Lakshmi Hebbalkar: IT ರೆಡ್ ಮಾಡಿಸಿದ್ರು MLA ಆದೆ, ವೈಯಕ್ತಿಕ ಟೀಕೆ ಮಾಡ್ತಿದ್ದಾರೆ ಮುಂದೆ ಮಂತ್ರಿ ಆಗ್ತಿನಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್!

ನಾನು ರಾಜಕಾರಣ ಮಾಡುವಾಗ ಇನ್‌ಕಮ್‌ ಟ್ಯಾಕ್ಸ್, ಇಡಿಗೆ ಬರೆದು ನನ್ನ ಮೇಲೆ ರೇಡ್ ಮಾಡಿಸಿದ್ರು. ನನ್ನ ಮೇಲೆ ಇನ್‌ಕಮ್ ಟ್ಯಾಕ್ಸ್ ರೇಡ್ ಮಾಡಿಸಿದ್ರು ನಾನು ಎಂಎಲ್‌ಎ ಆದೆ. ಈಗ ನನ್ನ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ. ಮುಂದಿನ ಬಾರಿ ಜನತೆಯ ಆಶೀರ್ವಾದದಿಂದ ಮಂತ್ರಿಯೂ ಆಗ್ತೇ‌ನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದರು.

ಸಂಜಯ ಪಾಟೀಲ್ಲ- ಲಕ್ಷ್ಮಿ ಹೆಬ್ಬಾಳ್ಕರ್

ಸಂಜಯ ಪಾಟೀಲ್ಲ- ಲಕ್ಷ್ಮಿ ಹೆಬ್ಬಾಳ್ಕರ್

  • Share this:
ಬೆಳಗಾವಿ (ಅಕ್ಟೋಬರ್‌ 1): ಬೆಳಗಾವಿ ಗ್ರಾಮೀಣ ಕ್ಷೇತ್ರದ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ವಾರ್ ಈಗ ವೈಯಕ್ತಿಕ ಟೀಕೆಗೆ ಕಾರಣವಾಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (lakshmi hebbalkar) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ ಸಂಜಯ ಪಾಟೀಲ್ (BJP Ex MLA Sanjay Patil) ವಿರುದ್ಧ ತಮ್ಮದೇ ಶೈಲಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಪಾಟೀಲ್ ಅವರಿಗೆ ಸೇರಿದ ಗೋಮಟೇಶ ವಿದ್ಯಾಪೀಠದ ಮುಂಭಾಗದಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಧರಣಿ ನಡೆಸಿದರು. ಸಂಜಯ ಪಾಟೀಲ್ ಕ್ಷಮಾಪಣೆ ‌ಕೇಳಬೇಕು ಎಂದು ಪಟ್ಟು ಹಿಡಿದರು. ಶಾಲೆ ಮುಂಭಾಗದಲ್ಲಿ ಧರಣಿ ನಡೆಸಿದ್ದರಿಂದ ಪೋಷಕರು ಹಾಗೂ ಕಾಂಗ್ರೆಸ್ ‌ಮಹಿಳಾ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ‌ ಸಹ ನಡೆಯಿತು.

ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಈಗಾಗಲೇ ಕ್ಷೇತ್ರದಲ್ಲಿ ಪ್ರತಿಯೊಂದು ಊರಿನಲ್ಲಿ ಜನ ರಿಯ್ಯಾಕ್ಟ್ ಮಾಡ್ತಿದ್ದಾರೆ. ನಾನು ಸಂಜಯ್ ಪಾಟೀಲ್ ಅಣ್ಣಾಗೆ ರಿಯ್ಯಾಕ್ಟ್ ಮಾಡಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿಗೆ ಕೇಳ ಬಯಸುತ್ತೇನೆ. ಸಂಜಯ ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಹೇಳಿದ್ದಾರೋ ಅಥವಾ ವೈಯಕ್ತಿಕವಾಗಿ ಹೇಳಿದ್ದಾರೋ ಅನ್ನೋದನ್ನ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಹೆಣ್ಣಿನ ಬಗ್ಗೆ ಮಾತನಾಡಿದವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಇತಿಹಾಸದ ಪುಟ ತಿರುವಿ ನೋಡಿ. ‌ನಾನು ಮಾತನಾಡದೇ ಮಾಡಿ ತೋರಿಸುವ ಹೆಣ್ಣು ಮಗಳು. 2023ರ ಚುನಾವಣೆ ಬರುವಿಕೆಗೆ ನಾನು ಕಾಯುತ್ತಿದ್ದೇ‌ನೆ. 2018ಕ್ಕಿಂತಲೂ 2023ರ ಚುನಾವಣೆಗೆ ಕಾತುರದಿಂದ ಕಾಯ್ತಿದ್ದೇನೆ. ನನ್ನ ಕ್ಷೇತ್ರದ ಮತದಾರರು, ನಮ್ಮ ಮುಖಂಡರು ಅವರಿಗೆ ಉತ್ತರ ಕೊಡ್ತಾರೆ. ನನ್ನ ವಿರುದ್ಧ ಮಾಜಿ ಶಾಸಕ ಸಂಜಯ್ ಪಾಟೀಲ್ ಸ್ಪರ್ಧೆ ಬಗ್ಗೆ ಅವರ ಪಕ್ಷ ಡಿಸೈಡ್ ಮಾಡುತ್ತೆ. ಸಂಜಯ್ ಪಾಟೀಲ್ ಅಣ್ಣಾ ಸ್ಪರ್ಧೆ ಮಾಡಿದರೆ ಸಂತೋಷ ಆಗುತ್ತೆ. ಸಂಜಯ್ ಪಾಟೀಲ್‌ ಅವರ ಹೇಳಿಕೆಯ‌‌ನ್ನು ಗಮನಿಸಿದ್ದೇನೆ. ಬ್ಯಾನರ್‌‌ ಅನ್ನು ಮರಾಠಿಗರು ಹಾಕಿದ್ದಾರೆ ಅಂತಾ ಹೇಳಿದ್ದಾರೆ. ಹಾಗಾದರೆ ಯಾರು ಹಾಕಿದ್ದಾರೆ ಅಂತಾ ಸಂಜಯ್ ಪಾಟೀಲ್‌ ಅವರಿ ಗೊತ್ತು ಇರಬೇಕಲ್ವಾ ಎಂದು ಪ್ರಶ್ನೆ ಮಾಡಿದರು.

ನಾನು ರಾಜಕಾರಣ ಮಾಡುವಾಗ ಇನ್‌ಕಮ್‌ ಟ್ಯಾಕ್ಸ್, ಇಡಿಗೆ ಬರೆದು ನನ್ನ ಮೇಲೆ ರೇಡ್ ಮಾಡಿಸಿದ್ರು. ನನ್ನ ಮೇಲೆ ಇನ್‌ಕಮ್ ಟ್ಯಾಕ್ಸ್ ರೇಡ್ ಮಾಡಿಸಿದ್ರು ನಾನು ಎಂಎಲ್‌ಎ ಆದೆ. ಈಗ ನನ್ನ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ. ಮುಂದಿನ ಬಾರಿ ಜನತೆಯ ಆಶೀರ್ವಾದದಿಂದ ಮಂತ್ರಿಯೂ ಆಗ್ತೇ‌ನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದರು.

ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಗೋಮಟೇಶ ವಿದ್ಯಾಪೀಠದ ಮುಂಭಾಗದಲ್ಲಿ ಧರಣಿ ಮಾಡಿದರು. ಮಾಜಿ ಸಂಜಯ ಪಾಟೀಲ್ ವಿರುದ್ಧ ಘೋಷಣೆ ಕೂಗಿ‌ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಿದ್ಯಾರ್ಥಿ ಪೋಷಕಿ ನಿರ್ಮಲಾ ಹಾಗೂ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.‌ ಸಂಜಯ ಪಾಟೀಲ್ ಸ್ಥಳಕ್ಕೆ ಭೇಟಿ‌‌ ನೀಡಿ ಕ್ಷಮಾಪಣೆ ಕೇಳಬೇಕು ಎಂದು ಪಟ್ಟು ಹಿಡಿದರು. ಶಾಲೆಯ ಮುಂದೆ ಧರಣಿ‌ ಮಾಡೊದ್ರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತೆ ಎಂದು ಪೊಲೀಸರು ಹೇಳಿದ ಬಳಿಕ ಧರಣಿ ವಾಪಸ್‌ ಪಡೆಯಲಾಯಿತು.

ಇದನ್ನು ಓದಿ: ರಸ್ತೆ ರಾಜಕೀಯ; ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ‌‌ ಕೊಟ್ಟ ಮಾಜಿ‌‌ ಶಾಸಕ ಸಂಜಯ ಪಾಟೀಲ್!

ಸಂಜಯ ಪಾಟೀಲ್ ಹೇಳಿದ್ದೇನು?

ರಸ್ತೆಗುಂಡಿ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಾಜಿ ಬಿಜೆಪಿ ಶಾಸಕ ಸಂಜಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಿಜೆಪಿಯವರಿಗೆ ನೈಟ್ ಪೊಲಿಟಿಕ್ಸ್ ಮಾಡಿ ಗೊತ್ತಿಲ್ಲ. ಕಾಂಗ್ರೆಸನವರು ನೈಟ್ ಪೊಲಿಟಿಕ್ಸ್ ಮಾಡ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ನೈಟ್ ಪೊಲಿಟಿಕ್ಸ್ ಚೆನ್ನಾಗಿ ಗೊತ್ತು. ಹೀಗಾಗಿ ನೈಟ್ ಪೊಲಿಟಿಕ್ಸ್ ಮಾಡಿ ಗೆದ್ದು ಬಂದಿದ್ದಾರೆ ಎಂದ ಸಂಜಯ ಪಾಟೀಲ್ ಹೇಳಿದ್ದರು.
Published by:HR Ramesh
First published: