Belagavi: ಪಾಲಿಕೆ ಸೋಲಿನ ಬಳಿಕ ಎಂಇಎಸ್ ಪುಂಡಾಟ: ಪುಂಡರ ಚಳಿ ಬಿಡಿಸಿದ ಮಹಿಳಾ ಅಧಿಕಾರಿ!

ಮರಾಠಿ ಬೋರ್ಡ್ ಹಾಕಿಲ್ಲ ಅಂತಾ ಪುಂಡಾಟಿಕೆ ಪ್ರದರ್ಶಿಸಿದ ಎಂಇಎಸ್ ಪುಂಡರ ಚಳಿ ಬಿಡಿಸಿದ ಮಹಿಳಾ ಅಧಿಕಾರಿಯ ದಿಟ್ಟತನಕ್ಕೆ ಬೆಳಗಾವಿ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಪಾಲಿಕೆ

ಬೆಳಗಾವಿ ಪಾಲಿಕೆ

  • Share this:
ಬೆಳಗಾವಿ(ಸೆಪ್ಟೆಂಬರ್, 20) ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರೋ ಎಂಇಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಪದೇಪದೇ ಪುಂಡಾಟಿಕೆ ಪ್ರದರ್ಶಿಸುವ ಎಂಇಎಸ್ ಪುಂಡರು ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪುಂಡಾಟ ತೋರಿದ್ರು. ಮರಾಠಿ ಬೋರ್ಡ್ ಹಾಕಿಲ್ಲ ಅಂತಾ ಪುಂಡಾಟಿಕೆ ಪ್ರದರ್ಶಿಸಿದ ಎಂಇಎಸ್ ಪುಂಡರ ಚಳಿ ಬಿಡಿಸಿದ ಮಹಿಳಾ ಅಧಿಕಾರಿಯ ದಿಟ್ಟತನಕ್ಕೆ ಬೆಳಗಾವಿ ಕನ್ನಡಿಗರು ಫಿದಾ ಆಗಿದ್ದಾರೆ.

ಕಳೆದ ಐದು ದಶಕಗಳಿಂದ ಬೆಳಗಾವಿಯಲ್ಲಿ ಪುಂಡಾಟ ನಡೆಸಿಕೊಂಡು ಬರುತ್ತಿದ್ದ ಎಂಇಎಸ್ ಕಳೆದ ತಿಂಗಳು ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಕ್ಷರಶಃ ಧೂಳಿಪಟವಾಗಿದೆ. ಆದರೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಒಂದಿಲ್ಲ ಒಂದು ಕ್ಯಾತೆ ತೆಗೆಯುತ್ತಲೇ ಇದೆ. ಪ್ರತಿ ವರ್ಷದಂತೆ ಈ ವರ್ಷವು ನಿನ್ನೆ ಕುಂದಾನಗರಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೋವಿಡ್ ಆತಂಕದ ಮಧ್ಯೆಯೂ ಬೆಳಗಾವಿ ನಗರದಲ್ಲಿ ಪ್ರತಿಷ್ಠಾಪಿಸಿದ್ದ 370ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಕಪಿಲೇಶ್ವರ ದೇವಸ್ಥಾನ‌ ಪಕ್ಕದಲ್ಲಿರುವ ಕಪಿಲೇಶ್ವರ ಹೊಂಡದಲ್ಲಿ ಮಾಡಲಾಯಿತು.

ಇದನ್ನು ಓದಿ: ಸಿಇಟಿ ಫಲಿತಾಂಶ ಪ್ರಕಟ: ಮೈಸೂರಿನ ಮೇಘನ್​ ರಾಜ್ಯಕ್ಕೆ ಪ್ರಥಮ

ಈ ವೇಳೆ ಕಪಿಲೇಶ್ವರ ಹೊಂಡದ ಪಕ್ಕದ ವೇದಿಕೆಯ ಮೇಲೆ ಕನ್ನಡ ಭಾಷೆಯಲ್ಲಿರುವ ಬೋರ್ಡ್ ಹಾಕಲಾಗಿತ್ತು. ಇದಕ್ಕೆ ಕ್ಯಾತೆ ತಗೆದ ಎಂಇಎಸ್ ಪುಂಡರು ವೇದಿಕೆ ಮೇಲಿದ್ದ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಆವಾಜ್ ಹಾಕಿದ್ದಾರೆ. ಕನ್ನಡದಲ್ಲಿ ಬ್ಯಾನರ್ ಹಾಕಿದ್ದೀರಿ, ಮರಾಠಿ ಭಾಷೆಯಲ್ಲಿ ಏಕೆ ಹಾಕಿಲ್ಲ ಅಂತಾ ಕ್ಯಾತೆ ತೆಗೆದಿದ್ದಾರೆ. ಅಲ್ಲದೇ ನಿಮ್ಮನ್ನ ನೋಡ್ಕೊತೀನಿ ಅಂತಾ ಅವಾಜ್ ಹಾಕಿದ್ದೇ ತಡಾ... ಇದರಿಂದ ಕೆರಳಿ ಕೆಂಡವಾದ ಬೆಳಗಾವಿ ಮಹಾನಗರ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಎಂಇಎಸ್ ಪುಂಡರನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಎಗರಾಡುತ್ತಿದ್ದ ಎಂಇಎಸ್ ಪುಂಡನಿಗೆ ಕಪಾಳ ಮೋಕ್ಷ ಮಾಡಲು ಮುಂದಾದಾಗ ವೇದಿಕೆಯ ಮೇಲಿದ್ದ ಇತರ ಸಿಬ್ಬಂದಿ ತಡೆದಿದ್ದಾರೆ. ಲಕ್ಷ್ಮಿ ನಿಪ್ಪಾಣಿಕರ್ ಉಗ್ರಾವತಾರಕ್ಕೆ ಬೆದರಿದ ಎಂಇಎಸ್ ಪುಂಡರು ತಕ್ಷಣವೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಇದನ್ನು ಓದಿ: ಇಂಧನದ ಬೆಲೆ ಕಡಿತಗೊಳಿಸಿ ಎಂಬ ನೈತಿಕತೆ ಕಾಂಗ್ರೆಸ್​ಗೆ ಇಲ್ಲ; ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

ಬೆಳಗಾವಿ ಮಹಾನಗರ ಪಾಲಿಕೆ ನೂತನ ಆಯುಕ್ತ ರುದ್ರೇಶ್ ಘಾಳಿ ಮಹಾನಗರ ಪಾಲಿಕೆ ವತಿಯಿಂದ ಹಾಕಲಾಗುವ ಗಣೇಶೋತ್ಸವ ಶುಭಾಶಯ ಬ್ಯಾನರ್‌ನ್ನು ಕನ್ನಡದಲ್ಲಿಯೇ ಹಾಕುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು. ಈ ಹಿಂದೆ ಪಾಲಿಕೆ ವತಿಯಿಂದ ಕೈಗೊಂಡ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಬ್ಯಾನರ್ ಹಾಕಲಾಗುತ್ತಿತ್ತು. ಈ ಸಂಪ್ರದಾಯಕ್ಕೆ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಬ್ರೇಕ್ ಹಾಕಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಪಾಲಿಕೆ ಮಹಿಳಾ ಅಧಿಕಾರಿ ಲಕ್ಷ್ಮಿ ನಿಪ್ಪಾಣಿಕರ್‌ಗೆ ಅವಾಜ್ ಹಾಕಲು ಮುಂದಾದ ನಾಡದ್ರೋಹಿಗಳನ್ನ, ಕಿತ್ತೂರು ರಾಣಿ ಚೆನ್ನಮ್ಮಳಂತೆ ಲಕ್ಷ್ಮಿ ನಿಪ್ಪಾಣಿಕರ ನಾವು ಕನ್ನಡದಲ್ಲೇ ಬ್ಯಾನರ್ ಹಾಕೋದು, ಅದೇನ್ ಮಾಡ್ತಿರಾ ನಾನು ನೋಡ್ತೀನಿ ಎಂದು ಗರಂ ಆಗ್ತಿದ್ದಂತೆ ಎಂಇಎಸ್ ಪುಂಡರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಮಹಾನಗರ ಪಾಲಿಕೆ ಅಭಿವೃದ್ಧಿ ಶಾಖೆಯ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಎಂಇಎಸ್ ಪುಂಡರನ್ನ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗ್ತಿದ್ದಂತೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮೇಡಂ ನೀವು ಇದೇ ರೀತಿ ಮುನ್ನಡೆಯಿರಿ ನಿಮ್ಮೊಂದಿಗೆ ನಾವೀದ್ದೇವೆ ಎಂದು ಜನರು ಬೆಂಬಲ ನೀಡಿದ್ದಾರೆ. ಅಲ್ಲದೆ ಲಕ್ಷ್ಮಿ ನಿಪ್ಪಾಣಿಕರ್‌ರನ್ನು ನಿಮ್ಮನ್ನು ನೋಡ್ಕೋತಿನಿ ಅಂತಾ ಬೆದರಿಕೆಯೊಡ್ಡಿದ ಎಂಇಎಸ್ ಪುಂಡರನ್ನು ಪೊಲೀಸರು ಬಂಧಿಸ ಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.
Published by:Seema R
First published: