಾರ್ಥಿನಿ

ಬುಷ್ರಾ ಮತೀನ್

ಬುಷ್ರಾ ಮತೀನ್

  • Share this:
ಬೆಳಗಾವಿ(ಮಾ.10): ಬೆಳಗಾವಿಯಲ್ಲಿ (Belagavi) ಇಂದು ಅದ್ಧೂರಿಯಾಗಿ ವಿಟಿಯು 21ನೇ ವಾರ್ಷಿಕ ಘಟಿಕೋತ್ಸವ ನಡೆಯಿತು. ಲೋಕಸಭೆ ಸಭಾಪತಿ ಓಂ ಬಿರ್ಲಾ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರಧಾನ ಮಾಡಿದ್ರು. ಅಲ್ಲದೇ ಯುನಿವರ್ಸಿಟಿಗೆ ಟಾಪರ್ ಆದ ರಾಯಚೂರಿನ (Raichuru) ವಿದ್ಯಾರ್ಥಿನಿ ಬುಷ್ರಾ ಮತೀನ್ ಹಿಜಬ್ ಧರಸಿ 16 ಚಿನ್ನದ ಪದಕ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ. ಇತ್ತೀಚಿಗೆ ರಾಜ್ಯದಲ್ಲಿ ಹಿಜಬ್ ವಿಚಾರ (Hijab Controversy) ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ದೇಶದ ಪ್ರತಿಷ್ಠಿತ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ 21ನೇ ವಾರ್ಷಿಕ ಘಟಿಕೋತ್ಸವು  ವಿಟಿಯುನ (VTU) ಅಬ್ದುಲ್ ಕಲಾಂ ಸಭಾಭವದಲ್ಲಿ ಅದ್ಧೂರಿಯಾಗಿ ನಡೆಯಿತು. ಇದೇ ಮೊದಲ ಬಾರಿಗೆ ಘಟಿಕೋತ್ಸವ ಮುಖ್ಯ ಅತಿಥಿಯಾಗಿ ಲೋಕಸಭೆ ಸಭಾಪತಿ ಓಂ ಬಿರ್ಲಾ ಸಾಕ್ಷಿಯಾಗಿದ್ದಾರೆ.

ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅಧ್ಯಕ್ಷತೆ ವಹಿಸಿದ್ರು..ಇನ್ನೂಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ, ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಭಾಗವಹಿಸಿದ್ದರು. ಘಟಿಕೋತ್ಸದಲ್ಲಿ ಮೊದಲಿಗೆ ಮೂವರಿಗೆ ಡಾಕ್ಟರ್ ಆಪ್ ಸೈನ್ಸ್ ಗೌರವ ಪ್ರಧಾನ ಮಾಡಲಾಯಿತು. ಅದರಲ್ಲೂ ಪದ್ಮ ಭೂಷಣ ಪುರಸ್ಕೃತ ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕ ಸೇನಾಪತಿ  ಕ್ರಿಶ್ ಗೋಪಾಲಕೃಷ್ಣನ್, ಪದ್ಮ ಭೂಷಣ ಪುರಸ್ಕೃತ, ಹೈದರಾಬಾದಿನ ಭಾರತೀಯ ಬಯೋಟೆಕ್ ಅಧ್ಯಕ್ಷ ಡಾ. ಕೃಷ್ಣ ಎಲ್ಲಾ ಅವರಿಗೆ ಗಣ್ಯರು ಪ್ರಧಾನ ಮಾಡಿದ್ದಾರೆ.

ಅದೇ ಪದ್ಮಶ್ರೀ ಪುರಸ್ಕೃತ  ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಹೈ ಎನರ್ಜಿ ಭೌತಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೋ.ರೋಹಿಣಿ ಗೊಡಬೋಲೆ ಅವರಿಗೆ ಅನುಪಸ್ಥಿತಿಯಲ್ಲಿ ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರಧಾನ ಮಾಡಲಾಯಿತು. ವಿಟಿಯು ಯುನಿವರ್ಸಿಟಿ ಗೆ ಟಾಪ್ ಬಂದ ಹತ್ತು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ ಮಾಡಲಾಯಿತು.

ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀನ್ 16 ಚಿನ್ನದ ಪದಕ

ಪ್ರಮುಖವಾಗಿ ರಾಯಚೂರಿನ ಎಸ್ ಎಲ‌್ ಎನ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀನ್ 16 ಚಿನ್ನದ ಪದಕ ಪಡೆದು ಯುನಿವರ್ಸಿಟಿ ಗೆ ಟಾಪ್ ಆದ್ರೆ. ಅತ್ತ ಬೆಂಗಳೂರಿನ ಬಿ.ಎನ್.ಎಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ ದಯಾನಂದ 7 ಚಿನ್ನದ ಪದಕ ,ಬೆಂಗಳೂರಿನ ರಮ್ಯಾ ಟಿ 6, ಬೆಂಗಳೂರಿನ ಪ್ರಜ್ಞಾ ಎನ್ 4, ಶಿವಮೊಗ್ಗದ ಪಲ್ಲವಿ ಪಿ 4, ಬೆಂಗಳೂರಿನ ತೇಜಸ್ವಿನಿ ಆರ್ 4, ಬೆಂಗಳೂರಿನ ಅಶ್ವಿತಾ ಎನ್ 3, ದಾವಣಗೆರೆ ಸವಿತಾ ಎಚ್.ಟಿ. 3 ಚಿನ್ನದ ಪದಕವನ್ನ ಗಣ್ಯರು ವಿತರಣೆ ಮಾಡಿದ್ರು.

ವಿದ್ಯಾರ್ಥಿನೀಯರೇ ಮೇಲು ಗೈ

ಎಂದಿನಂತೆ ಈ ಬಾರಿಯೂ ಚಿನ್ನದ ಪದಕ ಗಿಟ್ಟಿಸಿಕೊಳ್ಳುವಲ್ಲಿ ವಿದ್ಯಾರ್ಥಿನೀಯರೇ ಮೇಲು ಗೈ ಸಾಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ ಪಿಎಚ್ ಡಿ, ಎಂಎಸ್ಸಿ ಎಂಜಿನಿಯರಿಂಗ್ ಬೈ ರಿಸರ್ಚ್ ಮತ್ತು  ಇಂಟಿಗ್ರೇಟೆಡ್ ಡುಯಲ್ ಪದವಿ ಪ್ರಧಾನ ಮಾಡಲಾಯಿತು.

ಇದನ್ನೂ ಓದಿ: Karkala Utsava 2022: ಇಂದಿನಿಂದ ಕಾರ್ಕಳ ಉತ್ಸವದ ಸಡಗರ, ಪೌರಕಾರ್ಮಿಕರನ್ನು ಹೆಲಿಕಾಪ್ಟರ್​ನಲ್ಲಿ ಕರೆದೊಯ್ದ ಶಾಸಕ ಸುನೀಲ್ ಕುಮಾರ್

ವಿಶ್ವವಿದ್ಯಾಲಯ 21 ನೇ ಘಟಿಕೋತ್ಸವದಲ್ಲಿ 57,498 ಬಿಇ/ಬಿಟೆಕ್ ಪದವಿ, 902 ಬಿ.ಆರ್ಚ್ ಪದವಿ, 12 ಬಿ.ಪ್ಲೇನ್ ಪದವಿ , 4362 ಎಂಬಿಎ ಪದವಿ, 1387 , ಎಂಟೆಕ್ ಹಾಗೂ 33 ಪಿಜಿ ಡಿಪ್ಲೋಮಾ ಪದವಿಯನ್ನು ಪ್ರಧಾನ ಮಾಡಲಾಯಿತು. ಸರ್ ಎಂ.ವಿಶ್ವೇಶ್ವರಯ್ಯ ಅವರನ್ನ ಮತ್ತು ಅವರ ಹೆಸರಿನ ವಿಟಿಯು ಅನ್ನ ಲೋಕಸಭೆ ಸಭಾಪತಿ ಓಂ ಬಿರ್ಲಾ ಕೊಂಡಾಡಿದರು.

ಇದನ್ನೂ ಓದಿ: ಬೆಂಗಳೂರಿನ ಜನರಿಗೆ ಗುಡ್ ನ್ಯೂಸ್! ಆರಂಭವಾಗಲಿವೆ Namma Clinic ಆಸ್ಪತ್ರೆಗಳು

ಯುವಕರೇ ದೇಶದ ಭವಿಷ್ಯ ವನ್ನ ರೂಪಿಸಬೇಕಿದೆ ಎಂದು ಹೇಳಿದ್ರು..ಅತ್ತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭರವಸೆ ಮತ್ತು ಹೊಸ ಬದಲಾವಣೆ ತರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.
Published by:Divya D
First published: