• Home
 • »
 • News
 • »
 • state
 • »
 • Inspirational Story: ರಕ್ತದಾನ ಜಾಗೃತಿಗಾಗಿ ಸಾವಿರಾರು ಕಿ.ಮೀ ಪಾದಯಾತ್ರೆ! ಕಿರಣ್ ವರ್ಮಾ ಎಂಬ ಛಲದಂಕಮಲ್ಲನ ಕಥೆ ಓದಿ!

Inspirational Story: ರಕ್ತದಾನ ಜಾಗೃತಿಗಾಗಿ ಸಾವಿರಾರು ಕಿ.ಮೀ ಪಾದಯಾತ್ರೆ! ಕಿರಣ್ ವರ್ಮಾ ಎಂಬ ಛಲದಂಕಮಲ್ಲನ ಕಥೆ ಓದಿ!

ಕಿರಣ್ ವರ್ಮಾ

ಕಿರಣ್ ವರ್ಮಾ

Kiran Verma Blood Campaign: ಏನೇ ಆಗಲಿ, ಎಂದಿಗೂ ಪ್ರಯತ್ನ ಬಿಡಬಾರದು, ಏಕೆಂದರೆ ಚಿಕ್ಕ ಚಿಕ್ಕ ಪ್ರಯತ್ನಗಳು ಮ್ಯಾಜಿಕ್​ನ್ನೇ ಮಾಡಬಲ್ಲವು. ಇದೇ ರೀತಿ ಇಲ್ಲೋರ್ವ ಉತ್ಸಾಹಿ ಸಮಾಜದಲ್ಲಿ ರಕ್ತದಾನ ಜಾಗೃತಿ ಮೂಡಿಸಲು ಕೈಂಕರ್ಯ ತೊಟ್ಟಿದ್ದಾರೆ. ಅದಕ್ಕಾಗಿ ಉತ್ತಮ ಸಂಬಳವನ್ನೂ ಬಿಟ್ಟು ಪಾದಯಾತ್ರೆ ಮಾಡುತ್ತಾ ಬೆಳಗಾವಿ ತಲುಪಿದ್ದಾರೆ. ಬನ್ನಿ, ಅವರನ್ನೇ ಮಾತಾಡಿಸಿ ಬರೋಣ..

ಮುಂದೆ ಓದಿ ...
 • Share this:

  ಬೆಳಗಾವಿ: ರಕ್ತದಾನ (Blood Donation) ಮಾಡುವುದನ್ನು ಸಹಜವಾಗಿ ನಾವೆಲ್ಲರೂ ನೋಡಿರುತ್ತೇವೆ.  ರಕ್ತದಾನದ ಜಾಗೃತಿ (Awareness) ಮೂಡಿಸುವುದನ್ನು ಕೇಳಿರುತ್ತೇವೆ. ಆದರೆ ರಕ್ತದಾನ ಜಾಗೃತಿ ಮೂಡಿಸಲು ಸಾವಿರಾರು ಕಿಲೋಮೀಟರ್ ಪಾದಯಾತ್ರೆ (Hiking) ಮಾಡುವುದನ್ನು ನೋಡೋಕೆ ಸಾಧ್ಯವಿದೆಯೇ!?  ಈ ಸ್ಟೋರಿ ಅಂತಹ ವಿಸ್ಮಯದ, ಅಪರೂಪದ ವ್ಯಕ್ತಿಯೊಬ್ಬರ ನಿಜವಾದ ಕಥೆ. ರಕ್ತದಾನ ಜಾಗೃತಿಗಾಗಿ ಕಳೆದ ನಾಲ್ಕು ತಿಂಗಳಿಂದ ಪಾದಯಾತ್ರೆ ಮಾಡುತ್ತಿದ್ದಾರೆ ಇವರು.  ರಕ್ತದಾನ ಜಾಗೃತಿಗಾಗಿ ದೆಹಲಿ ಮೂಲದ 37 ವರ್ಷದ ಕಿರಣ್ ವರ್ಮಾ (Delhi Kiran Verma) ಕಳೆದ ನಾಲ್ಕು ತಿಂಗಳಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಕೇರಳ ರಾಜಧಾನಿ ತಿರುವನಂತಪುರದಿಂದ (Thiruvananthapuram) ಶುರುಮಾಡಿ ದೇಶದ ವಿವಿಧ ರಾಜ್ಯಗಳಲ್ಲಿ ಸುತ್ತಾಡಿ ದೆಹಲಿ ತಲುಪುವ ಗುರಿ ಹೊಂದಿರುವ ಕಿರಣ್ ವರ್ಮಾ ಅವರ ಹೆಜ್ಜೆ ಗುರುತುಗಳು ಇತ್ತೀಚಿಗೆ ಬೆಳಗಾವಿಯಲ್ಲಿ ಅಚ್ಚಾಗಿವೆ!


  ರಕ್ತದಾನ ಜಾಗೃತಿಗಾಗಿ ಸಾವಿರಾರು ಕಿಮೀ ಪಾದಯಾತ್ರೆ
  2021ರ ಡಿಸೆಂಬರ್ 28 ರಂದು ತಿರುವನಂತಪುರಂನಿಂದ ಪಾದಯಾತ್ರೆ ಪ್ರಾರಂಭಿಸಿದ್ದ ಕಿರಣ್ ವರ್ಮಾ ಅವರು 3,300 ಕಿಲೋಮೀಟರ್ ಸಂಚರಿಸಿ ಬೆಳಗಾವಿ ತಲುಪಿದ್ದಾರೆ. 2024ರ ಜೂನ್ 14ರ ವಿಶ್ವ ರಕ್ತದಾನ ದಿನದಂದು ದೆಹಲಿ ತಲುಪುವ ಗುರಿ ಹೊಂದಿರುವ ಕಿರಣ್ ವರ್ಮಾ ನಿತ್ಯ 30 ರಿಂದ 40 ಕಿಲೋಮೀಟರ್ ಪಾದಯಾತ್ರೆ ಮಾಡುತ್ತಾರಂತೆ.


  ಈ ಮಹತ್ವದ ನಿರ್ಧಾರಕ್ಕೆ ಏನು ಕಾರಣ?
  ಈವರೆಗೂ 3,330 ಕಿಮೀ ನಡಿಗೆ ಪೂರ್ಣಗೊಳಿಸಿರುವ ಕಿರಣ್ ವರ್ಮಾ ಕೇರಳ, ಪಾಂಡಿಚೇರಿ, ಗೋವಾ, ತಮಿಳುನಾಡು, ಕರ್ನಾಟಕದ ವಿವಿಧ ನಗರಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ. ಈಗಾಗಲೇ ಭೇಟಿಯಾದ ಕಡೆಗಳಲ್ಲಿ ಕಿರಣ್ ವರ್ಮಾ ನಡಿಗೆಯಿಂದ ಸ್ಪೂರ್ತಿಗೊಂಡು ವಿವಿಧೆಡೆ 26 ರಕ್ತದಾನ ಶಿಬಿರ ಆಯೋಜನೆ ಮಾಡಿ 2037 ಯುನಿಟ್ ರಕ್ತ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.


  ಕುಟುಂಬದ ಜವಾಬ್ದಾರಿ ಹೊತ್ತ ಪತ್ನಿ!
  ರಕ್ತದ ಕೊರತೆ ನೀಗಿಸಲು ಪ್ರೇರಣೆ ತುಂಬಲು ಏಕಾಂಗಿಯಾಗಿ ಪಾದಯಾತ್ರೆ ಮಾಡುತ್ತಿದ್ದು ನನ್ನ ಈ ಪಾದಯಾತ್ರೆಗೆ ಕುಟುಂಬಸ್ಥರು, ಸ್ನೇಹಿತರ ಪ್ರೋತ್ಸಾಹ ಇದೆ. ನನ್ನ ಪತ್ನಿ ಕೆಮಿಕಲ್ ಇಂಜಿನಿಯರ್ ಇದ್ದು ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ.


  ಇದನ್ನು ಓದಿ: Blood Donation : ರಕ್ತದಾನ ಮಾಡಿದ್ರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ ನೋಡಿ


  ಸರ್ಕಾರದಿಂದ ನೆರವನ್ನೇ ಪಡೆದಿಲ್ಲ!
  ನಿತ್ಯದ ಖರ್ಚು ವೆಚ್ಚಕ್ಕೆ ಸ್ನೇಹಿತರು ಕುಟುಂಬಸ್ಥರು ಧನಸಹಾಯ ಮಾಡುತ್ತಿದ್ದಾರೆ. ಯಾವುದೇ ಸರ್ಕಾರದಿಂದ ನಾನು ನೆರವು ಪಡೆದಿಲ್ಲ. ಕಳೆದ ಬಾರಿ ಕೋವಿಡ್ ಸಂಕಷ್ಟದಲ್ಲಿದ್ದಾಗ ಪ್ಲಾಸ್ಮಾ ಕೊರತೆ ಎದುರಾಗಿದ್ದು ಎಲ್ಲರಿಗೂ ಗೊತ್ತು. ದೇಶದಲ್ಲಿ 5 ಮಿಲಿಯನ್ ಯುವಕರು ರಕ್ತದಾನ ಮಾಡಿದ್ದಾರೆ ಎಂದು ಕಿರಣ್ ವರ್ಮಾ ತಮ್ಮ ಸಾಹಸಯಾತ್ರೆಯ ಇಂಚಿಂಚು ಮಾಹಿತಿಯನ್ನು ಬಿಚ್ಚಟ್ಟಿದ್ದಾರೆ.


  ವಸತಿಗೆ ಏನು ವ್ಯವಸ್ಥೆ?
  ಪಾದಯಾತ್ರೆ ವೇಳ ಆಯಾ ನಗರದ ಹೋಟೆಲ್‍ಗಳಲ್ಲಿ ಆಹಾರ ಸೇವಿಸಿ ಲಾಡ್ಜ್​ಗಳಲ್ಲಿ ವಾಸ್ತವ್ಯ ಹೂಡುತ್ತೇನೆ. ಕೆಲವೆಡೆ ತಮ್ಮ ಸ್ನೇಹಿತರು ಹಾಗೂ ಪಾದಯಾತ್ರೆ ವೇಳೆ ಪರಿಚಯವಾದವರು ಆಶ್ರಯ ನೀಡ್ತಾರೆ. ಬಸ್ ನಿಲ್ದಾಣಗಳಲ್ಲೂ ರಾತ್ರಿ ಕಳೆದಿದ್ದೇನೆ ಎನ್ನುತ್ತಾರೆ ಅವರು.


  ಸಂಕಷ್ಟಗಳಿಗೇನೂ ಕಡಿಮೆಯಿಲ್ಲ!
  ಕೆಲವೆಡೆ ನಾನು ಏಕಾಂಗಿಯಾಗಿ ಪಾದಯಾತ್ರೆ ಹೊರಟಾಗ ಕೆಲ ಪುಂಡರು ಹಲ್ಲೆ ಮಾಡಿ ಮೊಬೈಲ್ ವಾಚ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ ಎಂದು ತಮ್ಮ ಪಾದಯಾತ್ರೆ ಅನುಭವ ಮಾಧ್ಯಮಗಳ ಜೊತೆ ಕಿರಣ್ ವರ್ಮಾ ಹಂಚಿಕೊಂಡಿದ್ದಾರೆ.


  ಜೀವ ಉಳಿಸಿದ ಸಾರ್ಥಕತೆ
  ಇನ್ನು ಇಂತಹ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಖುಷಿ ಇದೆ. ರಕ್ತದಾನ ಮಾಡುವುದರಿಂದ ಆರೋಗ್ಯವಂತರಾಗಿಯೂ ಇರಬಹುದು. ಒಂದು ಜೀವ ಉಳಿಸಿದ ಸಾರ್ಥಕತೆಯೂ ಇರುತ್ತದೆ. ಹೀಗಾಗಿ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಅಂತಾ ಯುವಕರಲ್ಲಿ ಕಿರಣ್ ವರ್ಮಾ ಮನವಿ ಮಾಡಿದ್ದಾರೆ.


  ಇದನ್ನು ಓದಿ: Monkey Temple: ಆಕ್ಸಿಡೆಂಟ್ ಆಗಿ ಸತ್ತ ಕೋತಿಗೆ ಇಲ್ಲೊಂದು ಸುಂದರ ಗುಡಿ, ಜೀವಪ್ರೀತಿಗೆ ಸಾಟಿಯೆಲ್ಲಿ?


  ಒಟ್ಟಿನಲ್ಲಿ ಯುವ ಜನತೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಒಂದು ಜೀವ ಉಳಿಸುವ ಕೆಲಸ ಮಾಡಬೇಕಾಗಿದೆ.


  (ವರದಿ: ಪ್ರಶಾಂತ್, ಬೆಳಗಾವಿ)

  Published by:Suraj Risaldar
  First published: