shraddha shetter : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕ್ರಿಯಾಶೀಲರಾದ ಶ್ರದ್ಧಾ ಶೆಟ್ಟರ್​; ಹೆಬ್ಬಾಳ್ಕರ್​ ವಿರುದ್ಧ ಪೈಪೋಟಿಗೆ ಸಿದ್ದತೆ?

ಬೆಳಗಾವಿ ರಾಜಕೀಯದಲ್ಲಿ ಸದ್ದಿಲ್ಲದೆ ಶ್ರದ್ಧಾ ಶೆಟ್ಟರ್ ಕ್ರಿಯಾಶೀಲರಾಗಿದ್ದಾರೆ. ಅದರಲ್ಲೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದ್ದಾರೆ.

ಶ್ರದ್ಧಾ ಶೆ್ಟ್ಟರ್​​

ಶ್ರದ್ಧಾ ಶೆ್ಟ್ಟರ್​​

  • Share this:
ಬೆಳಗಾವಿ (ಅಕ್ಟೋಬರ್. 14):  ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಕುಟುಂಬ (Belagavi Family Politics) ರಾಜಕೀಯಕ್ಕೆ ಹೆಸರುವಾಸಿಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಜಾರಕಿಹೊಳಿ, ಕತ್ತಿ, ಕೌಜಲಗಿ ಹಾಗೂ ಜೊಲ್ಲೆ ಕುಟುಂಬ ಪಾರುಪತ್ಯ‌ ಸಾಧಿಸಿವೆ. ಈಗ ಈ ಪಟ್ಟಿಗೆ ಅಂಗಡಿ ಹಾಗೂ ಶೆಟ್ಟರ್​ ಕುಟುಂಬ ಸೇರ್ಪಡನೆಯಾಗುವ ಸಾಧ್ಯತೆ ಇದೆ. ಸುರೇಶ್​ ಅಂಗಡಿ (Late mp Suresh Angadi) ಕುಟುಂಬದ ಶ್ರದ್ಧಾ ಶೆಟ್ಟರ್ (shraddha shetter )ಸಹ ಸಕ್ರಿಯ ರಾಜಕೀಯದತ್ತ ಒಲವು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಶ್ರದ್ಧಾ ಶೆಟ್ಟರ್ ಹೆಸರು ಲೋಕಸಭಾ ಉಪಚುವಾವಣೆ ಸಂದರ್ಭದಲ್ಲಿ ಮುಂಚೂಣಿಯಲ್ಲಿತ್ತು ಆದರೇ ಕೊನೆಯ ಘಳಿಗೆಯಲ್ಲಿ ಅನುಕಂಪದ ಮೊರೆ ಹೋಗಿದ್ದ ಬಿಜೆಪಿ ಮಂಗಲಾ ಅಂಗಡಿಗೆ ಟಿಕೆಟ್ ನೀಡಿತ್ತು‌. ಈಗ ಶ್ರದ್ಧಾ ಶೆಟ್ಟರ್ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಲು ಸಿದ್ದತೆ ನಡೆಸಿದ್ದಾರೆ‌. ಶ್ರದ್ಧಾ ಆಯ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಶೆಟ್ಟರ್​ ಸೊಸೆಯ ರಾಜಕೀಯ ಒಲವು

ಸದ್ಯ ಮಂಗಲಾ ಅಂಗಡಿ (MP Mangala Angadi) ಸಂಸದಾರಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ ಲೋಕಸಭೆ ಉಪ ಚುನಾವಣೆಯಿಂದ ಹಿಡಿದು, ಪಾಲಿಕೆ ಚುನಾವಣೆ ವರೆಗೂ ಪಕ್ಷದ ಕಾರ್ಯಕರ್ತೆಯಾಗಿ ಶ್ರದ್ಧಾ ಶೆಟ್ಟರ್ ಪ್ರಚಾರ ನಡೆಸಿದ್ದಾರೆ. ಈಗ 2023 ರ ವಿಧಾನ ಸಭೆ ಚುನಾವಣೆಗೆ ಈಗಿಂದಲೇ ಶ್ರದ್ಧಾ ಶೆಟ್ಟರ್ ರಾಜಕೀಯ ಕಸರತ್ತು ಆರಂಭಿಸಿದ್ದಾರೆ. ಈಗಾಗಲೇ ತಾಯಿ, ಸಂಸದೆ ಮಂಗಲಾ ಅಂಗಡಿ ಜೊತೆಗೆ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ. ತಂದೆಯಂತೆ ಶ್ರದ್ಧಾ ಶೆಟ್ಟರ್ ರಾಜಕೀಯ ವಾಗಿ ಜನರೊಂದಿಗೆ ಬೇರೆಯುವ ಮತ್ತು ಅವರ ಸಂಕಷ್ಟ ಕ್ಕೆ ಸ್ಪಂದಿಸುವ ಕಾರ್ಯವನ್ನ ಸದ್ದಿಲ್ಲದೆ ಶ್ರದ್ಧಾ ಶೆಟ್ಟರ್ ಮಾಡುತ್ತಿದ್ದಾರೆ.

ಇದನ್ನು ಓದಿ: ನಬಾರ್ಡ್​ ಕನ್ಸಲ್ಟೆನ್ಸಿ ಸರ್ವಿಸ್​ನಲ್ಲಿ ನೇಮಕಾತಿ; ಪದವೀಧರರಿಗೆ ಅವಕಾಶ

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಣಕ್ಕೆ

ಬೆಳಗಾವಿ ರಾಜಕೀಯದಲ್ಲಿ ಸದ್ದಿಲ್ಲದೆ ಶ್ರದ್ಧಾ ಶೆಟ್ಟರ್ ಕ್ರಿಯಾಶೀಲರಾಗಿದ್ದಾರೆ. ಅದರಲ್ಲೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದ್ದಾರೆ. 2023 ರ ವಿಧಾನ ಸಭೆ ಚುನಾವಣೆಗೆ ಕ್ಷೇತ್ರದ ಹುಡುಕಾಟ ದಲ್ಲಿ ಶ್ರದ್ಧಾ ಶೆಟ್ಟರ್ ಮಗ್ನವಾಗಿದ್ದಾರೆ. ಸದ್ಯ ಶ್ರದ್ಧಾ ಶೆಟ್ಟರ್ ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಅಥವಾ ರಾಮದುರ್ಗ ಮತಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಶ್ರದ್ಧಾ ಸ್ಪರ್ಧಿಸುತ್ತಾರಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಯಲ್ಲಿ ಈಗ ಪ್ರಬಲ ಅಭ್ಯರ್ಥಿ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಈಗಿಂದಲೇ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಶ್ರದ್ಧಾ ಓಡಾಡುತ್ತಿದ್ದಾರೆ.

ಇದನ್ನು ಓದಿ: ಮಂಡ್ಯ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ; ನರ್ಸ್​ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸದ್ದಿಲ್ಲದೇ ಕೆಲಸ ಶುರು ಮಾಡಿದ ಶ್ರದ್ಧಾ

ಈ ಕುರಿತು ಮಾತನಾಡಿರುವ ಶ್ರದ್ಧಾ, ಚುನಾವಣೆ ಸ್ಪರ್ಧೆ ಬಗ್ಗೆ ಚರ್ಚೆ ಆಗಿಲ್ಲ. ಆದ್ರೆ ತಂದೆಯಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನ ಮಾಡುತ್ತಿರುವೆ. ತಂದೆ ಜೊತೆಗಿದ್ದ ಹಿರಿಯ ನಾಯಕರು ರಾಜಕೀಯವಾಗಿ ನನಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಶ್ರದ್ಧಾ ಶೆಟ್ಟರ್ ಅವರೇ ಹೇಳಿದ್ದಾರೆ. ಅದರಲ್ಲೂ ಶ್ರದ್ಧಾ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸೊಸೆ. ಈಗಾಗಲೇ ಶ್ರದ್ಧಾ ಕೇಂದ್ರ ಮತ್ತು ರಾಜ್ಯದ ನಾಯಕರೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಸದ್ಯ ಏನೇ ಇದ್ದರೂ ಬೆಳಗಾವಿ ಟು ಧಾರವಾಡ ನೇರ ರೈಲು ಮಾರ್ಗ ಯೋಜನೆ ಅನುಷ್ಠಾನ ಕ್ಕೆ ಒತ್ತು ಕೊಡ್ತಿವಿ. ಯಾಕೆಂದರೆ ಅದು ತಂದೆಯವರ ಡ್ರೀಮ್ ಪ್ರೊಜೆಕ್ಟ್ ಆಗಿತ್ತು ಅಂತಾ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ.
Published by:Seema R
First published: