• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಅರಣ್ಯ ಸಚಿವರ ತವರಲ್ಲೇ ಝೂನಲ್ಲಿ ಅನಾರೋಗ್ಯದಿಂದ ಸಿಂಹ ಸಾವು: ಸಾವಿನ ಸುತ್ತ ಅನುಮಾನಗಳ ಹುತ್ತ

ಅರಣ್ಯ ಸಚಿವರ ತವರಲ್ಲೇ ಝೂನಲ್ಲಿ ಅನಾರೋಗ್ಯದಿಂದ ಸಿಂಹ ಸಾವು: ಸಾವಿನ ಸುತ್ತ ಅನುಮಾನಗಳ ಹುತ್ತ

ಸಿಂಹ

ಸಿಂಹ

ಕಳೆದ ಎಂಟು ತಿಂಗಳ ಹಿಂದೆ ಬನ್ನೇರುಘಟ್ಟ ಅಭಯಾರಣ್ಯದಿಂದ ತಂದಿದ್ದ ಸಿಂಹ ನಕುಲ್‌ಗೆ ಕಳೆದ ಮೂರು ತಿಂಗಳಿಂದ ಅನಾರೋಗ್ಯ ಕಾಡಿತ್ತು. ಈ ವೇಳೆ ರಕ್ತ ತಪಾಸಣೆ (Blood Test) ನಡೆಸಿದಾಗ ಅಂತಹದ್ದೇನು ಸಮಸ್ಯೆ ಕಂಡು ಬಂದಿರಲಿಲ್ಲವಂತೆ. ಚಿಕಿತ್ಸೆ ಬಳಿಕ ಆರೋಗ್ಯವಾಗಿದ್ದ ನಕುಲ ಡಿಸೆಂಬರ್ ಒಂದರ ರಾತ್ರಿ ಮೃಗಾಲಯದಲ್ಲಿ ಮೃತಪಟ್ಟಿದೆ.

ಮುಂದೆ ಓದಿ ...
  • Share this:

ಬೆಳಗಾವಿ- ಬೆಳಗಾವಿ (Belagavi) ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ (Kittur Rani Chennamma Mini Zoo) ಕಳೆದ ಎಂಟು ತಿಂಗಳ ಹಿಂದೆ ಮೂರು ಸಿಂಹಗಳನ್ನು ಬನ್ನೇರುಘಟ್ಟದಿಂದ (Banneryghatta) ತರಲಾಗಿತ್ತು. ಮೂರು ಸಿಂಹಗಳ (Lions) ಪೈಕಿ ನಕುಲ ಎಂಬ ಹೆಸರಿನ ಸುಮಾರು 11 ರಿಂದ 12 ವರ್ಷದ ಸಿಂಹ ಅನಾರೋಗ್ಯದಿಂದ ಮೃತಪಟ್ಟಿದೆ. ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಆಕರ್ಷಣ ಕೇಂದ್ರ ಬಿಂದುವಾಗಿದ್ದ ನಕುಲ  ಘರ್ಜನೆ ನಿಲ್ಲಿಸಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಅಷ್ಟೇ ಅಲ್ಲ ಕುಂದಾನಗರಿ ಜನ ಮಮ್ಮಲ ಮರುಗುತ್ತಿದ್ದಾರೆ. ಕಳೆದ ಎಂಟು ತಿಂಗಳ ಹಿಂದೆ ಬನ್ನೇರುಘಟ್ಟ ಅಭಯಾರಣ್ಯದಿಂದ ತಂದಿದ್ದ ಸಿಂಹ ನಕುಲ್‌ಗೆ ಕಳೆದ ಮೂರು ತಿಂಗಳಿಂದ ಅನಾರೋಗ್ಯ ಕಾಡಿತ್ತು. ಈ ವೇಳೆ ರಕ್ತ ತಪಾಸಣೆ (Blood Test) ನಡೆಸಿದಾಗ ಅಂತಹದ್ದೇನು ಸಮಸ್ಯೆ ಕಂಡು ಬಂದಿರಲಿಲ್ಲವಂತೆ. ಚಿಕಿತ್ಸೆ ಬಳಿಕ ಆರೋಗ್ಯವಾಗಿದ್ದ ನಕುಲ ಡಿಸೆಂಬರ್ ಒಂದರ ರಾತ್ರಿ ಮೃಗಾಲಯದಲ್ಲಿ ಮೃತಪಟ್ಟಿದೆ.


ಬಳಿಕ ಡಿಸೆಂಬರ್ 2ರಂದು ಗದಗದಿಂದ ಬಂದ ಪಶುವೈದ್ಯರು ಹಾಗೂ ಸ್ಥಳೀಯ ಪಶುವೈದ್ಯರ ಸಮ್ಮುಖದಲ್ಲಿ ಸಿಂಹದ ಮರಣೋತ್ತರ ಪರೀಕ್ಷೆ ನಡೆಸಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.


ಹರ್ಷಭಾನು ಸ್ಪಷ್ಟನೆ


ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು,‌  'ಸಿಂಹ ನಕುಲ್ ಮರಣ ಹೊಂದಿದ್ದು ನೋವಿನ ಸಂಗತಿ. ಮೂರು ತಿಂಗಳಿಂದ ಚಿಕಿತ್ಸೆ ನೀಡ್ತಿದ್ರು ಆದ್ರೆ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದೆ.


ಇದನ್ನೂ ಓದಿ:  ಇದು ಕುಗ್ರಾಮವಾದರೂ ಪವರ್ ಕಟ್ ಸಮಸ್ಯೆ ಇಲ್ಲ; ಗ್ರಾಮಸ್ಥರಿಂದಲೇ ಕರೆಂಟ್ ಉತ್ಪಾದನೆ


ಸಿಂಹ ನಕುಲ್ ಗೆ ಏನಾಗಿತ್ತು?


ಗದಗದ ಪಶುವೈದ್ಯ ಪ್ರಕಾಶ್ ಜೋತೆನ್ನವರ್ ಕರೆಯಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಿದ್ದೇವೆ. ಬಹು ಅಂಗಾಂಗ ವೈಫಲ್ಯ ಲಿವರ್, ಕಿಡ್ನಿಯಲ್ಲಿ ಸಿಸ್ಟ್ ಅಂದ್ರೆ ಗಡ್ಡೆ ಬೆಳವಣಿಗೆ ಆಗಿ ಆ ಅಂಗಾಂಗಕ್ಕೆ ರಕ್ತ ಸರಬರಾಜು ಆಗಿಲ್ಲ. ವೈರಲ್ ಇನ್ಫೆಕ್ಷನ್‌ನಿಂದ ವಾಂತಿ ಹಾಗೂ ಬೇಧಿ ಶುರುವಾಗಿದ್ದು ಚಿಕಿತ್ಸೆ ನೀಡಿದ ಬಳಿಕವೂ ಅದಕ್ಕೆ ವಾಂತಿಬೇಧಿ ಶುರುವಾಗಿದೆ.


ಸಿಂಹಗಳ ಜೀವಿತಾವಧಿ 16 ರಿಂದ 20 ವರ್ಷ


ಬೆಳಗಾವಿಯ ಕಿರು ಮೃಗಾಲಯದಲ್ಲಿ ಓರ್ವ ಪಶುವೈದ್ಯ ಹಾಗೂ ಇಬ್ಬರು ವೆಟಿರ್ನರಿ ಅಸಿಸ್ಟೆಂಟ್ ಇದ್ದಾರೆ. ಅದಕ್ಕೆ ಸೂಕ್ತ ಚಿಕಿತ್ಸೆಯನ್ನೂ ಸಹ ನೀಡಲಾಗಿತ್ತು. ಬನ್ನೇರುಘಟ್ಟದಲ್ಲಿಯೂ ಸಹ ಇದೇ ರೀತಿ ಹಿಂದೆ ಪ್ರಕರಣ ಆದ ವರದಿಗಳು ಇವೆ. ಸಾಮಾನ್ಯವಾಗಿ ಪ್ರಾಣಿ ಸಂಗ್ರಹಾಲಯದಲ್ಲಿರುವ ಸಿಂಹಗಳ ಜೀವಿತಾವಧಿ 16 ರಿಂದ 20 ವರ್ಷ ಇರುತ್ತೆ ಎಂದ್ರು.


ಪ್ರಾಣಿಗಳಿಗೆ ಆಹಾರ ಪೂರೈಕೆ ಆಗದ ಆರೋಪ 


ಇನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಪ್ರಾಣಿಗಳಿಗೆ ಸಮರ್ಪಕ ಆಹಾರ ಪೂರೈಕೆ ಆಗ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಹರ್ಷಭಾನು, 'ಪ್ರಾಣಿಗಳಿಗೆ ಆಹಾರದ ಕೊರತೆ ಇಲ್ಲ. ಆಹಾರ ಜಾಸ್ತಿ ಕೊಡ್ತಿದ್ದಾರೆ ಅಂತಾ ವೈದ್ಯರೇ ತಿಳಿಸಿದ್ದಾರೆ ಎಂದು ತಿಳಿಸಿದರು‌‌.


ಇದನ್ನೂ ಓದಿ:  ಬೆಂಗಳೂರಲ್ಲಿ ಮನೆ ಕೊಳ್ಬೇಕಾ? News18Kannada ಪ್ರಾಪರ್ಟಿ ಉತ್ಸವಕ್ಕೆ ಬನ್ನಿ


ಚಿಕಿತ್ಸೆ ನೀಡಲು ಮೃಗಾಲಯದ ಪಶುವೈದ್ಯರು ವಿಫಲರಾದ್ರಾ?


ಇನ್ನೂ ಮೂರು ತಿಂಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡರೂ ಸಿಂಹ ನಕುಲ್‌ಗೆ ಸಮರ್ಪಕ ಚಿಕಿತ್ಸೆ ನೀಡಲು ಮೃಗಾಲಯದ ಪಶುವೈದ್ಯರು ವಿಫಲರಾದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು, 'ಮೃತಪಟ್ಟ ನಕುಲ್ ಹುಟ್ಟಿದ ವೇಳೆ ಅದನ್ನ ಆರೈಕೆ ಮಾಡಿದಂತಹ ಪಶುವೈದ್ಯರೇ ಈಗ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೂ ಸಹ ಸಮರ್ಪಕ ಚಿಕಿತ್ಸೆ ನೀಡಿದ್ದರೂ ಸಹ ನಕುಲ್ ಬಳಸಿಕೊಳ್ಳಲಾಗಲಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.

First published: