ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧವೇಕೆ? ಈ ಕಾಯ್ದೆ ಜಾರಿಯಾದ್ರೆ ಮದುವೆಗೆ ತೊಂದರೆಯಾಗುತ್ತಾ?

Anti Conversion Bill: ಮದುವೆ ಆಗುವ ಮುನ್ನ, ಮದುವೆಯಾದ ಮೇಲೆ ಮತಾಂತರ ಆಗುವಂತಿಲ್ಲ ಎಂಬ ನಿಯಮವನ್ನು ವಿಧೇಯಕ ಒಳಗೊಂಡಿದೆ. ನನ್ನ‌ ಮದುವೆಗೆ ಹೇಳೋಕೆ‌ ನೀವ್ಯಾರು? ಇಷ್ಟ ಬಂದವರನ್ನ ನಾನು‌ ಮದುವೆಯಾಗ್ತೇನೆ, ಇದಕ್ಕೆ ನೀವೇಗೆ ಪ್ರಶ್ನೆ ಮಾಡ್ತೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸ್ಪೀಕರ್​, ಸಿದ್ದರಾಮಯ್ಯ

ಸ್ಪೀಕರ್​, ಸಿದ್ದರಾಮಯ್ಯ

  • Share this:
ಬೆಳಗಾವಿ: ಇಂದು ಮತಾಂತರ ನಿಷೇಧ ವಿಧೇಯಕ (Anti Conversion Bill) ವಿಧಾನಸಭೆಯಲ್ಲಿ ಮಂಡನೆಯಾಗುತ್ತಿದಂತೆ ವಿಪಕ್ಷ ಕಾಂಗ್ರೆಸ್​ (Congress) ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಬಿಜೆಪಿ ಸರ್ಕಾರ (BJP Govt) ತರಲು ಹೊರಟಿರುವ ಕಾಯ್ದೆಯನ್ನು ವಿರೋಧಿಸಿ ಕಾಂಗ್ರೆಸ್​​ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ ಸದನದಿಂದ ಹೊರ ನಡೆದರು. ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ (Opposition Leader Siddaramaiah ) ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮತಾಂತರ ನಿಷೇಧ ಕಾಯ್ದೆ ತರುವ ಬಗ್ಗೆ ನಮಗೆ ಗೊತ್ತಿಲ್ಲ, ಸಾಮಾನ್ಯವಾಗಿ ಅದನ್ನು ಅಜೆಂಡಾದಲ್ಲಿ ಹಾಕಬೇಕು. ಯಾವುದೇ ಮುನ್ಸೂಚನೆಯೂ ನಮಗಿರಲಿಲ್ಲ. ಏಕಾಏಕಿ ಈ ಬಿಲ್ ಅನ್ನ ಮಂಡನೆ ಮಾಡ್ತಾರೆ. ಅಡಿಷನಲ್ ಅಜೆಂಡಾ ಏಕಾಏಕಿ ತರ್ತಾರೆ, ಸಚಿವ ಅಶೋಕ್ ಉತ್ತರ ಕೊಡುವುದನ್ನ ನಿಲ್ಲಿಸ್ತಾರೆ. ಈ ಬಿಲ್ ಅನ್ನ ಏಕಾಏಕಿ ತರ್ತಾರೆ ಅಂದರೆ ಏನು ಅರ್ಥ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇದನ್ನೂ ಓದಿ: Anti Conversion Bill: ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ; ವಿಧೇಯಕದಲ್ಲಿನ ಪ್ರಮುಖ ಅಂಶಗಳೇನು?

ಎಲ್ಲಾ ಕಡೆ ಈ ಮಸೂದೆಗೆ ತಡೆಯಾಗಿದೆ  

ಸರ್ಕಾರ ಸ್ಪೀಕರ್ ಅವರನ್ನ ದುರುಪಯೋಗ ಮಾಡಿಕೊಳ್ತಿದೆ, ಅವರ ಕೈಯಿಂದ ಬಿಲ್ ಇಂಟ್ರಡ್ಯೂಸ್ ಮಾಡಿಸಿದ್ದಾರೆ. ನಾವಿಲ್ಲದ ವೇಳೆ ವಿಧೇಯಕವನ್ನು ಮಂಡನೆ ಮಾಡಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಈ ಕಾಯ್ದೆಯನ್ನು ತಂದಿದ್ದಾರೆ. ಎಲ್ಲಾ ಕಡೆ ಇದನ್ನ ಚಾಲೆಂಜ್ ಮಾಡಲಾಗಿದೆ. ಗುಜರಾತ್ ನಲ್ಲಿ ಸ್ಟೇ ತರಲಾಗಿದೆ, ಉತ್ತರಖಂಡದಲ್ಲಿ ಪೆಂಡಿಂಗ್ ಇಡಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಇಷ್ಟ ಬಂದವರನ್ನ ಮದುವೆಯಾಗ್ತೇನೆ

ಮದುವೆ ಆಗುವ ಮುನ್ನ, ಮದುವೆಯಾದ ಮೇಲೆ ಮತಾಂತರ ಆಗುವಂತಿಲ್ಲ ಎಂಬ ನಿಯಮವನ್ನು ವಿಧೇಯಕ ಒಳಗೊಂಡಿದೆ. ನನ್ನ‌ ಮದುವೆಗೆ ಹೇಳೋಕೆ‌ ನೀವ್ಯಾರು? ಇಷ್ಟ ಬಂದವರನ್ನ ನಾನು‌ ಮದುವೆಯಾಗ್ತೇನೆ, ಇದಕ್ಕೆ ನೀವೇಗೆ ಪ್ರಶ್ನೆ ಮಾಡ್ತೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದು ಸಂವಿಧಾನ ವಿರೋಧಿಯಾದ ಬಿಲ್, ಇದರ ಮಂಡನೆಗೆ ನಮ್ಮ ವಿರೋಧವಿತ್ತು. ಮಂಡನೆ ವೇಳೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಬೇಕು. ಪರ ವಿರೋಧ ನೋಡಿಯೇ ಮಂಡಿಸಬೇಕು, ಆದರೆ ಆ ರೀತಿ ಮಾಡದೆ ಏಕಾಏಕಿ ತಂದಿದ್ದಾರೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: New Year ಸಂಭ್ರಮಾಚರಣೆಯನ್ನ ನುಂಗಿದ ಓಮಿಕ್ರಾನ್; ಡಿ.30 - ಜ.2 ರವರೆಗೆ ಯಾವುದಕ್ಕೆಲ್ಲಾ ನಿರ್ಬಂಧ?

ಮತಾಂತರ ಆಗಬೇಕಾದಲ್ಲಿ ಪಾಲಿಸಬೇಕಾದ ನಿಯಮಗಳು

*ಮತಾಂತರವಾಗಲು‌ ಮುಂದಾಗಿರುವ ವ್ಯಕ್ತಿ  ಕನಿಷ್ಠ ಆರವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು.

*ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ 30 ದಿನಗಳ ಮೊದಲೇ  ಈ ಬಗ್ಗೆ ಮಾಹಿತಿ ಕೊಡಬೇಕು.

* ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ30 ದಿನಗಳ ಒಳಗಾಗಿ ಆಕ್ಷೇಪನೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.

*ವಿಚಾರಣೆಯ ಸಂದರ್ಭದಲ್ಲಿ ತಪ್ಪು  ಕಂಡುಬಂದಲ್ಲಿ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.

*ಮತಾಂತರಗೊಂಡ ವ್ಯಕ್ತಿಯೂ ಮತಾಂತರಗೊಂಡ ದಿನಾಂಕದಿಂದ‌ ಹಿಡಿದು ಮೂಲ ಧರ್ಮ, ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು.

*ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.

*ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ  ಈ ಬಗ್ಗೆ ಮಾಹಿತಿ ಕೊಡಬೇಕು.

*ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಬೇಕು

-ವಿಚಾರಣೆಯ ಸಂದರ್ಭದಲ್ಲಿ ತಪ್ಪು  ಕಂಡುಬಂದಲ್ಲಿ ಜಿಲ್ಲಾ ದಂಡಾಧಿಕಾರಿ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.
Published by:Kavya V
First published: