ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಪೊಲಿಟಿಕ್ಸ್; ಕೇಸರೀಕರಣ ವಿರುದ್ಧ ತೊಡೆತಟ್ಟುತ್ತಿರುವ ಜಾರಕಿಹೊಳಿ

news18
Updated:October 3, 2018, 9:04 PM IST
ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಪೊಲಿಟಿಕ್ಸ್; ಕೇಸರೀಕರಣ ವಿರುದ್ಧ ತೊಡೆತಟ್ಟುತ್ತಿರುವ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
  • Advertorial
  • Last Updated: October 3, 2018, 9:04 PM IST
  • Share this:
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ ( ಅ.03) :  ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸದ್ಯ ರಾಜಕೀಯ ರಣಾಂಗಣವಾಗಿ ಮಾರ್ಪಡುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ವಾಕ್ ಸಮರಕ್ಕೂ ಮೊನ್ನೆ ನಡೆದ ಗಲಾಟೆ ಪ್ರಕರಣ ಸಾಕ್ಷಿಯಾಗಿದೆ.

ಇತ್ತ ಎರಡು ದಿನ ಕಳೆದ್ರೂ ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾಗದ ಹಲ್ಲೆ ಕುರಿತು ದೂರು ದಾಖಲಾಗದೆ ಹಲವು ಅನುಮಾನಗಳನ್ನ ಹುಟ್ಟು ಹಾಕಿದ್ರೇ, ಇಂದು ಕೂಡ ವಿವಿಯಲ್ಲಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು ಕ್ಲಾಸ್ ಬಂದ್ ಮಾಡಿ ಹಲ್ಲೆಕೋರರ ಬಂಧನಕ್ಕೆ ಆಗ್ರಹಿಸಿದ್ದಾರೆ.

ಎರಡು ದಿನಗಳ ಹಿಂದೆ ನಡೆದ ಘಟನೆ 

ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯ ರಾಣಿ ಚನ್ನಮ್ಮ ವಿವಿಯಲ್ಲಿ ಶಾಸಕರ
ಬೆಂಬಲಿಗರೆಲ್ಲರೂ ತಮ್ಮ ಶಾಸಕರನ್ನ ಅಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕರೆಯುತ್ತಿಲ್ಲ
ಎಂದು ಆರೋಪಿಸಿ ಗಲಾಟೆ ನಡೆಸಿದ್ದರು. ಆದರೆ  ಇದೇ ಗಲಾಟೆ ಇಂದು ರಾಜಕೀಯ ತಿರುವು ಪಡೆದುಕೊಂಡಿದೆ. ಗಲಾಟೆ ಕುರಿತು ನಿನ್ನೆ ಸುದ್ದಿಗೋಷ್ಠಿ ನಡೆಸಿದ ಸಂಸದ ಸುರೇಶ್ ಅಂಗಡಿ ಶಾಸಕ ಸತೀಶ್ ಜಾರಕಿಹೊಳಿ ವಿರುದ್ದ ಹರಿಹಾಯ್ದಿದ್ದರು. ಅಷ್ಟೇ ಅಲ್ಲದೆ ವಿಸಿ ಪರವಾಗಿ ಮಾತನಾಡಿದ ಅವರು ಪೊಲೀಸರ ಮೇಲೆ ಶಾಸಕರು ಒತ್ತಡ ತರುತ್ತಿದ್ದಾರೆ ಹೀಗಾಗಿ ಪೊಲೀಸರು ಸ್ವಯಂ ಪ್ರೇರಿತ ದೂರು ಕೂಡ ದಾಖಲಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೂಡ ಮಾಡಿದ್ದರು. ಇತ್ತ ಪ್ರಕರಣದ ಕುರಿತು ಇಂದು ಪ್ರತಿಕ್ರಿಯೆ ನೀಡಿರುವ ಶಾಸಕ ಸತೀಶ ಜಾರಕಿಹೊಳಿ ವಿವಿಯಲ್ಲಿ ಇನ್ನೂ ಮುಂದೆ ರಾಜಕೀಯ ಮಾಡುತ್ತೇವೆ ಎನ್ನುವ ಮೂಲಕ ಈ ಪ್ರಕರಣಕ್ಕೆ ರಾಜಕೀಯ ತಿರುವು ನೀಡಿದ್ದಾರೆ.

ವಿಸಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ವಿವಿಯ ಸಿಂಡಿಕೇಟ್ ಸದಸ್ಯ

ಇತ್ತ ಮೊನ್ನೆ ಘಟನೆ ನಡೆಯಬಾರದಿತ್ತು ಆದರೆ  ನಡೆದಿದೆ. ವಿಸಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ವಿವಿಯ ಸಿಂಡಿಕೇಟ್ ಸದಸ್ಯ ಬಿಜೆಪಿಯ ರಾಜು ಚಿಕ್ಕನಗೌಡರ ವಿವಿಯನ್ನ ಕೇಸರಿಮಯ ಮಾಡಲು ಹೋರಟಿದ್ದಾರೆ ಇದನ್ನ ಪ್ರಶ್ನೆ ಮಾಡಲು ನಮ್ಮ ಬೆಂಬಲಿಗರು ಹೋಗಿದ್ದರು. ಆ ಸಂದರ್ಭದಲ್ಲಿ ನೂಕು ನುಗ್ಗಲು ಆಗಿದೆ ಅಷ್ಟೇ ಆದರೆ ಇದನ್ನೆ ಬಿಜೆಪಿಯವರು ಹಲ್ಲೆಯಾಗಿದೆ ಎಂದು ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಇಡೀ ವಿವಿಯನ್ನೇ ಕೇಸರಿಮಯ ಮಾಡಲು ಹೊರಟಿದ್ದಾರೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ.

ಒಂದು ವೇಳೆ ಬಿಜೆಪಿಯರು ಇದರ ವಿರುದ್ದ ಪ್ರತಿಭಟನೆ ಮಾಡಿದರೆ, ನಾವು ಕೂಡ ಪ್ರತಿಭಟನೆ ಮಾಡುತ್ತೇವೆ ಜೊತೆಗೆ ವಿವಿಯಲ್ಲಿ ಇನ್ನೂ ಮುಂದೆ ರಾಜಕೀಯ ನಾವು ಮಾಡುತ್ತೇವೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕೇಸರಿಮಯ ಮಾಡುವುದು ಬೇಡ ಎನ್ನಲು ಇವರು ಯಾರು ?

ಶಾಸಕ ಸತೀಶ್ ಜಾರಕಿಹೊಳಿ ಬಿಜೆಪಿ ಸೇರಿದಂತೆ ಸಂಸದರ ನಡೆಯನ್ನ ಖಂಡಿಸಿ
ನಾವು ವಿವಿಯಲ್ಲಿ ರಾಜಕೀಯ ಮಾಡುತ್ತೇವೆ ಹಾಗೂ ಕೇಸರಿಮಯ ಮಾಡಲು ಬಿಡುವುದಿಲ್ಲ ಎನ್ನುವುದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ ಸಂಸದ ಸುರೇಶ್ ಅಂಗಡಿ ಅವರಿಗೆ ನಾವು ರಾಜಕೀಯ ಮಾಡಲು ಬೇಡ ಅಂದಿಲ್ಲ ಆದ್ರೇ ಕೇಸರಿಮಯ ಮಾಡುವುದು ಬೇಡ ಅನ್ನಲು ಇವರು ಯಾರು ಎನ್ನುವ ನಿಟ್ಟಿನಲ್ಲಿ ಮಾತನಾಡಿದರು.

ಭಾರತದಲ್ಲಿ ಬಿಟ್ಟು ಪಾಕಿಸ್ತಾನದಲ್ಲಿ ಕೇಸರಿಮಯ ಮಾಡಲು ಆಗುತ್ತಾ, ಕೇಸರಿ ಸ್ವಾಭಿಮಾನದ ಸಂಕೇತ ಶಾಸಕರು ಮೊದಲು ಗಲಾಟೆ ಮಾಡಿರುವ
ಬೆಂಬಲಿಗರ ವಿರುದ್ದ ಕ್ರಮಕ್ಕೆ ಮುಂದಾಗಲಿ ಎಂದು ತಿರುಗೇಟು ನೀಡಿದರು.

ಇಂದು ಜಿಲ್ಲಾಧಿಕಾರಿ ಕಚೇರಿಗೆ ಮೊದಲು ಶಾಸಕ ಸತೀಶ್ ಜಾರಕಿಹೊಳಿ ಬಂದು ವಿವಿಯಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ್ರೇ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದಾಗಲೇ ಸಂಸದ ಸುರೇಶ್ ಅಂಗಡಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಅಶ್ಚರ್ಯ ಮೂಡಿಸಿದರು. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಜೊತೆಗೆ ಗಲಾಟೆ ಕುರಿತು ಮಾತನಾಡಿ ನಿಮ್ಮ ಕೈಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ.

ಎರಡು ದಿನ ಕಳೆದರೂ ವಿಸಿ ಶಿವಾನಂದ ಕೂಡ ದೂರು ನೀಡಿಲ್ಲ

ಇನ್ನೂ ನಾಳೆ ಒಳಗಾಗಿ ಗಲಾಟೆ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳದಿದ್ದರೆ ನಾಳೆ ಬೆಂಗಳೂರಿಗೆ ಹೋಗಿ ನಾನೇ ಸಿಎಂ ಕುಮಾರಸ್ವಾಮಿ ಮನೆಯ ಮುಂದೆ ಧರಣಿ ಕುಳಿತು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ಎರಡು ದಿನ ಕಳೆದರೂ ವಿಸಿ ಶಿವಾನಂದ ಕೂಡ ದೂರು ನೀಡಿಲ್ಲ, ಇತ್ತ ಗಲಾಟೆ
ಮಾಡುತ್ತಿರುವು ವಿಡಿಯೋ ಇದ್ರೂ ಪೊಲೀಸರು ಕೂಡ ಸ್ವಯಂಪ್ರೇರಿತ ದೂರು
ದಾಖಲಿಸಿಕೊಳ್ಳುತ್ತಿಲ್ಲ. ಮೇಲಾಧಿಕಾರಿಗಳ ಒತ್ತಡ ಅಧಿಕಾರಿಗಳ ಮೇಲಿದ್ರೇ ಇತ್ತ
ವಿವಿಯಲ್ಲಿ ರಾಜಕೀಯ ಮಾಡಲು ಎರಡು ಪಕ್ಷಗಳು ಮುಂದಾಗಿರುವುದು ವಿಪರ್ಯಾಸದ ಸಂಗತಿ.

ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತೋ ಎಂಬುದನ್ನ ಕಾದು ನೋಡಬೇಕಿದೆ.
First published:October 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ