Heavy Rain: ಅಕಾಲಿಕ ಮಳೆಗೆ ಕುಸಿದೇ ಹೋಯ್ತು ಬದುಕು! ಮದುವೆ ನಡೆಯಬೇಕಿದ್ದ ಮನೆಯಲ್ಲಿ ಕಣ್ಣೀರಧಾರೆ!

ಇರುವ ಒಬ್ಬಳೇ ಮಗಳ ಮದುವೆ ಏಪ್ರಿಲ್ 15ರಂದು ನಡೆಯಬೇಕಿತ್ತು. ಅಷ್ಟರಲ್ಲೇ ಸುರಿದ ಅಕಾಲಿಕ ಮಳೆ ಇಡೀ ಬದುಕನ್ನೇ ನಾಶ ಮಾಡಿದೆ. ತಂದೆ ಆಸ್ಪತ್ರೆ ಸೇರಿದ್ರೆ, ಮದುವೆಗೆ ತಂದ ವಸ್ತುಗಳೆಲ್ಲ ನೀರು ಪಾಲಾಗಿದೆ. ಈಗ ಏನೂ ಮಾಡಲೂ ತೋಚದೇ ಬಡ ಕುಟುಂಬ ಕಣ್ಣೀರು ಹಾಕುತ್ತಿದೆ.

ಮಳೆಗೆ ಕುಸಿದು ಹೋದ ಮನೆ

ಮಳೆಗೆ ಕುಸಿದು ಹೋದ ಮನೆ

  • Share this:
ಬೆಳಗಾವಿ: ಕಳೆದ ಮೂರು ನಾಲ್ಕು ದಿನಗಳಿಂದ ಕುಂದಾನಗರಿ ಬೆಳಗಾವಿಯಲ್ಲಿ (Belagavi) ಸುರಿಯುತ್ತಿರೋ ಅಕಾಲಿಕ ಮಳೆ (Rain), ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಮಹಾಮಳೆಯಂತೂ ಒಬ್ಬರ ಮನೆಯಲ್ಲಿ ಮಗಳ (Daughter) ಮದುವೆಯ (Marriage) ಸಂಭ್ರಮವನ್ನೇ ಕಸಿದುಕೊಂಡಿದೆ. ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದ ಆಶ್ರಯ ಕಾಲೋನಿಯಲ್ಲಿ (Colony) ಸುರಿದ ಭಾರೀ ಗಾಳಿ ಮಳೆಗೆ ಚಂದ್ರಶೇಖರ ಹುಡೇದ್ ಎಂಬುವವರ ಮನೆ (House) ಸೇರಿ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಕುಸಿದಿದೆ. ಪರಿಣಾಮ, ಏಪ್ರಿಲ್ 15ಕ್ಕೆ ಅದ್ಧೂರಿಯಾಗಿ ಮಗಳ ಮದುವೆಯನ್ನ ನಿಶ್ಚಯ ಮಾಡಿಕೊಂಡಿದ್ದ ಚಂದ್ರಶೇಖರ ಎಂಬುವವರು ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ. ಇತ್ತ ಮದುವೆ ಸಂಭ್ರಮದಲ್ಲಿ ಇರಬೇಕಿದ್ದ ಮದುಮಗಳು ಕೂಡ ತಂದೆಯ ಮತ್ತು ಮನೆಯ ಪರಿಸ್ಥಿತಿ ಕಂಡು ಕಣ್ಣೀರು ಹಾಕ್ತಿದ್ದಾಳೆ.

ಊಟ ಮಾಡುತ್ತಿದ್ದಾಗಲೇ ಕುಸಿದು ಬಿದ್ದ ಮನೆ

ಮೊನ್ನೆ ಸುರಿದ ಅಕಾಲಿಕ ಮಳೆಗೆ ಬೆಳಗಾವಿ ತಾಲೂಕಿನ ಅಲರವಾಡ ಗ್ರಾಮದ ಆಶ್ರಯ ಕಾಲೋನಿಯೊಂದರಲ್ಲಿಯೇ ಐದಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅದರಲ್ಲಿ ಚಂದ್ರಶೇಖರ ಹುಡೇದ್ ಎಂಬುವವರ ಮನೆ ಸೇರಿದ್ದು, ಮನೆಯಲ್ಲಿ ಎಲ್ಲರೂ ಕುಳಿತು ಊಟ ಮಾಡುತ್ತಿದ್ದ ವೇಳೆಯಲ್ಲಿಯೇ ಮನೆಯ ಮೇಲ್ಛಾವಣಿ ಕುಸಿದಿದೆ. ಘಟನೆಯಲ್ಲಿ ಚಂದ್ರಶೇಖರ ಅವರ ಬೆನ್ನು ಮತ್ತು ಕಾಲಿನ ಮೇಲೆ ಬಿದ್ದಿದೆ. ಪರಿಣಾಮ, ಚಂದ್ರಶೇಖರ ಸದ್ಯ ಬೆಳಗಾ ವಿಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ.

ಮಗಳ ಮದುವೆ ಸಂಭ್ರಮದಲ್ಲಿದ್ದವರಿಗೆ ಆಘಾತ

ಚಂದ್ರಶೇಖರ ಹುಡೇದ್ ಎಂಬುವವರ ತಮ್ಮ ಒಬ್ಬಳೇ ಮಗಳಾದ ದೀಪಾ ಅವರನ್ನು ಬೆಳಗಾವಿ ತಾಲೂಕಿನ ಶಿಂದೋಳಿ ಗ್ರಾಮದ ನಾಗರಾಜ ತಿಗಡಿ ಎಂಬುವವರೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಮದುವೆ ದಿನಾಂಕ ಏಪ್ರಿಲ್ 15ರಂದು ಶಿಂದೋಳಿ ಗ್ರಾಮದಲ್ಲಿ ಮದುವೆ ನಿಶ್ಚಯವಾಗಿತ್ತು. ಇತ್ತ ಬಡತನ ಹಿನ್ನೆಲೆಯ ಕುಟುಂಬವಾದ್ರೂ ಮಗಳ ಮದುವೆಗಾಗಿ ಚಂದ್ರಶೇಖರ ಟ್ರಜರಿ, ಪಾತ್ರೆಗಳು, ಟ್ರೇಲರಿಂಗ್ ಯಂತ್ರ ಸೇರಿದಂತೆ ಇತರ ವಸ್ತುಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ಇವೆಲ್ಲ ನೀರು ಪಾಲಾಗಿದೆ.

ಇದನ್ನೂ ಓದಿ: ಮೇಲ್ವರ್ಗದ ಜನರಿಂದ ದಲಿತರ ಪೂಜೆ; ಇದು ಚಾಮರಾಜನಗರದ ಕರಿಬಲಿ ಹಬ್ಬದ ಆಚರಣೆ

ಊಟಕ್ಕೆ ಆಹಾರವೂ ಇಲ್ಲದೇ ಪರದಾಟ

ಇದರ ಜೊತೆಗೆ ಮದುವೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ತಂದಿಟ್ಟುಕೊಂಡಿದ್ದರು.  ಆದ್ರೆ,ಅಕಾಲಿಕ‌ ಮಳೆ ಮದುವೆ ಮನೆಯ ಸಂಭ್ರಮ ಕಸಿದುಕೊಂಡಿದ್ದು ಒಂದೆಡೆಯಾದ್ರೆ, ಸಾಲ ಶೂಲ ಮಾಡಿ ಕಟ್ಟಿಕೊಂಡಿದ್ದ ಮನೆಯೂ ಸಂಪೂರ್ಣವಾಗಿ ಹಾಳಾಗಿದೆ. ಪರಿಣಾಮ, ಮನೆಯಲ್ಲಿ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಹಾಳಾಗಿದ್ದು ಒಂದೆಡೆಯಾದ್ರೆ ಸದ್ಯ ತಿನ್ನಲು ಅನ್ನವಿಲ್ಲದೇ ಕುಟುಂಬಸ್ಥರ ಪರದಾಡುತ್ತಿದ್ದಾರೆ.

ಮಗಳ ಮದುವೆಗೆ ಖರ್ಚು ಮಾಡಿದ ಹಣವೂ ವ್ಯರ್ಥ

ಇತ್ತ ಮಗಳ ಮದುವೆ ಮಾಡಬೇಕೋ ಅಥವಾ ಮನೆಯ ಸ್ವಚ್ಚ ಮಾಡಬೇಕೋ ಎಂಬ ದುಗುಡದಲ್ಲಿದ್ದಾರೆ ಚಂದ್ರಶೇಖರ ಅವರ ಪತ್ನಿ ಮಂಗಲ.  ಸದ್ಯ ಸಾಲ ಮಾಡಿ‌ ಮಗಳ ಮದುವೆಗೆ ಕರ್ಚು ಮಾಡಿದ ಹಣವೂ ನೀರಿನಲ್ಲಿ ಹೋಮ ಮಾಡಿದ್ದಂತಾಗಿದೆ. ಹೀಗಾಗಿ ಸ್ಥಳೀಯ ಜನಪ್ರತಿ‌ನಿಧಿಗಳು ಸಂತ್ರಸ್ತರ ಕುಟುಂಬಕ್ಕೆ ಆಶ್ರಯವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಇದನ್ನೂ ಓದಿ: Online Fraud: ನಿಮಗೆ ಕರೆ ಮಾಡಿದ ಚಂದಾದಾರರು ನಿಮ್ಮ ಖಾತೆಯಿಂದ 43 ಸಾವಿರ ಕದ್ದಿದ್ದಾರೆ!

ಬೆಳಗಾವಿ ಜಿಲ್ಲೆಯಲ್ಲಿ 2019ರಲ್ಲಿ ಭೀಕರ ಜಲಪ್ರಳಯ ಉಂಟಾಗಿತ್ತು. ಅಂದು ಸೂರು ಕಳೆದುಕೊಂಡ ಅದೆಷ್ಟೋ ಜನಕ್ಕೆ ಇನ್ನೂ ಮನೆ ನಿರ್ಮಾಣವಾಗಿಲ್ಲ. ಈಗ ಮತ್ತೆ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಹಾನಿ ಉಂಟಾಗಿದೆ. ತಕ್ಷಣ ಈ‌‌ ಕುಟುಂಬಕ್ಕೆ ತೆರವು ನೀಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕು.
Published by:Annappa Achari
First published: