Moral Policing: ಬೆಳಗಾವಿಯಲ್ಲಿ ಒಂದೇ ದಿನ ಮೂರು ನೈತಿಕ ಪೊಲೀಸ್ ಗಿರಿ ಪ್ರಕರಣ!

Belgaum Moral Policing Case: ಅನ್ಯಕೋಮಿನ ಯುವತಿಯರ ಜೊತೆಗೆ  ಹಿಂದು ಯುವಕ ಮಾತನಾಡಿ, ಸುತ್ತಾಡಿದ ವಿಷಯ ಮುಂದೆ ಇಟ್ಟುಕೊಂಡು  ಯುವಕ  ಯುವತಿಯರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ

ಬೆಳಗಾವಿಯಲ್ಲಿ ನೈತಿಕ ಪೊಲೀಸ್​ಗಿರಿ

ಬೆಳಗಾವಿಯಲ್ಲಿ ನೈತಿಕ ಪೊಲೀಸ್​ಗಿರಿ

  • Share this:
ಬೆಳಗಾವಿ(ಅಕ್ಟೋಬರ್,19)- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ (Mangaluru moral policing case) ಪ್ರಕರಣದ ಬಳಿಕ ಬೆಳಗಾವಿಯಲ್ಲೂ ನೈತಿಕ ಪೊಲೀಸಗಿರಿ (Belagavi Moral Policing Case) ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ಮೂರು ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಅದ್ರಲ್ಲೂ ಅನ್ಯಕೋಮಿನ ಯುವತಿಯರ ಜೊತೆಗೆ  ಹಿಂದು ಯುವಕ ಮಾತನಾಡಿ, ಸುತ್ತಾಡಿದ ವಿಷಯ ಮುಂದೆ ಇಟ್ಟುಕೊಂಡು  ಯುವಕ  ಯುವತಿಯರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ.

ಬೆಳಗಾವಿಯಲ್ಲಿ ಮತ್ತೆ  ಶಾಂತಿ ಕದಡುವ ಯತ್ನ ನಡೆದಿದೆ.  ಕೆಲ ಕಿಡಿಗೇಡಿಗಳಿಂದ ಸಿನಿಮಿಯ ರೀತಿಯಲ್ಲಿ ನೈತಿಕ ಪೊಲೀಸಗಿರಿ ನಡೆಸಿದ್ದಾರೆ. ಹೌದು ಇದೇ  ಅಕ್ಟೋಬರ್ 14 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅನ್ಯಕೋಮಿನ ಯುವತಿ ಜೊತೆ ಯುವಕ ಸುತ್ತಾಡುತ್ತಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಅಕ್ಟೋಬರ್.14ರಂದು ರಾಯಬಾಗ ಮೂಲದ ಯುವಕ ಹಾಗೂ  ಸಂಕೇಶ್ವರ ಮೂಲದ ಯುವತಿ ಸುತ್ತಾಡಲು ಬೆಳಗಾವಿಗೆ ಆಗಮಿಸಿದ್ದಾರೆ‌.

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ (Belgaum central bus stand) ಇಬ್ಬರು ಇಳಿದು ಆಟೋಗಾಗಿ ಕಾದು ನಿಂತಿದ್ದ ಜೋಡಿ ಆಟೋ‌ ಚಾಲಕನ ಬಳಿ ಯಾವುದಾದರೂ ಉದ್ಯಾನ ವನಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಹಿಂದು ಯುವಕ  ಹಾಗೂ ಅನ್ಯಕೋಮಿನ ಯುವತಿ ಕಂಡು ಆಟೊ ಚಾಲಕ ಉದ್ಯಾನವನದ ಬದಲಾಗಿ ಅಮನ ನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸ್ನೇಹಿತರ ಜೊತೆಗೆ ಹಲ್ಲೆ ಮಾಡಿದ್ದಾರೆ, ಅಲ್ಲದೆ ಅನ್ಯಕೋಮಿನ ಯುವಕನ ಜೊತೆಗೆ ಓಡಾಡುತ್ತಿದ್ದೀಯಾ ಎಂದು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇಷ್ಟೇ ಅಲ್ಲದೇ ಅವರಿಬ್ಬರ ಬಳಿಯಿದ್ದ 20 ಸಾವಿರ ಮೌಲ್ಯದ ಮೊಬೈಲ್, 50 ಸಾವಿರ ನಗದು ಹಣ ಮತ್ತು ಆಧಾರ ಕಾರ್ಡ್, ಎಟಿಎಂ ಕಾರ್ಡ್ ಕಸಿದುಕೊಂಡು ಪರಾರಿಯಾಗಿದ್ದಾರೆ‌ ತಕ್ಷಣವೇ ಹಲ್ಲೆಗೊಳಗಾದ ಯುವತಿಯಿಂದ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಬೆಳಗಾವಿ ನಗರದ ಅಲಾರವಾಡ್ ಆಟೋ ಚಾಲಕ ದಾವತ್ ಕತೀಬ್, ಅಯುಬ್, ಯುಸೂಫ್ ಪಠಾಣ ಬಂಧಿಸಿ ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೂ 17 ಜನ ಆರೋಪಿಗಳ ಪಕ್ಕದ ರಾಜ್ಯಗಳಿಗೆ ಪರಾರಿಯಾಗಿದ್ದಾರೆ.

ಪ್ರಕರಣ ಮಾಸುವ ಮುನ್ನವೇ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಆತಂಕ ಸೃಷ್ಟಿಯಾಗಿದೆ. ಕಳೆದ ಒಂದು ವಾರದ ಹಿಂದೆಯಷ್ಟೇ ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಇರುವ ಆಟೋ ನಿಲ್ದಾಣ ಬಳಿ ಅನ್ಯಕೋಮಿನ ಯುವತಿಯರ ಜತೆಗೆ ಮಾತನಾಡುತ್ತಿದ್ದ ಯುವಕನನ್ನ ಪ್ರಶ್ನಿಸಿ ಯುವಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ‌.

ಆಟೋ ಚಾಲಕ ಸೇರಿದಂತೆ ಕೆಲವರಿಂದ ಯುವತಿ, ಯುವಕನ ಜತೆಗೆ ವಾಗ್ವಾದ ನಡೆಸಿ ಯುವಕನಿಗೆ ಧಮಕಿ ಹಾಕಿ ಹಲ್ಲೆ ಮಾಡಲು ಯತ್ನಿಸಿದ್ದಾರೆ‌. ಇದಲ್ಲದೆ ಕಿಡಿಗೇಡಿಗಳಿಂದ ಯುವತಿಯರಿಬ್ಬರನ್ನ ಕೂಡಿಹಾಕಿ ಹಿಗ್ಗಾಮಗ್ಗಾ ತರಾಟೆಗೆ  ತೆಗೆದುಕೊಂಡಿದ್ದು ಮುಖ ಕಟ್ಟಿದ ಬಟ್ಟೆ ಬಿಚ್ಚಿಸಿ ನಿನ್ನ ಹೆಸರೇನೂ, ಅಡ್ರೆಸ್ ಎನೂ ಅಂತಾ ಅವಾಜ್ ಹಾಕಿದ್ದಾರೆ.  ನಾವು ಕಾಲೇಜು ಸ್ನೇಹಿತರು ಅಂತಾ ಅಂಗಲಾಚಿದ್ರೂ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಯುವತಿಯರು ಹಾಗೂ ಯುವಕ ಯಾವುದೇ ದೂರು ನೀಡಲ್ಲ.

ಇದನ್ನೂ ಓದಿ: ಧರ್ಮದ ಅಫೀಮು ಸೇವಿಸಿರುವ ಸಂಘಪರಿವಾರ, ಬಿಜೆಪಿಯವರೇ ನಿಜವಾದ ಡ್ರಗಿಸ್ಟ್​ಗಳು: ಕಟೀಲ್​ಗೆ ಶ್ರೀನಿವಾಸ್ ತಿರುಗೇಟು!

ದೇವಸ್ಥಾನದ ಕಳಸಾರೋಹಣ ದಿನ ಚಿಕನ್ ಶಾಪ್ ಓಪನ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಚಿಕನ್ ಶಾಪ್ ಬೋರ್ಡ್ ಮುರಿದು ಬೋರ್ಡ್‌ವೆ ಬೆಂಕಿ ಹಚ್ಚಿ ನೈತಿಕ ಪೊಲೀಸ್‌ಗಿರಿ  ಬೆಳಗಾವಿಯ ಯಮನಾಪೂರ ಗ್ರಾಮದಲ್ಲಿ ನಡೆದಿದೆ. ಅಕ್ಟೋಬರ್ 8ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಚಿಕನ್ ಶಾಪ್ ಬೋರ್ಡ್ ಮುರಿದು, ಬೋರ್ಡ್‌ಗೆ ಬೆಂಕಿ ಹಚ್ಚುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಸ್ವಂತ ಪಕ್ಷದಲ್ಲಿ ಕಾಮಿಡಿ ಕಟೀಲ್ ಎಂದು ಕರೆಸಿಕೊಳ್ತಾರೆ:B K Hariprasad ವಾಗ್ದಾಳಿ

ಅಕ್ಟೋಬರ್ 8ರಂದು ಯಮನಾಪುರದಲ್ಲಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಕಳಸಾರೋಹಣ ಆಯೋಜಿಸಲಾಗಿತ್ತು.ಈ ವೇಳೆ ಗ್ರಾಮದಲ್ಲಿ ಮಾಂಸ ಮಾರಾಟ ಮಾಡದಂತೆ ಗ್ರಾಮಸ್ಥರೆಲ್ಲರೂ ಸೇರಿ ನಿರ್ಣಯ ಕೈಗೊಂಡಿದ್ದರುನಿರ್ಣಯ ಕೈಗೊಂಡ ಮೇಲೂ ಚಿಕನ್ ಅಂಗಡಿ ತೆರೆದಿದ್ದ ಹಸನಸಾಬ್. ಚಿಕನ್ ಅಂಗಡಿ ಬೋರ್ಡ್ ಮುರಿದು, ಬೋರ್ಡ್‌ಗೆ ಬೆಂಕಿ ಹಚ್ಚಿ  ಯುವಕರು  ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ‌ಮಾಳ ಮಾರುತಿ‌ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ.
Published by:Sharath Sharma Kalagaru
First published: