Santosh Patil Suicide Case: ಗುತ್ತಿಗೆದಾರ ಸಂತೋಷ್ ಪಾಟೀಲ್‌ ಸೂಸೈಡ್‌ ಕೇಸ್‌ಗೆ ಟ್ವಿಸ್ಟ್! ಪೊಲೀಸರಿಗೆ ಸಿಕ್ತು ಮತ್ತಷ್ಟು ಸಾಕ್ಷಿ

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಬರೆದಿದ್ದ ಪತ್ರ ಉಡುಪಿ ಪೊಲೀಸರಿಗೆ ಸಿಕ್ಕಿದೆ. 2021ರ ಫೆಬ್ರವರಿ 15ರಂದು ಆಗಿನ ಬೆಳಗಾವಿ ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಪತ್ರ ಬರೆದಿದ್ದರು.

ಆತ್ಮಹತ್ಯೆಗೆ ಶರಣಾಗಿದ್ದ  ಸಂತೋಷ್ ಪಾಟೀಲ್

ಆತ್ಮಹತ್ಯೆಗೆ ಶರಣಾಗಿದ್ದ ಸಂತೋಷ್ ಪಾಟೀಲ್

  • Share this:
ಬೆಳಗಾವಿ: ರಾಜ್ಯ ರಾಜಕೀಯದಲ್ಲಿ (State Politics) ಅಲ್ಲೋಲ ಕಲ್ಲೋಲ ಉಂಟು ಮಾಡಿದ ಗುತ್ತಿಗೆದಾರ (Contractor) ಸಂತೋಷ್ ಪಾಟೀಲ್ (Santosh Patil) ಆತ್ಮಹತ್ಯೆ ಕೇಸ್‌ಗೆ (Suicide Case) ಕ್ಷಣಕ್ಕೊಂದು ಟ್ವಿಸ್ಟ್ (Twist) ಸಿಗುತ್ತಿದೆ. ಈ ಪ್ರಕರಣದ ತನಿಖೆ (Enquiry) ಕೈಗೊಂಡಿರುವ ಉಡುಪಿ ಪೊಲೀಸರಿಗೆ (Udupi Police) ಮಹತ್ವದ ಸಾಕ್ಷಿಗಳು (Important Evidence) ಸಿಗುತ್ತಿವೆ.  ಇದೇ  ಪ್ರಕರಣ ಸಂಬಂಧ ಬೆಳಗಾವಿಯಲ್ಲೇ (Belagavi) ತನಿಖೆ ನಡುಸುತ್ತಿರುವ ಉಡುಪಿ ಪೊಲೀಸ್ ತಂಡ ವಿಚಾರಣೆ ಚುರುಕು ಗೊಳಿಸಿತ್ತು. ಉಡುಪಿ ಪೊಲೀಸರು ಇದೇ ಏಪ್ರಿಲ್ 20ರಂದು ಹಿಂಡಲಗಾ (Hindalaga) ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್‌ ಎಂಬುವರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಕೆಲ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದು, ಈ ಪೈಕಿ ಸಿಕ್ಕಿರೋ ಪತ್ರವೊಂದು (Letter) ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್‌ಗೆ ತಿರುವು ನೀಡಿದೆ.

ಒತ್ತಡದಲ್ಲಿ ಆತ್ಮಹತ್ಯೆಗೆ ಶರಣಾದನಾ ಸಂತೋಷ್?

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ಗೆ ಹಣ ನೀಡಿರೋ ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್, ಅದಕ್ಕೆ ಪ್ರತಿಯಾಗಿ ಸಂತೋಷ್‌ ಪಾಟೀಲ್‌ ಮನೆಯನ್ನ 32 ಲಕ್ಷ ರೂಪಾಯಿಗೆ ಜಿಪಿಎ ಮಾಡಿಕೊಂಡಿದ್ದಾರೆ. ಒಂದಡೆ ಮನೆ ಜಿಪಿಎ, ಮತ್ತೊಂದಡೆ ಕಾಮಗಾರಿಯ ಬಿಲ್ ಆಗದೇ ಇರೋದು. ಹೀಗೆ ಒತ್ತದಲ್ಲಿದ್ದ ಸಂತೋಷ್ ಆತ್ಮಹತ್ಯೆ ಮಾಡಿಕೊಂಡನಾ ಅನ್ನೋ ಅನುಮಾನ ಕಾಡುತ್ತಿದೆ.

ಅಂದಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬರೆದಿದ್ದ ಪತ್ರ ಲಭ್ಯ

ಇನ್ನು ಮತ್ತೊಂದು ಕಡೆ 108 ಕಾಮಗಾರಿಗಳ ಪಟ್ಟಿ ಸಮೇತ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಬರೆದಿದ್ದ ಅನುಮೋದನೆಗಾಗಿ ಆದೇಶಿಸಲಾಗಿದೆ ಎನ್ನಲಾದ ಸಹಿ ಇರುವ ಪತ್ರವೂ ಸಿಕ್ಕಿದೆ ಎನ್ನಲಾಗಿದೆ.

ಇದನ್ನೂ ಓದಿ: Santosh Patil: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್; ಉಡುಪಿ ಪೊಲೀಸರಿಂದ ಬೆಳಗಾವಿಯಲ್ಲಿ ತನಿಖೆ ಚುರುಕು

ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬರೆದಿದ್ದ ಪತ್ರ

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಬರೆದಿದ್ದ ಪತ್ರ ಉಡುಪಿ ಪೊಲೀಸರಿಗೆ ಸಿಕ್ಕಿದೆ. 2021ರ ಫೆಬ್ರವರಿ 15ರಂದು ಆಗಿನ ಬೆಳಗಾವಿ ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಪತ್ರ ಬರೆದಿದ್ದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಸೀಲ್

2021ರ ಫೆ.15ರಂದು 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಪತ್ರ ಬರೆದಿದ್ದರು. ಅನುಮೋದನೆಗಾಗಿ ಆದೇಶಿಸಲಾಗಿದೆ ಎಂದು 2022ರ ಫೆಬ್ರವರಿ 26ರಂದು ಸಹಿ ಮಾಡಿರುವ ಲೆಟರ್ ಲಭ್ಯವಾಗಿದೆ. ಬಳಿಕ ಮಾರ್ಚ್ 5ರಂದು ಆದೇಶದ ಪ್ರತಿ ನೀಡಲಾಗುವುದು ಎಂದು ಕೈಬರಹದಲ್ಲಿ ಬರೆದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಸೀಲ್ ಹಾಕಲಾಗಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರ ವಿಚಾರಣೆ

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ತನಿಖೆ ಚುರುಕುಗೊಳಿಸಿರುವ ಉಡುಪಿ ಪೊಲೀಸರು, ಸಂತೋಷ್ ಪಾಟೀಲ್ ಅವರು ಹಿಂಡಲಗಾ ಗ್ರಾಮ ಪಂಚಾಯಿತಿಯಲ್ಲಿ ಅವರು ರಸ್ತೆ ಕಾಮಗಾರಿಗೆ ನಿಯೋಜಿಸಿದ್ದ ಇತರ ರಸ್ತೆ ಗುತ್ತಿಗೆದಾರರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಗುತ್ತಿಗೆ ಕೆಲಸಗಳ ಬಗ್ಗೆಯೂ ಮಾಹಿತಿ ಸಂಗ್ರಹ

ಮೂಲಗಳ ಪ್ರಕಾರ, ಸಂತೋಷ್ ಅವರ ಸೂಚನೆ ಮೇರೆಗೆ ಹಿಂಡಲಗಾ ಗ್ರಾ.ಪಂ.ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಮತ್ತು ಸಣ್ಣಪುಟ್ಟ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದ 12 ಮಂದಿ ಗುತ್ತಿಗದಾರರು ಕೆಲವು ಕಾಮಗಾರಿಗಳನ್ನು ನಡೆಸಿದ್ದು, ಈ ಬಗ್ಗೆ ಪೊಲೀಸರು ಮಾಹಿತಿಗಳನ್ನು ಕಲೆಹಾಕಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: Crime News: ಅಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆ ಶವ; ಇಲ್ಲಿ ಬಿದ್ದಿತ್ತು ಅಪರಿಚಿತನ ಡೆಡ್ ಬಾಡಿ!

ಹಿಂಡಲಗಾ ಲಕ್ಷ್ಮೀ ಜಾತ್ರೆಗೆ ಮುನ್ನಾ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂತೋಷ್ ಪಾಟೀಲ್ ಅವರು ಒತ್ತಡ ಹೇರಿದ್ದು, ಒತ್ತಾಯದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿದ್ದರು ಎಂದು ತಿಳಿದುಬಂದಿದೆ.
Published by:Annappa Achari
First published: