CM ಸ್ಥಾನದಿಂದ ಬೊಮ್ಮಾಯಿಯನ್ನು ಇಳಿಸಲು ಈಶ್ವರಪ್ಪ ಓಡಾಡುತ್ತಿದ್ದಾರೆ: ಸಿದ್ದರಾಮಯ್ಯ ಮಾತಿನ ಚಾಟಿ!

ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಆರ್​​ಎಸ್​ಎಸ್​ (RSS) ಅಲ್ಲ, ಲಾಟರಿ ಹೊಡೆದು ಬೊಮ್ಮಾಯಿ ಸಿಎಂ ಆಗಿದ್ದಾರೆ. ಬೊಮ್ಮಾಯಿಯನ್ನು ಕಿತ್ತು ಹಾಕಲು ಸಚಿವ ಕೆ.ಎಸ್​.ಈಶ್ವರಪ್ಪ (Minister KS Eshwarappa) ಓಡಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ, ಈಶ್ವರಪ್ಪ

ಸಿದ್ದರಾಮಯ್ಯ, ಈಶ್ವರಪ್ಪ

  • Share this:
ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಆರ್​​ಎಸ್​ಎಸ್​ (RSS) ಅಲ್ಲ, ಲಾಟರಿ ಹೊಡೆದು ಬೊಮ್ಮಾಯಿ ಸಿಎಂ ಆಗಿದ್ದಾರೆ. ಬೊಮ್ಮಾಯಿಯನ್ನು ಕಿತ್ತು ಹಾಕಲು ಸಚಿವ ಕೆ.ಎಸ್​.ಈಶ್ವರಪ್ಪ (Minister KS Eshwarappa) ಓಡಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು. ಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ಕುಂದಾ ನಗರಿಯಲ್ಲಿ ಕಾಂಗ್ರೆಸ್​ ನಾಯಕರು ಇಂದು ಭರ್ಜರಿ ಪ್ರಚಾರ ನಡೆಸಿದರು. ರಾಮದುರ್ಗದ ಕಲ್ಲೂರಿನಲ್ಲಿ ಸಿದ್ದರಾಮಯ್ಯ ಅವರು ಆಡಳಿತ ಪಕ್ಷ ಬಿಜೆಪಿಯ ನಾಯಕರ ವಿರುದ್ಧ ವಾಗ್ಬಾಣ ಬಿಟ್ಟರು. ಬಿಜೆಪಿ ಸರ್ಕಾರ ಜಿ.ಪಂ, ತಾ.ಪಂ ಚುನಾವಣೆ ಮಾಡಲು ಹೆದರಿಕೊಂಡಿದೆ. ಚುನಾವಣೆಗೆ ಹೆದರಿ ಚುನಾವಣೆಯಲ್ಲಿ ಮುಂದೂಡಿಕೆ ಮಾಡಿದೆ. ಆದ್ದರಿಂದ ಜಿಪಂ,‌ತಾಪಂ ಸದಸ್ಯರು ಪರಿಷತ್ ಚುನಾವಣೆ ಮತದಾನದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಅವರೇ ಯಡಿಯೂರಪ್ಪರನ್ನು ಕಿತ್ತಾಕಿದ್ದಾರೆ

ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯವರು ಇಬ್ಬರನ್ನು ನಿಲ್ಲಿಸಿದ್ದಾರೆ. ಇಬ್ಬಂದಿ ರಾಜಕಾರಣ ಮಾಡೋದು ಅವರ ಕೆಲಸ. ಮಾಜಿ ಸಚಿವ ರಮೇಶ ಜಾರಕಿಹೊಳಿ ಕಳೆದ ಸಲ ನಮ್ಮ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ್ರು.ಈ ಸಲ ಲಖನ್​​ ಜಾರಕಿಹೊಳಿ ನಿಲ್ಲಿಸಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ರೂ ಅಚ್ಚರಿ ಇಲ್ಲ ಎಂದು ಬಿಜೆಪಿಗೆ ಮಾತಿನ ಗುದ್ದು ನೀಡಿದರು. ಬಿ.ಎಸ್​.ಯಡಿಯೂರಪ್ಪರನ್ನು ಕಿತ್ತಾಕಿ ಬೊಮ್ಮಾಯಿ ಸಿಎಂ ಮಾಡಿದ್ದಾರೆ. ಬಿಜೆಪಿ ಅವರೇ ಯಡಿಯೂರಪ್ಪರನ್ನು ಕಿತ್ತಾಕಿದ್ದಾರೆ ಎಂದು ವ್ಯಂಗ್ಯವಾಡಿದರು.

ಹೊಟ್ಟೆ ಉರಿಯಿಂದ ಅಕ್ಕಿ ಕಡಿಮೆ ಮಾಡಿದ್ದಾರೆ

2 ವರ್ಷ 4 ತಿಂಗಳಲ್ಲಿ ಬಿಜೆಪಿ ಸರ್ಕಾರ ಒಂದು ಕೆಲಸ ಮಾಡಿದ್ದಾರಾ ಹೇಳಿ. ಮಾನ, ಮಾರ್ಯಾದೆ ಬಿಟ್ಟು ಮತ ಕೇಳುತ್ತಿದ್ದಾರೆ. ಮುಖಕ್ಕೆ ಮಂಗಳಾರತಿ ಮಾಡಿ ಬಿಜೆಪಿಯವನ್ನು ಕಳಸಿ ಎಂದು ಮತದಾರರಲ್ಲಿ ಮನವಿ ಮಾಡಿದರು. ನನ್ನ ಅವಧಿಯಲ್ಲಿ 5 ವರ್ಷದಲ್ಲಿ 15 ಲಕ್ಷ ಮನೆ ನಿರ್ಮಾಣ ಮಾಡಿದ್ದೇವೆ. ಈಗ 7 kg ಅಕ್ಕಿಯನ್ನು ‌ 5 kg ಗೆ ಇಳಿಸಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಅವರಪ್ಪನ ಮನೆಯಿಂದ ಕೊಡ್ತಾ ಇದ್ರಾ. ಹೊಟ್ಟೆ ಉರಿಯಿಂದ ಯೋಜನೆಯ ಅಕ್ಕಿಯನ್ನು ಕಡಿತ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಉಸಿರಾಡೋದನ್ನ ನಿಲ್ಲಿಸಬೇಕು, ಅದನ್ನು ನಾನೇ ಮಾಡ್ತೀನಿ: ಇದೇನಿದು BSY ಹೊಸ ವರಸೆ?

ಬಿಜೆಪಿಯನ್ನು ದಯಮಾಡಿ ಕಿತ್ತು ಎಸಿರಿ ಮಾರಾಯ

2023 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ. ಭ್ರಷ್ಟಾಚಾರ, ದುರಾಡಳಿತದಿಂದ  ಜನ ಬೇಸತ್ತಿದ್ದಾರೆ. ಉದ್ಯೋಗ ಖಾತರಿ ಯೋಜನೆ ಕೊಟ್ಟದ್ದು ಕಾಂಗ್ರೆಸ್ ಸರ್ಕಾರ ಕೊಡುಗೆ. ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಏನು ಎಂದು ಪ್ರಶ್ನಿಸಿದರು. ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್.  ದುಡ್ಡು ಹಂಚಿ, ಆಪರೇಷನ್ ಕಮಲ ಮಾಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯನ್ನು ದಯಮಾಡಿ ಕಿತ್ತು ಎಸಿರಿ ಮಾರಾಯ ಎಂದರು

ರಮೇಶ ಜಾರಕಿಹೊಳಿಗೆ ಸಿದ್ದರಾಮಯ್ಯ ತಿರುಗೇಟು

ರಮೇಶ್​ ಜಾರಕಿಹೊಳಿ ಎಲ್ಲಾ ಕಡೆ ಸಿದ್ದರಾಮಯ್ಯ ನನಗೆ ಮೋಸ ಮಾಡಿದ್ರು ಅಂತಾರೆ. ಕರುಬ ಸಮಾಜದ ವಿವೇಕರಾವ್ ಪಾಟೀಲ್ ಗೆ ಮೋಸ ಮಾಡಿದ್ದಾರೆ ಎನ್ನುತ್ತಾರೆ. ರಮೇಶ ಜಾರಕಿಹೊಳಿ ಬ್ಯಾಗ ಹಿಡಕೊಂಡು ತಿರುಗೋಡುವ ಗಿರಾಕಿ ವಿವೇಕರಾವ್ ಪಾಟೀಲ್. ವಿವೇಕರಾವ್ ಪಾಟೀಲ್ ನಮ್ಮ ಪಕ್ಷ ಸೇರಲೇ ಇಲ್ಲ. ನಮ್ಮ ಪಕ್ಷಕ್ಕೆ ಸೇರದ ವಿವೇಕರಾವ್ ಪಾಟೀಲ್ ಗೆ ಟಿಕೆಟ್ ಕೊಡೊದು ಹೇಗೆ. ವಸಂತರಾವ್ ಪಾಟೀಲ್ ಮಗ ಎನ್ನುವ ಕಾರಣಕ್ಕೆ ಟಿಕೆಟ್ ಕೊಡಲು ಆಗಲ್ಲ‌ ಎಂದು ರಮೇಶ ಜಾರಕಿಹೊಳಿಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟರು. ಮೂರು ಜನ ಕುರುಬರಿಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ಕೊಟ್ಟಿದ್ದಾರೆ, ನೀವು ಎಷ್ಟು ಜನರಿಗೆ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ರು.

ಇದನ್ನೂ ಓದಿ: ಜಮೀರ್ ಕಾಲು ಹಿಡಿದು ಚಾಮರಾಜಪೇಟೆಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ: ಕೆ.ಎಸ್.ಈಶ್ವರಪ್ಪ

ರಮೇಶ ಜಾರಕಿಹೊಳಿ ಆಡಿದ್ದೇನೆ ಆಟ ಆಗಿ ಯೋಗಿದೆ. ಸಿದ್ಧಾಂತ, ಪಕ್ಷ ಆಧಾರದ ಮೇಲೆ ರಾಜಕೀಯ ಮಾಡಬೇಕು, ಸ್ವಾರ್ಥಕ್ಕಾಗಿ  ರಾಜಕೀಯ ಮಾಡಬಾರದು‌. ಚುನಾವಣೆಯಲ್ಲಿ ಲಖನ ಜಾರಕಿಹೊಳಿ ಸೋಲಬೇಕು ಎಂದ ಸಿದ್ದರಾಮಯ್ಯ ಕರೆ ನೀಡಿದರು.
Published by:Kavya V
First published: