Jarkiholi V/S Hebbalkar: ಸೋದರರ ಗೆಲುವಿಗಾಗಿ ಹೆಬ್ಬಾಳ್ಕರ್-ಜಾರಕಿಹೊಳಿ ಜಟಾಪಟಿ..ಗೆಲ್ಲೋರು ಯಾರು?

ಸತೀಶಣ್ಣಾ ಸೇರಿದಂತೆ ಎಲ್ಲರ ಆಶೀರ್ವಾದ ನಮ್ಮ ಮೇಲೆ ಇದೆ. ನಾವೇ ಗೆಲ್ಲೋದು ಎನ್ನುವ ಮೂಲಕ  ಲಕ್ಷ್ಮೀ ಹೆಬ್ಬಾಳಕರ್ ಸೇಫ್ ಗೇಮ್ ಪ್ಲೇ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಸಹೋದರನನ್ನ ಶತಾಯ ಗತಾಯ ಸೋಲಿಸಲು ರಮೇಶ್​ ಜಾರಹೊಳಿ ಪಣ ತೊಟ್ಟಿದ್ದಾರೆ.

ರಮೇಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್​

ರಮೇಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್​

  • Share this:
ಬೆಳಗಾವಿ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ (MLC Election ) 2 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣಾ ಅಖಾಡ ಭಾರೀ ರಂಗೇರುತ್ತಿದೆ. ಕಾಂಗ್ರೆಸ್ ನಿಂದ  ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar ) ಸಹೋದರ ಚನ್ನರಾಜ್ ಹಟ್ಟಿಹೊಳಿ, ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ನಾಮಪತ್ರ ಸಲ್ಲಿಸಿದ್ದಾರೆ.  ಪಕ್ಷೇತರರಾಗಿ ಲಖನ್ ಜಾರಕಿಹೊಳಿ (lakhan jarkiholi)  ನಾಮಪತ್ರ ಸಲ್ಲಿಸುವ ಮೂಲಕ ಬೆಳಗಾವಿಯಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ. ಸತೀಶ್ ಜಾರಕಿಹೊಳಿ ಹೊರತು ಪಡಿಸಿದ್ರೆ ಉಳಿದೆಲ್ಲ ಜಾರಕಿಹೊಳಿ ಬ್ರದರ್ಸ್ ಲಖನ್ ಬೆನ್ನಿಗೆ ನಿಂತಿದ್ದು, ಸತೀಶ್ ಜಾರಕಿಹೊಳಿ ಮಾತ್ರ ಕುಟುಂಬಕ್ಕಿಂತ ಪಕ್ಷವೇ ಮುಖ್ಯ ಎಂದಿದ್ದಾರೆ. 

ಹಣ ಹಂಚಿ ನನ್ನ ಸೋಲಿಸಿದ್ರು 

ಇದೇ ವೇಳೆ ತಮ್ಮ ಲಖನ್ ಗೆ ಟಾಂಗ್ ನೀಡಿರುವ ಸತೀಶ್ ಜಾರಕಿಹೊಳಿ, ಸಿಂಗಲ್ ಅಭ್ಯರ್ಥಿ, ಸಿಂಗಲ್ ಮತ ಎಂಬುದು ಕಾಂಗ್ರೆಸ್ ತತ್ವ. ಇದೇ ಲಖನ್ ಮತ್ತು ರಮೇಶ ಜಾರಕಿಹೊಳಿ ಲೋಕಸಭಾ ಉಪಚುವಾವಣೆಯಲ್ಲಿ ನನ್ನ ವಿರುದ್ಧ ಹಣ ಹಂಚಿ ನನ್ನನ್ನು ಸೋಲಿಸಿದ್ದಾರೆ. ಆ ನೋವು ನಮಗೆ ಹಾಗೂ ನಮ್ಮ ಕಾರ್ಯಕರ್ಯರಿಗೂ ಇದೆ. ಲಖನ್ ಜಾರಕಿಹೊಳಿ ಚುನಾವಣೆ ನಿಲ್ಲೋದು ಡೌಟು. ಪಕ್ಷದ ವರಿಷ್ಠರು ಒಳ್ಳೆಯ ಅವಕಾಶ ಕೊಡ್ತಿವಿ ಅಂದ್ರೆ ವಾಪಸ್ ಪಡೆಯುತ್ತಾರೆ. ಲಖನ ಜಾರಕಿಹೊಳಿ ಜೊತೆಗೆ ಮಾತನಾಡುವ ಪ್ರಶ್ನೆ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್​ ವಿರುದ್ಧ ರಮೇಶ್​ ಗುಟುರು 

ಸತೀಶಣ್ಣಾ ಸೇರಿದಂತೆ ಎಲ್ಲರ ಆಶೀರ್ವಾದ ನಮ್ಮ ಮೇಲೆ ಇದೆ. ನಾವೇ ಗೆಲ್ಲೋದು ಎನ್ನುವ ಮೂಲಕ  ಲಕ್ಷ್ಮೀ ಹೆಬ್ಬಾಳಕರ್ ಸೇಫ್ ಗೇಮ್ ಪ್ಲೇ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಸಹೋದರನನ್ನ ಶತಾಯ ಗತಾಯ ಸೋಲಿಸಲು ರಮೇಶ್​ ಜಾರಹೊಳಿ ಪಣ ತೊಟ್ಟಿದ್ದಾರೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಕಿರಿಯ ತಮ್ಮ ಲಖನ್ ಜಾರಕಿಹೊಳಿಯವರನ್ನ ಕಣಕ್ಕಿಳಿಸಿದ್ದಾರೆ.  ನಾವು ಲಖನ್ ಗೆ ಬಿಜೆಪಿ ಟಿಕೆಟ್ ಕೇಳಿಲ್ಲ. ನಮ್ಮ ಮೊದಲ ಆದ್ಯತೆ ನಮ್ಮ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು. ಎರಡನೇಯದು ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕು. ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಲು ಏನೇನು ಮಾಡಬೇಕು ಎಂಬುದನ್ನು ಚರ್ಚಿಸಲು ದೆಹಲಿಗೆ ಹೋಗುತ್ತಿದ್ದೇನೆ ಎಂದ್ರು.

ಲಕ್ಷ್ಮೀ ಹೆಬ್ಬಾಳ್ಕರ್​ ಹೆಸರೇಳುತ್ತಲೇ ಥೂ... ಎಂದ ರಮೇಶ್​ ಜಾರಕಿಹೊಳಿ 

ಇದೇ ವೇಳೆ ಇದು ಹೆಬ್ಬಾಳಕರ್ vs ಜಾರಕಿಹೊಳಿ ಚುನಾವಣೆಯೇ ಎಂಬ ಪ್ರಶ್ನೆಗೆ ಕೆರಳಿದ ರಮೇಶ ಜಾರಕಿಹೊಳಿ ಥೂ... . ಎನ್ನುವ ಮೂಲಕ ಕಿಡಿಕಾರಿದ್ರು.   ಇನ್ನು ಲಖನ್ ನಾಮಪತ್ರ ಹಿಂಪಡಿತಾರೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಲಖನ್ ಜಾರಕಿಹೊಳಿ, ಸತೀಶ್ ಏನೇ ಹೇಳಿದ್ರು ನಮ್ಮ‌ ಅಣ್ಣ , ನಾನು ನಾಮಪತ್ರ ಹಿಂಪಡೆಯುವ ಚಾನ್ಸೆ ಇಲ್ಲ ಎಂದ್ರು.

ಇದನ್ನೂ ಓದಿ: Belgaumನ‌ಲ್ಲಿ 2 ಕಡೆ BJP ಜನಸ್ವರಾಜ್ ಸಮಾವೇಶ; ದೂರ ಉಳಿದ ಜಾರಕಿಹೊಳಿ ಸಹೋದರರು.. ಮುಂದಿನ ನಿರ್ಧಾರವೇನು?

ಲಖನ್ ಎಂಟ್ರಿಯಿಂದ ಬೆಳಗಾವಿ ರಾಜಕೀಯದಲ್ಲಿ ತೀವ್ರ ಸಂಚಲನ ಉಂಟಾಗಿದ್ದು, ಅವರು ಗೆಲ್ತಾರೆ, ಇವರು ಗೆಲ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಆದ್ರೆ ಮತದಾರ ಚಿತ್ತ ಯಾರತ್ತ ಎಂಬುದಕ್ಕೆ ಸ್ವಲ್ಪ ಕಾಯಲೇಬೇಕಿದೆ. ಲಖನ್ ಜಾರಕಿಹೊಳಿ ಕಾಂಗ್ರೆಸ್ ಪೆಟ್ಟು ಕೊಡ್ತಾರಾ, ಬಿಜೆಪಿಯ ಮತ ಪೆಟ್ಟಿಗೆಗೆ ಕೈ ಹಾಕುತ್ತಾರಾ ಎನ್ನುವುದರ ಮೇಲೆ ಫಲಿತಾಂಶ ಅವಲಂಬಿತವಾಗಿದೆ.

ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ಗೆ ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.
Published by:Kavya V
First published: