ಸೋದರನ ವಾರ್ನಿಂಗ್​ಗೆ ಕೆರಳಿದರೇ ರಮೇಶ್ ಜಾರಕಿಹೊಳಿ? ನೇರವಾಗಿ ಅಖಾಡಕ್ಕಿಳಿದ ಗೋಕಾಕ್ ಶಾಸಕ; ಬ್ರದರ್ಸ್ ಬೆಂಬಲಿಗರ ಫೋನ್ ಸ್ವಿಚ್ ಆಫ್?

ಕತ್ತಲಲ್ಲಿ ಕುಳಿತು ಕಲ್ಲು ಹೊಡೆಯುತ್ತಿದ್ಧಾರೆ ಎಂದು ಸೋದರ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡು ಕಾಂಗ್ರೆಸ್ ವಿರುದ್ಧ ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿದ್ದಾರೆ.

Vijayasarthy SN | news18
Updated:April 21, 2019, 9:26 PM IST
ಸೋದರನ ವಾರ್ನಿಂಗ್​ಗೆ ಕೆರಳಿದರೇ ರಮೇಶ್ ಜಾರಕಿಹೊಳಿ? ನೇರವಾಗಿ ಅಖಾಡಕ್ಕಿಳಿದ ಗೋಕಾಕ್ ಶಾಸಕ; ಬ್ರದರ್ಸ್ ಬೆಂಬಲಿಗರ ಫೋನ್ ಸ್ವಿಚ್ ಆಫ್?
ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ.
  • News18
  • Last Updated: April 21, 2019, 9:26 PM IST
  • Share this:
ಬೆಳಗಾವಿ(ಏ. 21): ಬೆಳಗಾವಿಯಲ್ಲಿ ಜಾರಕಿಹೊಳಿ ಸೋದರರ ಫೈಟ್ ತಾರಕಕ್ಕೇರುತ್ತಿದೆ. ಕಾಂಗ್ರೆಸ್ ತೊರೆಯುವ ಸನ್ನಾಹದಲ್ಲಿರುವ ರಮೇಶ್ ಜಾರಕಿಹೊಳಿಯ ಕೈಕಾಲು ಕಟ್ಟಿಹಾಕಲು ಸತೀಶ್ ಜಾರಕಿಹೊಳಿ ಅವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ರಮೇಶ್​ಗೆ ತೀರಾ ಆಪ್ತರಾಗಿರುವ ಲಖನ್ ಜಾರಕಿಹೊಳಿ ಮೂಲಕ ಮನವೊಲಿಸುವ ಪ್ರಯತ್ನವೂ ನಡೆಯಿತು. ಇದ್ಯಾವುದಕ್ಕೂ ರಮೇಶ್ ಜಾರಕಿಹೊಳಿ ಜಗ್ಗುತ್ತಿಲ್ಲ. ಲಖನ್ ಜೊತೆ ಸೇರಿ ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದರೆ, ರಮೇಶ್ ಜಾರಕಿಹೊಳಿ ಅವರು ರಹಸ್ಯವಾಗಿಯೇ ತಮ್ಮ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರಿಂದ ಹತಾಶರಾಗಿರುವ ಸತೀಶ್ ಜಾರಕಿಹೊಳಿ ಅವರು ತಮ್ಮ ಸೋದರನಿಗೆ ನೇರವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯನವರ ಸೊಕ್ಕಿನಿಂದಲೇ ರಾಜ್ಯದಲ್ಲಿ ಕಾಂಗ್ರೆಸ್​ ಸೋಲು ಕಂಡಿತು; ಈಶ್ವರಪ್ಪ ಟೀಕೆ

ರಮೇಶ್ ಜಾರಕಿಹೊಳಿ ಅವರಿಂದ ಮೈತ್ರಿ ಸರಕಾರಕ್ಕೆ ನಿರಂತರ ಕಂಟಕ ಇದೆ. ಈಗಲೂ ಅವರು ಆಪರೇಷನ್ ಕಮಲಕ್ಕೆ ಯತ್ನಿಸುತ್ತಲೇ ಇದ್ದಾರೆ. ಕತ್ತಲಲ್ಲೇ ಕುಳಿತು ಅವರು ಕಲ್ಲು ಎಸೆಯುತ್ತಿದ್ದಾರೆ. ಬಹಿರಂಗವಾಗಿಯೇ ಅವರು ಬಿಜೆಪಿ ಸೇರ್ಪಡೆಯಾಗಿದ್ದರೆ ಪರಿಸ್ಥಿತಿಯೇ ಬೇರೆ ಎಂದು ಸೋದರನ ವಿರುದ್ಧ ಸತೀಶ್ ಜಾರಕಿಹೊಳಿ ಕೆಂಡಕಾರಿದ್ದಾರೆ.

ಇದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಇನ್ನಿಲ್ಲದಂತೆ ಕೆರಳಿಸಿದೆ. ಈಗ ಬಹಿರಂಗವಾಗಿಯೇ ಅವರು ಸತೀಶ್ ಜಾರಕಿಹೊಳಿ ಅವರ ಯಮಕನಮರಡಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅಲ್ಲಿ ತಮ್ಮ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತಾನು ಕತ್ತಲಲ್ಲಿಲ್ಲ. ನೇರವಾಗಿ ಎದುರುಬದುರಾಗಿದ್ಧಾನೆ ಎಂಬ ಸಂದೇಶವನ್ನು ರಮೇಶ್ ಜಾರಕಿಹೊಳಿ ತಮ್ಮ ಸೋದರನಿಗೆ ರವಾನಿಸಿದ್ದಾರೆ.

ಇದನ್ನೂ ಓದಿ: 3ನೇ ಸುತ್ತಿನ ಚುನಾವಣೆ: ಕರ್ನಾಟಕದ 14 ಸೇರಿ 117 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ: ಏಪ್ರಿಲ್ 23ರಂದು ಮತದಾನ

ಯಮಕನಮರಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ವಿರೋಧಿಯಾಗಿರುವ ರವಿ ಹಂಜಿ ಸೇರಿದಂತೆ ಅನೇಕ ಮುಖಂಡರನ್ನು ರಮೇಶ್ ಭೇಟಿಯಾಗಿದ್ದಾರೆ. ಶೀಘ್ರದಲ್ಲೇ ಈ ಸರಕಾರ ಪತನವಾಗಿ ಬಿಜೆಪಿ ಸರಕಾರ ಬರುತ್ತದೆ. ತಾನೇ ಬೆಳಗಾವಿಯ ಉಸ್ತುವಾರಿ ಸಚಿವನಾಗುತ್ತೇನೆ ಎಂದು ಬಿಜೆಪಿ ಕಾರ್ಯಕರ್ತರಿಗೂ ರಮೇಶ್ ಜಾರಕಿಹೊಳಿ ಹೇಳಿದ್ದಾರೆನ್ನಲಾಗಿದೆ.

ಬೆಂಬಲಿಗರ ಫೋನ್ ಸ್ವಿಚ್ ಆಫ್?ಬೆಳಗಾವಿಯ ಕಾಂಗ್ರೆಸ್ ಅಭ್ಯರ್ಥಿ ವಿರೂಪಾಕ್ಷಿ ಸಾಧುನವರ್ ಅವರನ್ನು ಗೆಲ್ಲಿಸಲು ಸತೀಶ್ ಜಾರಕಿಹೊಳಿ ಪಣತೊಟ್ಟಿದ್ದು, ರಮೇಶ ಜಾರಕಿಹೊಳಿ ಅವರಿಗೆ ಒಳಏಟು ಕೊಡುವ ಎಲ್ಲಾ ಸಾಧ್ಯತೆಗಳಿವೆ. ಸಚಿವ ಸತೀಶ ಜಾರಕಿಹೊಳಿ ತಮ್ಮ ಸಹೋದರ ಲಖನ್ ಜಾರಕಿಹೊಳಿಯನ್ನು ಸೆಳೆದಿದ್ದು, ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಒಟ್ಟಾಗಿ ಅಖಾಡಕ್ಕಿಳಿದಿದ್ದಾರೆ. ಇಲ್ಲಿನ ಕೈ ಕಾರ್ಯಕರ್ತರು ಲಖನ್ ಜತೆಗೆ ಹೋದ್ರೆ ಮುಂದೆ ತನಗೆ ಕಷ್ವವಾಗಲಿದೆ ಎಂಬ ಆತಂಕ ರಮೇಶ ಜಾರಕಿಹೊಳಿಗೆ ಇದೆ.

ಇದನ್ನೂ ಓದಿ: ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

ಇತ್ತ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಅತೀವ ಗೊಂದಲಕ್ಕೆ ಸಿಲುಕಿದ್ದಾರೆ. ರಮೇಶ್, ಸತೀಶ್ ಮತ್ತು ಲಖನ್ ಈ ಮೂರು ಜಾರಕಿಹೊಳಿ ಬ್ರದರ್ಸ್ ಪೈಕಿ ಯಾರೊಬ್ಬರನ್ನೂ ಎದುರು ಹಾಕಿಕೊಳ್ಳುವ ಸ್ಥಿತಿಯಲ್ಲಿ ಕಾರ್ಯಕರ್ತರಿಲ್ಲವೆನ್ನಲಾಗಿದೆ.

ಕಾಂಗ್ರೆಸ್ ಪಕ್ಷದ ಜತೆಗೆ ಹೋಗೋ ಕಾರ್ಯಕರ್ತರಿಗೆ ಅಂಬಿರಾಯ ಪಾಟೀಲ್ ತಡೆಯುವ ಯತ್ನ ಮಾಡುತ್ತಿದ್ದಾರೆ. ಇನ್ನು, ಲಖನ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್​ನ ಸಭೆ, ಪ್ರಚಾರಕ್ಕೆ ಬರುವಂತೆ ಕಾರ್ಯಕರ್ತರಿಗೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಕಂಗಾಲಾಗಿರೋ ಅನೇಕ ಕಾರ್ಯಕರ್ತರು ಸದ್ಯ ಫೋನ್ ಸ್ವಿಚ್ ಆಫ್ ಮಾಡಿ ಗೋಕಾಕ್ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಚುನಾವಣೆ ಮುಗಿಯೋವರೆಗೆ ಯಾರ ಕೈಗೂ ಸಿಗದಂತೆ ಓಡಾಡುವ ಸ್ಥಿತಿ ಕಾರ್ಯಕರ್ತರಿಗೆ ನಿರ್ಮಾಣವಾಗಿದೆ.

ವರದಿ: ಚಂದ್ರಕಾಂತ ಸುಗಂಧಿ,
First published:April 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading