Hindu-Muslim love Affair: ಬೆಳಗಾವಿಯಲ್ಲಿ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ ಮುಸ್ಲಿಂ ಯುವಕನ ಬರ್ಬರ ಕೊಲೆ

ಕೊಲೆಯಾದ ಅರ್ಬಾಜ್ ಮುಲ್ಲಾ ಖಾನಾಪುರದ ಅನ್ಯಕೋಮಿನ ಯುವತಿಯನ್ನ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ. ಕೆಲ ಸ್ಥಳೀಯ ಹಿಂದೂ ಪರ ಸಂಘಟನೆಯ ಮುಖಂಡರಿಂದ ಅರ್ಬಾಜ್ ಗೆ ಬೆದರಿಕೆ ಇತ್ತು ಎನ್ನಲಾಗಿದೆ. ಯುವತಿಯ ನಮ್ಮ ಮಗನ ಕೊಲೆ ಮಾಡಿಸಿದ್ದಾರೆ ಎಂದು ಯುವಕನ ತಾಯಿ ಆರೋಪಿಸಿದ್ದಾರೆ.

ಕೊಲೆಯಾದ ಅರ್ಬಾಜ್​​ ಮುಲ್ಲಾ

ಕೊಲೆಯಾದ ಅರ್ಬಾಜ್​​ ಮುಲ್ಲಾ

  • Share this:
ಬೆಳಗಾವಿ:  ರೈಲ್ವೆ ಟ್ರ್ಯಾಕ್ ಮೇಲೆ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಯುವಕನ ಡೆಡ್ ಬಾಡಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ರುಂಡ-ಮುಂಡ ತುಂಡಾಗಿ, ಕೈಕಟ್ಟಿದ ಸ್ಥಿತಿಯಲ್ಲಿ ಸಿಕ್ಕ ಶವ ಬೇರೆಯದೆ ಕಥೆ ಹೇಳುತ್ತಿದೆ.  ಅಷ್ಟಕ್ಕೂ ಅಷ್ಟೊಂದು ಭಯಾನಕವಾಗಿ ಆ ಯುವಕನ ಹತ್ಯೆಗೆ‌ ಕಾರಣ ಅನ್ಯ ಕೋಮಿನ ಯುವತಿ ಜತೆಗೆ ಪ್ರೀತಿ ಎಂಬ ಅನುಮಾನಗಳು ದಟ್ಟವಾಗಿವೆ. ಪ್ರಕರಣ ಬಗ್ಗೆ ಪೋಷಕರು ಹಲವು ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಭೀಕರ ಕೊಲೆಗೆ ಅನ್ಯ ಕೋಮಿನ ಯುವತಿಯೊಂದಿಗೆ‌ ಹೊಂದಿದ್ದ ಪ್ರೀತಿಯೆ ಕಾರಣ ಎಂದು ಬಹಿರಂಗ ಪಡಿಸಿದ್ದಾರೆ. ಇನ್ನೂ ಪ್ರಕರಣ ಭೇದಿಸಲು ರೈಲ್ವೆ ಪೊಲೀಸರು ಹಾಗೂ ಖಾನಾಪುರ ‌ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಹಿಂದೂ ಯುವತಿಯನ್ನು ಪ್ರೀತಿಸಿದ್ದ ಅರ್ಬಾಜ್ ಮುಲ್ಲಾ

ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಬಳಿಯ ರೈಲ್ವೆ ಟ್ರ್ಯಾಕ್ ಮೇಲೆ ಸೆಪ್ಟೆಂಬರ್ 28ರಂದು ಭೀಕರವಾಗಿ ಹತ್ಯೆ ನಡೆದಿದೆ. ಕೊಲೆಯಾಗಿರೋ ಯುವಕನ ಹೆಸರು ಅರ್ಬಾಜ್ ಮುಲ್ಲಾ, ಹೀಗೆ ಕೊಲೆಯಾಗೋಕೆ ಕಾರಣ ಅನ್ಯ ಕೋಮಿನ ಯುವತಿಯೋರ್ವಳನ್ನ ಪ್ರೀತಿಸಿದ್ದೆ.  ಪ್ರೀತಿ ಮಾಡಿದ ಎಂಬ ಒಂದೇ ಕಾರಣಕ್ಕೆ ಅರ್ಬಾಜ್ ನ ಕೈ ಕಟ್ಟಿ ಹಾಕಿ, ರೈಲ್ವೆ ಟ್ರ್ಯಾಕ್ ಮೇಲೆ ಎಸೆದು ಕೊಲೆ ಮಾಡಲಾಗಿದೆ. ರುಂಡ-ಮುಂಡ ಬೇರೆ ಹಾಗೂ ಎರಡು ಕೈಗಳು ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಅರ್ಬಾಜ್ ನ  ಮೃತದೇಹ ಪತ್ತೆಯಾಗಿದೆ.  ಸ್ಥಳಕ್ಕೆ ಬಂದ ಖಾನಾಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದುಶವ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾದ ಹಿನ್ನೆಲೆ ಪ್ರಕರಣದ ತನಿಖೆಯನ್ನ ರೈಲ್ವೆ ಪೋಲಿಸರಿಗೆ ಹಸ್ತಾಂತರಿಸಲಾಗಿದೆ.

ಯುವತಿ ಮನೆಯವರಿಗೆ ಗೊತ್ತಾಗಿ ದೊಡ್ಡ ರಾದ್ದಾಂತ

ಕೊಲೆಯಾದ ಅರ್ಬಾಜ್ ಮುಲ್ಲಾ  ಖಾನಾಪುರದ ಅನ್ಯಕೋಮಿನ ಯುವತಿಯನ್ನ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ, ಕೆಲ ದಿನಗಳ ಹಿಂದೆ ಈ ವಿಷಯ ಯುವತಿ ಮನೆಯವರಿಗೆ ಗೊತ್ತಾಗಿ ದೊಡ್ಡ ರಾದ್ದಾಂತವೇ ನಡೆದು ಹೋಗಿತ್ತು. ಕೆಲ ಹಿರಿಯರ ಮಧ್ಯಸ್ಥಿಕೆಯಲ್ಲಿ ಅರ್ಬಾಜ್ ಗೆ ಯುವತಿ ಸ್ನೇಹ ಬಿಡುವಂತೆ ತಾಕೀತು ಮಾಡಲಾಗಿತ್ತು. ಆದ್ರೆ ಇವರಿಬ್ಬರ ಪ್ರೀತಿ ಪ್ರೇಮ ಮಾತ್ರ ನಿಂತಿರಲಿಲ್ಲ. ಕಳೆದ ಸಪ್ಟೆಂಬರ್ 27 ರಂದು ಮನೆಯಿಂದ ಹೊರ ಹೋಗಿದ್ದ ಅರ್ಬಾಜ್ ಮುಲ್ಲಾ 28 ನೇ ತಾರೀಖು ಶವವಾಗಿ ಪತ್ತೆಯಾಗಿದ್ದಾನೆ. ಕೆಲ ಸ್ಥಳೀಯ ಹಿಂದೂ ಪರ ಸಂಘಟನೆಯ ಮುಖಂಡರಿಂದ ಅರ್ಬಾಜ್ ಗೆ ಬೆದರಿಕೆ ಇತ್ತು ಎನ್ನಲಾಗಿದೆ. ಯುವತಿಯ ನಮ್ಮ ಮಗನ ಕೊಲೆ ಮಾಡಿಸಿದ್ದಾರೆ ಎಂದು ಯುವಕನ ತಾಯಿ ನಜೀಮಾ ಶೇಕ್ ಆರೋಪಿಸಿದ್ದಾರೆ.

ಇದನ್ನೂ ಓದಿ: Crime News: ಅನೈತಿಕ ಸಂಬಂಧ ಬಿಟ್ಟಿದ್ದಕ್ಕೆ ಮಹಿಳೆ ಮೇಲೆ ಡೆಡ್ಲಿ ಅಟ್ಯಾಕ್; ಬಸ್ ಒಳಗೆ ಬಂದು ಚಾಕುವಿನಿಂದ ಇರಿದ ಕ್ರೂರಿ!

ಅರ್ಬಾಜ್​ ತಾಯಿಯ ಕಣ್ಣೀರು 

ಹದಿ ಹರೆಯದ ಮಗನನ್ನು ಕಳೆದುಕೊಂಡಿರುವ ಯುವಕನ ತಾಯಿಯ ಅಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣದ ಜಾಡು ಹಿಡಿದಿರುವ ರೈಲ್ವೆ ಪೋಲಿಸರು ಹಂತಕತ ಬೇಟೆಗಿಳಿದಿದ್ದು, ಪೋಲಿಸ್ ತನಿಖೆಯ ಬಳಿಕವೇ ಸತ್ಯಾಸತ್ಯತೆ ಬಯಲಾಗಬೇಕಿದೆ.
ಪ್ರಕರಣದಲ್ಲಿ ಮದ್ಯಸ್ಥಿಕೆ ವಹಿಸಿದ ಮುಖಂಡರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ಕೊಡಲು ಅರ್ಬಾಜ್ ತನ್ನ ಮೊಬೈಲ್, ಕಾರ್ ಸಹ ಮಾರಾಟ ಮಾಡಿದ್ದ‌‌ನು. ಪ್ರೀತಿ ಗಲಾಟೆಯಿಂದ ಖಾನಾಪುರದಿಂದ ಬೆಳಗಾವಿ ಮನೆಯನ್ನು ಶಿಫ್ಟ್ ಮಾಡಲಾಗಿತ್ತು‌. ಫೋನ್ ಮೂಲಕ ಅರ್ಬಾಜ್ ಬೆದರಿಕೆ ಕರೆಗಳು ಬರುತ್ತಿದ್ದವು, ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಆಗ್ರಹ ಮಾಡಿದ್ದಾರೆ.
Published by:Kavya V
First published: