ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮದುವೆ ಮನೆಯಲ್ಲಿ ನೆತ್ತರ ಕೋಡಿ - ಮೂವರ ಕೊಲೆಗೆ ಬೆಚ್ಚಿಬಿದ್ದ ಜನ

ಒಂದು ವರ್ಷದ ಹಿಂದೆ ಶಿವನಂದ ಸಹೋದರ ಆಸ್ತಿ ವಿಚಾರಕ್ಕೆ ಕೊಲೆ ಯತ್ನ ನಡೆಸಿದ್ದನಂತೆ. ಶಿವಾನಂದ ಮನೆಯ ಪಕ್ಕದಲ್ಲಿ ಖುಲ್ಲಾ ಜಾಗಕ್ಕೆ ಆಗಾಗ ಜಗಳ ಕೂಡ ಆಗುತ್ತಿತ್ತು ಇದೇ ವಿಚಾರಕ್ಕೆ ಕೊಲೆಯಾಗಿದೆ ಎಂಬ ಶಂಕೆಯನ್ನ ವ್ಯಕ್ತಪಡಿಸುತ್ತಿದ್ದಾರೆ

news18-kannada
Updated:January 20, 2020, 11:28 AM IST
ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮದುವೆ ಮನೆಯಲ್ಲಿ ನೆತ್ತರ ಕೋಡಿ - ಮೂವರ ಕೊಲೆಗೆ ಬೆಚ್ಚಿಬಿದ್ದ ಜನ
ಸಾಂದರ್ಭಿಕ ಚಿತ್ರ
  • Share this:
ಬೆಳಗಾವಿ(20) :  ಮನೆಯಲ್ಲಿ ಮದುವೆಯ ಸಂಭ್ರಮ ತುಂಬಿ ತುಳುಕುತ್ತಿತ್ತು, ಗೋಡೆಗಳಿಗೆ ಬಣ್ಣ ಹಾಕಿ ಸಿಂಗರಿಸಲಾಗಿತ್ತು, ಇತ್ತ ಮದುಮಗ ಬಂಧು ಬಳಕ್ಕೆ ಮದುವೆ ಕಾರ್ಡ್ ಪ್ರಿಂಟ್ ಮಾಡಿಸಿ ಹಂಚಲು ಪ್ಲ್ಯಾನ್​​​ ಮಾಡಿಕೊಳ್ಳುತ್ತಿದ್ದ. ಆದರೇ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮದುವೆ ಸಮಾರಂಭಕ್ಕೆ ಸಿಂಗಾರಗೊಂಡಿದ್ದ ಗೋಡೆಯ ಮೇಲೆ ರಕ್ತ ಹರಿದಿದೆ. ಒಂದೇ ಮನೆಯಲ್ಲಿ ಮೂರು ಜನರ ಸಾವಿಗೆ ಇಡೀ ಊರಿಗೆ ಊರೇ ಬೆಚ್ಚಿ ಬಿದ್ದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ಒಂದೇ ಕುಟುಂಬದ ಮೂರು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶಿವಾನಂದ ಅಂದಾನಶೆಟ್ಟಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಆತನ ಮಡದಿ ಶಾಂತವ್ವಾ, ಪುತ್ರ ವಿನೋದ್ ಅಂದಾನಶೆಟ್ಟಿ ಮೃತರು.

ನಿನ್ನೆ ಐದರಿಂದ ಆರು ಜನರ ದುಷ್ಕರ್ಮಿಗಳ ತಂಡ ಮನೆ ಬಾಗಿಲು ತೆಗೆಸಿ ಒಳ ನುಗ್ಗಿದ್ದಾರೆ ಬಾಗಿಲು ತೆಗೆದ ಮನೆ ಮಾಲೀಕನ ತಲೆಗೆ ರಾಡ್ ನಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ ಬಳಿಕ ಒಳ ನುಗ್ಗಿ ಕೋಣೆಯಲ್ಲಿ ಮಲಗಿದ್ದ ಮಗ ವಿನೋದ್ ತಲೆಗೆ ಹೊಡೆದು ಸಾಯಿಸಿದ್ದಾರೆ. ಬಳಿಕ ಪಕ್ಕದ ಕೋಣೆಗೆ ತೆರಳಿ ತಾಯಿ ಶಾಂತವ್ವಾಗೆ ತಲೆಯ ಹಿಂಭಾಗಕ್ಕೆ ಹೊಡೆದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ಇಲ್ಲಿ ಕೊಲೆಯಾಗಿರುವ ವಿನೋದ್ ಪಕ್ಕದ ಗ್ರಾಮದ ಯುವತಿಯ ಜೊತೆಗೆ ಇದೇ ತಿಂಗಳು 30ರಂದು ಮದುವೆ ನಿಶ್ಚಯವಾಗಿತ್ತು. ಮದುವೆ ಕಾರ್ಡ್ ಪ್ರಿಂಟ್ ಮಾಡಿಸಿ ನಾಳೆಯಿಂದ ಕಾರ್ಡ್ ಹಂಚಲು ಪ್ಲಾನ್ ಕೂಡ ಮಾಡಿಕೊಂಡಿದ್ದರು. ಇತ್ತ ಮನೆಗೆ ಸುಣ್ಣ ಬಣ್ಣ ಬಳಿದು ಸಿಂಗಾರಿ ಮಾಡಲಾಗಿತ್ತು. ಮದುವೆಗೆ ಬೇಕಾದ ಆಭರಣ, ಬಟ್ಟೆ ಸೇರಿದಂತೆ ಎಲ್ಲ ವಸ್ತುಗಳ ಖರೀದಿ ಕೂಡ ಆಗಿತ್ತು. ಮನೆಗೆ ನುಗ್ಗಿದ ದುಷ್ಕರ್ಮಿಗಳು ಸಂಭ್ರದಲ್ಲಿದ್ದ ಕುಟುಂಬದ ಸದಸ್ಯರನ್ನೆಲ್ಲಾ ಕೊಲೆ ಮಾಡಿ ಸರ್ವನಾಶ ಮಾಡಿದ್ದಾರೆ.‌ ಅಷ್ಟಕ್ಕೂ ಮೇಲ್ನೋಟಕ್ಕೆ ಕೊಲೆಗೆ ಆಸ್ತಿ ವಿಚಾರವೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ : ನ್ಯಾಯಮೂರ್ತಿಗಳಿಗೆ ಕರ್ನಾಟಕ ಸರ್ಕಾರ ಲಂಚ ಕೊಟ್ಟು ವರದಿ ಮೇಲೆ ಪರಿಣಾಮ ಬೀರಿದೆ ; ಠಾಕೂರು ವಿವಾದಾತ್ಮಕ ಹೇಳಿಕೆ

ಒಂದು ವರ್ಷದ ಹಿಂದೆ ಶಿವನಂದ ಸಹೋದರ ಆಸ್ತಿ ವಿಚಾರಕ್ಕೆ ಕೊಲೆ ಯತ್ನ ನಡೆಸಿದ್ದನಂತೆ. ಶಿವಾನಂದ ಮನೆಯ ಪಕ್ಕದಲ್ಲಿ ಖುಲ್ಲಾ ಜಾಗಕ್ಕೆ ಆಗಾಗ ಜಗಳ ಕೂಡ ಆಗುತ್ತಿತ್ತು ಇದೇ ವಿಚಾರಕ್ಕೆ ಕೊಲೆಯಾಗಿದೆ ಎಂಬ ಶಂಕೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೊಲೆಯಾದ ಶಿವಾನಂದ ಎರಡನೇ ಮದುವೆಯಾಗಿದ್ದ ಮೊದಲ ಪತ್ನಿ ಇನ್ನೂ ಜೀವಂತವಾಗಿದ್ದು ಅವಳೇ ದೂರು ನೀಡಿದ್ದಾಳೆ.

ಸಣ್ಣದಾದ ಖಾಲಿಇರುವ ಜಾಗಕ್ಕಾಗಿ ಈ ರೀತಿ ಮೂರು ಜನರನ್ನ ಹತ್ಯೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ತಪ್ಪಿತಸ್ಥ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಸಂಬಂಧಿಕರು ಒತ್ತಾಯಿಸುತ್ತಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ವಾತಾವರಣ, ಇನ್ನೊಂದು ಕಡೆ ಇಡೀ ಊರಿಗೆ ಊರೇ ಬಿಚ್ಚಿ ಬಿದ್ದಿದ್ದು ಆದಷ್ಟು ಬೇಗ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟುವ ಕೆಲಸ ಮಾಡಬೇಕಿದೆ.
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ