• Home
  • »
  • News
  • »
  • state
  • »
  • Protest: ಸವದಿ ಅಧ್ಯಕ್ಷತೆಯ ಕಾರ್ಖಾನೆಯಲ್ಲಿ ಕಾರ್ಮಿಕರಿಗಿಲ್ಲ ಸುರಕ್ಷತೆ: ಕಾರ್ಖಾನೆ ವಿರುದ್ಧ ಬೀದಿಗೆ ಬಂದ ನೌಕರರು!

Protest: ಸವದಿ ಅಧ್ಯಕ್ಷತೆಯ ಕಾರ್ಖಾನೆಯಲ್ಲಿ ಕಾರ್ಮಿಕರಿಗಿಲ್ಲ ಸುರಕ್ಷತೆ: ಕಾರ್ಖಾನೆ ವಿರುದ್ಧ ಬೀದಿಗೆ ಬಂದ ನೌಕರರು!

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ.

ಅಥಣಿ ತಾಲೂಕಿನ ಕೃಷ್ಣಾ ತೀರದ ಜನರಿಗೆ ಅನುಕೂಲ ಆಗಬೇಕಿದ್ದ ಸಹಕಾರ ಕ್ಷೇತ್ರದ ಕಾರ್ಖಾನೆ ರಾಜಕೀಯ ನಾಯಕರ ಕೈಗೆ ಸಿಕ್ಕು ಅವ್ಯವಹಾರದ ಗೂಡಾಗಿ ಹೋಗಿದೆ. ಅಲ್ಲದೇ ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾದ ಸೌಲಭ್ಯ ನೀಡದೆ, ಸರಿಯಾದ ಸಂಬಳವನ್ನು ನೀಡದೆ ಬಂದ ಹಣ ಎಲ್ಲಿಗೆ ಹೋಯಿತು ಎನ್ನುವ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂಬುದು ಕಾರ್ಮಿಕರ ಆಗ್ರಹವಾಗಿದೆ. 

ಮುಂದೆ ಓದಿ ...
  • Share this:

ಚಿಕ್ಕೋಡಿ: ಅದು ಸಾವಿರಾರು ರೈತರು ಕೂಡಿ ಕಟ್ಟಿರುವ ಸಕ್ಕರೆ ಕಾರ್ಖಾನೆ  (Sugar Factory). ರೈತರು ತಮ್ಮ ಮಕ್ಕಳಿಗೆ ಅನುಕೂಲ ಆಗಲಿ ಎಂದು ತಮ್ಮ ಜಮೀನುಗಳನ್ನ ಬಿಟ್ಟುಕೊಟ್ಟು ತಮ್ಮದೆ ಕಬ್ಬು ನೀಡಿ ಸಹಕಾರ ಕ್ಷೇತ್ರದಲ್ಲಿರುವ ನಮ್ಮ ಕಾರ್ಖಾನೆ ಎಲ್ಲರಿಗೂ ಉಪಯೋಗ ಆಗಲಿ ಎಂದು  ಕನಸು ಕಂಡಿದ್ದಾರೆ. ಆದರೆ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳ ಕಿರಿಕಿರಿಗೆ ಬೇಸತ್ತು ಅದೇ ರೈತರು ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧದ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.


ಹೌದು, ಈ ಘಟನೆ ನಡೆದಿರೋದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ. ಮಾಜಿ ಸಚಿವ ಲಕ್ಷಣ ಸವದಿ ಹಾಗೂ ಸಹೋದರ ಪರಪ್ಪ ಸವದಿ ಅಧ್ಯಕ್ಷರಾಗಿರುವ ಈ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ರಕ್ಷಣೆಯೆ ಇಲ್ಲದಂತಾಗಿದೆ ಎಂಬ ಆರೋಪದೊಂದಿಗೆ ಇಲ್ಲಿನ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಪಾಟೀಲ್ ದರ್ಪದ ಮಾತುಗಳಿಗೆ ಬೇಸತ್ತು ಅವಾಚ್ಯ ಶಬ್ದಗಳಿಂದ ದಿನ ನಿತ್ಯ  ನಿಂದಿಸುವುದಲ್ಲದೇ ಕೊಲೆ ಮಾಡುವ ಧಮಕಿ ಹಾಕಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸಿಬ್ಬಂದಿ ವರ್ಗ ದಿಢೀರನೆ ರಸ್ತೆಗಿಳಿದು ಪ್ರತಿಭಟನೆ ನಡೆಸಿತು.


ಇನ್ನು ಈ ಘಟನೆ ನಡೆಯುತ್ತಿದ್ದಂತೆ ತಬ್ಬಿಬ್ಬಾದ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ನಂತರ ಎಲ್ಲ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸೋಣ. ಈಗ ಪ್ರತಿಭಟನೆ ಕೈ ಬಿಟ್ಟು ಬನ್ನಿ ಎಂದು ಮನವಿ ಮಾಡಿದರೂ ಸವದಿ ಮಾತಿಗೂ ಒಪ್ಪದ ಕಾರ್ಮಿಕರು, ತಮ್ಮ ಆಕ್ರೋಶ ಹೊರ ಹಾಕಿದರು. ಕಳೆದ 20 ವರ್ಷಗಳಿಂದ ರೈತರ ಸಹಕಾರ ಕಾರ್ಖಾನೆ ಎಂಬ ಕಾರಣಕ್ಕಾಗಿ ತಾಳ್ಮೆಯಿಂದ ಸುಮ್ಮನೇ ಇದ್ದೆವು. ಆದರೆ ಇದುವರೆಗೆ ನಮ್ಮನ್ನು ಖಾಯಂ ಮಾಡಿಲ್ಲ. ಅಲ್ಲದೇ ಯಾವುದೇ ಕಾರ್ಮಿಕರ ಕಷ್ಟಗಳ ಕುರಿತು ಚರ್ಚೆ ಮಾಡಲು ಯೂನಿಯನ್‌ ಸಭೆ ನಡೆಸಿಲ್ಲ. ಕೇಳಿದವರಿಗೆ ಕೆಲಸದಿಂದ ತಗೆದು ಹಾಕುವ ಧಮಕಿ ಹಾಕುತ್ತಿದ್ದಾರೆ ಎಂದು ಕಾರ್ಮಿಕರ ಮುಖಂಡರು ಆರೋಪ ಮಾಡಿದರು.


ಇನ್ನು ಕಾರ್ಖಾನೆ  ನಂಬಿ ಬದುಕುತ್ತಿರುವ ನಮಗೆ ಮೂರು ತಿಂಗಳಿಗೊಮ್ಮೆ ಸಂಬಳ ನೀಡುತ್ತಿದ್ದಾರೆ. ನಾವು ಜೀವನ ಸಾಗಿಸುವುದೇ ದುಸ್ತರವಾಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ನಾವು ಸುಮ್ಮನೆ ಇದ್ದೆವು. ನೌಕರರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇವರಿಗೆ ಅವಾಚ್ಯ ಶಬ್ದ ಬಳಸಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.


ರಾಜಕೀಯ ನಾಯಕರ ಒತ್ತಡಕ್ಕೆ ಕಾರ್ಮಿಕರು ಬಲಿ


ಇನ್ನು ಕಾರ್ಖಾನೆಯ ಅವ್ಯವಹಾರಗಳು ಮತ್ತು ಸಂಬಳ ಕುರಿತು ಯಾರು ಪ್ರಶ್ನೆ ಮಾಡುವ ಆಗಿಲ್ಲ. ಪ್ರಶ್ನೆ ಮಾಡಿದರೆ ಸಾಕು ಅಂತಹವರಿಗೆ ಕಿರುಕುಳ ನೀಡುವುದು ಮತ್ತು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಇಬ್ಬರು ಸಿಬ್ಬಂದಿಗಳನ್ನು ನೌಕರಿಯಿಂದ ಹೊರಹಾಕಲಾಗಿತ್ತು ಪ್ರತಿಭಟಿಸುವ ಶಕ್ತಿ ಇಲ್ಲದ ಅಮಾಯಕರು ಕಣ್ಣಿರಲ್ಲಿ ಕೈ ತೊಳೆಯುವಂತೆ ಆಗಿದೆ. ಇದಕ್ಕೆ ಹೆದರಿ ಯಾರು ಪ್ರತಿಭಟಿಸುವ ಹಂತಕ್ಕೆ ಹೋಗುತ್ತಿರಲಿಲ್ಲ. ಇನ್ನು ಇಲ್ಲಿನ ಆಡಳಿತ ಮಂಡಲಿ ಸದಸ್ಯರು ಹಾಗೂ ಇಲ್ಲಿನ ಎಂಡಿ ರಾಜಕೀಯ ನಾಯಕರು ಬೆಂಬಲದಿಂದಾಗಿ ಕಾರ್ಮಿಕರನ್ನು ಕಸದ ರೀತಿಯಲ್ಲಿ ನೋಡುತ್ತಾರೆ ಎಂದು ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನು ಓದಿ: Belagavi Mayor: ಬೆಳಗಾವಿ ಮೇಯರ್, ಉಪಮೇಯರ್ ಆಯ್ಕೆಯಲ್ಲಿ ಶಾಸಕ ಅಭಯ ಪಾಟೀಲ್ ನಿರ್ಧಾರವೇ ಅಂತಿಮ!


ಒಟ್ಟಿನಲ್ಲಿ ಅಥಣಿ ತಾಲೂಕಿನ ಕೃಷ್ಣಾ ತೀರದ ಜನರಿಗೆ ಅನುಕೂಲ ಆಗಬೇಕಿದ್ದ ಸಹಕಾರ ಕ್ಷೇತ್ರದ ಕಾರ್ಖಾನೆ ರಾಜಕೀಯ ನಾಯಕರ ಕೈಗೆ ಸಿಕ್ಕು ಅವ್ಯವಹಾರದ ಗೂಡಾಗಿ ಹೋಗಿದೆ. ಅಲ್ಲದೇ ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾದ ಸೌಲಭ್ಯ ನೀಡದೆ, ಸರಿಯಾದ ಸಂಬಳವನ್ನು ನೀಡದೆ ಬಂದ ಹಣ ಎಲ್ಲಿಗೆ ಹೋಯಿತು ಎನ್ನುವ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂಬುದು ಕಾರ್ಮಿಕರ ಆಗ್ರಹವಾಗಿದೆ.

Published by:HR Ramesh
First published: