Belagavi: ಆ ‘ಕೊಳೆ’ ನಮ್ಮಿಂದ ದೂರ ಹೋಯ್ತು: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಪರೋಕ್ಷ ವಾಗ್ದಾಳಿ

ಈ ಕೊಳೆ ಏನಿತ್ತು ಆ ಕೊಳೆ ನಮ್ಮಿಂದ ದೂರ ಹೋಯ್ತು. ಇಂತವರೆಲ್ಲಾ ಒಳಗಡೆ ಇದ್ದಿದ್ರೆ ಇನ್ನೂ ದೊಡ್ಡ ಅನಾಹುತ ಆಗ್ತಿತ್ತು. ನಮ್ಮ ಪಕ್ಷ ಮುಂದಿನ ದಿನಗಳಲ್ಲಿ ಬಲಿಷ್ಠವಾಗಿ ಕಟ್ಟಲಿಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಬೆಳಗಾವಿಯಲ್ಲಿ ಹೇಳಿದರು.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಬೆಳಗಾವಿಯಲ್ಲಿ ಜೋರಾಯ್ತು ವಿಧಾನ ಪರಿಷತ್ ಪ್ರತಿಷ್ಠೆಯ (MLC Election) ಫೈಟ್ ಜೋರಾಗಿದ್ದು, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ (Channaraja hattiholi) ಪರವಾಗಿ ಮತಯಾಚನೆ ಮಾಡಿದರು. ಈ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ 'ಕೊಳೆ' ಎಂದು ಕಿಡಿಕಾರಿದರು. ನಾವು ಸಿಂಗಲ್ ಕ್ಯಾಂಡಿಡೇಟ್ ಹಾಕಿದ್ದೇವೆ. ಆದ್ರೆ ಬಿಜೆಪಿಯವರು ಸಿಂಗಲ್ ಕ್ಯಾಂಡಿಡೇಟ್ ಹಾಕಿದ್ದಾರಾ ಎಂದು ಪ್ರಶ್ನೆ ಮಾಡಿದರು. ಚಿಹ್ನೆ ಆಧಾರಿತ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯವರು (BJP) ಹೆಚ್ಚಿನ ಸ್ಥಾನ ಗೆದ್ದಿರಬಹುದು. ಪಕ್ಷೇತರವಾಗಿ ಆಡಳಿತ ಪಕ್ಷದ ಇಬ್ಬರು ಶಾಸಕರು ನಿಂತು ನೇರವಾಗಿ ಚುನಾವಣೆ ಮಾಡ್ತಿದ್ದಾರೆ. ಇದು ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ, ಬಿಜೆಪಿಯವರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಶಿಸ್ತಿನ ಬಗ್ಗೆ ದೊಡ್ಡ ಚರ್ಚೆ ನಡೀತಿದೆ. ನಮಗೆ ಇಂತ ರೆಬೆಲ್ ಆ್ಯಟಿಟ್ಯೂಡ್ ಮುಖ್ಯನಾ, ನಮ್ಮ ಪಕ್ಷದಲ್ಲಿ ಶಿಸ್ತು ಇಟ್ಕೊಬೇಕಾ? ಈ ಕೊಳೆ ಏನಿತ್ತು ಆ ಕೊಳೆ ನಮ್ಮಿಂದ ದೂರ ಹೋಯ್ತು. ಇಂತವರೆಲ್ಲಾ ಒಳಗಡೆ ಇದ್ದಿದ್ರೆ ಇನ್ನೂ ದೊಡ್ಡ ಅನಾಹುತ ಆಗ್ತಿತ್ತು. ನಮ್ಮ ಪಕ್ಷ ಮುಂದಿನ ದಿನಗಳಲ್ಲಿ ಬಲಿಷ್ಠವಾಗಿ ಕಟ್ಟಲಿಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಬೆಳಗಾವಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣ ಇದೆ. ಕಳೆದ ಸಲಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಗ್ರಾಮ‌ ಪಂಚಾಯತಿ ಸದಸ್ಯರು ಅತಿ ಹೆಚ್ಚು ಚುನಾವಣೆಯಲ್ಲಿ ಭಾಗಿ ಎಂದು ಮನವಿ ಮಾಡಿಕೊಂಡರು. ಪಂಚಾಯತಿಗೆ ಕಾಂಗ್ರೆಸ್ ಹೆಚ್ಚು ‌ಶಕ್ತಿಯನ್ನು ಕೊಟ್ಟಿದೆ. ಗ್ರಾಪಂ ಸದಸ್ಯರಿಗೆ ಜನರ ಸೇವೆ ಅವಕಾಶ ಸಿಕ್ಕಿದ್ದರೆ ಇದಕ್ಕೆ ಕಾರಣ ನರೇಗಾ ಯೋಜನೆ ಎಂದರು.

ಇದನ್ನೂ ಓದಿ:  ಎಲ್ಲರಿಗೂ ಸೊಕ್ಕು ಬಂದಾಗ ದೇವರು ಯಾರೋ ಒಬ್ಬರನ್ನು ತಯಾರು ಮಾಡ್ತಾನೆ: Ramesh Jarkiholi

ಪಕ್ಷ ಬಲಿಷ್ಠವಾಗಿದ್ರೆ ಯಾಕೆ ಬೆಂಬಲ ಕೇಳಬೇಕು?

ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುವ ಹಡಗು ಎಂದು ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದಿದ್ದಾರೆ. ಆದ್ರೆ ಮಾಜಿ ಸಿಎಂ ಯಡಿಯೂರಪ್ಪ ಜನತಾದಳದ ಬೆಂಬಲ ಕೇಳಿದ್ದಾರೆ. ಬೆಂಬಲ ಕೇಳಿದ್ದಾರೆ ಎಂದರೇ ಯಾರು ಮುಳುಗುತ್ತಿದ್ದಾರೆ. ಪಕ್ಷ ಬಲಿಷ್ಠವಾಗಿ ಇದ್ರೆ ಯಾಕೆ ಬೆಂಬಲ ಕೇಳಬೇಕು. ಎಂದು ಮರು ಪ್ರಶ್ನೆ ಮೂಲಕ ತಿರುಗೇಟು ನೀಡಿದರು.ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳುತ್ತಾರೆ.. ಸ್ವಾಭಿಮಾನ ಇದ್ರೆ ಅದಕ್ಕೆ ಬಿಜೆಪಿ ಉತ್ತರ ಕೊಡಿಸಬೇಕು. ಬ್ಲ್ಯಾಕ್ ಮೇಲರ್ಸ್ ಪಾರ್ಟಿ, ಬ್ಲ್ಯಾಕ್ ಮೇಲರ್ಸ್ ಒತ್ತಡಕ್ಕೆ ಮಣೆಯೋದಾದ್ರೆ ಏನ್ ಬೇಕಾದ್ರು ಮಾಡಿಕೊಳ್ಳಲಿ. ಬಿಜೆಪಿ ಸಹ ಬ್ಲ್ಯಾಕ್ ಮೆಲರ್ಸ್ ಹೆದರಿಕೊಂಡು ಸರ್ಕಾರ ನಡೆಸುತ್ತಿದೆ ಎನ್ನುವುದು ಸಂತೋಷ ಎಂದು ವ್ಯಂಗ್ಯ ಮಾಡಿದರು.

ಬೊಮ್ಮಾಯಿ, ಕಟಿಲ್, ಶೋಭಾ ಉತ್ತರ ಕೊಡಲಿ

ನನ್ನ ಪಕ್ಷದ ಹೀಗೆ ಆಗಿದ್ರೆ ಒಂದು ಗಂಟೆ ಇಟ್ಟುಕೊಳ್ಳುತ್ತಿರಲಿಲ್ಲ. ಒಂದು ಗಂಟೆಯಲ್ಲಿ ಹೊರಗೆ ಹಾಕುತ್ತಿದೆ. ಶಾಸಕಿ ಹೆಬ್ಬಾಳ್ಕರ್ ಬಗ್ಗೆ ರಮೇಶ ಜಾರಕಿಹೊಳಿ‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಬಿಜೆಪಿಯ ಸಂಸ್ಕೃತಿಯ ಪ್ರತಿಬಿಂಬ.. ಸಂಸ್ಕೃತಿ, ಸಂಸ್ಕಾರ ಎಂದು ಹೇಳಿಕೊಳ್ಳಿತ್ತಾರೆ.. ಬೊಮ್ಮಾಯಿ, ಕಟಿಲ್, ಶೋಭಾ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ:  ಈ ಚುನಾವಣೆ ಹೆಬ್ಬಾಳ್ಕರ್ Vs ಜಾರಕಿಹೊಳಿ ರೀತಿ ಆಗುತ್ತಾ? ಪ್ರಶ್ನೆಗೆ ಥೂ.. ಥೂ... ಎಂದ Ramesh Jarkiholi

ಗೋಕಾಕ್, ಅರಬಾವಿ, ರಾಯಬಾಗದಲ್ಲಿ ಚುನಾವಣೆ ಅಕ್ರಮ ನಡೆದಿದೆ. .ಮತದಾರರ ಚೀಟಿ ಪಡೆದುಕೊಂಡು ಬೇರೆಯವರು ಮತ ಹಾಕೊದು ನಡೆದುಕೊಂಡು ಬಂದಿದೆ. ಮತದಾನ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು. ಹೆಚ್ಚಿನ ಪೊಲೀಸ ಬಂದೋಬಸ್ತ ಮಾಡಬೇಕು ಎಂದು ಮನವಿ ಮಾಡಿದರು.ಅಕ್ರಮ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ. ಎಲ್ಲಾ ಕಡೆಗಳಲ್ಲಿ ವಿಡಿಯೋ ವ್ಯವಸ್ಥೆ ಮಾಡಬೇಕು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ  ಹಾಗೂ ಕುಟುಂಬ ಸದಸ್ಯರು ಬೂತ್ ಎಂಜೆಟ್ ಆಗುತ್ತೇವೆ ಎಂದಿದ್ದಾರೆ. ಗೋಕಾಕ್, ಮೂಡಲಗಿಯಲ್ಲಿ ಪಕ್ಷದ ಮುಖಂಡರು ಹೇಳಿದ್ರೆ ಪ್ರಚಾರ ನಡೆಸೋದಾಗಿ ತಿಳಿಸಿದರು.
Published by:Mahmadrafik K
First published: