Belgaum ಪರಿಷತ್ ಫೈಟ್: ಸೋದರನಿಗೆ ಟಿಕೆಟ್ ಗಿಟ್ಟಿಸಿದ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಗೆಲುವು ಒಂದೇ ಗುರಿ ಅಂತೆ

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ದೆಹಲಿ, ಬೆಂಗಳೂರು ಮಟ್ಟದಲ್ಲಿ ಲಾಬಿ ಮಾಡಿ ಹೆಬ್ಬಾಳ್ಕರ್, ಸಹೋದರ ಚನ್ನರಾಜ್ ಹಟ್ಟಿಹೊಳಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಈಗ ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಎಲ್ಲಾ ಕಡೆಗಳಲ್ಲಿ ಹೆಬ್ಬಾಳ್ಕರ್ ಓಡಾಟ ಆರಂಭ ಮಾಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ,  ಚನ್ನರಾಜ್ ಹಟ್ಟಿಹೊಳಿ

ಲಕ್ಷ್ಮಿ ಹೆಬ್ಬಾಳ್ಕರ್ , ಚನ್ನರಾಜ್ ಹಟ್ಟಿಹೊಳಿ

  • Share this:
ಬೆಳಗಾವಿ: ಜಿಲ್ಲಾ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ನ (Council Election) ಎರಡು ಸ್ಥಾನಗಳಿಗೆ ಡಿಸೆಂಬರ್ 10ರಂದು‌ ಚುನಾವಣೆ ನಡೆಯಲಿದೆ. ಈವರೆಗೆ ಕಾಂಗ್ರೆಸ್(Congress), ಬಿಜೆಪಿ (BJP)ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆದರೆ ಕಾಂಗ್ರೆಸ್ ಚನ್ನರಾಜ್ ಹಟ್ಟಿಹೊಳಿ (channaraj hattiholi ), ಬಿಜೆಪಿಯ ಮಹಾಂತೇಶ ಕವಟಗಿಮಠ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ಮತ‌ ಪ್ರಚಾರ ಆರಂಭವಾಗಿದೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗೆ ಪಕ್ಷೇತರರು ಪ್ರಬಲ ಪೈಪೋಟಿ ನೀಡಲು ಸಹ ಸಿದ್ದತೆ ಮಾಡಿಕೊಂಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ ‌ಜಿಲ್ಲೆಯಲ್ಲಿ ರಾಜಕೀಯ  ಚಟುವಟಿಕೆ ರಂಗೇರಿದೆ.

ಸೋದರನ ಪರ ಲಕ್ಷ್ಮೀ ಹೆಬ್ಬಾಳ್ಕರ್​ ಬ್ಯಾಟಿಂಗ್​

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ದೆಹಲಿ, ಬೆಂಗಳೂರು ಮಟ್ಟದಲ್ಲಿ ಲಾಬಿ ಮಾಡಿ ಹೆಬ್ಬಾಳ್ಕರ್, ಸಹೋದರ ಚನ್ನರಾಜ್ ಹಟ್ಟಿಹೊಳಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಈಗ ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಎಲ್ಲಾ ಕಡೆಗಳಲ್ಲಿ ಹೆಬ್ಬಾಳ್ಕರ್ ಓಡಾಟ ಆರಂಭ ಮಾಡಿದ್ದಾರೆ. ಪರಿಷತ್ ಚುನಾವಣೆ ಬಗ್ಗೆ ಶಾಸಕಿ  ಲಕ್ಷ್ಮೀ ಹೆಬ್ಬಾಳ್ಕರ್ ನ್ಯೂಸ್ 18ದ ಜತೆಗೆ Exclusive ಮಾತುಕತೆ ನಡೆಸಿದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಅನುಯಾಯಿಗಳು ಗ್ರಾಪಂ, ಪಪಂ ನಲ್ಲಿ ಸದಸ್ಯರಾಗಿದ್ದಾರೆ. ಸಹೋದರ ಚನ್ನರಾಜ್ ಹಟ್ಟಿಹೊಳಿ ಯುವಕನಿದ್ದಾನೆ,‌ ಒಳ್ಳೆಯ ಅಭ್ಯರ್ಥಿ ಸಹ ಆಗಿದ್ದಾನೆ. ಪಂಚಾಯಿ ಸಮಸ್ಯೆಯನ್ನು ಬೆಂಗಳೂರು ಮಟ್ಟದಲ್ಲಿ ಧ್ವನಿ ಎತ್ತಲು ಸಮರ್ಥನಿದ್ದಾನೆ. ಪಕ್ಷದ ಟಿಕೆಟ್ ಪಡೆದು ನಾವು ಸ್ಪರ್ಧೆ ಮಾಡಿದ್ದೇವೆ. ನಮಗೆ ಆಶೀರ್ವಾದ ಮಾಡಿ ಎಂದು ಮತದಾರರ ಬಳಿ ಕೇಳಿದ್ದೇನೆ ಎಂದರು.

ಚನ್ನರಾಜ್ ಹಟ್ಟಿಹೊಳಿ ಎಲ್ಲರ ಒಮ್ಮತ ಅಭ್ಯರ್ಥಿ

ಲೋಕಸಭಾ, ಲೋಕಸಭಾ ಉಪಚುವಾವಣೆ ಸಂದರ್ಭದಲ್ಲಿ ಚನ್ನರಾಜ್ ಹೆಸರು ಪ್ರಸ್ತಾಪ ಆಗಿತ್ತು. ಬೇರವರಿಗೆ ಅವಕಾಶ ಸಿಗಲಿ ಆಗ ನಾನೇ ಬೇಡ ಎಂದು ಹೇಳಿದ್ದೆ. ಪರಿಷತ್ ಟಿಕೆಟ್ ಸಿಕ್ಕಿದ್ದು ಸಂತೋಷ ಆಗಿದೆ, ಜತೆಗೆ ಜವಾಬ್ದಾರಿ ಸಹ ಹೆಚ್ಚು ಮಾಡಿದೆ. ಪರಿಷತ್ ಚುನಾವಣೆಯಲ್ಲಿ ಲಖನ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ವಿಚಾರ‌. ಮತ ವಿಭಜನೆ ಯಾರದು ಆಗುತ್ತೆ ಅನ್ನೋದು ಅವರಿಗೆ ಬಿಟ್ಟ ವಿಚಾರ. ಕಾಂಗ್ರೆಸ್ ಪಕ್ಷದ ಮತದಾರರ ಮೇಲೆ ನಾವು ಅವಲಂಬಿಸಿದ್ದೇವೆ. 18 ವಿಧಾನಸಭೆ ಕ್ಷೇತ್ರಗಳ ಪೈಕಿ 12 ಕಾಂಗ್ರೆಸ್ ಮತದಾರರು ಹೆಚ್ಚು ಇದ್ದಾರೆ. ಶಾಸಕ, ಸೋತ ಅಭ್ಯರ್ಥಿಗಳು ಸಹ ನಮ್ಮ ಸಂಪರ್ಕ ದಲ್ಲಿ ಇದ್ದಾರೆ. ನಮ್ಮ ಮತವನ್ನು ನಾವು ಗಟ್ಟಿ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಎರಡು ಸುತ್ತು ಪ್ರಚಾರವನ್ನು ಮಾಡಿದ್ದೇವೆ. ಸಹೋದರ ಚನ್ನರಾಜ್ ಹಟ್ಟಿಹೊಳಿ ಎಲ್ಲರ ಒಮ್ಮತ ಅಭ್ಯರ್ಥಿ‌ ಎಂದು ಹೆಬ್ಬಾಳ್ಕರ್ ಹೇಳಿದರು.

ಡಿಸೆಂಬರ್ 23ರಂದು ಚನ್ನರಾಜ್ ಹಟ್ಟಿಹೊಳಿ ನಾಮಪತ್ರ

ಜಿಲ್ಲೆಯಲ್ಲಿ ನನ್ನ ಅಭಿಮಾನಿಗಳು, ಹಿರಿಯರು ಆಶೀರ್ವಾದ ಮಾಡಿದ ಜನರು ಇದ್ದಾರೆ‌. ನಾನು ತುಂಬ ದೈರ್ಯದಿಂದ ಚುನಾವಣೆ ಹೋಗುತ್ತಿದ್ದೇವೆ‌. ಇವರು ಹೀಗೆ ಮಾಡುತ್ತಾರೆ, ಅವರು ಮತ ಹೋಡಿಯುತ್ತಾರೆ. ಹೀಗೆ ಯಾವುದೇ ಪರಿಕಲ್ಪನೆ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ನಾವು ಗಮನ ಹರಿಸುತ್ತೇವೆ. ಎಂಎಲ್ಸಿ ಚುನಾವಣೆ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆಯಲಿದೆ. ಡಿಸೆಂಬರ್ 23ರಂದು ಚನ್ನರಾಜ್ ಹಟ್ಟಿಹೊಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಹೆಬ್ಬಾಳ್ಕರ್ ಮಾಹಿತಿ‌ ನೀಡಿದರು.

ಇದನ್ನೂ ಓದಿ: Council Electionನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧೆ; ರಂಗೇರಲಿದೆ ಬೆಳಗಾವಿ ರಾಜಕೀಯ

ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ಗೆ ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.
Published by:Kavya V
First published: