• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮತ್ತೆ ಕ್ರಿಯಾಶೀಲರಾದ ರಮೇಶ್ ಜಾರಕಿಹೊಳಿ; ಆಪ್ತ ಶಾಸಕ ಮಹೇಶ್ ಕುಮಟಳ್ಳಿ ಜೊತೆ ಸಭೆ

ಮತ್ತೆ ಕ್ರಿಯಾಶೀಲರಾದ ರಮೇಶ್ ಜಾರಕಿಹೊಳಿ; ಆಪ್ತ ಶಾಸಕ ಮಹೇಶ್ ಕುಮಟಳ್ಳಿ ಜೊತೆ ಸಭೆ

ಜಿಲ್ಲೆಯ ಎಲ್ಲ ಬಿಜೆಪಿ ನಾಯಕರ ಜೊತೆಗೆ ಚರ್ಚಿಸಿ 2023 ರಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸುವುದೇ ನಮ್ಮ ಗುರಿ. ಆ ನಿಟ್ಟಿನಲ್ಲಿ ಚರ್ಚೆಗೆ ಬಂದಿದ್ದೇನೆ.

ಜಿಲ್ಲೆಯ ಎಲ್ಲ ಬಿಜೆಪಿ ನಾಯಕರ ಜೊತೆಗೆ ಚರ್ಚಿಸಿ 2023 ರಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸುವುದೇ ನಮ್ಮ ಗುರಿ. ಆ ನಿಟ್ಟಿನಲ್ಲಿ ಚರ್ಚೆಗೆ ಬಂದಿದ್ದೇನೆ.

ಜಿಲ್ಲೆಯ ಎಲ್ಲ ಬಿಜೆಪಿ ನಾಯಕರ ಜೊತೆಗೆ ಚರ್ಚಿಸಿ 2023 ರಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸುವುದೇ ನಮ್ಮ ಗುರಿ. ಆ ನಿಟ್ಟಿನಲ್ಲಿ ಚರ್ಚೆಗೆ ಬಂದಿದ್ದೇನೆ.

  • Share this:

ರಾಜ್ಯ ರಾಜಕಾರಣದಲ್ಲಿ ಮತ್ತೆ ರಮೇಶ್​ ಜಾರಕಿಹೊಳಿ ಆಕ್ಟೀವ್​ ಆಗಿದ್ದಾರೆ. ಸಿಎಂ ಬಸವರಾಜ ಕ್ಯಾಬಿನೆಟ್ ರಚನೆ ವೇಳೆ ಸೈಲೆಂಟ್ ಆಗಿದ್ದ  ರಮೇಶ್ ಜಾರಕಿಹೊಳಿ ಈಗ  ದೆಹಲಿಯ ನಾಯಕರ ಭೇಟಿ ಬಳಿಕ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.  ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿ ಮರಳಿರುವುದಾಗಿ ಅವರು ತಿಳಿಸಿದ್ದಾರೆ.  ಈ ಬಗ್ಗೆ ಮಾತನಾಡಿರುವ ಅವರು ನಾನು ದೆಹಲಿಗೆ ಭೇಟಿ ನೀಡಿದ್ದು ನಿಜ. ಕೆಲೆ ಅನಿವಾರ್ಯ ರಾಜಕೀಯ ಚರ್ಚೆಗಳು ನಡೆದಿವೆ ಎಂದು ಬಹಿರಂಗ ಪಡಿಸಿದ್ದಾರೆ. ಇನ್ನು ದೆಹಲಿ ಭೇಟಿ ಬಳಿಕ ಮೃದು ಧೋರಣೆ ತಾಳಿರುವ ರಮೇಶ್ ಪಕ್ಷ ಸಂಘಟನೆ ಹಾಗೂ 2023 ರಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬರುತ್ತೇನೆ ಎಂಬ ಮಾತುಗಳನ್ನಾಡಿದ್ದಾರೆ. 


ಸಿಡಿ ಪ್ರಕರಣದ ಬಳಿಕ ಸುಮ್ಮನಾಗಿದ್ದ ರಮೇಶ್ ಜಾರಕಿಹೋಳಿ ಇಂದು ಅಥಣಿಯಲ್ಲಿ ತಮ್ಮ ಬೆಂಬಲಿಗರು ಮುಖಂಡರು ಹಾಗು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಜೊತೆಗೆ ಸಭೆ ನಡೆಸಿದ್ದಾರೆ. ಇದೆ ವೇಳೆ ಮಾಧ್ಯಮಗಳ ಜೋತೆ ಮಾತ ನಾಡಿರುವ ರಮೇಶ್ ಜಾರಕಿಹೋಳಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದು ನಮಗೆ ಸಂತಸ ತಂದಿದೆ‌ ನಾವು ಮಂತ್ರಿ ಆಗ್ತಿವೋ ಬಿಡ್ತಿವೊ ಬೇರೆ ವಿಷಯ. ನಮ್ಮ ಸ್ನೇಹಿತ ಮುಖ್ಯಮಂತ್ರಿ ಆಗಿದ್ದು ನಮಗೆ ಸಂತಸದ ವಿಷಯ ಎಂದರು


ಜಿಲ್ಲೆಯ ಎಲ್ಲ ಬಿಜೆಪಿ ನಾಯಕರ ಜೊತೆಗೆ ಚರ್ಚಿಸಿ 2023 ರಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸುವುದೇ ನಮ್ಮ ಗುರಿ. ಆ ನಿಟ್ಟಿನಲ್ಲಿ ಚರ್ಚೆಗೆ ಬಂದಿದ್ದೇನೆ. ಮಂತ್ರಿ ಆಸೆ ಬಿಟ್ಟು ತ್ಯಾಗ ಮನೊಭಾವದಿಂದ ಬಿಜೆಪಿ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇವೆ. 2023 ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಯಾವುದೆ ತ್ಯಾಗಕ್ಕೂ ನಾನು ಸಿದ್ದನಿದ್ದೇನೆ ಎಂದಿದ್ದಾರೆ.


ಸಂಪುಟದಲ್ಲಿ ಜಾರಕಿಹೊಳಿ ಕುಟುಂಬ ಕೈ ಬಿಟ್ಟ ವಿಚಾರವಾಗಿ ಮಾತನಾಡಿ ನಾವು ಯಾವುದೇ ಆಶಾ ಭಾವನೆ ಇಟ್ಟುಕೊಂಡಿಲ್ಲ. ಹೈ ಕಮಾಂಡ್ ನಿರ್ಧಾರಕ್ಕೆ ನಾವು ಯಾವಾಗಲೂ ಬದ್ಧ. ಈಗ ಅದೆಲ್ಲ ಮುಗಿದು ಹೋದ ಅಧ್ಯಾಯ. ಹೈಕಮಾಂಡ್, ಮುಖ್ಯಮಂತ್ರಿ ಮತ್ತು ಪಕ್ಷದ ತಿರ್ಮಾನಕ್ಕೆ ನಾವು ಯಾವಾಗಲೂ ಬದ್ಧ ಎಂದು ಸ್ಪಷ್ಟಪಡಿಸಿದರು.


ಸಿ ಡಿ ಪ್ರಕರಣ ವಿಷಯಯವಾಗಿಯು ಮಾತನಾಡಿದ ಅವರು, ತನಿಖೆ ಆಗಲಿ.  ಇನ್ನು ಒಂದು ವರ್ಷ ನಡೆಯಲಿ. ನನಗೆ ಯಾವುದೇ ಗಡಿಬಿಡಿ ಇಲ್ಲ. ನನ್ನ ಹಿಂದೆ ನನ್ನ ತಮ್ಮ ಮತ್ತು ಆತ್ಮೀಯ ಶಾಸಕರು ಇದ್ದಾರೆ. ನಾನೇ ಮಂತ್ರಿ ಆಗಬೇಕು ಅಂತೆನೂ ಇಲ್ಲ.ರಾಜಕೀಯದಲ್ಲಿ ಶೂರರಿಗೆ ಯಾವತ್ತೂ ಷಡ್ಯಂತ್ರ ಇದ್ದದ್ದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಆ ವಿಷಯದ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ ಎಂದಿದ್ದಾರೆ.


ಇದನ್ನು ಓದಿ: ಕನಕಗುರು ಪೀಠದ ಶಾಖಾಮಠಕ್ಕೆ ಸಿಎಂ ಭೇಟಿ; ಶ್ರೀಗಳ ಆಶೀರ್ವಾದ ಪಡೆದ ಬೊಮ್ಮಾಯಿ


ಈ ಹಿಂದೆ ನಾನು ರಾಜೀನಾಮೆ ಕೊಡಲು ಸಿದ್ದನಾಗಿದ್ದೆ ಸುತ್ತೂರು ಸ್ವಾಮೀಜಿ ಸಲಹೆ ಮೆರೆಗೆ ಸುಮ್ಮನಿದ್ದೇನೆ. ಸ್ವಾಮೀಜಿ ಆದೇಶ ಪಾಲನೆ ಮಾಡುತ್ತಿದ್ದೇನೆ. ಕಾಂಗ್ರೆಸ್​​ ನಲ್ಲಿ ಇಪ್ಪತ್ತು ವರ್ಷದಿಂದ ಪ್ರೀತಿ ವಿಶ್ವಾಸ ಸಿಕ್ಕಿರಲಿಲ್ಲ. ಬಿಜೆಪಿ ಹೈ ಕಮಾಂಡ್, ಸಂಘ ಪರಿವಾರ ಒಂದು ವರ್ಷದಲ್ಲಿ ಪ್ರೀತಿಯಿಂದ ನಡೆದುಕೊಂಡಿದ್ದಾರೆ. ಅದೇ ಕಾರಣಕ್ಕೆ ಬಿಜೆಪಿಯಲ್ಲಿ ಇದ್ದೇನೆ. ಇನ್ನು ಸಚಿವ ಸ್ಥಾನ ಸಿಗಲಿ, ಬಿಡಲಿ ಕಾಂಗ್ರೆಸ್ ಪಕ್ಷ  ಸಮ್ಮಿಶ್ರ ಸರ್ಕಾರ ತೆಗೆದ ಬಗ್ಗೆ ನಮಗೆ ಖುಷಿ ಇದೆ. ಅದರಿಂದ ರಾಜ್ಯಕ್ಕೆ ಒಳ್ಳೆಯದಾಗಿದೆ. ನಾವೂ ಸಂತೋಷವಾಗಿ ಇದ್ದೇವೆ. ಇಲ್ಲವಾದರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿತ್ತು ಎಂದಿದ್ದಾರೆ.


ಒಟ್ಟಿನಲ್ಲಿ ಬಿಜೆಪಿ ವಿರುದ್ದವೆ ಬುಸುಗುಡುತ್ತಿದ್ದ ರಮೇಶ್ ಜಾರಕಿಹೋಳಿ ಸದ್ಯ ಸೈಲೆಂಟ್ ಮೂಡ ನಲ್ಲಿದ್ದು ಇದೇ ಕಾರಣಕ್ಕಾಗಿ ಮತ್ತೆ ಪಕ್ಷ ಸಂಘಟನೆಯ ಒಲುವು ತೋರಿದ್ದು ಬಿಜೆಪಿ ವರಿಷ್ಠರನ್ನ ಮೆಚ್ಚಿಸಿ ಹಾಗೂ  ಆರ್.ಎಸ್.ಎಸ್. ನಾಯಕರ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

Published by:Seema R
First published: