ರಾಜ್ಯದ ಕೋವಿಡ್ ಚೆಕ್‌ಪೋಸ್ಟ್‌ಗೆ 'ಮಹಾ' ಗ್ರಾಮಸ್ಥರ ಕಿರಿಕ್!

ಗ್ರಾಮಸ್ಥರು ಕೊಲ್ಲಾಪುರ ನಗರಕ್ಕಿಂತ ಬೆಳಗಾವಿ ನಗರ ಹತ್ತಿರ ಆಗುತ್ತೆ ಎನ್ನುವ ಕಾರಣಕ್ಕೆ ಬೆಳಗಾವಿಗೆ ಆಗಮಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಶಿನೋಳಿ ಗ್ರಾಮದಿಂದ ಸುರತೆ ಮಾರ್ಗವಾಗಿ ಬೆಳಗಾವಿ ತಾಲೂಕಿನ ಸೋನೋಲಿ ಹಾಗೂ ಬೆಳಗುಂದಿಗೆ ಕೆಲವರು ಎಂಟ್ರಿ ಕೊಡ್ತಿದ್ದಾರೆ.

ಮಹಾರಾಷ್ಟ್ರ ಗಡಿಯಲ್ಲಿ ಚೆಕ್​ಪೋಸ್ಟ್​ ನಿರ್ಮಿಸಿ. ಪರೀಕ್ಷೆ ನಡೆಸುತ್ತಿರುವುದು.

ಮಹಾರಾಷ್ಟ್ರ ಗಡಿಯಲ್ಲಿ ಚೆಕ್​ಪೋಸ್ಟ್​ ನಿರ್ಮಿಸಿ. ಪರೀಕ್ಷೆ ನಡೆಸುತ್ತಿರುವುದು.

  • Share this:
ಬೆಳಗಾವಿ (ಆ. 15); ಮಹಾರಾಷ್ಟ್ರ, ಕೇರಳದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿರೋದ್ರಿಂದ ರಾಜ್ಯ ಸರ್ಕಾರದ ರಾಜ್ಯದ ಎಂಟು ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಅದರಲ್ಲೂ ಗಡಿಜಿಲ್ಲೆ ಬೆಳಗಾವಿ ಯ 75ಕ್ಕೂ ಹೆಚ್ಚು ಗ್ರಾಮಗಳು ಮಹಾರಾಷ್ಟ್ರ ಗಡಿ ಹಂಚಿಕೊಂಡಿದ್ದು ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗದ 23 ಕಡೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದ್ದಾರೆ. ಇದಕ್ಕೆ ಮಹಾರಾಷ್ಟ್ರದ ಗಡಿಭಾಗದ ಗ್ರಾಮಸ್ಥರು ವಿರೋಧಿಸುತ್ತಿದ್ದಾರೆ.

ಇತ್ತೀಚೆಗೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಬಳಿ ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಗಡಿಭಾಗದ ಗ್ರಾಮಸ್ಥರ ಕರೆತಂದು ಪ್ರತಿಭಟನೆ ನಡೆಸಿದ್ರು. ಈಗ ಬೆಳಗಾವಿಯಿಂದ 12 ಕಿಮೀ ಅಂತರದಲ್ಲಿ ಇರುವ ಮಹಾರಾಷ್ಟ್ರ ಗಡಿ ಬಾಚಿ ಗ್ರಾಮದ ಬಳಿ ಬೆಳಗಾವಿ ಜಿಲ್ಲಾಡಳಿತ ಚೆಕ್‌ಪೋಸ್ಟ್ ನಿರ್ಮಿಸಿದೆ. ಬೆಳಗಾವಿ ತಾಲೂಕಿನ ಬಾಚಿ ಗ್ರಾಮದ ಬಳಿ ನಿರ್ಮಿಸಿರುವ ಚೆಕ್‌ಪೋಸ್ಟ್ ತೆರವಿಗೆ ಆಗ್ರಹಿಸಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ತಾಲೂಕಿನ ಶಿನೋಳಿ, ಸುರತೆ, ತುರ್ಕೇವಾಡಿ ಸೇರಿ ವಿವಿಧ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು‌‌.

ಈ ಮಹಾರಾಷ್ಟ್ರದ ಗಡಿಭಾಗದ ಗ್ರಾಮಸ್ಥರು ವ್ಯಾಪಾರ ವಹಿವಾಟು, ಇನ್ನಿತರ ಕೆಲಸಗಳಿಗೆ ಬೆಳಗಾವಿಯನ್ನೇ ಅವಲಂಬಿಸಿದ್ದಾರೆ‌.‌ ನಿತ್ಯ ಆರ್‌ಟಿಪಿಸಿಆರ್ ವರದಿ ಎಲ್ಲಿಂದ ತರೋದು ಅಂತಾ ಮಹಾರಾಷ್ಟ್ರದ ಗ್ರಾಮಸ್ಥರ ಕಿರಿಕ್ ಶುರು ಮಾಡಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಗಡಿಭಾಗದಲ್ಲಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಕಾರ್ಖಾನೆಗೆ ತೆರಳುವ ಕಾರ್ಮಿಕರಿಗೆ ಪಾಸ್ ವಿತರಿಸುವ ವ್ಯವಸ್ಥೆ ಮಾಡ್ತಿದ್ದೇವೆ. ಜನರು ಸಹಕರಿಸಬೇಕು ಎಂದಿದ್ದಾರೆ.

ಇದನ್ನು ಓದಿ: Independence Day- ಇವತ್ತಿನಿಂದ ನವಕರ್ನಾಟಕ ಆಗಲಿದೆ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಬೊಮ್ಮಾಯಿ

ಮಹಾರಾಷ್ಟ್ರದಲ್ಲಿ ನಿತ್ಯ ಸರಾಸರಿ 7 ಸಾವಿರ ಕೊರೋನಾ ಪ್ರಕರಣಗಳು ಪತ್ತೆಯಾಗ್ತಿವೆ. ಸದ್ಯ ಮಹಾರಾಷ್ಟ್ರದಲ್ಲಿ 60ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ಆ್ಯಕ್ಟೀವ್ ಪ್ರಕರಣಗಳು ಇವೆ. ಅಷ್ಟೇ ಅಲ್ಲದೆ ಪುಣೆಯಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು ಗಡಿಜಿಲ್ಲೆ ಬೆಳಗಾವಿಯಲ್ಲಿ. ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯವಿದೆ. ಇನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ತಾಲೂಕಿನ ಗ್ರಾಮಸ್ಥರು ಕೊಲ್ಲಾಪುರ ನಗರಕ್ಕಿಂತ ಬೆಳಗಾವಿ ನಗರ ಹತ್ತಿರ ಆಗುತ್ತೆ ಎನ್ನುವ ಕಾರಣಕ್ಕೆ ಬೆಳಗಾವಿಗೆ ಆಗಮಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಶಿನೋಳಿ ಗ್ರಾಮದಿಂದ ಸುರತೆ ಮಾರ್ಗವಾಗಿ ಬೆಳಗಾವಿ ತಾಲೂಕಿನ ಸೋನೋಲಿ ಹಾಗೂ ಬೆಳಗುಂದಿಗೆ ಕೆಲವರು ಎಂಟ್ರಿ ಕೊಡ್ತಿದ್ದಾರೆ.

ಇನ್ನು ಸೆಪ್ಟೆಂಬರ್ ಮೂರರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಎಂಇಎಸ್, ಶಿವಸೇನೆ ಪರ ಪ್ರಚಾರ ನಡೆಸಲು ಮಹಾರಾಷ್ಟ್ರದ ನಾಯಕರು, ಕಾರ್ಯಕರ್ತರು ಆಗಮಿಸುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ಮುಂಜಾಗ್ರತೆ ಅವಶ್ಯವಿದೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, 'ಕೋವಿಡ್ ತಡೆಗೆ ಕೆಲವೊಂದು ನಿಯಮಾವಳಿ ಮಾಡಿದ್ದೇವೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರಬೇಕಂದ್ರೆ ಕೋವಿಡ್ ಸರ್ಟಿಫಿಕೇಟ್ ಇರಬೇಕು. ಹೀಗಾಗಿ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಿದ್ದೇವೆ. ಏನೂ ಇಲ್ಲದೆ ನಾವು ಒಳಗಡೆ ಬರ್ತೀವಿ ಅಂದ್ರೆ ಬಿಡಕ್ಕಾಗಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: