ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ ಎಚ್ಚರ ಎಚ್ಚರ; ಯಾಮಾರಿದರೆ ಪಂಗನಾಮ ಗ್ಯಾರಂಟಿ!

30 ಲಕ್ಷ ಮೌಲ್ಯದ  ಜೆಸಿಬಿಯನ್ನ 12 ಲಕ್ಷಕ್ಕೆ ಮಾರಾಟ ಮಾಡಿ 6 ಲಕ್ಷ ರೂಪಾಯಿಗಳನ್ನ ಮುಂಗಡವಾಗಿ ಪಡೆದಿದ್ದ. ಕೆಲ ದಿನಗಳು ಕಳೆದ್ರು ವಾಹನದ ಆರ್.ಸಿ ಪತ್ರಗಳನ್ನ ನೀಡದೆ ಸತಾಯಿಸಿದ್ದ ಈ ಹಿನ್ನಲೆ ಫಯಾಜ್ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ನಡೆಸಿದ ವೇಳೆ ಇಡಿ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳು ಮತ್ತು ವಶಕ್ಕೆ ಪಡೆಯಲಾದ ವಾಹನಗಳು.

ಬಂಧಿತ ಆರೋಪಿಗಳು ಮತ್ತು ವಶಕ್ಕೆ ಪಡೆಯಲಾದ ವಾಹನಗಳು.

  • Share this:
ಚಿಕ್ಕೋಡಿ: ಕಡಿಮೆ ಬೆಲೆಯಲ್ಲಿ ವಾಹನ ಸಿಗುತ್ತಿದೆ ಅಂತ ನೀವು ಆ ವಾಹನ ಖರೀದಿ ಮಾಡುವ ಮುನ್ನ ಈ ಸ್ಟೋರಿಯನ್ನ ಒಮ್ಮೆ ನೀವು ಓದಲೇಬೇಕು. ಸೆಕೆಂಡ್ ಹ್ಯಾಂಡ್ ವಾಹನಗಳ ಸುಳ್ಳು ದಾಖಲಾತಿ ಸೃಷ್ಟಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದು ಅಮಾಯಕ ಜನರಿಗೆ ಮೋಸ ಮಾಡುತ್ತಿತ್ತು.ಹೀಗೆ ಸೆಕೆಂಡ್ ಹ್ಯಾಂಡ್ ವಾಹನಗಳ ಸುಳ್ಳು ದಾಖಲಾತಿ ಸೃಷ್ಟಿಸಿ ಜನರಿಗೆ ಮಾರಾಟ ಮಾಡುತ್ತಿದ್ದ ಖದೀಮರ ಗುಂಪನ್ನು ಬೆಳಗಾವಿ ಪೊಲೀಸರು ಬಂದಿಸಿದ್ದು ಬರೋಬ್ಬರಿ 2 ಕೋಟಿ 60 ಲಕ್ಷ ಮೌಲ್ಯದ ವಾಹನಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ವಾಹನಗಳ ಸುಳ್ಳು ದಾಖಲಾತಿ ಸೃಷ್ಟಿಸಿ ಅಂತರರಾಜ್ಯಗಳಲ್ಲಿ  ವಾಹನ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 2 ಕೋಟಿ 60 ಲಕ್ಷ ಮೌಲ್ಯದ 9 ಟಿಪ್ಪರ್ ವಾಹನ, 1 ಜೆಸಿಬಿ 2 ಟ್ರಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರ ಮೂಲದ ಫಯಾಜ ದಾಲಾಯತ ಎನ್ನುವವರು ನೀಡಿದ ದೂರಿನ ಹಿನ್ನಲೆ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಯೂಸುಫ್ ಸೈಯದ್ ದನ್ನು ಬಂಧಿಸಿ ಮೋಸದ ಜಾಲ ಭೇದಿಸಿದ್ದಾರೆ.

ಪ್ರಕರಣ ಪ್ರಮುಖ ಆರೋಪಿ ಯೂಸುಫ್ ತನ್ನ ಸಹಚರೊಂದಿಗೆ ಸೇರಿಕೊಂಡು ಫೈನಾನ್ಸ್ ಕಂಪನಿಗಳಿಂದ ಲೋನ್ ಪಡೆದು ಹಣ ಮರು ಪಾವತಿ ಮಾಡಲು ಆಗದೆ ವಾಹನಗಳನ್ನ ಮಾರಾಟ ಮಾಡುವವರನ್ನ ಹುಡುಕುತಿದ್ದರು. ಅಂತವರನ್ನ ಗುರುತಿಸಿ ನಿಮ್ಮ ವಾಹನನ್ನ ಮಾರಾಟ ಮಾಡಿ ಕೊಡುತ್ತೇವೆ ಜೊತೆಗೆ ಇನ್ಸುರೆನ್ಸ ಕಂಪನಿಯಿಂದ ನಿಮಗೆ ಹಣ ಕೂಡ ಕೊಡಿಸುತ್ತೇವೆ ಎಂದು ನಂಬಿಸಿ ಕಡಿಮೆ ಬೆಲೆಗೆ ವಾಹನ ಪಡೆದು. ಬಳಿಕ ಅದೆ ವಾಹನಗಳನ್ನ ಪ್ರಕರಣದ ಎರಡನೇ ಆರೋಪಿಯಾದ ದಾಂಡೇಲಿಯ ದಿಲಾವರ ಕಾಕರ ಎನ್ನುವವರಿಂದ ವಾಹನದ ಚಾರ್ಸಿ ನಂಬರ್  ಹಾಗೂ ನಂಬರ್ ಪ್ಲೇಟ್ ಬದಲಾಯಿಸಿ ಅದಕ್ಕೆ ಬೇರೆ ಆರ್ ಸಿ ತಯಾರಿಸಿ ಬೇರೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದರು.

ಇದನ್ನು ಓದಿ: Actress Ramya| ರಾಹುಲ್ ಗಾಂಧಿ ನನ್ನ ತಪ್ಪಿನಿಂದಾಗಿಯೇ ಟ್ರೋಲ್​ಗೆ ಒಳಗಾಗಿದ್ದರು; ಕೊನೆಗೂ ರಹಸ್ಯ ಬಿಚ್ಚಿಟ್ಟ ನಟಿ ರಮ್ಯಾ

ದೂರುದಾರ ಫಯಾಜ ಧಾಲಾಯತ್ ಎನ್ನುವವರಿಗೆ ಕೂಡ ಆರೋಪಿ ಯೂಸುಫ್ ಒಂದು ಜೆಸಿಬಿ ಯನ್ನ ನೀಡಿದ್ದ. 30 ಲಕ್ಷ ಮೌಲ್ಯದ  ಜೆಸಿಬಿಯನ್ನ 12 ಲಕ್ಷಕ್ಕೆ ಮಾರಾಟ ಮಾಡಿ 6 ಲಕ್ಷ ರೂಪಾಯಿಗಳನ್ನ ಮುಂಗಡವಾಗಿ ಪಡೆದಿದ್ದ. ಕೆಲ ದಿನಗಳು ಕಳೆದ್ರು ವಾಹನದ ಆರ್.ಸಿ ಪತ್ರಗಳನ್ನ ನೀಡದೆ ಸತಾಯಿಸಿದ್ದ ಈ ಹಿನ್ನಲೆ ಫಯಾಜ್ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ನಡೆಸಿದ ವೇಳೆ ಇಡಿ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವಾಹನಗಳು ಪೊಲೀಸರ ವಶದಲ್ಲಿದ್ದು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರಕರಣದ ತನಿಖೆ ಇನ್ನು ಮುಂದುವರೆದಿದ್ದು ಇನ್ನಷ್ಟು ಆರೋಪಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ. ಇನ್ನು ಪ್ರಕರಣದ ತನಿಖೆ ಚಿಕ್ಕೋಡಿ ಡಿ.ವೈ.ಎಸ್.ಪಿ ಮನೋಜ್ ಕುಮಾರ್ ನಾಯಿಕ್, ಸಿ.ಪಿ.ಐ. ಆರ್. ಆರ್. ಪಾಟೀಲ್, ಪಿ.ಎಸ್.ಐ ರಾಕೇಶ್ ಬಗಲಿ. ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಪ್ರಶಂಸೆ ಜೊತೆಗೆ ಬಹುಮಾನ ಘೋಷಣೆ ಮಾಡಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಹೊರಗೆ ಗುಂಪುಗೂಡುವುದನ್ನು ತಡೆಗಟ್ಟಬೇಕಿದೆ.
Published by:HR Ramesh
First published: