Congress ಅಭ್ಯರ್ಥಿಯನ್ನು ಬೆಂಬಲಿಸುವಂತೆ ಪ್ರಭಾವಿ ಶ್ರೀಗಳಿಂದ ಹಲವರಿಗೆ ಫೋನ್ ಕರೆ.. ಯಾರು ಆ ಸ್ವಾಮೀಜಿ?

Belgaum MLC Election: ಹಿರೇಬಾಗೇಡಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಮಾತನಾಡಿ,‌ ನನಗೆ ಒಬ್ಬರು ಸ್ವಾಮೀಜಿ‌‌ ಕರೆ ಮಾಡಿದ್ದರು. ನೀವು ಪಂಚಮಸಾಲಿ ನಾ ಎಂದು ಪ್ರಶ್ನೆ ಮಾಡಿದ್ರು. ನಾನು ಗೊತ್ತಿಲ್ಲ ಎಂದು ಹೇಳಿದೆ.

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ

  • Share this:
ಬೆಳಗಾವಿ:  ಸ್ಥಳೀಯ ಸಂಸ್ಥೆಗಳಿಂದ ಪರಿಷತ್​ನ (Council Elections) ಎರಡು ಸ್ಥಾನಗಳಿಗೆ ಡಿಸೆಂಬರ್ 10 ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಅತ್ಯಂತ ಜಿದ್ದಾಜಿದ್ದಿನ ಹೋರಾಟಕ್ಕೆ ಎಂಎಲ್​ಸಿ ಚುನಾವಣೆ ಸಾಕ್ಷಿಯಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ (Congress-BJP-Independent Candidate ) ನಡುವೆ ಹಣಾಹಣಿ‌ ಏರ್ಪಟಿದೆ. ಚುನಾವಣೆಯಲ್ಲಿ ಶತಾಯಗತಾಯ ಗೆಲವು ಸಾಧಿಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.  ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರ ಉತ್ತರ ಕರ್ನಾಟಕದ ಪ್ರಭಾವಿ ಸ್ವಾಮಿಜಿಯೊಬ್ಬರು ಅನೇಕ ಸ್ವ ಜಾತಿಯ ಮುಖಂಡರಿಗೆ ಕರೆ ಮಾಡಿದ್ದಾರೆ. ಇದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶ್ರೀಗಳ ಫೋನ್ ಕರೆಯ ಬಗ್ಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಬಹಿರಂಗವಾಗಿ ಮಾತನಾಡಿದ್ದರು. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಅಂಕಲಗಿ ವಿರುದ್ಧವು ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಪ್ರಚಾರಕ್ಕಾಗಿ ಅಂಕಲಗಿ,  ಶ್ರೀಗಳ ಹೆಸರು ಬಳಸಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ.

ಪ್ರಭಾವಿ ಸ್ವಾಮೀಜಿಯಿಂದ ಮತಯಾಚನೆ 

ಒಂದೆಡೆ ಆರೋಪ-ಪ್ರತ್ಯಾರೋಪ, ಏಟು- ತಿರುಗೇಟು ಚುನಾವಣೆ ಅಖಾಡದಲ್ಲಿ ಕೇಳಿ ಬಂದಿವೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಉತ್ತರ ಕರ್ನಾಟಕದ ಪ್ರಭಾವಿ ಸ್ವಾಮೀಜಿ ಭರ್ಜರಿ ಲಾಬಿ ಮಾಡುತ್ತಿದ್ದಾರೆ. ಮುಖಂಡರು, ಗ್ರಾಪಂ, ಪ.ಪಂ, ಪುರಸಭೆಯ ಸದಸ್ಯರಿಗೆ ನೇರವಾಗಿ ಫೋನ್ ಮೂಲಕ ಮನವಿ‌ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಬೆಂಬಲಿಸಲು ಸ್ವಜಾತಿಯ ಅಭ್ಯರ್ಥಿಯ ಪರವಾಗಿ ಭರ್ಜರಿ ಲಾಬಿ ಮಾಡಿದ್ದಾರೆ. ಮೇಲ್ಮನೆ ಸದಸ್ಯರಾಗಲು ಹಣ ಬಲ, ಜಾತಿ ಬಲವನ್ನು ಅಭ್ಯರ್ಥಿಗಳು ಪ್ರಯೋಗ ಮಾಡುತ್ತಿದ್ದಾರೆ.

ನೇರವಾಗಿ ರಾಜಕಾರಣ ಮಾಡಿ

ಹಿರೇಬಾಗೇಡಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಮಾತನಾಡಿ,‌ ನನಗೆ ಒಬ್ಬರು ಸ್ವಾಮೀಜಿ‌‌ ಕರೆ ಮಾಡಿದ್ದರು. ನೀವು ಪಂಚಮಸಾಲಿ ನಾ ಎಂದು ಪ್ರಶ್ನೆ ಮಾಡಿದ್ರು. ನಾನು ಗೊತ್ತಿಲ್ಲ ಎಂದು ಹೇಳಿದೆ. ನೀವು ಜಾರಕಿಹೊಳಿ ಸಹೋದರರ ಬೆನ್ನು ಹತ್ತಿದ್ದೀರಿ. ನಮ್ಮ ಸಮಾಜದ ಮುಖಂಡರಿಗೆ ಬೆಂಬಲ ನೀಡಬೇಕು. ಧರ್ಮ ಪೀಠದಲ್ಲಿ ಇದ್ದು ಸಮಾಜ ಸುಧಾರಣೆ ಮಾಡಬೇಕು. ರಾಜಕಾರಣ ಮಾಡೊದಿದ್ರೇ ನೇರವಾಗಿ ಬನ್ನಿ ಎಂದು ಹೇಳಿದ್ದೇನೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ 

ಕಿತ್ತೂರು, ಬೈಲಹೊಂಗಲ, ಬೆಳಗಾವಿ ಗ್ರಾಮೀಣ ಏನ್ ಮಾಡುದ್ದೀರಿ ಎಂದು‌ ಗೊತ್ತಿದೆ.ಈ ರೀತಿಯ ಒತ್ತಡಗಳು ನಮ್ಮ ಮೇಲೆ ಬರುತ್ತಿವೆ. ಜಾತಿ ಆಧಾರದ ಮೇಲೆ ಯಾರ ಬಂದ್ರು ಅವರನ್ನು ತಿರಸ್ಕಾರ ಮಾಡಿ. ಜಾರಕಿಹೊಳಿ ಸಹೋದರು ಜಾತ್ಯಾತೀತ ಎಲ್ಲರನ್ನು ಬೆಂಬಲಿಸಿದ್ದಾರೆ. ಹಾಲುಮತದ ವಿವೇಕರಾವ್ ಪಾಟೀಲ್ ರನ್ನು ಲಾಸ್ಟ್ ಟೈಂ ಆಯ್ಕೆ ಮಾಡಿದ್ದರು. ತಮಗೆ ಬೇಕಾದಾಗ ಜಾತಿಯ ಹೆಂಗಬೇಕೊ ಹಂಗೆ. ರಮೇಶ್ ಜಾರಕಿಹೊಳಿ ಸಹೋದರರು ನಿಲ್ಲಿಸಿದ್ದಾರೆ.ಮೊದಲು ಕವಟಿಮಠಗೆ ಮತ ಹಾಕಿ ಎರಡನೇ ಮತ ಲಖನ್ ಹಾಕಿ ಎಂದಿದ್ದಾರೆ ಎಂದರು. ಶ್ರೀಗಳ ಬಗ್ಗೆ ಬಹಿರಂಗವಾಗಿ ಮತನಾಡಿದ ರಾಜೇಂದ್ರ ಅಂಕಲಗಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಎಲ್ಲರಿಗೂ ಸೊಕ್ಕು ಬಂದಾಗ ದೇವರು ಯಾರೋ ಒಬ್ಬರನ್ನು ತಯಾರು ಮಾಡ್ತಾನೆ: Ramesh Jarkiholi

ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ಗೆ ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.
Published by:Kavya V
First published: