ಸಾಕುಮಗನೇ ಹಂತಕ: ಬೆಚ್ಚಿ ಬೀಳಿಸಿದ್ದ ಬೆಳಗಾವಿ ತ್ರಿವಳಿ‌ ಕೊಲೆ ರಹಸ್ಯ ಬಯಲು!

ಪ್ರಕರಣದಲ್ಲಿ ಶಿವಾನಂದ ಅಂದಾನಶೆಟ್ಟಿ, ಶಾಂತವ್ವಾ ಅಂದಾಣಶೆಟ್ಟಿ ಹಾಗೂ ಪುತ್ರ ವಿನೋದ್ ಅಂದಾನಶೆಟ್ಟಿ ಭೀಕರ ಹತ್ಯೆ ನಡೆಸಲಾಗಿತ್ತು.

ಬೆಳಗಾವಿ ತ್ರಿವಳಿ ಕೊಲೆಯ ಆರೋಪಿಗಳ ಜೊತೆ ಪೊಲೀಸ್​ ತಂಡ

ಬೆಳಗಾವಿ ತ್ರಿವಳಿ ಕೊಲೆಯ ಆರೋಪಿಗಳ ಜೊತೆ ಪೊಲೀಸ್​ ತಂಡ

  • Share this:
ಬೆಳಗಾವಿ(23)-ಬೆಳಗಾವಿ ಜಿಲ್ಲೆಯ ಜನರನ್ನು ಬೆಚ್ಚಿ ಬಿಳಿಸಿದ್ದ ತ್ರೀವಳಿ ಕೊಲೆ ಪ್ರಕಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದು ಇದೇ ಜನವರಿ 19ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ತ್ರಿವಳಿ ಕೊಲೆ ಪ್ರಕರಣ ನಡೆದಿತ್ತು. ಪ್ರಕರಣ ಬೆನ್ನತ್ತಿದ ದೊಡವಾಡ ಪೊಲೀಸರು ನಾಲ್ಕು ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಶಿವಪ್ಪ ಭಗವಂತನವರ್, ಗೋವಿಂದ ಸಂಗೊಳ್ಳಿ, ಬಸವಂತಪ್ಪ ಅಂದಾನಶೆಟ್ಟಿ ಹಾಗೂ ಮಲ್ಲಿಕಾರ್ಜುನ ಅಂದಾನಶೆಟ್ಟಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಅಷ್ಟಕ್ಕೂ ಈ ಭೀಕರ ಕೊಲೆ ಹಿಂದೆ ಆಸ್ತಿ ವಾರುಸುದಾರತ್ವ ಕೈತಪ್ಪುವು ಭೀತಿಯೆ ಕಾರಣ ಎಂಬುದು ಪೊಲೀಸರು ತನಿಖೆಯಿಂದ ಗೊತ್ತಾಗಿದೆ.

ಘಟನೆ ಹಿನ್ನೆಲೆ?:

ಪ್ರಕರಣದಲ್ಲಿ ಶಿವಾನಂದ ಅಂದಾನಶೆಟ್ಟಿ, ಶಾಂತವ್ವಾ ಅಂದಾಣಶೆಟ್ಟಿ ಹಾಗೂ ಪುತ್ರ ವಿನೋದ್ ಅಂದಾನಶೆಟ್ಟಿ ಭೀಕರ ಹತ್ಯೆ ನಡೆಸಲಾಗಿತ್ತು. ಶಿವಾನಂದ ಅಂದಾನಶೆಟ್ಟಿಗೆ ಮೊದಲು ಒಂದು ಮದುವೆಯಾಗಿದ್ದು ಆಕೆಗೆ ಮಕ್ಕಳಾಗಿರಲಿಲ್ಲ. ನಂತರ ಮದುವೆಯಾಗಿ ಎರಡು ಮಕ್ಕಳು ಹೊಂದಿ ವಿಧವೆಯಾಗಿದ್ದ ಶಾಂತವ್ವ ಎಂಬ ಮಹಿಳೆಯ ಜತೆಗೆ ಶಿವಾನಂದ ಎರಡನೇ ಮದುವೆಯಾಗಿದ್ದನು. ಶಿವಾನಂದ ಹಾಗೂ ಶಾಂತವ್ವ ಇಬ್ಬರು ಒಟ್ಟಿಗೆ ಜೀವನ ನಡೆಸುತ್ತಿದ್ದರು.

ಶಾಂತವ್ವ ಮೊದಲ ಪತಿಯ ಇಬ್ಬರು ಮಕ್ಕಳು ಸಹ ಇದ್ದರು. ಶಿವಾನಂದ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಅಕ್ಕನ ಮಗನಾದ ಶಿವಪ್ಪ ಭಗವಂತನವರ್ ನನ್ನು ಮನೆಯಲ್ಲಿ ಇರಿಸಿಕೊಂಡಿದ್ದನು. ಸಾಕು ಮಗನಂತೆ 15 ವರ್ಷಗಳಿಂದ ಸಾಕಿದ್ದನು. ಶಿವಾನಂದ ಪುತ್ರ ವಿನೋದ್​ನ ಮದುವೆ ಇದೇ ಜನವರಿ 30ಕ್ಕೆ ನಿಗದಿಯಾಗಿತ್ತು.

ಮದುವೆ ನಂತರ ವಿನೋದ್​ಗೆ ತಂದೆ ಶಿವಾನಂದ ತನ್ನ 12 ಎಕರೆ ಆಸ್ತಿಯನ್ನು ನೀಡಲು ನಿರ್ಧರಿಸಿದ್ದನು. ಇದು 15 ವರ್ಷಗಳಿಂದ ಸಾಕುಮಗನಂತೆ ಇದ್ದ ಶಿವಪ್ಪನ ಆಕ್ರೋಶಕ್ಕೆ ಕಾರಣವಾಗಿತ್ತು. ಕೊಲೆಯಾದ ಹಿಂದಿನ ದಿನ ರಾತ್ರಿ ಊಟ ಮಾಡಿ ಆರೋಪಿ ಶಿವಪ್ಪ ಹಾಗೂ ವಿನೋದ್ ಒಂದೇ ಕೊಣೆಯ ಹಾಸಿಗೆಯ ಮೇಲೆ ಮಲಗಿದ್ದರು. ತಡರಾತ್ರಿ ಎದ್ದು ವಿನೋದ್, ಶಿವಾನಂದ ಹಾಗೂ ಶಾಂತವ್ವ ಹತ್ಯೆ ಮಾಡಿ ಪರಾರಿಯಾಗಿದ್ದನು.

ಇದನ್ನೂ ಓದಿ: ನಾಗಮಂಗಲದಲ್ಲೊಂದು ಅಚ್ಚರಿ; ಬಸಪ್ಪನ ಪವಾಡ ಪರೀಕ್ಷಿಸಲು ಹೋಗಿ ಪೇಚಿಗೆ ಸಿಕ್ಕವರು

ಶಿವಪ್ಪ ಭೀಕರ ಹತ್ಯೆ ಮಾಡಲು ಮೂರು ಜನ ಸಂಬಂಧಿಗಳು ಪ್ರಚೋದನೆ ನೀಡಿದ್ದರು. ಅವರ ಪ್ರಚೋದನೆಯ ಹಿಂದೆಯೂ ಒಂದು ಬಲವಾದ ಕಾರಣವಿತ್ತು. ಮೃತ ವಿನೋದ್ ಮೇಲೆ ಎರಡು ವರ್ಷಗಳ ಹಿಂದೆ ಈ ಮೂರು ಜನ ಕೊಲೆ ಯತ್ನ ಮಾಡಿದ್ದರು. ಇದಕ್ಕೆ ವಿನೋದ್ ಮನೆಯ ಪಕ್ಕದ ಖಾಲಿ ಜಾಗ ವಿಚಾರವಾಗಿ ನಡೆದ ಜಗಳ ಕಾರಣವಾಗಿತ್ತು.

ಇದನ್ನೂ ಓದಿ: ಬೇಸಿಗೆ ಆರಂಭಕ್ಕೂ ಮುನ್ನವೇ ಶುರುವಾಯ್ತು ನೀರಿನ ಸಮಸ್ಯೆ; ಡ್ಯಾಂ ತುಂಬಿ ಹರಿದರೂ ತೀರಿಲ್ಲ ಬಳ್ಳಾರಿಯ ದಾಹ

ವಿನೋದ್​ನ ತಂದೆ ಶಿವಾನಂದ ಮೇಲೆ ಸೇಡು ತಿರಿಕೊಳ್ಳಲು  ಮೂರು ಜನ ಆರೋಪಿಗಳು ಶಿವಪ್ಪನಿಗೆ ಪ್ರಚೋದನೆ ನೀಡಿ ಹತ್ಯೆ ಮಾಡಿಸಿದ್ದಾರೆ. ಸದ್ಯ ಪೊಲೀಸರು ನಾಲ್ವರನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ. 15 ವರ್ಷಗಳಿಂದ ಅನ್ನ, ಬಟ್ಟೆ ನೀಡಿದ ಸಿಕ್ಕಿದ ವ್ಯಕ್ತಿಗೆ ಆಸ್ತಿ ಕೈತಪ್ಪುವ ಭೀತಿಯಲ್ಲಿ ಭೀಕರ ಹತ್ಯೆ ಮಾಡಿದ್ದಾನೆ.
First published: