ಬೆಳಗಾವಿ ಬೂಡಾದಲ್ಲಿ ಇನ್ನೂ ಇದೆ ಕೆಜೆಪಿ v/s ಬಿಜೆಪಿ ಸಮರ; ಹಾಲಿ ಅಧ್ಯಕ್ಷರನ್ನು ಕೆಳಗೆ ಇಳಿಸಲು ಲಾಭಿ!

ಹೊಸಮನಿಗೆ ಬೂಡಾ ಅಧ್ಯಕ್ಷಗಿರಿ ಸಿಕ್ಕಿದ್ದ ಪಕ್ಷದಲ್ಲಿ ಸಾಕಷ್ಟು ಅಸಮಾಧಾನಕ್ಕೆ‌ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೂಡಾದಲ್ಲಿ ನಡೆದ ಯಾವುದೇ ಸಭೆಗೆ ಸ್ಥಳೀಯ ಬಿಜೆಪಿ ಇಬ್ಬರು ಶಾಸಕರು ಗೈರಾಗಿದ್ದಾರೆ

ಬೆಳಗಾವಿ ಬೂಡಾ

ಬೆಳಗಾವಿ ಬೂಡಾ

  • Share this:
ಬೆಳಗಾವಿ (ಅಕ್ಟೋಬರ್. 11)-  ಬೆಳಗಾವಿ ‌ಜಿಲ್ಲೆಯ ರಾಜಕೀಯ ಪೈಪೋಟಿ, ಪರಸ್ಪರ ಹೋರಾಟಕ್ಕೆ ಹೆಸರಾಗಿದೆ.  ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸ್ಥಾಪನೆ ಮಾಡಿದ ಕೆಜೆಪಿ ಪಕ್ಷದಲ್ಲಿ ‌ವಿಲೀನಗೊಂಡು ವರ್ಷಗಳೇ ಉರುಳಿದೆ. ಆದರೆ ಇನ್ನೂ ಕೆಜೆಪಿ, ಬಿಜೆಪಿ  ನಡುವೆ ಮಾತ್ರ ಇನ್ನೂ ಮುಸುಕಿನ ಗುದ್ದಾಟ ಇದೆ. ಇದಕ್ಕೆ ಸಾಕ್ಷಿ ಎಂಬತೆ ಇದೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಿರಿ ಹುದ್ದೆ. ಹಾಲಿ ಅಧ್ಯಕ್ಷ ಘೂಳಪ್ಪ ಹೊಸಮನಿ‌ ವಿರುದ್ಧ ಬಿಜೆಪಿ ಶಾಸಕರು ಅಸಹಕಾರ ಆರಂಭಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಗುದ್ದಾಟ ನಡೆಯುತ್ತಿದ್ದು,‌ ಇದರಿಂದ ನಗರ ಅಭಿವೃದ್ಧಿಗೆ ಪೆಟ್ಟು ‌ಬಿದ್ದಿದೆ.

ಬಿಎಸ್​ವೈ ಆಪ್ತನಿಗೆ ಬೂಡಾ ಅಧ್ಯಕ್ಷ ಸ್ಥಾನ

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಇಂದು ನಡೆಯಿತು. ಸಭೆಗೆ ಬಿಜೆಪಿ ಇಬ್ಬರು ಶಾಸಕರು ಹಾಗೂ ನಾಲ್ವರು ನಾಮನಿರ್ದೇಶಿತ ‌ಸದಸ್ಯರು ಗೈರಾದರು. ಈ ಮೂಲಕ ಬೂಡಾದಲ್ಲಿನ ರಾಜಕೀಯ ಬಹಿರಂಗವಾಗಿದೆ‌ ಸದ್ಯ ಬಿಜೆಪಿಯ ಘೂಳಪ್ಪ ಹೊಸಮನಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 2 ವರ್ಷಗಳ ಹಿಂದೆ‌ ಸಿಎಂ ಬಿ ಎಸ್‌ ಯಡಿಯೂರಪ್ಪ ಸ್ಥಳೀಯ ಮುಖಂಡರ ಅಭಿಪ್ರಾಯ ಕೇಳದೆ ಹೊಸಮನಿ ನೇಮಕ‌ ಮಾಡಿದ್ದರು. ಇನ್ನೂ ಹೊಸಮನಿ‌ ಸಹ ಬಿ ಎಸ್ ವೈ ಆಪ್ತ ವಲಯದಲ್ಲಿ ‌ಗುರುತಿಸಿಕೊಂಡಿದ್ದಾರೆ‌. ಅವರ ಜೊತೆಯಲ್ಲಿ ಕೆಜೆಪಿಯಿಂದ ಬಿಜೆಪಿ ಬಂದಿದ್ದರು. ಹೊಸಮನಿಗೆ ಬೂಡಾ ಅಧ್ಯಕ್ಷಗಿರಿ ಸಿಕ್ಕಿದ್ದ ಪಕ್ಷದಲ್ಲಿ ಸಾಕಷ್ಟು ಅಸಮಾಧಾನಕ್ಕೆ‌ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೂಡಾದಲ್ಲಿ ನಡೆದ ಯಾವುದೇ ಸಭೆಗೆ ಸ್ಥಳೀಯ ಬಿಜೆಪಿ ಇಬ್ಬರು ಶಾಸಕರು ಗೈರಾಗಿದ್ದಾರೆ.

ಇದನ್ನು ಓದಿ: ಭಾರೀ ಮಳೆಗೆ ಹೈರಾಣಾದ ಸಿಲಿಕಾನ್​ ಸಿಟಿ ಜನರು; ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್​ನಲ್ಲಿ​ ನಿಂತ ನೀರು

ಬುಡಾ ಅಧ್ಯಕ್ಷರ ಬದಲಾವಣೆಗೆ ಸಿಎಂ ಮೇಲೂ ಒತ್ತಡ

ಬೆಳಗಾವಿ ಬಿಜೆಪಿ ನಾಯಕರ ಒಳ ಜಗಳ ನಗರದ ಅಭಿವೃದ್ಧಿಗೆ ಪೆಟ್ಟು ಬಿದ್ದಿದೆ‌. ಅಧ್ಯಕ್ಷರಿಗೆ ಬಿಜೆಪಿ ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ ಅಸಹಕಾರ ತೊರುತ್ತಿರೋದು ಬಹಿರಂಗವಾಗಿದೆ. ಕಳೆದ ಎರಡು ವರ್ಷಗಳಿಂದ ಬೂಡಾದಲ್ಲಿ ಆಗಿಲ್ಲ ಯಾವುದೇ ಕೆಲಸ. ಹೊಸಮನಿ ಬದಲಾವಣೆಗೆ ಹಲವು ಸಲ ಇಬ್ಬರು ಶಾಸಕರಿಂದ ಪ್ರಯತ್ನ ನಡೆದಿದೆ. ಯಾವುದೇ ಫಲ ನೀಡದ ಹಿನ್ನೆಲೆ ಸಭೆಗಳಿಂದ ಶಾಸಕರು ದೂರು ಉಳಿದಿದ್ದಾರೆ. ಸಿಎಂ ಬೊಮ್ಮಾಯಿ‌ ಮೇಲೆ ಬೂಡಾ ಅಧ್ಯಕ್ಷರ ಬದಲಾವಣೆಗೆ ಒತ್ತಡ ಹೆಚ್ಚಾಗಿದೆ.

ಇದನ್ನು ಓದಿ: : ಬ್ಲೂ ವೇಲ್ ಬಳಿಕ ಮೈನ್​ಕ್ರಾಫ್ಟ್​ ಗೇಮ್​ಗೆ ಒಳಗಾದ್ರಾ ಮಕ್ಕಳು; ಸೋಲದೇವನಹಳ್ಳಿ ಮಕ್ಕಳ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು?​

ಸದಸ್ಯರ ಅಸಹಕಾರ ತಂತ್ರ

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಒಟ್ಟು 8 ಜನ ಸದಸ್ಯರು ಇದ್ದಾರೆ. ನಾಲ್ವರು ಶಾಸಕರು ಹಾಗೂ ನಾಲ್ವರು ಸರ್ಕಾರದ ನಾಮನಿರ್ದೇಶಿತ ಸದಸ್ಯರು. ಹೊಸಮನಿ ಅಧ್ಯಕ್ಷರಾದ ಬಳಿ ಸಭೆಗೆ ಶಾಸಕರು, ನಾಮ ನಿರ್ದೇಶಿತ ಸದಸ್ಯರು ಗೈರು ಹಾಜರಾಗಿದ್ದಾರೆ. ಸಭೆಯಲ್ಲಿ ಕೇವಲ ಕಾಂಗ್ರೆಸ್ ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿ ಆಗಿದ್ದರು. ಸಭೆಯಿಂದ ದೂರ ಉಳಿದ ಎಲ್ಲಾ ಅಧಿಕಾರಿಗಳು, ಸದಸ್ಯರು, ಕೋರಂ ಕೊರತೆಯಿಂದ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲು ಅಸಾಧ್ಯ ಹಿನ್ನೆಲೆಯಲ್ಲಿ ಸಭೆ ಮುಂಡೂಡಲಾಗಿದೆ.

ರಿಯಲ್ ಎಸ್ಟೇಟ್ ಮಾಫಿಯಾ ಅಡ್ಡಗಾಲು
ಬೆಳಗಾವಿ ‌ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರೋ ನಗರ  ಕಳೆದ 20 ವರ್ಷಗಳಿಂದ ಯಾವುದೇ ಹೊಸ ಲೇಔಟ್ ಇಲ್ಲ. ಬೂಡಾದಿಂದ ಈವರೆಗೆ 62 ಲೇಔಟ್ ನಿರ್ಮಾಣ ಮಾಡಲಾಗಿದೆ. ಕೇವಲ 19 ಯೋಜನೆಗಳು ಮಾತ್ರ ಈ ವರೆಗೆ ಪೂರ್ವ ಆಗಿವೆ. ಇನ್ನೂಳಿದ ಯೋಜನೆಯ ಜಮೀನು ಡಿನೋಟಿಫಿಕೇಷನ್ ಆಗಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ನಗರದಲ್ಲಿ ನೂರಾರು ಖಾಸಗಿ ಬಡಾವಣೆಗಳ ನಿರ್ಮಾಣ ಆಗಿವೆ. ಬೂಡಾ ಬಡಾವಣೆ ನಿರ್ಮಾಣಕ್ಕೆ ರಿಯಲ್ ಎಸ್ಟೇಟ್ ಮಾಫಿಯಾ ಅಡ್ಡಗಾಲು ಹಾಕುತ್ತಿದೆ
Published by:Seema R
First published: