• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramesh Jarkiholi: ಉಲ್ಟಾ ಹೊಡೆದ ರಮೇಶ ಜಾರಕಿಹೊಳಿ; ಶಾಸಕ ಸ್ಥಾನಕ್ಕೆ ರಾಜೀನಾಮೆ ಮುಗಿದ ಅಧ್ಯಾಯ

Ramesh Jarkiholi: ಉಲ್ಟಾ ಹೊಡೆದ ರಮೇಶ ಜಾರಕಿಹೊಳಿ; ಶಾಸಕ ಸ್ಥಾನಕ್ಕೆ ರಾಜೀನಾಮೆ ಮುಗಿದ ಅಧ್ಯಾಯ

ರಮೇಶ್​ ಜಾರಕಿಹೊಳಿ.

ರಮೇಶ್​ ಜಾರಕಿಹೊಳಿ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಮುಗಿದ ಅಧ್ಯಾಯ ಎನ್ನುವ ಮೂಲಕ ರಮೇಶ ಜಾರಕಿಹೊಳಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

  • Share this:

ಬೆಳಗಾವಿ (ಜುಲೈ, 10)- ಮಾಜಿ ರಮೇಶ ಜಾರಕಿಹೊಳಿ ಕೆಲ ದಿನಗಳಿಂದ ಹಿಂದೆ ರಾಜಕೀಯಲ್ಲಿ ಮತ್ತೆ ಸಕ್ರಿಯರಾಗಿದ್ದರು.  ತಮಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಮೂಲಕ ಒತ್ತಡ ತಂತ್ರಕ್ಕೆ ಮೊರೆ ಹೋಗಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ದೆಹಲಿ, ಮುಂಬೈ ಹಾಗೂ ಅಥಣಿಗೆ ಭೇಟಿ ನೀಡಿ ವರಿಷ್ಠರ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಕೆಲ ದಿನಗಳ ಕಾಲ ಮೌನಕ್ಕೆ ಶರಣಾಗಿದ್ದ ರಮೇಶ ಜಾರಕಿಹೊಳಿ ಇಂದು ಉಲ್ಟಾ ಹೊಡೆದಿದ್ದಾರೆ. ಈ ಮೂಲಕ ಹೈಕಮಾಂಡ್ ಸೂಚನೆಗೆ ಒಪ್ಪಿದ್ರಾ ಎಂಬ ಅನುಮಾನಗಳು ವ್ಯಕ್ತವಾಗಿವೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಮುಗಿದ ಅಧ್ಯಾಯ ಎನ್ನುವ ಮೂಲಕ ರಮೇಶ ಜಾರಕಿಹೊಳಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.


ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಬಹಿರಂಗವಾದ ಬಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಪ್ರಕರಣವನ್ನು ಎಸ್ ಐ ಟಿ ವಿಚಾರಣೆ ನಡೆಸಿ, ಹೈಕೋರ್ಟ್ ವರದಿ ಸಲ್ಲಿಸಲು ಸಿದ್ಧತೆಯನ್ನು ಮಾಡಿಕೊಂಡಿದೆ. ಶೀಘ್ರದಲ್ಲಿಯೇ ಎಸ್ ಐ ಟಿಯಿಂದ ಕ್ಲಿನ್ ಚಿಟ್ ಸಿಗಲಿದ್ದು, ಮತ್ತೆ ಸಂಪುಟ ಸೇರಲು ರಮೇಶ ಜಾರಕಿಹೊಳಿ ಜೂನ್ 18ರ ನಂತರ ಪ್ಲ್ಯಾನ್ ಮಾಡಿಕೊಂಡಿದ್ದರು. ಮುಂಬೈಗೆ ತೆರಳಿ ತಮ್ಮ ರಾಜಕೀಯ ಗಾಡ್ ಫಾಧರ್ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ನಂತರ ಅಥಣಿಗೆ ತೆರಳಿ ಆರ್ ಎಸ್ ಎಸ್ ಉತ್ತರ ಪ್ರಾಂತ ಸಂಚಾಲಕ ಅರವಿಂದರಾವ್ ದೇಶಪಾಂಡೆ ಮನೆಗೆ ಹೋಗಿ ಬಂದಿದ್ದರು.


ಇದನ್ನು ಓದಿ: ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ; ಸಂಸದ ಸಿದ್ದೇಶ್ವರ ಮಾತಿಗೆ ಜನರ ಆಕ್ರೋಶ


ಸಚಿವ ಸ್ಥಾನ ಪಡೆಯಲು ದೆಹಲಿಯ ವರೆಗೆ ಹೋಗಿ ಲಾಭಿ ನಡೆಸಿದ್ದ ರಮೇಶ ಜಾರಕಿಹೊಳಿ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಸೈಲೆಂಟ್ ಆಗಿದ್ದರು. ಬಳಿಕ ಮತ್ತೊಮ್ಮೆ ಮುಂಬೈಗೆ ಹೋಗಿ ಗೋಕಾಕ್ ನಗರಕ್ಕೆ ವಾಪಸ್ ಆಗಿ ಮನೆಯಲ್ಲಿಯೆ ಇದ್ದರು. ಇಂದು ಕ್ಷೇತ್ರದ ಅಂಕಗಲಿ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರುವ ಬಗ್ಗೆ ಬಹಿರಂಗವಾಗಿ ಹೇಳಿದರು.


ಇದನ್ನು ಓದಿ: ಹೆಗಲ ಮೇಲೆ ಕೈ ಹಾಕುವುದು ಎಂದರೆ ಏನು?; ಕಾರ್ಯಕರ್ತನ ಮೇಲಿನ ಹಲ್ಲೆಗೆ ಡಿಕೆಶಿ ಸ್ಪಷ್ಟನೆ


ನಾನು ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಣಯ ಮಾಡಿದ್ದು ನಿಜ. ಆದರೇ ಪಕ್ಷದ ಹಿರಿಯರು, ಸ್ವಾಮಜಿಗಳು ಹಾಗೂ ಹಿತೈಷಿಗಳು ಸಲಹೆ ಮೇರೆಗೆ ಇದನ್ನು ಕೈ ಬಿಟ್ಟಿದೆನೆ. ವೈಯಕ್ತಿಕ ಕಾರಣಕ್ಕಾಗಿ ಈ ನಿರ್ಣಯವನ್ನು ಮಾಡಿದೆ ಎಂದರು. ಇನ್ನೂ ರಮೇಶ ಜಾರಕಿಹೊಳಿ ರಾಜೀನಾಮೆ ನಿರ್ಯಣ ಕೈ ಬಿಡುವಂತೆ ಬಾಲಚಂದ್ರ ಜಾರಕಿಹೊಳಿ ಒತ್ತಯ ಮಾಡಿದ್ದರು. ಜತೆಗೆ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸುವ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಪ್ರಕ್ರಿಯೆ ನೀಡಿದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಬಗ್ಗೆ ಗೊತ್ತಿಲ್ಲ. ನಾನು ಬಾಲಚಂದ್ರ ಜಾರಕಿಹೊಳಿ ಜತೆಗೆ ಈ ಬಗ್ಗೆ ಮಾತನಾಡುತ್ತೇನೆ ಎಂದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:Seema R
First published: