Jarkiholi Family Politics: ಪುತ್ರ ರಾಹುಲ್​ ಜಾರಕಿಹೊಳಿಗೆ ಕ್ಷೇತ್ರ ಬಿಟ್ಟು ಕೊಡಲು ಮುಂದಾದರಾ ಸತೀಶ್ ಜಾರಕಿಹೊಳಿ?

ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕಾ ಈಗಾಗಲೇ ತಂದೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ, ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಹುಲ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ

ರಾಹುಲ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ

  • Share this:
ಬೆಳಗಾವಿ:  ಸಿಎಂ ಗಾದಿ ಮೇಲೆ ಕಣ್ಣೀಟ್ಟಿದ್ದ ಸತೀಶ್ ಜಾರಕಿಹೊಳಿ (Sathish Jarkiholi )ಸಿಎಂ ರೇಸ್ ನಿಂದಾ ಹಿಂದೆ ಸರಿದ್ರಾ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಎದ್ದಿದೆ. ರಾಜ್ಯ ರಾಜಕೀಯದಲ್ಲಿ ಇಷ್ಟು ದಿನ ತಮ್ಮದೆ ಛಾಪು ಮೂಡಿಸಿದ್ದ ಸತೀಶ್ ಈಗ ತಮ್ಮ  ಮಗನ ರಾಜಕೀಯ ಭವಿಷ್ಯಕ್ಕಾಗಿ ರಾಜ್ಯ ರಾಜಕೀಯ ಬಿಟ್ಟು ರಾಷ್ಟ್ರೀಯ ರಾಜಕಾರಣದತ್ತ ಮುಖ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಂಡಿದ್ದ ಸತೀಶ್ ಮುಂದಿನ ರಾಜಕೀಯ ನಡೆ ತೀವ್ರ ಕೂತುಹಲ ಮೂಡಿಸಿದೆ.

ಪುತ್ರ ರಾಹುಲ್​​​ ರಾಜಕೀಯ ಎಂಟ್ರಿ..? 

ಹೌದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರ ರಾಜಕೀಯದ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ. ಸಿಎಂ ಗಾದಿ ಮೇಲೆ ಕಣ್ಣೀಟ್ಟಿದ್ದ ಸತೀಶ್ ಜಾರಕಿಹೊಳಿ ಇದೀಗ್ ಏಕಾಏಕಿ ಲೋಕಸಭೆಗೆ ಸ್ಪರ್ಧೆ ಮಾಡುವೆ ಎಂದಿದ್ದು ಚರ್ಚೆಗೆ ಗ್ರಾಸವಾಗಿದೆ. ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕಾ ಈಗಾಗಲೇ ತಂದೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ, ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನನ್ನ ಮಕ್ಕಳು ಭವಿಷ್ಯದಲ್ಲಿ ರಾಜಕೀಯಕ್ಕೆ ಬರ್ತಾರೆ ಎಂದಷ್ಟೇ ಹೇಳಿಕೊಂಡು ಬರುತ್ತಿದ್ದ ಸತೀಶ್ ನಿನ್ನೆ ಏಕಾಏಕಿ ನನ್ನ ಮಗ ರಾಹುಲ್ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದಾನೆ.

ಲೋಕಸಭೆ ಚುನಾವಣೆಗೆ ನಿಲ್ಲುವ ಯೋಚನೆ

ನಾನು ಮುಂದಿನ ಬಾರಿ ಲೋಕಸಭೆಗೆ ಸ್ಪರ್ಧೆ ಮಾಡುವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮ್ಮ ಮಗನಿಗೆ ಯಮಕನಮರಡಿ ಕ್ಷೇತ್ರವನ್ನ ಬಿಟ್ಟುಕೊಡುವ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲದೇ ಪುತ್ರಿ ಪ್ರಿಯಾಂಕಾಗೋಸ್ಕರ್ ಕ್ಷೇತ್ರ ಹುಡುಕಾಟದಲ್ಲಿ ಕೂಡ ತೊಡಗಿಕೊಂಡಿದ್ದಾರೆ. ಈಗಾಗಲೇ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಮತ್ತು ಪುತ್ರಿ ಪ್ರಿಯಾಂಕಾ ಯಮಕನಮರಡಿ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ..

ಜನಮನ್ನಣೆ ಗಳಿಸುತ್ತಿರುವ ರಾಹುಲ್​ 

ಕಳೆದ ಎರಡು ವರ್ಷದಿಂದ ಸಾಮಾಜಿಕ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ ಜನರ ಬಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ.. ಅಲ್ಲದೇ ರಾಜಕೀಯ ವಾಗಿ ಯಮಕನಮರಡಿ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಆಕ್ಟಿವ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ತಂದೆಯಂತೆ ಮಕ್ಕಳಿಗೆ ಅಭಿಮಾನಿಗಳ ಬಳವೇ ಹುಟ್ಟಿಕೊಂಡಿದೆ. ಅಭಿಮಾನಿಗಳ ಬಳಗದಿಂದ ರಾಹುಲ್ ಜಾರಕಿಹೊಳಿ ಜನುಮ ದಿನವನ್ನ ಅದ್ಧೂರಿ ಯಾಗಿ ಆಚರಿಸಲಾಗಿದೆ.

ಇದನ್ನೂ ಓದಿ: Mallikarjun Kharge: ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ RSS ಕಾರಣ: ಮಲ್ಲಿಕಾರ್ಜುನ ಖರ್ಗೆ ಆರೋಪ

ಮಕ್ಕಳಿಗೆ ರಾಜಕೀಯ ಭವಿಷ್ಯ ಸೃಷ್ಟಿ

ಇನ್ನೂ ಸಿಎಂ ರೇಸ್ ನಲ್ಲಿದ್ದ  ಸತೀಶ್ ಜಾರಕಿಹೊಳಿಯವ್ರ ಈ ಹೇಳಿಕೆಗೆ ಕಾಂಗ್ರೆಸ್ ನಲ್ಲಿನ ಸಿಎಂ ಗಾದಿಯ ಜಂಗೀ ಕುಸ್ತಿಯೇ ಕಾರಣ ಎನ್ನಲಾಗಿದೆ. ಸದ್ಯ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಫೈಟ್ ಶುರುವಾಗಿದೆ.ಇಬ್ಬರ ಪೈಟ್ ಮಧ್ಯೆ ದಲಿತ ಸಿಎಂ ಎಂದರು ಕೂಡ, ಆ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ.ಪರಮೇಶ್ವರ ಹೆಸರು ಮುನ್ನೆಲೆಗೆ ಬಂದಿದೆ. ಹೀಗಾಗಿ ರೇಸ್ ‌ನಿಂದ ಹಿಂದೆ ಸರಿದ ಬಗ್ಗೆ ಮುನ್ಸೂಚನೆ ಕೊಟ್ರಾ ಸತೀಶ್ ಜಾರಕಿಹೊಳಿ ಎಂಬ ಮಾತು ಕೇಳಿ ಬರುತ್ತಿದೆ.ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಇಂಗಿತ ವ್ಯಕ್ತಪಡಿಸಿರುವ ಅವರು ಇದೇ ಅವಕಾಶ ಬಳಕೆ‌ ಮಾಡಿಕೊಂಡು ಪುತ್ರನಿಗೆ ಕ್ಷೇತ್ರ ಬಿಟ್ಟು ಕೊಡಲು ಮುಂದಾಗಿದ್ದಾರೆ.ಆ ಮೂಲಕ ಮಕ್ಕಳಿಗೆ ರಾಜಕೀಯ ಭವಿಷ್ಯ ಸೃಷ್ಟಿ ಮಾಡಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ  ಸಿಎಂ ‌ರೇಸ್ ನಲ್ಲಿ ಇದ್ದೇನೆ ಎನ್ನುತ್ತಲೇ ದೆಹಲಿಗೆ ಹಾರಲು ಸ್ಕೆಚ್ ಹಾಕಿರುವ  ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ಅದ್ಯಾವ ರಾಜಕೀಯ ಲೆಕ್ಕ ಹಾಕಿಕೊಂಡಿದ್ದಾರೋ ಕಾದು ನೋಡಬೇಕಿದೆ.
Published by:Kavya V
First published: