ಬೆಳಗಾವಿ ಪಾಲಿಕೆ ಫೈಟ್: ಎಂ ಎಂ ಹೊಂದಾಣಿಕೆಯಿಂದ ನಗರದ ಜನರ ಸ್ವಾಭಿಮಾನಕ್ಕೆ ಧಕ್ಕೆ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ!

ಎಂಇಎಸ್ ಪ್ಲಸ್ ಎಂಐಎಂ ಒಟ್ಟುಗೂಡಿದೆ. ಎಂಇಎಸ್ 10 ಸ್ಥಾನಗಳಲ್ಲಿ ಬರತ್ತಿದ್ದವು, ಈಗ ಅವು ಬರಲ್ಲ. ಜನ ಎಚ್ಚೆತ್ತುಕೊಂಡು ಬುದ್ಧಿ ಕಲಿಸಬೇಕು

ಲಕ್ಷ್ಮಣ ಸವದಿ

ಲಕ್ಷ್ಮಣ ಸವದಿ

  • Share this:
ಬೆಳಗಾವಿ(ಆ 29)- ಬೆಳಗಾವಿ ಮಹಾನಗರ ಚುನಾವಣೆಗೆ (belagavi municipal  Election) ಕಾಂಗ್ರೆಸ್, ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಂಡಿವೆ. ಇಂದು ಬಿಜೆಪಿ ಪಕ್ಷದ ವತಿಯಿಂದ ಪ್ರಣಾಳಿಕೆ ಸಹ ಬಿಡುಗಡೆ ಮಾಡಲಾಯಿತು. ಜೊತಗೆ ಅನೇಕ ನಾಯಕರು ಪ್ರಚಾರದ ಕಣಕ್ಕೆ ಧುಮ್ಮಿಕ್ಕಿದ್ದು, ಪ್ರಚಾರದ ಕಣ ರಂಗೇರಿದೆ. ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಎಂಇಎಸ್ ಟಿಕೆಟ್ ನೀಡಿದೆ. ಪ್ರಚಾರದ ಸಂದರ್ಭದಲ್ಲಿ ಮುಖಂಡರೊಬ್ಬರು ಮಾತನಾಡಿ ಬೆಳಗಾವಿಯಲ್ಲಿ  ಎಂ ಎಂ ಫಾರ್ಮುಲಾ ಆರಂಭವಾಗಿದೆ. ಇದರಿಂದ ನಮ್ಮ ನಡುವೆ ಜಗಳ ಹಚ್ಚುವರ ಧ್ವನಿ ಅಡಗಲಿ ಎಂದು ಹೇಳಿದ್ದಾರೆ. ಈ ವಿಚಾರನ್ನು ಬಿಜೆಪಿ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದೆ.‌ ಎಂಇಎಸ್ ಎಂಐಎಂ ಹೊಂದಾಣಿಕೆಯಿಂದ ಬೆಳಗಾವಿ ನಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಪಾಲಿಕೆಯ ವಾರ್ಡ್ ನಂ 6 ರಲ್ಲಿ ಮುಜಮಿಲ್ ಎಂಬ ವ್ಯಕ್ತಿಗೆ ಎಂಇಎಸ್ ಬೆಂಬಲ ನೀಡಿದೆ. ಪ್ರಚಾರ ವೇಳೆಯಲ್ಲಿ ವ್ಯಕ್ತಿಯೊಬ್ಬರು ಆಡಿದ ಮಾತುಗಳು ಈಗ ವೈರಲ್ ಆಗಿದೆ. ಈ ವಿಡಿಯೋ ಸದ್ಯ ನಗರದಲ್ಲಿ ಸಾಕಷ್ಟು ಚರ್ಚೆ ಗ್ರಾಸವಾಗಿದೆ. ಪರ, ವಿರೋಧಿ ಚರ್ಚೆಗಳು ನಡೆಯುತ್ತಿದ್ದು, ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಾಚಾರ ಆರಂಭವಾಗಿದೆ.

ಇದನ್ನು ಓದಿ: ಅಂತರ್ಜಾತಿ ಮದುವೆ ಆಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರ; ಸಚಿವ ಮಾಧುಸ್ವಾಮಿ ಕ್ಷೇತ್ರದಲ್ಲೊಂದು ಅಮಾನವೀಯ ಘಟನೆ

ಬೆಳಗಾವಿ ಧರ್ಮನಾಥ ಭವನದಲ್ಲಿ ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸಮಾರಂಭ ನಡೆಯಿತು. ಈ ವೇಳೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಶಶಿಕಲಾ ಜೊಲ್ಲೆ,‌ ಸಂಸದ ಈರಣ್ಣ ಕಡಾಡಿ, ಚುನಾವಣೆ ಉಸ್ತುವಾರಿ, ಶಾಸಕ ಸತೀಶ್ ರೆಡ್ಡಿ ಸೇರಿ ಅನೇಕರು ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ್, ಎಂಇಎಸ್ ಮತ್ತು ಮುಸ್ಲಿಂ ಹೊಂದಾಣಿಕೆ ವಿಚಾರ. ಅದು ಎಂಇಎಸ್ ಪ್ಲಸ್ ಎಂಐಎಂ ಒಟ್ಟುಗೂಡಿದೆ. ಎಂಇಎಸ್ 10 ಸ್ಥಾನಗಳಲ್ಲಿ ಬರತ್ತಿದ್ದವು, ಈಗ ಅವು ಬರಲ್ಲ. ಜನ ಎಚ್ಚೆತ್ತುಕೊಂಡು ಬುದ್ಧಿ ಕಲಿಸಬೇಕು. ಯಾರು ಚುನಾವಣೆ ನಿಯಮ ಉಲ್ಲಂಘನೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡುತ್ತೇವೆ ಎಂದರು.

ನಂತರ ಮಾಜಿ ಡಿಸಿಎಂ ಲಕ್ಷಣ ಸವದಿ ಮಾತನಾಡಿ,  ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂ ಎಂ ಹೊಂದಾಣಿಕೆ ಮಾಡಿಕೊಂಡಿದೆ. ಎಂ ಎಂ ಅಂದ್ರೆ ಎನು ಅಂತ ಬಹಳ ಕುತೂಹಲ ಆಗಿತ್ತು. ಈ ಬಗ್ಗೆ ನಮ್ಮ ನಾಯಕರಿಂದ ಮಾಹಿತಿ ಪಡೆದಿದ್ದೇನೆ. ಎಂಇಎಸ್ ಮುಸ್ಲಿಂ ಎಂದು ಗೊತ್ತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ವೈರಲ್ ಆಗಿದೆ‌. ಎಂಇಎಸ್- ಎಂಐಎಂ ಹೊಂದಾಣಿಕೆಯಿಂದ ಸ್ವಾಭಿಮಾನಕ್ಕೆ ಧಕ್ಕೆ, ಬೆಳಗಾವಿಗೆ ಇದು ಕಪ್ಪು ಚುಕ್ಕೆ ಆಗಲಿದೆ ಇದನ್ನು ಖಂಡಿಸುತ್ತೇನೆ. ಬೆಳಗಾವಿ ಜನ ಪ್ರಬುದ್ಧರಿದ್ದಾರೆ ಇದಕ್ಕೆ ಅವಕಾಶ ಕೊಡಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಇದೆ. ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿಗೆ ಗೆದ್ರೆ ಅಭಿವೃದ್ಧಿಗೆ ಹೆಚ್ಚು ಒತ್ತು ಸಿಗಲಿದೆ ಎಂದು  ಹೇಳಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: