Santosh Patil: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್; ಉಡುಪಿ ಪೊಲೀಸರಿಂದ ಬೆಳಗಾವಿಯಲ್ಲಿ ತನಿಖೆ ಚುರುಕು

ಇನ್ನೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಸಾಗಿರುವ ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಉಡುಪಿ ಪೊಲೀಸರು ಚುರುಕುಗೊಳಿಸಿದ್ದಾರೆ. ಬೆಳಗಾವಿಗೆ ಆಗಮಿಸಿರುವ ಉಡುಪಿ ಪೊಲೀಸರ ತಂಡ ಗೌಪ್ಯವಾಗಿ ಮಾಹಿತಿ ಕಲೆಯ ಜೊತೆಗೆ ತನಿಖೆ ನಡೆಸುತ್ತಿದ್ದಾರೆ.

ಸಂತೋಷ್ ಪಾಟೀಲ್

ಸಂತೋಷ್ ಪಾಟೀಲ್

  • Share this:
ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ (Contractor Santosh Patil Suicide Case) ರಾಜ್ಯ ರಾಜಕೀಯದದಲ್ಲಿ (Karnataka Politics) ಸಂಚಲನ ಸೃಷ್ಟಿಸಿದೆ. ಮೂರು ರಾಜಕೀಯ ಪಕ್ಷದ ನಾಯಕರೊಂದಿಗಿನ ಸಂತೋಷ್ ಪೋಟೋ (Santosh Photos Viral) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೆ. ಇತ್ತ ಬೆಳಗಾವಿ(Belagavi)ಗೆ ಆಗಮಿಸಿರುವ ಉಡುಪಿ ಪೊಲೀಸರು (Udupi Police) ಗೌಪ್ಯವಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಒಂದೊಡೆಗೆ ಸಂತೋಷ್ ಕೇಸ್ ನಲ್ಲಿ ಕೆ.ಎಸ್.ಈಶ್ವರಪ್ಪ (KS Eshwarappa) ತಲೆದಂಡ ಆಗಿದೆ. ಈ ಮಧ್ಯೆ ಸಂತೋಷ್ ಕುಟುಂಬಸ್ಥರು (Santosh Family) ಅಂತ್ಯಕ್ರಿಯೆ ಬಳಿಕ ಮಾಧ್ಯಮದವರಿಂದ ಅಂತರವನ್ನ ಕಾಪಾಡಿಕೊಂಡಿದ್ದಾರೆ.

ಆದ್ರೆ  ಮತ್ತೊಂದೆಡೆ ಈ ಹಿಂದೆ ಕಾಂಗ್ರೆಸ್ (Congress) ಶಾಲು ಹಾಕಿ ಗಲ್ಲಿ ಗಲ್ಲಿ ಸುತ್ತಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದ  ಫೋಟೊಗಳು ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್ ಆಗ್ತಿವೆ. ಅದರಲ್ಲೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳ ನಾಯಕರ ಜೊತೆಗೆ ನಂಟು ಹೊಂದಿದ್ದರು ಎಂಬುದನ್ನ ಫೋಟೋಗಳು ಹೇಳುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಸಚಿವ ಶ್ರೀರಾಮುಲು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೊತೆಗಿನ ಫೋಟೊಗಳು ಈಗ ವೈರಲ್ ಆಗ್ತಿವೆ.

ಇದನ್ನೂ ಓದಿ:  JDS ಜನತಾ ಜಲಧಾರೆಗೆ HDD ಚಾಲನೆ: ನನಗೆ ತಲೆಯಲ್ಲಿ ಶಕ್ತಿ ಇದೆ, ಆದ್ರೆ ಕಾಲಿನಲ್ಲಿ ಇಲ್ಲ ಅಂದ್ರು ದೇವೇಗೌಡರು

ಸಂತೋಷ್ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹ

ಇನ್ನೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಸಾಗಿರುವ ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಉಡುಪಿ ಪೊಲೀಸರು ಚುರುಕುಗೊಳಿಸಿದ್ದಾರೆ. ಬೆಳಗಾವಿಗೆ ಆಗಮಿಸಿರುವ ಉಡುಪಿ ಪೊಲೀಸರ ತಂಡ ಗೌಪ್ಯವಾಗಿ ಮಾಹಿತಿ ಕಲೆಯ ಜೊತೆಗೆ ತನಿಖೆ ನಡೆಸುತ್ತಿದ್ದಾರೆ. ಬೆಳಗಾವಿ ತಾಲೂಕಿನ ಬಡಸ ಗ್ರಾಮದ ಸಂತೋಷಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಂತೋಷ್‌ಸಹೋದರ, ಪತ್ನಿ ಹಾಗೂ ತಾಯಿಯಿಂದ ಮಾಹಿತಿ ಕಲೆ ಹಾಕಿದ್ದಾರೆ.

ಪ್ರಕರಣ ಸಂಬಂಧ ಬೆಳಗಾವಿಯಲ್ಲಿ ಎಎಪಿ ಪಕ್ಷದ ಮುಖಂಡ ಭಾಸ್ಕರ್ ಮಾತನಾಡಿ, ಎಫ್ ಐ ಆರ್ ನಲ್ಲಿ ಇರೋ ಆರೋಪಿಗಳ ಬಂಧನ ಆಗಬೇಕು. ಇಂತಹ ಪ್ರಕರಣದಲ್ಲಿ ಸರ್ಕಾರವೇ ತನಿಖಾ ಅಧಿಕಾರಿ ಆಗುತ್ತೆ. ಆದರೆ ತನಿಖಾಧಿಕಾರಿಗೆ ಎಲ್ಲಾ ಸ್ವಾತಂತ್ರ್ಯ ಕೊಡಬೇಕು. ಕೋರ್ಟ್ ಕಣ್ಗಾವಲಿನಲ್ಲಿ ಪ್ರಕರಣ ತನಿಖೆ ಆಗಬೇಕು.ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡೋ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯಾಯ ಸಿಗುವ ಭರವಸೆಯಲ್ಲಿ ಸಂತೋಷ್ ಕುಟುಂಬ

ಕೆ.ಎಸ್.ಈಶ್ವರಪ್ಪ ರಾಜೀನಾಮೆ ಬಳಿಕ ಸಂತೋಷ ಕುಟುಂಬಸ್ಥರು ಮೌನಕ್ಕೆ ಶರಣಾಗಿದ್ದಾರೆ. ಮಾಧ್ಯಮಗಳಿಂದ ಅಂತರವನ್ನ ಕಾಪಾಡಿಕೊಂಡಿರುವ ಸಂತೋಷ್ ಕುಟುಂಬಸ್ಥರು ತಮಗೆ ಸರ್ಕಾರದಿಂದ ನ್ಯಾಯ ಸಿಗುವ ಭರವಸೆಯಲ್ಲಿದ್ದಾರೆ.

ಈಶ್ವರಪ್ಪ ಮೊದಲ ಹಲಾಲ್ ಆದ ನಾಯಕ: ಜಾರಕಿಹೊಳಿ ವ್ಯಂಗ್ಯ

ಈ ಮಧ್ಯೆ ಕಾಂಗ್ರೆಸ್ ಬಿಜೆಪಿ ವಿರುದ್ಧ ತನ್ನ ಹೋರಾಟ ಮುಂದುವರಿಸಿದ್ದು, ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಮಾತನಾಡಿ, ಬಿಜೆಪಿಯಿಂದ ಮೊಟ್ಟ ಮೊದಲ ಹಲಾಲ್ ಆದ ವ್ಯಕ್ತಿ ಕೆ ಎಸ್ ಈಶ್ವರಪ್ಪ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:  Santosh Patil Case: ಲಕ್ಷ್ಮಿ ಹೆಬ್ಬಾಳ್ಕರ್ ಹಳೆ ಹೇಳಿಕೆ ವೈರಲ್; ಹೇಳಿಕೆಗೆ ಶಾಸಕರು ಹೇಳಿದ್ದೇನು?

ಹಲಾಲ್ ಆಗಲು ಇನ್ನು ಬಹಳಷ್ಟು ಜನರ ಸರದಿ ಬರಲಿದೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ. ಇನ್ನೂ ಅನೇಕ ಸಚಿವರು ಭ್ರಷ್ಟಾಚಾರಕ್ಕೆ ಬಲಿ ಆಗಲಿದ್ದಾರೆ. ಸರ್ಕಾರದಲ್ಲಿ ಶೇ.40 ಕಮಿಷನ್ ಇದೆ. ಕೇವಲ ರಾಜೀನಾಮೆ ಅಲ್ಲ, ಬಂಧನ ಆಗೋವರೆಗೆ ಹೋರಾಟ ನಿಲ್ಲುವುದಿಲ್ಲ ಅಂತಾ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.
Published by:Mahmadrafik K
First published: