Belagavi Mayor: ಬೆಳಗಾವಿ ಮೇಯರ್, ಉಪಮೇಯರ್ ಆಯ್ಕೆಯಲ್ಲಿ ಶಾಸಕ ಅಭಯ ಪಾಟೀಲ್ ನಿರ್ಧಾರವೇ ಅಂತಿಮ!

ಚುನಾವಣೆ ತಂತ್ರಗಾರಿಕೆ, ಅಭ್ಯರ್ಥಿಗಳ ಆಯ್ಕೆ ಸೇರಿ ಎಲ್ಲಾ ಜವಾಬ್ದಾರಿಯನ್ನು ಅಭಯ ಪಾಟೀಲ್ ಗೆ ಪಕ್ಷ ವಹಿಸಿತ್ತು. ಇದರಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಆಯ್ಕೆಯಲ್ಲಿಯೂ ಸಹ ಪಾಟೀಲ್ ನಿರ್ಣಯವೇ ಅಂತಿಮ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟವಾಗಿ ಗೊತ್ತಾಗಲಿದೆ.

ಶಾಸಕ ಅಭಯ ಪಾಟೀಲ್, ಸಿಎಂ ಬಸವರಾಜ ಬೊಮ್ಮಾಯಿ

ಶಾಸಕ ಅಭಯ ಪಾಟೀಲ್, ಸಿಎಂ ಬಸವರಾಜ ಬೊಮ್ಮಾಯಿ

  • Share this:
ಬೆಳಗಾವಿ (ಸೆ. 9); ಬೆಳಗಾವಿ ಮಹಾನಗರ ಪಾಲಿಕೆ (Belagavi Municipal Corporation) ಗೆದ್ದಿರೋ ಹುಮ್ಮಸ್ಸಿನಲ್ಲಿ  ಬಿಜೆಪಿ ಪಕ್ಷ ಇದೆ. ಗೆಲುವಿನ ತಂತ್ರಗಾರಿಕೆ ರೂಪಿಸಿ ಯಶಸ್ವಿಯಾಗಿರುವ ಶಾಸಕ ಅಭಯ ಪಾಟೀಲ್ (MLA Abhay Patil) ಇಂದು ಬೆಂಗಳೂರಿನಲ್ಲಿ ಸಿಎಂ  ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ರು. ಕೆಲ ಹೊತ್ತು ಸಿಎಂ ಜತೆಗೆ ಬೆಳಗಾವಿ ರಾಜಕಾರಣ ಬಗ್ಗೆ ಚರ್ಚೆ ಸಹ ನಡೆಸಿದ್ದಾರೆ. ಸದ್ಯ ಪಾಲಿಕೆಯಲ್ಲಿ 35 ಜನರ ಸದಸ್ಯರೊಂದಿಗೆ ಸ್ಪಷ್ಟ ಬಹುಮತ ಬಿಜೆಪಿ ಪಕ್ಷಕ್ಕೆ ಸಿಕ್ಕಿದ್ದು, ಮುಂದೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯ ಬಗ್ಗೆ ಸಹ ಚರ್ಚೆ ನಡೆಸಿದ್ದಾರೆ. ಬಿಜೆಪಿಯಿಂದ ಗೆದ್ದಿರೋ ಪಾಲಿಕೆ ಸದಸ್ಯರು ಇದೇ ಸೆಪ್ಟೆಂಬರ್ 12ರಂದು ಸಿಎಂ ಭೇಟಿ ಮಾಡಲಿದ್ದಾರೆ. ಈ ಮೂಲಕ ಅಭಯ ಪಾಟೀಲ್ ಸಿಎಂ ಬಸವರಾಜ ಬೊಮ್ಮಾಯಿ ಮುಂದೆ ಶಕ್ತಿ ಪ್ರದರ್ಶನ ಸಹ ನಡೆಲಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿರೋ ಅಭಯ ಪಾಟೀಲ್ ಸಹ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದಾರೆ.

ಬೆಳಗಾವಿ ಮೊದಲ ಸಲ ಚಿನ್ಹೆ ಆಧಾರದ ಮೇಲೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಕಳೆದ ಅನೇಕ ವರ್ಷಗಳಿಂದ ಪಾಲಿಕೆಯಲ್ಲಿ ಅಧಿಕಾರ ನಡೆಸಿದ್ದ ಎಂಇಎಸ್ ಸದ್ಯ ಮಣ್ಣು ಮುಕ್ಕಿದೆ. ಬೆಳಗಾವಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ 25 ವಾರ್ಡ್ ಗಳ ಪೈಕಿ 22ರಲ್ಲಿ ಬಿಜೆಪಿ ಗೆದ್ದಿದೆ. ಬಿಜೆಪಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಶಾಸಕ ಅಭಯ ಪಾಟೀಲ್ ಭೇಟಿಯಾಗವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಭೇಟಿಯಾಗಿ ಪಾಟೀಲ್ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬೆಳಗಾವಿ ಮೇಯರ್, ಉಪಮೇಯರ್ ಆಯ್ಕೆ ಬಗ್ಗೆ ಸಹ ಅಭಯ ಪಾಟೀಲ್ ಆಯ್ಕೆಯೆ ಅಂತಿಮ ಎಂದು ಹೇಳಲಾಗುತ್ತಿದೆ. ಚುನಾವಣೆ ತಂತ್ರಗಾರಿಕೆ, ಅಭ್ಯರ್ಥಿಗಳ ಆಯ್ಕೆ ಸೇರಿ ಎಲ್ಲಾ ಜವಾಬ್ದಾರಿಯನ್ನು ಅಭಯ ಪಾಟೀಲ್ ಗೆ ಪಕ್ಷ ವಹಿಸಿತ್ತು. ಇದರಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಆಯ್ಕೆಯಲ್ಲಿಯೂ ಸಹ ಪಾಟೀಲ್ ನಿರ್ಣಯವೇ ಅಂತಿಮ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟವಾಗಿ ಗೊತ್ತಾಗಲಿದೆ.

ಅಭಯ ಪಾಟೀಲ್ ಸಿಎಂ ಭೇಟಿ ವೇಳೆಯಲ್ಲಿ ಬೆಳಗಾವಿ ಗಣೇಶ ಉತ್ಸವವನ್ನು 11 ದಿನ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು. ಇಂದು ಸರ್ಕಾರ ಸಹ ಇದಕ್ಕೆ ಅಸ್ತು ಎಂದಿದ್ದು, ಗಣೇಶೋತ್ಸವ ಮಂಡಲಗಳ ಸದಸ್ಯರು ಹರ್ಷ ವ್ಯಕ್ತ ಪಡಿಸಿದ್ದಾರೆ.  ಸೋಮವಾರ ಬೆಂಗಳೂರಿಗೆ ತೆರಳಲಿರೋ ಬಿಜೆಪಿ ಪಾಲಿಕೆ ಸದಸ್ಯರು ರಾಜ್ಯ ಬಿಜೆಪಿ ಕಚೇರಿ ಭೇಟಿ ನೀಡಲಿದ್ದಾರೆ. ಜತೆಗೆ ಸಿಎಂ ಅವರನ್ನು ಸಹ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎಂದು ಅಭಯ ಪಾಟೀಲ್ ಹೇಳಿದ್ದಾರೆ.

ಬಿಜೆಪಿಯೊಳಗೆ ಪೈಪೋಟಿ

ಮೇಯರ್, ಉಪ ಮೇಯರ್ (Mayor and Dy Mayor) ಯಾರಾಗಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ. ಸದ್ಯ ಆಯೋಗದ ಮೀಸಲಾತಿ (Reservation) ಪ್ರಕಾರ ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪ ಮೇಯರ್ ‌ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಇದೆ. ಇದೇ ಮೀಸಲಾತಿ ಇರಲಿದೆಯಾ ಅಥವಾ ಬದಲಾವಣೆ ಆಗಲಿದೆಯಾ ಎಂಬ ಗೊಂದಲ ಸಹ ಇದೆ.

ಇದನ್ನು ಓದಿ: Anchor Anushree: ಬೆಂಗಳೂರಿಗೆ ಬಂದ ಅನುಶ್ರೀ; ಡ್ರಗ್ಸ್ ಸೇವನೆ ಆರೋಪದ ಬಗ್ಗೆ ಖ್ಯಾತ ನಿರೂಪಕಿ ಹೇಳಿದ್ದೇನು?

ಚುನಾವಣೆ ಆಯೋಗ ಮೇಯರ್, ಉಪ ಮೇಯರ್ ಚುನಾವಣೆ ಘೋಷಣೆ ಮಾಡಲಿದೆ. ಬಳಿಕ ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ಮೇಯರ್, ಉಪ ಮೇಯರ್ ಆಯ್ಕೆ ನಡೆಯಲಿದೆ. ಸದ್ಯ ಮೇಯರ್ ಸ್ಥಾನ ಸಾಮಾನ್ಯ ಪಂಗಡಕ್ಕೆ ಮೀಸಲು ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ 10 ಕ್ಕೂ ಹೆಚ್ಚು ಜನ ಮೇಯರ್ ಹುದ್ದೆ ಆಕಾಂಕ್ಷಿಗಳು ಲಾಬಿ ಆರಂಭಿಸಿದ್ದಾರೆ.‌ ಮೇಯರ್‌ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವುದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್. ಇವರ ನೇತೃತ್ವದಲ್ಲೇ ಬಿಜೆಪಿಯು ಬೆಳಗಾವಿ ಪಾಲಿಕೆ ಚುನಾವಣೆ ಎದುರಿಸಿದ್ದು. ಮೇಯರ್ ಆಯ್ಕೆಯಲ್ಲಿ ಅಭಯ ಪಾಟೀಲ್ ನಿರ್ಧಾರ ನಿರ್ಣಾಯಕ ಆಗಲಿದೆ.
Published by:HR Ramesh
First published: