ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಖರ್ಚಾಗಿದ್ದು ಬರೋಬ್ಬರಿ 13.54 ಕೋಟಿ; ಸೂಕ್ತ ತನಿಖೆಗೆ ಆರ್ ಟಿ ಐ ಕಾರ್ಯಕರ್ತನ ಆಗ್ರಹ

ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿರೋ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಇದು ದುಂದು ವೆಚ್ಚವಾಗಿದೆ. ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರ

ಬೆಳಗಾವಿ ಲೋಕಸಭಾ ಕ್ಷೇತ್ರ

  • Share this:
ಬೆಳಗಾವಿ (ಜುಲೈ,4)- ಚುನಾವಣೆ ಅಂದ್ರೆ ಅಲ್ಲಿ ಹಣದ ಹೊಳೆಯೆ ಹರಿಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರೊ ವಿಚಾರ. ಅದ್ರಲ್ಲೂ ಉಪಚುನಾವಣೆ ಅಂದ್ರೆ ಅಲ್ಲಿ ಪ್ರತಿಷ್ಠೆ, ಜಿದ್ದಾಜಿದ್ದಿ, ಪೈಪೋಟಿ ವ್ಯಾಪಕವಾಗಿ ನಡೆಯುತ್ತದೆ. ಹೀಗೆ ಇತ್ತೀಚಿಗೆ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಚುನಾವಣೆಗಾಗಿ ಅಭ್ಯರ್ಥಿಗಳು ಹಾಗೂ ಪಕ್ಷ ಹಣ, ಖರ್ಚು ಮಾಡಿದೆ. ಆದರೆ ಚುನಾವಣೆ ನಡೆಸಲು ಆಯೋಗ ವೆಚ್ಚ ಮಾಡಿದ್ದು ಬರೋಬ್ಬರಿ 13.54 ಕೋಟಿ ಎನ್ನುವುದು ಇದೀಗ ಬಹಿರಂವಾಗಿದೆ. ಅಷ್ಟೇ ಅಲ್ಲ ಈ ಹಣದಲ್ಲಿ 1 ಕೋಟಿಗೂ ಅಧಿಕ ಮೊತ್ತಕ್ಕೆ ಯಾವುದೇ ಲೆಕ್ಕವಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಈ ಚುನಾವಣೆ ನಡೆಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರೋದು ಈಗ ಬಹಿರಂಗವಾಗಿದೆ. 13.54 ಕೋಟಿ ರೂಪಾಯಿ ಒಟ್ಟು ವೆಚ್ಚವಾಗಿದ್ದು, ಎಲ್ಲರ ಗಮನ ಸೆಳೆದಿದೆ. ಒಂದು ಉಪಚುನಾವಣೆಗೆ ಇಷ್ಟು ಖರ್ಚು ಮಾಡಿದರೆ, ಇನ್ನೂ ಇಡೀ ದೇಶದ ಚುನಾವಣೆಗೆ ಎಷ್ಟು ಕೋಟಿಗಳು ಬೇಕು ಎನ್ನುವುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಚುನಾವಣೆ ನಡೆಸಲು ಆಯೋಗ ಖರ್ಚು ಮಾಡಿರೋ ಹಣದ ಲೆಕ್ಕ ಇದು. ಇನ್ನೂ ಪಕ್ಷಗಳು ರ್ಯಾಲಿ, ಸಮಾವೇಶ ಹಾಗೂ ಕಾರ್ಯಕರ್ತರಿಗೆ ಅಂತೆಲ್ಲ ಎಷ್ಟು ವೆಚ್ಚ ಮಾಡಿರಬಹುದು ಎನ್ನುವ ಕುತೂಹಲ ಮೂಡಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2566 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಪ್ರತಿ ಮತಗಟ್ಟೆಗೆ 30 ಸಾವಿರ ರೂಪಾಯಿಯನ್ನು ನಿಗಧಿ ಮಾಡಲಾಗಿದೆ. ಇದರ ಒಟ್ಟು ವೆಚ್ಚ 8.69 ಕೋಟಿ ರೂಪಾಯಿ ಆಗಿದೆ. ಇನ್ನೂ ಜಿಲ್ಲಾಧಿಕಾರಿ ಕಚೇರಿಗೆ 1 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ. ಆದರೇ ಈ ಹಣ ಯಾವ ಉದ್ದೇಶಕ್ಕೆ ಬಳಕೆ ಆಗಿದೆ ಎಂಬುದು ಮಾಹಿತಿ ನೀಡಿಲ್ಲ. 1289 ಮತಗಟ್ಟೆಗಳ ವೆಬ್ ಕಾಸ್ಟಿಂಗ್ ಗಾಗಿ 1.41 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ವಿವಿಧ ಕಾಮಗಾರಿಗಾಗಿ 1.32 ಕೋಟಿ ರೂಪಾಯಿ, ಕೋವಿಡ್ ನಿಯಮ ಪಾಲಿಸಲು ಸಾಮಗ್ರಿ ಪೂರೈಸಲು 72 ಲಕ್ಷ ರೂಪಾಯಿ ಹಣ ವೆಚ್ಚ ಮಾಡಲಾಗಿದೆ.

ಇದನ್ನು ಓದಿ: ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ: ರಾಜ್ಯದ ಇತರೆಡೆಯೂ ಸುರಿದ ವರ್ಷಧಾರೆ

ಸ್ಟ್ರಾಂಗ್ ರೂಂ, ಮತ ಎಣಿಕೆ ಕೇಂದ್ರ ಸ್ಥಾಪನೆಗೆ 61 ಲಕ್ಷ ರೂ. ಖರ್ಚು ಮಾಡಲಾಗಿದೆ. ಇವಿಎಂ ಬೆಂಗಳೂರಿನಿಂದ ಬೆಳಗಾವಿಗೆ ತರಲು 27 ಲಕ್ಷ, ಮತ ಎಣಿಕೆ ಕೇಂದ್ರದ ಪೆಂಡಾಲ್ ಸೇರಿ ಇತರೇ ಕೆಲಸಕ್ಕಾಗಿ 17 ಲಕ್ಷ ರೂಪಾಯಿ, ಮತ ಎಣಿಕೆ ಕೇಂದ್ರ ಸೌಂಡ್ ಸಿಸ್ಟಮ್, ಪ್ಯಾನ್, ಕೂಲರ್ ಗಾಗಿ 18 ಲಕ್ಷ ರೂಪಾಯಿ ಖಚ್ಚು ಮಾಡಲಾಗಿದೆ. ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿರೋ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಇದು ದುಂದು ವೆಚ್ಚವಾಗಿದೆ. ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆ ಇನ್ದ ಹೊರಗೆ ಬಾರದೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಜೊತೆಗೆ ಗುಂಪು ಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ.
Published by:HR Ramesh
First published: