ಇನ್ನೂ ಭಕ್ತರನ್ನು ಕಾಣದ ಸವದತ್ತಿ ಯಲ್ಲಮ್ಮ: ಮಹರಾಷ್ಟ್ರದಲ್ಲಿನ ಸೋಂಕಿನ ಭೀತಿಯಿಂದ ದೇವಸ್ಥಾನಕ್ಕೆ ಬೀಗ

ದೇವಸ್ಥಾನಕ್ಕೆ ಬರುವ ಭಕ್ತರನ್ನು ನಂಬಿಕೊಂಡು ಇಲ್ಲಿ ನೂರಾರು ಅಂಗಡಿಗಳನ್ನು ಹಾಕಲಾಗಿತ್ತು. ಕಳೆದ 16 ತಿಂಗಳಲ್ಲಿ ವ್ಯಾಪಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಸಿದೆ. ಅವರೆಲ್ಲ ಅಂಗಡಿಗಳನ್ನು ಖಾಲಿ ಮಾಡಿಕೊಂಡು ತಮ್ಮ ತಮ್ಮ ಗ್ರಾಮಗಳಿಗೆ ಮರಳಿದ್ದಾರೆ.

ಸವದತ್ತಿ ಯಲ್ಲಮ್ಮ ದೇವಸ್ಥಾನ.

ಸವದತ್ತಿ ಯಲ್ಲಮ್ಮ ದೇವಸ್ಥಾನ.

  • Share this:
ಬೆಳಗಾವಿ- ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವರ ದರ್ಶನ ಪಡೆಯಲು ಭಕ್ತರು ತಿಂಗಳುಗಳಿಂದ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಮಹಾಮಾರಿ ಕೋವಿಡ್ -19 ಸೋಂಕಿನ ಭೀತಿಯಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಕಳೆದ 16 ತಿಂಗಳಿಂದ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ಶುಭಕಾರ್ಯ ನಡೆದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದು ವಾಡಿಕೆ. ಆದರೇ ಯಲ್ಲಮ್ಮನ ದರ್ಶನ ಸಿಗದೇ ಸಾವಿರಾರು ಭಕ್ತರಿಗೆ ನಿರಾಸೆ ತಂದಿದೆ. ರಾಜ್ಯದಲ್ಲಿ ಬಹುತೇಕ ದೇವಸ್ಥಾನಗಳು ಭಕ್ತರಿಗೆ ಮುಕ್ತವಾಗಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ಸೋಂಕಿನ ಭೀತಿಯಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನ ಇನ್ನೂ ತೆರೆದಿಲ್ಲ.

ಕೋವಿಡ್ -19 ಸೋಂಕಿನ ಒಂದೇ ಅಲೆ, ಎರಡನೇ ಅಲೆಯಿಂದ ಇಡೀ ದೇಶದಲ್ಲಿ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಅದೇ ರೀತಿಯಲ್ಲಿ ರಾಜ್ಯದ ಬಹುತೇಕ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಸಹ ನಿರ್ಭಂದ ಹೇರಲಾಗಿತ್ತು. ಸದ್ಯ ರಾಜ್ಯದ ಬಹುತೇಕ ಪ್ರಸಿದ್ಧ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಮುಕ್ತವಾಗಿವೆ. ಆದರೇ ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನ ಮಾತ್ರ ಇನ್ನೂ ಭಕ್ತರ ಭೇಟಿಗೆ ಅವಕಾಶವನ್ನು ಜಿಲ್ಲಾಢಳಿತ ನೀಡಿಲ್ಲ. ಪ್ರಮುಖವಾಗಿ ದೇವಸ್ಥಾನಕ್ಕೆ ಬರೋ ಭಕ್ತರು ಶೇ.50ರಷ್ಟು ಮಹಾರಾಷ್ಟ್ರ ರಾಜ್ಯದಿಂದಲೇ ಬರುತ್ತಾರೆ. ಮಹಾರಾಷ್ಟ್ರದಲ್ಲಿ ಇನ್ನೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ಅನಿರ್ಧಿಷ್ಟಾವಧಿಗೆ ನಿಷೇಧ ಹೇರಲಾಗಿದೆ.

2020ರ ಮಾರ್ಚ್ ತಿಂಗಳಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಮೊದಲ ಸಲ ನಿಷೇಧ ಹೇರಲಾಗಿತ್ತು. ಬಳಿಕ ಸೋಂಕಿನ ಭೀತಿ ಕಡಿಮೆಯಾಗಿದ್ದ ವೇಳೆಯಲ್ಲಿ 2021ರ ಫೆ 1ರಿಂದ ಫೆ20ರ ವರೆಗೆ ಮಾತ್ರ ಭಕ್ತರಿಗೆ ದೇವಿಯ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ನಿತ್ಯ ಲಕ್ಷಾಂತರ ಜನ ಭಕ್ತರು ಆಗಮಿಸಿದ್ದರು. ಬಳಿಕ ಎರಡನೇ ಅಲೆಯ ಆರಂಭದ ಭೀತಿ ಹಿನ್ನೆಲೆಯಲ್ಲಿ ಮತ್ತೆ ನಿಷೇಧ ಹೇರಲಾಯಿತು.

ಕಳೆದ 16 ತಿಂಗಳಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ ಹಿನ್ನೆಲೆಯಲ್ಲಿ ಆದಾಯದಲ್ಲಿ ತೀವ್ರ ಹೊಡೆತ ಬಿದ್ದಿದೆ. ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿ ವರ್ಷ 15-16 ಕೋಟಿ ರೂಪಾಯಿ ಆದಾಯ  ಮೊದಲು ಇತ್ತು. ಸದ್ಯ ದೇವಸ್ತಾನದ ಆದಾಯದಲ್ಲಿ 10 ಕೋಟಿ ರೂಪಾಯಿ ಕೊರತೆ ಉಂಟಾಗಿದೆ. ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂಧಿಗೆ ಸಂಬಳ ಹಾಗೂ ಇತರೆ ಯಾವುದೇ ಕೆಲಸದಲ್ಲಿ ವ್ಯತಾಸವಾಗಿಲ್ಲ.  ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ ಇದ್ದರೂ ಸಹ ದೇವರಿಗೆ ಪೂಜೆ, ಅರ್ಚನೆ ಹಾಗೂ ಇತರೇ ಧಾರ್ಮಿಕ ಕಾರ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಜಿಲ್ಲಾಳಢಳಿತ ಹಾಗೂ ಆರೋಗ್ಯ ಇಲಾಖೆಯ ಸಲಹೆ ಅನ್ವಯ ದೇವಸ್ಥಾನಕ್ಕೆ ಭಕ್ತರ ಪ್ರವೇಶದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವಸ್ಥಾನ ಕಾರ್ಯನಿರ್ವಹಾಕ ಅಧಿಕಾರಿ ರವಿ ಕೊಟಾರಗಸ್ತಿ ಹೇಳಿದ್ದಾರೆ.

ಇದನ್ನೂ ಓದಿ: ದುರ್ಯೋಧನನ ಪಾತ್ರ ಮಾಡಿದ್ದರಿಂದಲೇ ದರ್ಶನ್​​ಗೆ​​ ಸಂಕಷ್ಟಗಳಂತೆ.. ಪರಿಹಾರವನ್ನೂ ಹೇಳಿದ ಮಂಡ್ಯದ ಜನ

ದೇವಸ್ಥಾನಕ್ಕೆ ಬರುವ ಭಕ್ತರನ್ನು ನಂಬಿಕೊಂಡು ಇಲ್ಲಿ ನೂರಾರು ಅಂಗಡಿಗಳನ್ನು ಹಾಕಲಾಗಿತ್ತು. ಕಳೆದ 16 ತಿಂಗಳಲ್ಲಿ ವ್ಯಾಪಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಸಿದೆ. ಅವರೆಲ್ಲ ಅಂಗಡಿಗಳನ್ನು ಖಾಲಿ ಮಾಡಿಕೊಂಡು ತಮ್ಮ ತಮ್ಮ ಗ್ರಾಮಗಳಿಗೆ ಮರಳಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: