Pushpa ಸಿನಿಮಾ ಮಾದರಿಯಲ್ಲಿ ರಕ್ತ ಚಂದನ ಸಾಗಾಟ: ಖತರ್ನಾಕ್ ಕಳ್ಳನ ಬಂಧನ

ಪುಷ್ಪ ಚಲನಚಿತ್ರದಲ್ಲಿ ಹಾಲಿನ ವಾಹನ ಸೇರಿದಂತೆ ವಿವಿಧ ಮಾದರಿಯಲ್ಲಿ  ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದರೆ , ಈತ ಕೋವಿಡ್ 19 ಸೇವೆಗಾಗಿ ಹಣ್ಣು ಮಾರಾಟ ವಾಹನ  ಅಂತಾ ಬೋರ್ಡ್  ಹಾಕಿ ಚೆಕ್ ಪೋಸ್ಟ್ ಪೊಲೀಸರನ್ನ ಯಾಮಾರಿಸಿ  ರಕ್ತ ಚಂದನ ಸಾಗಾಟ ಮಾಡುತ್ತಿದ್ದ.

ಬಂಧಿತ ಆರೋಪಿ ಮತ್ತು ರಕ್ತ ಚಂದನ

ಬಂಧಿತ ಆರೋಪಿ ಮತ್ತು ರಕ್ತ ಚಂದನ

  • Share this:
ಬೆಳಗಾವಿ: ಪುಷ್ಪ (Pushpa Movie) ಚಲನಚಿತ್ರ ಸದ್ಯ ಎಲ್ಲಾ ರಾಜ್ಯದಲ್ಲಿ  ಸಖತ್ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ರಕ್ತ ಚಂದನ (Red Sandalwood) ಕಳ್ಳತನ ದೃಶ್ಯ ಅಂತು ಅದ್ಭುತ. ಪುಷ್ಪ ಚಲನಚಿತ್ರ ಮಾದರಿಯಲ್ಲಿ ಪೊಲೀಸರನ್ನ (Police) ಯಾಮಾರಿಸಿ  ರಕ್ತ ಚಂದನ ಸಾಗಿಸುತ್ತಿದ್ದ ಖತರ್ನಾಕ್ ಕಳ್ಳನನ್ನ ಮಹಾರಾಷ್ಟ್ರ ಪೊಲೀಸರು (Maharashtra Police) ಭರ್ಜರಿ ಬೇಟೆಯಾಡಿದ್ದು ಕೋಟ್ಯಾಂತರ ಮೌಲ್ಯದ ರಕ್ತ ಚಂದನ ವಶಕ್ಕೆ ಪಡೆದಿದ್ದಾರೆ. ಸದ್ಯ ಮಹಾರಾಷ್ಟ್ರ ಸೇರಿದಂತೆ ಅಂತರರಾಜ್ಯದಲ್ಲಿ ಪುಷ್ಪ ಚಲನಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಕರ್ನಾಟಕ  - ಆಂಧ್ರ (Karnataka-Andhra Border) ಅಂತರರಾಜ್ಯ ಗಡಿದಾಟಿ ಮಹಾರಾಷ್ಟ್ರ ಗಡಿಯಲ್ಲಿ  ರಕ್ತ ಚಂದನ ಸಾಗಾಟ ಮಾಡುತ್ತಿದ್ದ ಓರ್ವನನ್ನ ಮಹಾರಾಷ್ಟ್ರ  ಪೊಲೀಸರು  ವಶಕ್ಕೆ ಪಡೆದಿದ್ದಾರೆ. ಕರ್ನಾಟಕದ ಆನೇಕಲ್ ಮೂಲದ ಯಾಸೀನ್ ಇನಾಯತ ಉಲ್ಲಾ  ಬಂಧಿತ ಖತರ್ನಾಕ ಕಳ್ಳನಾಗಿದ್ದಾನೆ.

ಬಂಧಿತನಿಂದ  ಸುಮಾರು 2 ಕೋಟಿ 45 ಲಕ್ಷ ಮೊತ್ತದ ರಕ್ತ ಚಂದನ ಹಾಗೂ 10 ಲಕ್ಷದ ವಾಹನವನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಹಿಂದೆ ಮತ್ತೆ ಯಾರು ಇದ್ದಾರೆ ಅನ್ನೋದರ ಬಗ್ಗೆ ತನಿಖೆ ಶುರುವಾಗಿದೆ. ಇಷ್ಟೊಂದು ಅಕ್ರಮವಾಗಿ  ಸಾಗಾಟ ಮಾಡುತ್ತಿದ್ದರೂ ಯಾರೊಬ್ಬರಿಗೂ ಅನುಮಾನ ಬಂದಿಲ್ಲ.

ವಾಹನಕ್ಕೆ ಕೋವಿಡ್ 19 ಸೇವೆಗಾಗಿ ಹಣ್ಣು ಮಾರಾಟದ ಬೋರ್ಡ್

ಆಂಧ್ರ, ಕರ್ನಾಟಕ ರಾಜ್ಯದ ಗಡಿ ಚೆಕ್ ಪೋಸ್ಟ್ ದಾಟಿ ಮಹಾರಾಷ್ಟ್ರ ಗಡಿ  ತಲುಪುವವರೆಗೂ ಯಾರಿಗೂ ಅನುಮಾನ ಬಂದಿಲ್ಲ. ಯಾಕೆಂದರೆ ಪುಷ್ಪ ಚಲನಚಿತ್ರದಲ್ಲಿ ಹಾಲಿನ ವಾಹನ ಸೇರಿದಂತೆ ವಿವಿಧ ಮಾದರಿಯಲ್ಲಿ  ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದರೆ, ಈತ ಕೋವಿಡ್ 19 ಸೇವೆಗಾಗಿ ಹಣ್ಣು ಮಾರಾಟ ವಾಹನ  ಅಂತಾ ಬೋರ್ಡ್  ಹಾಕಿ ಚೆಕ್ ಪೋಸ್ಟ್ ಪೊಲೀಸರನ್ನ ಯಾಮಾರಿಸಿ  ರಕ್ತ ಚಂದನ ಸಾಗಾಟ ಮಾಡುತ್ತಿದ್ದ.

ಇದನ್ನೂ ಓದಿ:  'ಪುಷ್ಪ' ಚಿತ್ರದಲ್ಲಿ Allu Arjun​​ಗೆ ಇಷ್ಟೆಲ್ಲಾ Health Problem ಇದ್ಯಾ; ಈ ಡಾಕ್ಟರ್​ ಮಾತು ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ!

ಇನ್ನು ಪುಷ್ಪ ಚಲನಚಿತ್ರ ಮಾದರಿಯಲ್ಲೇ ರಕ್ತ ಚಂದನ ಸಾಗಾಟ ಆಗುತ್ತಿರುವ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆ ಪೊಲೀಸರು ಮಹಾರಾಷ್ಟ್ರ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಎಸ್ ಪಿ ದಿಕ್ಷಿತ್ ಗೆಡಮ್ ಇವರ ನೇತೃತ್ವದಲ್ಲಿ ದಾಳಿ ನಡೆಸಿದೆ.

ಉಪ ಪೊಲೀಸ್ ಆಯುಕ್ತ ಅಶೋಕ್ ವಿರಕರ್ ಮತ್ತು ಸಹಾಯಕ ಪೊಲೀಸ್ ನಿರೀಕ್ಷಕ ರವಿರಾಜ್ ಫಡ್ನವೀಸ್ ಸೇರಿದಂತೆ ಹಲವು ಅಧಿಕಾರಿಗಳ ತಂಡ ದಾಳಿಯಲ್ಲಿ ಭಾಗಿಯಾಗಿತ್ತು.

ಹೆಚ್ಚಿನ ತನಿಖೆ ನಡೆಸುತ್ತಿರುವ ಪೊಲೀಸರು

ಅರಣ್ಯ ಇಲಾಖೆ ಸಹಾಯದಿಂದ ದೊಡ್ಡ ಮೊತ್ತದ ರಕ್ತ ಚಂದನ ಸ್ಮಗ್ಲಿಂಗ್ ಮಾಡುವವರ ಮೆಲೆ ದಾಳಿ ಇದಾಗಿದೆ. ಮಹಾರಾಷ್ಟ್ರ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ. ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ, ಪೊಲೀಸರು ರಂಗೋಲಿ ಕೆಳಗೆ ನುಗ್ಗುತ್ತಾರೆ ಅನ್ನೋದು ಸಾಬೀತಾಗಿದೆ. ಅಂತರರಾಜ್ಯ ಸ್ಮಗ್ಲಿಂಗ ರನ್ನ  ಬಂಧಿಸುವಲ್ಲಿ ಮಹಾರಾಷ್ಟ್ರ ಪೊಲೀಸರು ಯಶಸ್ವಿಯಾಗಿದ್ದು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ:  Pushpa: ಅಲೆಲೆಲೇ...ದೇವಸ್ಥಾನದಲ್ಲೂ `ಪುಷ್ಪ’ ಸಿನಿಮಾದ ಸಾಮಿ ಸಾಮಿ ಹಾಡು.. ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ಪುಷ್ಪ ಸಿನಿಮಾ ನೋಡಿ 24 ವರ್ಷದ ಯುವಕನನ್ನ ಕೊಂದ ಅಪ್ರಾಪ್ತರು

ಷ್ಪಾ ಸಿನಿಮಾ ಮತ್ತು ಬದ್ನಾಮ್ (Badnam) ವೆಬ್ ಸಿರೀಸ್ ನಿಂದ ಪ್ರೇರಣೆಗೊಂಡ ಅಪ್ರಾಪ್ತರ ಗುಂಪು ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದೆ. ಕೊಲೆಗೂ ಮುನ್ನ ವ್ಯಕ್ತಿಯನ್ನ ಥಳಿಸಿ ವಿಡಿಯೋ (Video) ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ(Social Media)ದಲ್ಲಿ ಹವಾ ಕ್ರಿಯೇಟ್ ಮಾಡಲು ವಿಡಿಯೋ ಅಪ್ಲೋಡ್ ಮಾಡಲು ಸಹ ಮುಂದಾಗಿದ್ದರು. ಸರಿಯಾದ ಸಮಯಕ್ಕೆ ಪೊಲೀಸರು ತಲುಪಿದ ಹಿನ್ನೆಲೆ ವಿಡಿಯೋ ಅಪ್ಲೋಡ್ ಮಾಡೋದನ್ನು ತಡೆದಿದ್ದಾರೆ.

ಜನವರಿ 19ರಂದು ದೆಹಲಿಯಲ್ಲಿ ಈ ಕೊಲೆ ನಡೆದಿದೆ. ಕೊಲೆಯಾದ ಯುವಕನನ್ನು 24 ವರ್ಷದ ಶಿಬು ಹುಸೇನ್ ಎಂದು ಗುರುತಿಸಲಾಗಿದೆ. ಹುಡುಗರು ಗಿಲ್ಲಿ ದಾಂಡು ಆಡೋದಕ್ಕೆ ಶಿಬು ಹುಸೇನ್ ವಿರೋಧಿಸಿದ್ದರು. ಈ ಹಿನ್ನೆಲೆ ಶಿಬುವಿನ ಕೊಲೆಯಾಗಿತ್ತು.
Published by:Mahmadrafik K
First published: