MES ಪುಂಡಾಟ, ಬೆಳಗಾವಿ ಚಲೋ: ರಾಯಣ್ಣ ಪ್ರತಿಮೆ ಮುಂದೆ ಶಿವಸೇನೆ ಬಾವುಟಕ್ಕೆ ಬೆಂಕಿ: ಇತ್ತ ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ವಾರ್

ಇನ್ನು ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂದೆ ಶಿವಸೇನೆ ಬಾವುಟಕ್ಕೆ ಬೆಂಕಿ ಹಂಚಿ ಕರವೇ ಉಗ್ರ ಪ್ರತಿಭಟನೆ ನಡೆಸಲಾಗಿದೆ. ಪೊಲೀಸರ ವಿರೋಧದ ನಡುವೆ ಶಿವಸೇನೆ ಬಾವುಟ ಕ್ಕೆ ಬೆಂಕಿ ಹಾಕಲಾಗಿದೆ.

ಪ್ರತಿಭಟನೆ

ಪ್ರತಿಭಟನೆ

  • Share this:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (Snagolli Rayanna Statue) ಪ್ರತಿಮೆ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಸಂಘಟನೆಗಳು ಬೆಳಗಾವಿ ಚಲೋಗೆ (Belgavi Chalo) ಚಾಲನೆ ನೀಡಿದ್ದರು. ಆದ್ರೆ ಬೆಳಗಾವಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿರೋದರಿಂದ ನಗರಕ್ಕೆ ಎಲ್ಲ ಪ್ರತಿಭಟನಾಕಾರರಿಗೆ ಅನುಮತಿ ನೀಡಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಹಿರೇಬಾಗೇವಾಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಅನುಮತಿ ಪಡೆದ ಪ್ರತಿಭಟನಾಕಾರರಿಗೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಇನ್ನು ಚೆಕ್ ಪೋಸ್​ ನಲ್ಲಿ ಸ್ಪೀಕರ್ ಬಸವರಾಜ್ ಹೊರಟ್ಟಿ ಅವರ ಕಾರ್ ತಡೆದ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಎಂಇಎಸ್ ಮತ್ತು ಶಿವಸೇನೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇನ್ನು ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂದೆ ಶಿವಸೇನೆ ಬಾವುಟಕ್ಕೆ ಬೆಂಕಿ ಹಂಚಿ ಕರವೇ ಉಗ್ರ ಪ್ರತಿಭಟನೆ ನಡೆಸಲಾಗಿದೆ. ಪೊಲೀಸರ ವಿರೋಧದ ನಡುವೆ ಶಿವಸೇನೆ ಬಾವುಟ ಕ್ಕೆ ಬೆಂಕಿ ಹಾಕಲಾಗಿದೆ.

ಘಟನಾ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ

ಬೆಳಗಾವಿಯ ಅನಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಬಗ್ನ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವ ಘಟನೆ ಖಂಡನೀಯ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು ರಾಯಣ್ಣ ಒಂದೇ ಜಾತಿಗೆ ಸೀಮಿತವಾದ ನಾಯಕನಲ್ಲ. ಕಿಡಿಗೇಡಿಗಳು ಭಗ್ನಗೊಳಿಸಿದ ಪ್ರತಿಮೆಯನ್ನು ಪೊಲೀಸರು ಸರಿಪಡಿಸಿದ್ದಾರೆ.  ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:  ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲವೆಂದ ಪ್ರೇಮ್ - ಕಾನೂನು ಸುವ್ಯವಸ್ಥೆ ಹಾಳು ಮಾಡೋರಿಗೆ ಸಿಎಂ ಎಚ್ಚರಿಕೆ

ಸರ್ಕಾರದಲ್ಲಿ ಇಂಟೆಲಿಜೆನ್ಸ್ ಸತ್ತು ಹೋಗಿದೆ

ಎಂಇಎಸ್ ವಿರುದ್ಧ ಕನ್ನಡ ಸಂಘಟನೆಗಳ ಪ್ರತಿಭಟನೆ ವಿಚಾರ. ಯಾರಿಗೆ ಅನ್ಯಾಯವಾದರೂ ಪ್ರತಿಭಟಿಸುವ ಹಕ್ಕಿದೆ. ಹಾಗಾಗಿ ಕನ್ನಡ ಸಂಘಟನೆಗಳಿಗೆ ಪ್ರತಿಭಟನೆಗೆ ಅವಕಾಶ ನೀಡಬೇಕು. ಎಂಇಎಸ್ ನವರು ಪುಂಡರು. ಅವರಿಗೆ ಕಾನೂನು ಇಲ್ಲದಂತಾಗಿದೆ.  ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಯುಧಗಳನ್ನು ಹಿಡಿದುಕೊಂಡು ಸುತ್ತಾಡುತ್ತಾರೆ. ಇದರ ಅರ್ಥ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟು ಹೋಗಿದೆ.  ಇವರಿಗೆ ಭಯ ಇಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಈ ಸರ್ಕಾರದಲ್ಲಿ ಇಂಟೆಲಿಜೆನ್ಸ್ ಸತ್ತು ಹೋಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ವಾರ್

ಇತ್ತ ಎಂಇಎಸ್ ಪುಂಡಾಟ ಖಂಡಿಸಬೇಕಾದ ರಾಜಕೀಯ ಪಕ್ಷಗಳು ಎಂದಿನಂತೆ ಕೆಸರೆರಚಾಟದಲ್ಲಿ ತೊಡಗಿಕೊಂಡಿವೆ. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದು ಕಾಂಗ್ರೆಸ್‌ ಕಾರ್ಯಕರ್ತರು. ಕನ್ನಡಿಗರ ವಾಹನ ಪುಡಿಮಾಡಿದ್ದು ಕಾಂಗ್ರೆಸ್‌ ಕಾರ್ಯಕರ್ತರು. ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದು ಕಾಂಗ್ರೆಸ್‌ ಕಾರ್ಯಕರ್ತರು. ಮೂರೂ ಘಟನೆಗಳ ಸೂತ್ರದಾರರು ಈಗ ಘಟನೆಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ  ಎಂದು ಆರೋಪಿಸಿದೆ.

ಇದನ್ನೂ ಓದಿ:  ಬೆಳಗಾವಿಯಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿರುವ ಈ ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರಲ್ಲ: ಹೆಚ್.ಡಿ.ಕುಮಾರಸ್ವಾಮಿ

ಅನಗೊಳಕ್ಕೆ ಸಿದ್ದರಾಮಯ್ಯನವರು ಭೇಟಿ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಸಿದ್ದರಾಮಯ್ಯನವರೇ, ಪ್ರತಿಮೆ ಭಗ್ನ ಮಾಡುವವರೂ ನೀವೇ, ಗೌರವ ಸಲ್ಲಿಸುವವರೂ ನೀವೇ. ಇದೆಲ್ಲ ಹೇಗೆ ಸಾಧ್ಯ? ಮಹಾರಾಷ್ಟ್ರದಲ್ಲಿರುವ ಆಡಳಿತ ಪಕ್ಷ ಕನ್ನಡ ಬಾವುಟ ಸುಡುತ್ತದೆ, ಕನ್ನಡಿಗರ ವಾಹನ ಧ್ವಂಸ ಮಾಡುತ್ತದೆ. ಕರ್ನಾಟಕದ ವಿರೋಧ ಪಕ್ಷ ಶಿವಾಜಿ ಪ್ರತಿಮೆಗೆ ಮಸಿ ಬಳಿಯುತ್ತಿದೆ. ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ಕೆಪಿಸಿಸಿ ಕಚೇರಿಯಿಂದ ಹೊರಟ ಆಜ್ಞೆ ಎಂದು ವ್ಯಂಗ್ಯ ಮಾಡಿದೆ.

ಶಶಿಕಲಾ ಜೊಲ್ಲೆ ಕಟ್ಟಡದ ಮೇಲೆ ಪುಂಡರ ದಾಳಿ

ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಕಟ್ಟಡದ ಮೇಲೆ ಶಿವಸೇನೆ ಕಾರ್ಯಕರ್ತರ ದಾಳಿ ನಡೆಸಿ ಕಾಮಗಾರಿ ನಿಲ್ಲಿಸಿದ್ದಾರೆ. ಕೋಲ್ಹಾಪೂರ ನಗದ ಶಾಹುನಾಕಾ ಬಳಿ ನಿರ್ಮಾಣ ಹಂತದ ಕಟ್ಟಡ ಮೇಲೆ ದಾಳಿ ನಡೆಸಿ ಕ್ಷಮೆ ಕೇಳುವಂತೆ ಪುಂಡರು ತಗಾದೆ ತೆಗೆದಿದ್ದಾರೆ.
Published by:Mahmadrafik K
First published: