ಎಲ್ಲರಿಗೂ ಸೊಕ್ಕು ಬಂದಾಗ ದೇವರು ಯಾರೋ ಒಬ್ಬರನ್ನು ತಯಾರು ಮಾಡ್ತಾನೆ: Ramesh Jarkiholi

ಎಲ್ಲರಿಗೂ ಸೊಕ್ಕು ಬಂದಾಗ ದೇವರು ಯಾರೋ ಒಬ್ಬರನ್ನು ತಯಾರು ಮಾಡ್ತಾನೆ. ನನಗೆ ಸೊಕ್ಕು ಬಂದ್ರೆ ಮತ್ತೊಬ್ಬ ತಯಾರಾಗ್ತಾನೆ. ಜನ ತೀರ್ಮಾನ ಕೈಗೊಳ್ಳಿ . ನಾವು ಯಾವ ಜಾತಿ ಆಧಾರಿತ ಇಲ್ಲ, ನಮ್ಮದು ಮಾನವ ಜಾತಿ ಬಸವಣ್ಣನವರ ತತ್ವ ಸಿದ್ಧಾಂತ ಮೇಲೆ ಹೋಗುತ್ತೇವೆ. 

ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ

  • Share this:
ಬೆಳಗಾವಿಯಲ್ಲಿ (Belagavi Politics) ವಿಧಾನಪರಿಷತ್ ಚುನಾವಣೆ (MLC Election) ಅಖಾಡ ರಂಗೇರಿದದ್ದು, ರಾಜಕೀಯ ಮುಖಂಡರು ಅಖಾಡಕ್ಕೆ ಇಳಿದಿದ್ದಾರೆ. ಏಟು ತಿರುಗೇಟು ರಾಜಕಾರಣದಲ್ಲಿ ಸಾಮಾನ್ಯ. ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಪ್ರಚಾರ (Election Campaign) ನಡೆಸಿದರು. ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, ಮೊದಲು ಬಿಜೆಪಿ (BJP) ತರೋದು ಬಳಿಕ ಕಾಂಗ್ರೆಸ್ (Congress) ಸೋಲಿಸುವ ವ್ಯವಸ್ಥೆ ಮಾಡೋನು. ಮೊದಲು ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರನ್ನು ತರುವ ಕೆಲಸವನ್ನು ಮಾಡೋಣ. ಲಿಂಗಾಯತರು ಗುರುಗಳು ಸ್ವಾಮಿಗಳನ್ನು ತರೋಣ ಎಂದು ಮಹಾಂತೇಶ್ ಕವಟಗಿಮಠ ಪರ ಮತ ಯಾಚನೆ ಮಾ ಡಿದರು.

ಕೆಎಲ್‌ಇ ಸಂಸ್ಥೆ ದೊಡ್ಡ ಲಿಂಗಾಯತರ ಮೂಗು. ಅದರ ಡೈರೆಕ್ಟರ್ ಅವರು. ಈಗ ಲಿಂಗಾಯತ ಯಾರು ಇದ್ದಾರೆ ಅವರ ವ್ಯಕ್ತಿತ್ವ ಬಗ್ಗೆ ವಿಚಾರ ಮಾಡಿ. ವೈಯಕ್ತಿಕ ನಾನು ಮಾತನಾಡಲ್ಲ, ನೀವು ದಯವಿಟ್ಟು ವಿಚಾರ ಮಾಡಿ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ  ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ಹೊರ ಹಾಕಿದರು.

ಲಖನ್ ಸ್ಪರ್ಧೆ ಖುಷಿ ತಂದಿದೆ

ಸೋದರ ಲಖನ್ ಜಾರಕಿಹೊಳಿ ಅವರನ್ನ ಪಕ್ಷೇತರ ಅಭ್ಯರ್ಥಿಯಾಗಿ ನಾನು ನಿಲ್ಲಿಸಿದ್ದೀನಿ ಎಂದು ಸುದ್ದಿ ಹರಿದಾಡುತ್ತಿದೆ. ಆದ್ರೆ ಲಖನ್ ಜಾರಕಿಹೊಳಿ ಪಕ್ಷೇತರನಾಗಿ ನಿಂತಿದ್ದು ಬಹಳ ಖುಷಿಯಾಯ್ತು. ಲಖನ್ ಜಾರಕಿಹೊಳಿ ನಿಂತಿದ್ದೇ ಒಳ್ಳೆಯದಾಯ್ತು ಇಲ್ಲವಾದ್ರೆ ಅವಿರೋಧ ಆಯ್ಕೆ ಆಗ್ತಿತ್ತು. ಲಖನ್ ಜಾರಕಿಹೊಳಿ ಧೈರ್ಯ ಮಾಡಿ ನಿಲ್ಲಿಲ್ಲ ಅಂದ್ರೆ ಇವತ್ತು ಪರಿಸ್ಥಿತಿ ಏನಾಗ್ತಿತ್ತು.

ಇದನ್ನೂ ಓದಿ:  ಈ ಚುನಾವಣೆ ಹೆಬ್ಬಾಳ್ಕರ್ Vs ಜಾರಕಿಹೊಳಿ ರೀತಿ ಆಗುತ್ತಾ? ಪ್ರಶ್ನೆಗೆ ಥೂ.. ಥೂ... ಎಂದ Ramesh Jarkiholi

ನನಗೆ ಸೊಕ್ಕು ಬಂದ್ರೆ ಮತ್ತೊಬ್ಬ ತಯಾರಾಗ್ತಾನೆ

ದೇವರು ಮೇಲೆ ಇದ್ದಾನೆ. ಎಲ್ಲರಿಗೂ ಸೊಕ್ಕು ಬಂದಾಗ ದೇವರು ಯಾರೋ ಒಬ್ಬರನ್ನು ತಯಾರು ಮಾಡ್ತಾನೆ. ನನಗೆ ಸೊಕ್ಕು ಬಂದ್ರೆ ಮತ್ತೊಬ್ಬ ತಯಾರಾಗ್ತಾನೆ. ಜನ ತೀರ್ಮಾನ ಕೈಗೊಳ್ಳಿ . ನಾವು ಯಾವ ಜಾತಿ ಆಧಾರಿತ ಇಲ್ಲ, ನಮ್ಮದು ಮಾನವ ಜಾತಿ ಬಸವಣ್ಣನವರ ತತ್ವ ಸಿದ್ಧಾಂತ ಮೇಲೆ ಹೋಗುತ್ತೇವೆ.

ನಿಮ್ಮ ಆಶೀರ್ವಾದ ಸದಾ ಇರಲಿ.  ಮೊದಲು ಮಹಾಂತೇಶ ಕವಟಗಿಮಠಗೆ ವೋಟ್ ಹಾಕಬೇಕು ಎರಡನೇ ವೋಟ್ ಯಾರಿಗೆ ಹಾಕಬೇಕು ಅತಿ ಶೀಘ್ರದಲ್ಲಿ ಹೇಳುತ್ತೇನೆ ಎಂದರು.

ಬಿಜೆಪಿ ಬಂಡಾಯ ಅಭ್ಯರ್ಥಿ ಅಲ್ಲ

ಕಾರ್ಯಕರ್ತರು ಹಾಗೂ ಮತದಾರರ ಬೆಂಬಲ ನಮಗಿಗೆ ಅದೆ ಭರವಸೆ ಮೇಲೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ನನ್ನ ಸ್ಪರ್ಧೆಯಿಂದ ಬೆಜೆಪಿಗೆ ಲಾಭವಾಗಲಿದೆ. ನನ್ನಿಂದ ನಷ್ಟ ಆಗುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾನು ಯಾರ ಬಂಡಾಯ ಅಭ್ಯರ್ಥಿಯ ಅಲ್ಲ ಎಂದು ಲಖನ್ ಜಾರಕಿಹೊಳಿ ಕಾಂಗ್ರೆಸ್ ಆರೋಪಗಳಿಗೆ ಉತ್ತರ ನೀಡಿದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಉಪ್ಪು ತಿಂದೋರು ನೀರು ಕುಡಿಯಲಿ: Siddaramaiah

ಗೆಲ್ಲಿಸಿದ್ರೆ ಅಭಿವೃದ್ಧಿ ಕೆಲಸ ಮಾಡುವೆ

ನಾನು ಯಾವತ್ತು ಬಿಜೆಪಿ ಪಕ್ಷದಿಂದ ಟಿಕೆಟ್ ಕೇಳಿಲ್ಲಾ, ಗೊಂದಲ ನಿರ್ಮಾಣ ಆಗಿದೆ ಅಷ್ಟೇ. ಮೊದಲಿಂದಲೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೆ .  ನಮಗೆ ಮತ ಹಾಕಿ ಗೆಲ್ಲಿಸಿದ್ರೆ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದೇವೆ ಎಂದರು.

ತ್ರಿಕೋನ ಸ್ಪರ್ಧೆ

ಬಿಜೆಪಿ ಜೆಪಿ ಟಿಕೆಟ್ (BJP) ವಂಚಿತ ಲಖನ್ ಜಾರಕಿಹೊಳಿ (Lakhan Jarkiholi) ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಇತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (MLA Laxmi Hebbalkar) ಸೋದರ ಚನ್ನರಾಜ್ ಹಟ್ಟಿಹೊಳಿ (Channaraj Hattiholi) ಅವರಿಗೆ ಕಾಂಗ್ರೆಸ್ (Congress) ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದಾರೆ.  ಬಿಜೆಪಿಯಿಂದ ಮಹಾಂತೇಶ್ ಕವಟಗಿಮಠ ಸ್ಪರ್ಧೆ ಮಾಡಿದ್ದಾರೆ.  ಹೀಗಾಗಿ ಬೆಳಗಾವಿ ಪರಿಷತ್ ಚುನಾವಣೆ ಮತ್ತೊಂದು ಸುತ್ತಿನ ರಾಜಕೀಯ ಕಾದಾಟಕ್ಕೆ ಸಾಕ್ಷಿಯಾಗುತ್ತಿದೆ.
Published by:Mahmadrafik K
First published: