ಬೆಳಗಾವಿ : ರಾಜ್ಯದಲ್ಲಿ ಕೊರೊನಾ(Corona) ಸೋಂಕು ದಿನೇ ದಿನೇ ಹೆಚ್ಚುತ್ತಲೆ ಇದೆ. ರಾಜ್ಯ ಸರ್ಕಾರ (State Govt) ಜನರ ಆರೋಗ್ಯದ ದೃಷ್ಟಿಯಿಂದ ಹೊಸ ಹೊಸ ರೂಲ್ಸ್ ಗಳನ್ನ (Covid Rules) ಜಾರಿಗೆ ತರುತ್ತಲೇ ಇದಾವೆ. ಆದ್ರೆ ಆ ರೂಲ್ಸ್ ಗಳು ಜನ ಸಾಮಾನ್ಯವಾಗಿ ಮಾತ್ರನಾ ಅನ್ನೋ ಪ್ರಶ್ನೆ ಈಗ ಮೂಡಿದೆ. ಇಂತಹದೊಂದು ಪ್ರಶ್ನೆಗೆ ಕಾರಣವಾಗಿದ್ದು ಅರಣ್ಯ ಸಚಿವ ಉಮೇಶ್ ಕತ್ತಿ (Umesh Katti) ಅವರ ಮಾತು. ನಿನ್ನೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಲಕ್ಷ್ಮಿ ಸಸ್ಯೋದ್ಯಾನ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು-ಶಾಸಕರು ಯಾರೂ ಸಹ ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಯಾಕೆ ಧರಿಸಿಲ್ಲ ಎಂದು ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ಸಚಿವ ಉಮೇಶ್ ಕತ್ತಿ ಮಾಸ್ಕ್ ಧರಿಸುವುದು ಕಡ್ಡಾಯ ಅಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ . ಯಾವುದೇ ನಿರ್ಬಂಧ ವಿಧಿಸಲ್ಲ. ಸ್ವಂತ ಜವಾಬ್ದಾರಿ ಹೊತ್ತು ಜನ ಮಾಸ್ಕ್ ಹಾಕಿಕೊಳ್ಳಬೇಕು. ಮಾಸ್ಕ್ ಹಾಕೋದು ಬಿಡೋದು ಅದು ಅವರವರ ಆಯ್ಕೆ. ಮಾಸ್ಕ್ ಹಾಕದೆ ಇರೋದು ನನ್ನ ವೈಯಕ್ತಿಕ ವಿಚಾರ. ನಾನು ಮಾಸ್ಕ್ ಹಾಕಲ್ಲ ನನಗೆ ಮಾಸ್ಕ್ ಹಾಕಬೇಕೆಂದು ಅನಿಸಿಲ್ಲ. ಹಾಗಾಗಿ ನಾನು ಧರಿಸಲ್ಲ ಎಂದು ಹೇಳುವ ಮೂಲಕ ಉಡಾಫೆ ಉತ್ತರ ನೀಡಿದ್ದಾರೆ.
ಮತ್ತೆ ಜನಸಾಮಾನ್ಯರಿಗೇಕೆ ಮಾಸ್ಕ್ ದಂಡ..!
ಇನ್ನು ಸಚಿವರ ಈ ಉಡಾಫೆ ಉತ್ತರಕ್ಕೆ ಜನ ಸಾಮಾನ್ಯರು ಗರಂ ಆಗಿದ್ದಾರೆ. ಬೆಂಗಳೂರು ನಗರ ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರ ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸರ ಮಾರ್ಷಲ್ ಗಳನ್ನ ಬಿಟ್ಟು ಮಾಸ್ಕ ಧರಿಸದೆ ಇರೋರನ್ನ ತಡೆದು ದಂಡ ವಸೂಲಿ ಮಾಡುತ್ತಾರೆ. ಸ್ವಲ್ಪ ಮಾಸ್ಕ ಕೆಳಗೆ ಬಂದ್ರು ಸಹ ಅದನ್ನ ದೊಡ್ಡ ಅಪರಾಧ ಎನ್ನುವ ರೀತಿ ಪೊಲೀಸರು ಮಾರ್ಷಲ್ಲರು ದಂಢ ವಿಧಿಸುತ್ತಾರೆ ಹಾಗಾದ್ರೆ ಸಚಿವರು ಜನ ಪ್ರತಿನಿಧಿಗಳ ವಿಚಾರದಲ್ಲಿ ಯಾಕೆ ಕೇಳಲ್ಲಾ ಎಂದು ಪ್ರಶ್ನೆ ಮಾಡಿದ್ದಾರೆ. ಮೋದಿಯವರೆ ಹೇಳಿದ್ದಾರೆ. ಸಚಿವರು ಮಾಸ್ಕ ಧರಿಸುವುದು ಅವರವರ ವೈಯಕ್ತಿಕ ವಿಚಾರ ಎಂದು ಹೇಳುತ್ತಾರೆ. ಈ ವಿಚಾರದಲ್ಲಿ ಸರ್ಕಾರ ಸ್ಪಷ್ಟತೆಯನ್ನ ನೀಡಬೇಕು. ಇಂದಿನಿಂದಲೆ ಸರ್ಕಾರ ದಂಡ ವಸೂಲಿ ಮಾಡುವುದನ್ನ ಕೈ ಬೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Hassan Murder: ಬಾಡೂಟಕ್ಕೆ ಕರೆಯಲಿಲ್ಲ ಎಂದು ಹೊಡೆದಾಟ; ಬಿದ್ದೇ ಬಿಡ್ತು ಯುವಕನ ಹೆಣ!
ವಿವಾದ ಭುಗಿಲೇಳುತ್ತಲೇ ಯೂಟರ್ನ್ ಹೊಡೆದ ಸಚಿವರು
ವಿವಾದ ಭುಗಿಲೇಳುತ್ತಲೇ ಎಚ್ಚೆತ್ತ ಸಚಿವ ಉಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದಾರೆ. ಮಾಸ್ಕ್ ಹಾಕುವ ವಿಚಾರದಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಪಾಲಿಸಬೇಕು ಅನ್ನುವುದು ನನ್ನ ನಿಲುವು. ಅದೇ ನನ್ನ ಹೇಳಿಕೆಯೂ ಆಗಿತ್ತು. ನಾನು ಮಾಸ್ಕ್ ಹಾಕಬೇಡಿ ಎಂದು ಯಾರಿಗೂ ಹೇಳಿಲ್ಲ. ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳೋದು ಬೇಡ. ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ನನಗೆ, ನನ್ನ ಜವಾಬ್ದಾರಿಯ ಸಂಪೂರ್ಣ ಅರಿವಿದೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕೋವಿಡ್ ನಂತಹ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನಮಗೆಲ್ಲರಿಗೂ ನಮ್ಮ ಹೊಣೆಗಾರಿಕೆ ಬಗ್ಗೆ ತಿಳಿದಿದೆ. ಹೀಗಾಗಿ ಕೋವಿಡ್ ಮುಗಿಯುವ ತನಕ ನಾವೆಲ್ಲರೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಸ್ಕ್ ಮರೆತ ಸಚಿವರು
ಇನ್ನು ಈಡಿ ಕಾರ್ಯಕ್ರಮದಲ್ಲಿ ಸಚಿವ ಉಮೇಶ್ ಕತ್ತಿ ಮಾತ್ರವಲ್ಲಾ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಚಿಕ್ಕೋಡಿ ಸಂಸಸ ಅಣ್ಣಾಸಾಬ ಜೋಲ್ಲೆ ಹಾಗೂ ಅಥಣಿ ಶಾಸಕ ಮಹೇಶ ಕುಮಟಳ್ಳಿ ಕೂಡ ಮಾಸ್ಕ ಸಾಮಾಜೀಕ ಅಂತರ ಮರೆತಿದ್ದು ಜನ ಸಾಮಾನ್ಯರ ಕೆಂಗಣ್ಣಿಗೆ ಕಾರಣವಾಯಿತು.
ಇದನ್ನೂ ಓದಿ: Weekend Curfew: ಸರ್ಕಾರದ ನಿರ್ಧಾರದ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ
ಒಟ್ಟಿನಲ್ಲಿ ಸರ್ಕಾರ ರೂಲ್ಸ್ ಗಳನ್ನ ರಚನೆ ಮಾಡಿದಾಗ ಮೊದಲು ಸರ್ಕಾರದ ಅಂಗವಾಗಿರುವ ಸಚಿವರುಗಳು ಹಾಗೂ ಶಾಸಕರೆ ರೂಲ್ಸ್ ಗಳನ್ನ ಫಾಲೋ ಮಾಡಬೇಕು ಆದ್ರೆ ರಾಜ್ಯದಲ್ಲಿ ಮಾತ್ರ ಬಹುತೇಕ ಜನ ಪ್ರತಿನಿಧಿಗಳೆ ಸರ್ಕಾರದ ಮಾರ್ಗಸೂಚಿಗಳನ್ನ ಗಾಳಿಗೆ ತೂರಿ ಜನ ಸಾಮಾನ್ಯರಿಗೆ ಮಾರ್ಗಸೂಚಿಗಳ ಪಾಲನೆ ಮಾಡಿ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂಬು ಪ್ರಶ್ನೆಯಾಗಿದೆ. ಇನ್ನಾದ್ರು ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೊರೊನಾ ಮಾರ್ಗಸೂಚಿಗಳನ್ನ ಪಾಲನೆ ಮಾಡಲಿ ಎಂಬುದು ನಮ್ಮ ಆಶಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ