Vaccination ಬಳಿಕ ಮೂವರು ಮಕ್ಕಳ ನಿಗೂಢ ಸಾವು: ಬೆಳಗಾವಿ ಪ್ರಕರಣದಿಂದ ಹೆಚ್ಚಿದ ಆತಂಕ!

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಗಮಿಸಿದ್ದ ಸಿಬ್ಬಂದಿ ಈ ಮಕ್ಕಳಿಗೆ ಇಂಜೆಕ್ಷನ್ ನೀಡಿದ್ದರು. ಆ ಬಳಿಕ ಮಕ್ಕಳಲ್ಲಿ ವಾಂತಿ-ಭೇದಿ ಆರಂಭವಾಗಿತ್ತು ಎಂದು ಹೇಳಲಾಗುತ್ತಿದೆ. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ: ವ್ಯಾಕ್ಸಿನ್​​ (Vaccine)ಪಡೆದ ಬಳಿಕ ಮೂವರು ಮಕ್ಕಳು (Three Children) ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೃತ ಮೂವರೂ ಮಕ್ಕಳಿಗೆ ರುಬೆಲ್ಲಾ ಚುಚ್ಚುಮದ್ದು (Rubella Vaccination) ನೀಡಲಾಗಿತ್ತು. ರುಬೆಲ್ಲಾ ವ್ಯಾಕ್ಸಿನ್​ ಪಡೆದ ಬಳಿಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಮೊನ್ನೆ ಒಂದು ಮಗು, ಇಂದು ಇಬ್ಬರು ಮಕ್ಕಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ 13 ತಿಂಗಳು ಪವಿತ್ರಾ ಹುಲಗೂರ್, 14 ತಿಂಗಳ ಮಧು ಉಮೇಶ್ ಕುರಗುಂದಿ ಹಾಗೂ ಮಲ್ಲಾಪುರ ಗ್ರಾಮದ ಒಂದೂವರೆ ವರ್ಷದ ಚೇತನ ಎಂಬ ಮಗ ಮೃತಪಟ್ಟಿದೆ. ಕಡಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇಂಜೆಕ್ಷನ್​ ಬಳಿಕ ಮಕ್ಕಳಲ್ಲಿ ವಾಂತಿ-ಭೇದಿ

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಗಮಿಸಿದ್ದ ಸಿಬ್ಬಂದಿ ಈ ಮಕ್ಕಳಿಗೆ ಇಂಜೆಕ್ಷನ್ ನೀಡಿದ್ದರು. ಆ ಬಳಿಕ ಮಕ್ಕಳಲ್ಲಿ ವಾಂತಿ-ಭೇದಿ ಆರಂಭವಾಗಿತ್ತು ಎಂದು ಹೇಳಲಾಗುತ್ತಿದೆ. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜನವರಿ 13 ರಂದು ಒಂದು ಮಗು, ಇಂದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಆರೋಗ್ಯ ಸಚಿವರ ಪ್ರತಿಕ್ರಿಯೆ

ಬೆಳಗಾವಿಯ ರಾಮದುರ್ಗ ತಾಲೂಕಿನ ಮೂವರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ. ಸುಧಾಕರ್ , ರುಬೆಲ್ಲಾ ವ್ಯಾಕ್ಸಿನ್ ಪಡೆದ ಬಳಿಕ ಸಾವು ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಏನಾಗಿದೆ ಅಂತ ನೋಡಿಕೊಂಡು ಮಾತಾಡ್ತೇನೆ ಎಂದರು. ಮರಣೋತ್ತರ ಪರೀಕ್ಷೆ ಬಳಿಕ ಮಕ್ಕಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಸಚಿವ ಅಶ್ವಥ್​ ನಾರಾಯಣ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Corona ವಿಚಾರದಲ್ಲಿ ಸೇಫ್ ಜೋನ್ ನಲ್ಲಿದ್ಯಾ ಕರ್ನಾಟಕ? ಟಫ್ ರೂಲ್ಸ್‌ನಿಂದ ಮುಕ್ತಿ ಸಿಗುತ್ತಾ?

ಕೊರೊನಾ ಸಂಬಂಧ ಮಹತ್ವ ಸುದ್ದಿ 

ಇನ್ನು ದೇಶದಲ್ಲಿ ಕೊರೊನಾ ಸೋಂಕಿನ ಹೆಚ್ಚಳ ಹಿನ್ನೆಲೆ ಕೋವಿಡ್ ಟೆಸ್ಟಿಂಗ್ ನ ವಿಧಾನ ಬದಲಿಸುವಂತೆ ICMR ಸಲಹೆ ನೀಡಿದೆ. ಸಿಕ್ಕ ಸಿಕ್ಕವರಿಗೆಲ್ಲಾ ಟೆಸ್ಟಿಂಗ್ ನ ಅಗತ್ಯ ಇಲ್ಲ  ಬದಲಾದ ಕೊರೊನಾ ಸನ್ನಿವೇಶಕ್ಕೆ ತಕ್ಕಂತೆ ಟೆಸ್ಟಿಂಗ್ ಪ್ಲಾನ್ ಬದಲಾಯಿಸುವಂತೆ ICMR ಸಲಹೆ ನೀಡಿದೆ.

ಕೋವಿಡ್ ಟೆಸ್ಟಿಂಗ್ ಗೆ ICMR ಸಲಹೆಗಳು ಏನು..?

1)ಯಾರಿಗೆ ಕೋವಿಡ್ ಟೆಸ್ಟ್ ಮಾಡಬೇಕು..?

- ಯಾರಿಗೆ ರೋಗ ಲಕ್ಷಣಗಳು ಇರುತ್ತವೆಯೋ ಅಂತವರನ್ನ ಕೋವಿಡ್ ಟೆಸ್ಟ್ ಗೆ ಒಳಪಡಿಸಿ

- ಸೋಂಕು ದೃಢಪಟ್ಟ ಸೋಂಕಿತನ ಪ್ರಾಥಮಿಕ ಸಂಪರ್ಕರದಲ್ಲಿರುವ ಹೈ ರಿಸ್ಕ್ ವ್ಯಕ್ತಿಗಳನ್ನ ಟೆಸ್ಟ್ ಗೆ ಒಳಪಡಿಸಬೇಕು

- ಅಂದರೆ 60 ವರ್ಷ ಮೇಲ್ಪಟ್ಟವರ ಟೆಸ್ಟಿಂಗ್ ಮಾಡುವುದು, ಇತರ ಆರೋಗ್ಯ ಸಮಸ್ಯೆ ‌ಇದ್ದವರಿಗೆ ಟೆಸ್ಟ್ ಮಾಡುವುದು

- ಅಂತರಾಷ್ಟ್ರೀಯ ಪ್ರಯಾಣಿಕರನ್ನ ಟೆಸ್ಟ್ ಮಾಡುವುದು

2) ಆಸ್ಪತ್ರೆಗಲ್ಲಿ ಯಾವ ನಿಯಮ..?

- ಹೆರಿಗೆ, ಶಸ್ತ್ರ ಚಿಕಿತ್ಸೆಗೆಂದು ಕೋವಿಡ್ ಟೆಸ್ಟ್ ಮಾಡುವ ಅಗತ್ಯ ಇಲ್ಲ

- ಕೋವಿಡ್ ಟೆಸ್ಟ್ ಮಾಡಿಸಿಲ್ಲ ಎಂದು ರೋಗಿಗಳನ್ನ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವಂತಿಲ್ಲ

- ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ವಾರಕ್ಕೆ ಒಂದು ಸಾರಿ ಮಾತ್ರ ಕೋವಿಡ್ ಟೆಸ್ಟ್ ಮಾಡಬೇಕು. ಅದಕ್ಕಿಂತ ಹೆಚ್ಚು ಟೆಸ್ಟ್ ಮಾಡುವಂತಿಲ್ಲ

ಇದನ್ನೂ ಓದಿ: Need Help: ವೈದ್ಯರ ಯಡವಟ್ಟಿನಿಂದ ಹಾಸಿಗೆ ಹಿಡಿದ ಬಾಲಕ: ಆರ್ಥಿಕ ನೆರವಿಗಾಗಿ ದಾನಿಗಳಲ್ಲಿ ಹೆತ್ತವರ ಮನವಿ

3) ಯಾರಿಗೆ ಕೋವಿಡ್ ಟೆಸ್ಟ್ ಬೇಕಿಲ್ಲ..?

- ಯಾವುದೇ ರೋಗ ಲಕ್ಷಣಗಳು ಇಲ್ಲದವರಿಗೆ ಕೋವಿಡ್ ಟೆಸ್ಟ್ ಅಗತ್ಯ ಇಲ್ಲ

- ಸೋಂಕು ದೃಢಪಟ್ಟ ಸೋಂಕಿತನ ಸಂಪರ್ಕದಲ್ಲಿದ್ದ ಎಸಿಮ್ಟಮ್ಯಾಟಿಕ್ ವ್ಯಕ್ತಿಗಳಿಗೆ ಟೆಸ್ಟ್ ಬೇಕಿಲ್ಲ

- ಹೋಮ್ ಐಸೋಲೇಷನ್ ನಲ್ಲಿದ್ದು ಡಿಸ್ಜಾರ್ಜ್ ಆದವರಿಗೆ ಕೋವಿಡ್ ಟೆಸ್ಟ್ ಬೇಡ

- ಅಂತರಾಜ್ಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಅಗತ್ಯ ಇಲ್ಲ
Published by:Kavya V
First published: