Soybean Growers: ಧೀಡಿರ್ ಬೆಲೆ ಕುಸಿತದಿಂದ ಸಂಕಷ್ಟ ಸಿಲುಕಿದ ಸೋಯಾಬಿನ್ ಬೆಳೆಗಾರರು; ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಕೈವಾಡ ಶಂಕೆ!

ಜಿಲ್ಲೆಯ  ಬೈಲಹೊಂಗಲ, ಸವದತ್ತಿ ‌ತಾಲೂಕಿನಲ್ಲಿ ಅತಿ ಹೆಚ್ಚು ಸೋಯಾಬಿನ್ ಬೆಳೆ ಬೆಳೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಸೋಯಾಬಿನ್ ಎಣ್ಣೆಗೆ ಬೇಡಿಕೆ ಇದೆ. ಕೆಜಿ ಎಣ್ಣೆ ಬೆಲೆ 200 ರೂಪಾಯಿ‌ ಇದೆ. ಆದರೆ ರೈತರು ಬೆಳೆದ ಸೋಯಾಬಿನ್ ಬೆಳೆಗೆ ಮಾತ್ರ ಬೆಲೆ ಇಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಯಾಬಿನ್ ಬೆಳೆ ಕಟಾವು ಮಾಡುತ್ತಿರುವ ರೈತರು.

ಸೋಯಾಬಿನ್ ಬೆಳೆ ಕಟಾವು ಮಾಡುತ್ತಿರುವ ರೈತರು.

  • Share this:
ಬೆಳಗಾವಿ (ಸೆಪ್ಟೆಂಬರ್ 27): ರಾಜ್ಯದ ಬೆಳಗಾವಿ, ‌ಧಾರವಾಡ ಹಾಗೂ ಬೀದರ್ ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆಯಾಗಿರುವ ಸೋಯಾಬಿನ್ (Soybean Grow In Belagavi, Dharawada, Bidar) ಹೆಚ್ಚಾಗಿ ಬೆಳಯಲಾಗುತ್ತದೆ. ಸದ್ಯ ಬೆಳೆ ಬಂದಿದ್ದು, ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತ ಆಗಿದೆ. ಇದು ರೈತರಿಗೆ ದೊಡ್ಡ ನಷ್ಟ ತಂದೊಡ್ಡಿದೆ. ಈ ವರ್ಷ ಸೋಯಾಬಿನ್ ಬೆಳೆಗೆ ಮಳೆ ಕಾಟದಿಂದ ಅನೇಕ ರೋಗಗಳು ಬಂದಿದ್ದವು. ಅಷ್ಟೇ ಅಲ್ಲ ಎಕರೆಗೆ ಇಳುವರಿಯಲ್ಲಿ ಕುಸಿತ ಕಂಡಿದೆ. ಕೊಯ್ಲು ಆರಂಭವಾದಾಗ 9-10 ಸಾವಿರ ಕ್ವಿಂಟಾಲ್ ಇದ್ದ ಸೋಯಾಬಿನ್ ದರ ಏಕಾಏಕಿ ಕುಸಿದಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ತಕ್ಷಣ ಸರ್ಕಾರ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತ ಮುಖಂಡರ ಆಗ್ರಹಿಸಿದ್ದಾರೆ.

ಸೋಯಾಬಿನ್ ಬೆಳೆಗೆ ಮಾರುಕಟ್ಟೆಯಲ್ಲಿ ಧೀಡಿರ್ ಬೆಲೆ ಕುಸಿತ ಆಗಿದೆ. ಕಳೆದ 10 ದಿನಗಳ ಹಿಂದೆ ಕ್ವಿಂಟಾಲ್ ಗೆ 9 - 10 ಸಾವಿರ ರೂಪಾಯಿ ಬೆಲೆ ಇದ್ದು, ಅನೇಕ ರೈತರು ಮಾರಾಟ ಮಾಡಿದ್ದಾರೆ. ಕಳೆದ 6 ದಿನಗಳಿಂದ ಧೀಡಿರ್ ಕುಸಿತ ಕಂಡಿರೋ ಬೆಲೆ. ಸದ್ಯ 5500 ರಿಂದ 6000 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಮಧ್ಯವರ್ತಿಗಳ ಹಾವಳಿಯಿಂದ ಬೆಲೆ ಕುಸಿದಿರುವ ಶಂಕೆ ವ್ಯಕ್ತವಾಗಿದೆ. ಮಾರುಕಟ್ಟೆಗೆ ಸೋಯಾಬಿನ್ ಹೆಚ್ಚು ಬರುತ್ತಿದ್ದು, ರೈತರ ಅನಿವಾರ್ಯತೆಯನ್ನು ಬಂಡವಾಳ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.

ರಾಜ್ಯದ ಬೆಳಗಾವಿ, ಧಾರವಾಡ ಹಾಗೂ ಬೀದರ್ ಜಿಲ್ಲೆಯಲ್ಲಿ ಸೋಯಾಬಿನ್ ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಸರ್ಕಾರ ಸೋಯಾಬಿನ್ ಖರೀದಿ ಕೇಂದ್ರ ಆರಂಭಿಸಿಲ್ಲ. ಸೋಯಾಬಿನ್ ಕೇವಲ ಖಾಸಗಿ ಸಂಸ್ಥೆಗಳು ಖರೀದಿ ಮಾಡುತ್ತಿವೆ. ಸೋಯಾಬಿನ್ ಬೆಳೆ ಮಾರಾಟದ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ರೈತರ ಆಗ್ರಹಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿರುವ ರೈತರು ಸರ್ಕಾರ ತಕ್ಷಣ ಸಮಸ್ಯೆಗೆ ಸ್ಪಂದಿಸಬೇಕು, ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಜಿಲ್ಲೆಯ  ಬೈಲಹೊಂಗಲ, ಸವದತ್ತಿ ‌ತಾಲೂಕಿನಲ್ಲಿ ಅತಿ ಹೆಚ್ಚು ಸೋಯಾಬಿನ್ ಬೆಳೆ ಬೆಳೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಸೋಯಾಬಿನ್ ಎಣ್ಣೆಗೆ ಬೇಡಿಕೆ ಇದೆ. ಕೆಜಿ ಎಣ್ಣೆ ಬೆಲೆ 200 ರೂಪಾಯಿ‌ ಇದೆ. ಆದರೆ ರೈತರು ಬೆಳೆದ ಸೋಯಾಬಿನ್ ಬೆಳೆಗೆ ಮಾತ್ರ ಬೆಲೆ ಇಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಹತ್ತು ದಿನಗಳ ಹಿಂದೆ ಸೋಯಾಬಿನ್​ ಬೆಳೆಗೆ ಕ್ವಿಂಟಾಲ್​ಗೆ 9ರಿಂದ 10 ಸಾವಿರದವರೆಗೆ ಬೆಲೆ ಇತ್ತು. ಇದೇ ದರದಲ್ಲಿ ಹಲವು ರೈತರು ಸೋಯಾಬಿನ್ ಮಾರಿದ್ದರು. ಇದೇ ಬೆಲೆ ಸಿಗುವ ಆಸೆಯಿಂದ ಆನೇಕ ರೈತರು ತಮ್ಮ ಬಳಿಯಿದ್ದ ಸೋಯಾಬಿನ್ ಬೆಳೆಯನ್ನು ಕೊಯ್ಲು ಮಾಡಿಕೊಂಡು ಬಂದಿದ್ದಾರೆ. ಆದರೆ, ಕಳೆದ ಆರು ದಿನಗಳ ಹಿಂದೆ ಏಕಾಏಕಿ ಸೋಯಾ ಬೆಲೆ ಕುಸಿತ ಕಂಡಿದೆ. ಕ್ವಿಂಟಾಲ್​ಗೆ 9 ರಿಂದ 10 ಸಾವಿರ ಇದ್ದ ಬೆಲೆ 5 ರಿಂದ 6 ಸಾವಿರ ರೂಪಾಯಿಗೆ ಕುಸಿದಿದೆ. ರೈತರು ಬೆಳೆ ಕೊಯ್ಲು ಗಮನಿಸಿ ಮಾರುಕಟ್ಟೆ ದಲ್ಲಾಳಿಗಳು ರೈತರ ಅನಿವಾರ್ಯತೆಯನ್ನು ಬಳಸಿಕೊಂಡು ದರ ಇಳಿಕೆ ಮಾಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

ಇದನ್ನು ಓದಿ: Western Ghats: ಪಶ್ಚಿಮಘಟ್ಟ ಸಾಲಿನ ಶೋಲಾ ಅರಣ್ಯಕ್ಕೂ ಸಂಚಕಾರ; ವರ್ಷಪೂರ್ತಿನೀರು ಹರಿಸುವ ಕಾನನಕ್ಕೂ ಕೊಡಲಿ ಏಟು!

ಈ ವರ್ಷ ಅತಿವೃಷ್ಟಿ, ಕೀಟ ಬಾಧೆಯಿಂದ ಕಂಗೆಟ್ಟ ರೈತರಿಗೆ ಬೆಲೆ ಕುಸಿತ ಮತ್ತೊಂದು ಶಾಕ್ ನೀಡಿದೆ. ಬೆಳಗಾವಿ ಜಿಲ್ಲೆಯಲ್ಲಿ 98,289 ಹೇಕ್ಟರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆ ಮಾಡಲಾಗಿದೆ. ಮಳೆ ಹೆಚ್ಚಾಗಿದ್ದರಿಂದ ಹಳದಿ ರೋಗಕ್ಕೆ ತುತ್ತಾಗಿದ್ದ ಬೆಳೆಗೆ ರೈತರು ಔಷಧಿ ಸಿಂಪಡಣೆ ಮಾಡಲು ಹಣ ಖರ್ಚು ಮಾಡಿದ್ದರು. ರೋಗದಿಂದ ಎಕರೆಗೆ 7-8 ಕ್ವಿಂಟಾಲ್ ಸಿಗಬೇಕಿದ್ದ ಇಳುವರಿ ಪ್ರತಿ ಎಕರೆಗೆ ಕೇವಲ 3-4 ಕ್ವಿಟಾಂಲ್ ಸಿಗುವಂತಾಗಿದೆ.  ಸರ್ಕಾರ ಬೆಲೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Published by:HR Ramesh
First published: