• Home
  • »
  • News
  • »
  • state
  • »
  • ಸಿದ್ದರಾಮಯ್ಯ ವೇಸ್ಟ್ ಬಾಡಿ, ಕೆಲವೇ ದಿನಗಳಲ್ಲಿ ಡಿಕೆಶಿ ವಿರುದ್ಧ ಕಠೋರ ಮಾತು: ರಮೇಶ್ ಜಾರಕಿಹೊಳಿ

ಸಿದ್ದರಾಮಯ್ಯ ವೇಸ್ಟ್ ಬಾಡಿ, ಕೆಲವೇ ದಿನಗಳಲ್ಲಿ ಡಿಕೆಶಿ ವಿರುದ್ಧ ಕಠೋರ ಮಾತು: ರಮೇಶ್ ಜಾರಕಿಹೊಳಿ

ನೆರೆಯ ಗೋವಾದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ನಾಯಕರೆಲ್ಲ ಗೋವಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ದೆಹಲಿಗೆ ತೆರಳದ ರಮೇಶ್ ಜಾರಕಿಹೊಳಿ ಗೋವಾದಲ್ಲಿ ಎಲ್ಲ ನಾಯಕರನ್ನು ಭೇಟಿಯಾಗುವ ಮೂಲಕ ಲಾಬಿ ನಡೆಸುತ್ತಿದ್ದಾರೆ.

ನೆರೆಯ ಗೋವಾದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ನಾಯಕರೆಲ್ಲ ಗೋವಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ದೆಹಲಿಗೆ ತೆರಳದ ರಮೇಶ್ ಜಾರಕಿಹೊಳಿ ಗೋವಾದಲ್ಲಿ ಎಲ್ಲ ನಾಯಕರನ್ನು ಭೇಟಿಯಾಗುವ ಮೂಲಕ ಲಾಬಿ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿದೆ. ಒಬ್ಬ ಹಿಂದುಳಿದ ಪ್ರಮುಖ ನಾಯಕ ಹೊರ ಬೀಳುತ್ತಿದ್ದಾನೆ. ನನಗೆ ಚ್ಯುತಿ ಬರುತ್ತೆ ಅಂತಾ ಹೆದರಿದ್ದಾನೆ. ಸಿದ್ದರಾಮಯ್ಯಗೆ ಕುರುಬರೆಲ್ಲರೂ ರಿಜೆಕ್ಟ್ ಮಾಡಿದ್ದಾರೆ. ಸಿದ್ದರಾಮಯ್ಯ ವೇಸ್ಟ್ ಬಾಡಿ ಆಗಿದ್ದು, ಅವನದ್ದು ಕಥೆ ಮುಗಿದಿದೆ ಮುಂದಿನ ಸಾರಿ ಆ ಮನುಷ್ಯ ಸೋಲುತ್ತಾನೆ ಎಂದು ಭವಿಷ್ಯ ನುಡಿದರು.

ಮುಂದೆ ಓದಿ ...
  • Share this:

ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ಓರ್ವ ವೇಸ್ಟ್ ಬಾಡಿ. ಆ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ಸೋಲುತ್ತಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ರಾಜಕೀಯ ಗುರುವಿನ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿದೆ. ಒಬ್ಬ ಹಿಂದುಳಿದ ಪ್ರಮುಖ ನಾಯಕ ಹೊರ ಬೀಳುತ್ತಿದ್ದಾನೆ. ನನಗೆ ಚ್ಯುತಿ ಬರುತ್ತೆ ಅಂತಾ ಹೆದರಿದ್ದಾನೆ. ಸಿದ್ದರಾಮಯ್ಯಗೆ ಕುರುಬರೆಲ್ಲರೂ ರಿಜೆಕ್ಟ್ ಮಾಡಿದ್ದಾರೆ. ಸಿದ್ದರಾಮಯ್ಯ ವೇಸ್ಟ್ ಬಾಡಿ ಆಗಿದ್ದು, ಅವನದ್ದು ಕಥೆ ಮುಗಿದಿದೆ ಮುಂದಿನ ಸಾರಿ ಆ ಮನುಷ್ಯ ಸೋಲುತ್ತಾನೆ ಎಂದು ಭವಿಷ್ಯ ನುಡಿದರು.


ನಮ್ಮ ಪಕ್ಷದಲ್ಲಿ ಎನಾಗಿದೆ? ಎನಿಲ್ಲ ಎಂಬುದು ನಮ್ಮ ವರಿಷ್ಠರ ಜತೆಗೆ ಮಾತನಾಡಿದ್ದೇನೆ. ಯಾಕೆ ಸೋತಿದೆ ಎಂಬುದು ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ‌. ಡಿಕೆ ಶಿವಕುಮಾರ್ ಬಗ್ಗೆ ಬಹಳ ಕಠೋರವಾಗಿ ಹೇಳುವನಿದ್ದೆ. ಕೊನೆಯ ಮೂರು ದಿನಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಯಿತು ಎಂದರು.


ಕೊನೆಯ ಮೂರು ದಿನ ಲಖನ್ ನಮ್ಮ ಕೈಗೆ ಸಿಗಲಿಲ್ಲ


ಬಿಜೆಪಿಗೆ ಹೋಗುವ ಕುರಿತು ಲಖನ್ ಜಾರಕಿಹೊಳಿ‌ ತೀರ್ಮಾನ ತೆಗೆದುಕೊಳ್ಳಬೇಕು. ಲಖನ್ ಜಾರಕಿಹೊಳಿ‌ ಕೊನೆಯ ಮೂರು ದಿನ ನಮ್ಮ ಕೈಗೆ ಸಿಗಲಿಲ್ಲ‌. ಚುನಾವಣೆ ಚಿತ್ರಣ ಬದಲಾಗಿದ್ದಕ್ಕೆ ನಾನು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಅವರು ಮಾಡಿದ್ರೂ ಪಕ್ಷೇತರ ಅಭ್ಯರ್ಥಿ ಲಖನ್ ಪ್ರಚಾರ ಮಾಡಿದರು ಎಂದು ತಿಳಿಸಿದರು.


ಇದನ್ನೂ ಓದಿ:  ಇದಕ್ಕೆಲ್ಲಾ ಕಾರಣ ಆ ಇಬ್ಬರು, ಏನು ಮಾಡಬೇಕು ಸರ್: BSY ಜೊತೆ ಸಿಎಂ ಬೊಮ್ಮಾಯಿ ರಹಸ್ಯ ಚರ್ಚೆ


ಕೆಲವೇ ದಿನಗಳಲ್ಲಿ ಡಿಕೆಶಿಗೆ ಕಠೋರ ಉತ್ತರ


ಗುಡ್ಡಕ್ಕೆ ಶಕ್ತಿ ಹೊರುವ ತಾಕ್ಕತು ಇದೆ ಹಾಗಾಗಿ ಸೋಲನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ. ಸಂಚೂ ನಡೆದಿರ ಬಗ್ಗೆ ಕನ್ಫರ್ಮ್ ಇಲ್ಲ ವಿಚಾರ ಮಾಡಿ ಮಾತಾಡ್ತೇನಿ. ಸೋಲಿನ ಪಟ್ಟ ಲೀಡರ್ ಆದವರಿಗೆ ಕಟ್ಟುತ್ತಾರೆ.  ನಾನು ಕಾಂಗ್ರೆಸ್ ಸೋಲಿಸುತ್ತೇನೆ ಅಂತಾ ಹಠಕ್ಕೆ ಬಿದ್ದಿದ್ದು ನಿಜ. ಇವತ್ತು ಅವರ ಪಕ್ಷ ಗೆದ್ದಿದೆ ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಎಲ್ಲಿ ತಪ್ಪಿದೆ ಎಂಬುದು ಆಂತರಿಕವಾಗಿ ಚರ್ಚೆ ಮಾಡುತ್ತೇವೆ. ಕೆಲವೇ ದಿನಗಳಲ್ಲಿ ಬಹಿರಂಗವಾಗಿ ಡಿಕೆಶಿ ಹೇಳಿಕೆ ಬಗ್ಗೆ ಕಠೋರ ಉತ್ತರ ಕೊಡ್ತೇನಿ ಎಂದರು.


ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ನನ್ನ ರಾಜಕೀಯ ಗುರು ಅಂದಿದ್ರು


ಸಿದ್ದರಾಮಯ್ಯನವರು ನನ್ನ ಗುರು, ಈಗಲೂ ಗುರುಗಳೇ. ಆದರೆ ಈಗ ಅವರು ಸುಳ್ಳು ಹೇಳುವುದನ್ನು ಕಲಿಯುತ್ತಿದ್ದಾರೆ. ಅವರನ್ನು ಬಹಳ ಬಹಳ ಟೀಕಿಸಲಾರೆ. ಸಿದ್ದರಾಮಯ್ಯ ಅವರು ನಮ್ಮ ಬಗ್ಗೆ ಮಾತನಾಡಿದ್ದು ಅದಕ್ಕೆ ಉತ್ತರ ಕೊಡಲು ಬಂದಿದ್ದೆ, ಆದರೆ ಅವರು ನನ್ನ ಗುರು. ಮನೆಯಲ್ಲಿ ಬಹಳ ಮಾತನಾಡಬೇಡಿ ಎಂದಾಗ ನಾನು ಟೀಕಿಸಲು ಹೋಗಲ್ಲ.


ಮೊದಲಿನ ಸಿದ್ದರಾಮಯ್ಯ ನೇರ ನಿಷ್ಠುರ ಹಾಗೂ ಮಾತನಾಡಿದರೆ ಹೆದರುವಂತೆ ಇತ್ತು. ಈಗಿನ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಅದು ಬದಲಾಗಬೇಕಿದೆ ಎಂದು ರಮೇಶ್ ಜಾರಕಿಹೊಳಿ ಮೃದು ಮಾತುಗಳಲ್ಲೇ ಮಾತಿನ ಚಾಟಿ ಬೀಸಿದರು.


ಇದನ್ನೂ ಓದಿ:  ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋದರನಿಗೆ ಗೆಲುವು: ರಮೇಶ್ ಜಾರಕಿಹೊಳಿ ಬಗ್ಗೆ ಡಿಕೆಶಿ ವ್ಯಂಗ್ಯ!


ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದವರಿಗೆ ಕಾಂಗ್ರೆಸ್​​ ಟಿಕೆಟ್ ನೀಡಿದೆ ಎಂದು ಹೆಬ್ಬಾಳ್ಕರ ವಿರುದ್ಧ ರಮೇಶ ಗುಡುಗಿದರು. ಲಕ್ಷ್ಮೀ ಹೆಬ್ಬಾಳ್ಕರ್​ ಸೋದರನಿಗೆ ಕಾಂಗ್ರೆಸ್​ ಟಿಕೆಟ್​ ನೀಡಿರುವುದನ್ನು ಟೀಕಿಸಿದರು. ಸಭೆಯಲ್ಲಿ ಹೆಸರು ಹೇಳದೆ ಲಕ್ಷ್ಮೀ ಹೆಬ್ಬಾಳ್ಕರ ಮೇಲೆ ಆರೋಪ ಮಾಡಿದರು. ಸಮ್ಮಿಶ್ರ ಸರ್ಕಾರ ಪತನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ ಕಾರಣವಾದ್ರು ಎಂಬುವುದು ಅವರ ಮಾತುಗಳಿಂದ ಸ್ಪಷ್ಟವಾಗಿತ್ತು.


ಡಿಕೆ ಶಿವಕುಮಾರ್​​ ವಿರುದ್ಧ ವಾಗ್ದಾಳಿ


ಜಿಲ್ಲೆಯಲ್ಲಿ ಯುವ ನಾಯಕರಿಗೆ ಟಿಕೆಟ್ ನೀಡಿದ್ದೇವೆ ಎಂದು ಕಾಂಗ್ರೆಸ್​​​ ಹೇಳುತ್ತಿದೆ. ಜಿಲ್ಲೆಯಲ್ಲಿ ಬೇರೆ ಯಾರು ಯುವ ನಾಯಕರೇ ಇರಲಿಲ್ವಾ ಎಂದು ಪ್ರಶ್ನಿಸಿದರು. ಯಾರಿಂದ ಸಮ್ಮಿಶ್ರ ಸರ್ಕಾರ ಬಿದ್ದಿದೆ ಅವರ ಮನೆಗೆ ಕಾಂಗ್ರೆಸ್​​ ಟಿಕೆಟ್ ನೀಡಬೇಕಾ? ಕಾಂಗ್ರೆಸ್​​​ ಮತ್ತು ಜೆಡಿಎಸ್ ಸರ್ಕಾರ ಬೀಳಲು ಕಾರಣದವರಿಗೆ ಕೆಪಿಸಿಸಿ ಅಧ್ಯಕ್ಷರು ಟಿಕೆಟ್ ನೀಡುತ್ತಾರೆ ಎಂದರೆ ಎಷ್ಟೊಂದು ಗರ್ವ ಅವರಿಗೆ ಎಂದು ಡಿಕೆ ಶಿವಕುಮಾರ್​​ ವಿರುದ್ಧ ವಾಗ್ದಾಳಿ ನಡೆಸಿದ್ದರು.

Published by:Mahmadrafik K
First published: