• Home
  • »
  • News
  • »
  • state
  • »
  • Murder: ಮನೆಗೇ ಹೊಕ್ಕಿ ಯುವಕನನ್ನು ಹೊತ್ತೊಯ್ದರು, ಕೊಲೆ ಮಾಡಿ ಮನೆ ಬಳಿಯೇ ಎಸೆದರು!

Murder: ಮನೆಗೇ ಹೊಕ್ಕಿ ಯುವಕನನ್ನು ಹೊತ್ತೊಯ್ದರು, ಕೊಲೆ ಮಾಡಿ ಮನೆ ಬಳಿಯೇ ಎಸೆದರು!

ಕೊಲೆಯಾದ ಯುವಕ

ಕೊಲೆಯಾದ ಯುವಕ

ಕಂಪನಿಯ ಕೆಲಸ ಮುಗಿಸಿ ರಜೆ ಮೇಲೆ ಬಂದಿದ್ದ ಯುವಕ, ವಾಪಸ್ ಗುಜರಾತ್‌ಗೆ ತೆರಳಲು ಟಿಕೆಟ್ ಕೂಡ ಬುಕ್ ಮಾಡಿದ್ದ. ಅಂದುಕೊಂಡಂತೆ ಆಗಿದ್ರೆ ಇವತ್ತೋ ಅಥವಾ ನಾಳೆಯೋ ಗುಜರಾತ್‌ಗೆ ವಾಪಸ್ ಹೊರಡಬೇಕಿತ್ತು. ಆದರೆ ಅಷ್ಟರಲ್ಲೇ ಬಾರದ ಲೋಕಕ್ಕೆ ಹೊರಟು ಹೋಗಿದ್ದಾನೆ.

  • Share this:

ಬೆಳಗಾವಿ: ಕುಂದಾನಗರಿ ಬೆಳಗಾವಿ ಮತ್ತೆ ಬೆಚ್ಚಿ ಬಿದ್ದಿದೆ. ಬೆಳಗಾವಿ (Belagavi) ತಾಲೂಕಿನ ರಣಕುಂಡೆ (Ranakunde) ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ (Murder) ಮಾಡಲಾಗಿದೆ. ನೋಡಲು ಚಿಕ್ಕ ಗ್ರಾಮವಾಗಿದ್ದರೂ  ಇಲ್ಲಿ ಪುಡಿ ರೌಡಿಗಳ (Rowdy) ಅಟ್ಟಹಾಸ ಜೋರಾಗಿದ್ದು ರಾತ್ರೋರಾತ್ರಿ  ಮನೆಗೆ ನುಗ್ಗಿ  ಹಲ್ಲೆ ಮಾಡಿ ಯುವಕನನ್ನ ಹೊತ್ತೊಯ್ದು ಕೊಲೆ ಮಾಡಿದ್ದಾರೆ. 30 ವರ್ಷದ  ನಾಗೇಶ್ ಪಾಟೀಲ್ ಕೊಲೆಯಾದ ಯುವಕನಾಗಿದ್ದಾ‌ನೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಯುವಕನ ಮನೆಗೆ ಬಂದು ಹಂತಕರು ದಾಂಧಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ದುಷ್ಕರ್ಮಿಗಳ ತಂಡ ಯುವಕನ ಎಳೆದೊಯ್ದು ಹತ್ಯೆ ಮಾಡಿ ಮನೆ ಬಳಿ ಶವ (Dead Body) ಬಿಸಾಕಿ ಪರಾರಿಯಾಗಿದ್ದಾರೆ.


ಮೃತನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ


ಮೃತ ನಾಗೇಶ್  ಕಿರಿಯ ಸಹೋದರ ಗುಜರಾತ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ‌ಮಾಡುತ್ತಿದ್ದರೆ ಇನ್ನೊಬ್ಬ‌ ಸಹೋದರ ತಾಯಿ ಜೊತೆಗೆ  ವಾಸವಾಗಿದ್ದ. ಇನ್ನು ಮಗನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ತಪ್ಪಿತಸ್ಥರಿಗೆ  ಶಿಕ್ಷೆ ಆಗಲೇ ಬೇಕು  ಅಂತಿದ್ದಾರೆ ಕುಟುಂಬಸ್ಥರು.


ರಜೆ ಮುಗಿಸಿ ಗುಜರಾತ್‌ಗೆ ತೆರಳಬೇಕಿದ್ದ ನಾಗೇಶ್‌


ಮೃತ ನಾಗೇಶ್ ಪಾಟೀಲ್ ಈ  ಮುಂಚೆ ನೇವಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಒಂದೇ ವರ್ಷದಲ್ಲಿ ಆ ಕೆಲಸಕ್ಕೆ ರಾಜೀನಾಮೆ ನೀಡಿ ಅರ್ಧಕ್ಕೆ ಬಿಟ್ಟು ಬಂದಿದ್ದು,  ಈಗ ಗುಜರಾತ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯ ಕೆಲಸ ಮುಗಿಸಿ ರಜೆ ಮೇಲೆ ಬಂದಿದ್ದ ನಾಗೇಶ್ ಪಾಟೀಲ್  ವಾಪಸ್ ಗುಜರಾತ್ ಗೆ ತೆರಳಲು  ಟಿಕೆಟ್  ಬುಕ್ ಕೂಡ ಮಾಡಿದ್ದ , ಅಂದುಕೊಂಡಂತೆ ಆಗಿದ್ರೆ ಇವತ್ತೊ ಅಥವಾ ನಾಳೆ ಗುಜರಾತ್  ಗೆ ವಾಪಸ್ ಕಂಪನಿಯ ಕೆಲಸಕ್ಕೆ ಹೊರಡಬೇಕಿತ್ತು. ಆದರೆ ಅಷ್ಟರಲ್ಲೇ ಬಾರದ ಲೋಕಕ್ಕೆ ನಾಗೇಶ್ ಪಾಟೀಲ್ ಹೊರಟು ಹೋಗಿದ್ದಾನೆ.


ಇದನ್ನೂ ಓದಿ: ಮೊಗೇರ ಸಮುದಾಯದ ಯುವಕರಿಂದ ಪಕೋಡ ಮಾರಿ Protest! ಅದ್ಯಾಕೆ ಅಂತ ನೀವೇ ನೋಡಿ


ಮೃತನ ತಾಯಿ, ಸಹೋದರನಿಗೂ ಬೆದರಿಕೆ


ಪುಡಿ ರೌಡಿ ಗ್ಯಾಂಗ್ ಮನೆ ನುಗ್ಗಿ ದಾಂಗಲೆ ಮಾಡಿ  ಹೊತ್ತೊಯ್ದು, ಬರ್ಬರವಾಗಿ ಕೊಲೆ ಮಾಡಿದ್ದಾರೆ. ಅಲ್ಲದೆ ಆತನ ಸಹೋದರ ಮೋಹನ್ ಪಾಟೀಲ್ ಹಾಗೂ ತಾಯಿ ಮೇಲೂ ಹಲ್ಲೆ ಮಾಡಿದ್ದಾರೆ.


ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳು ಅರೆಸ್ಟ್


ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸಿದ್ದಾರೆ.  ಈಗಾಗಲೇ ಕೊಲೆ ಸುಳಿವು ಸಿಕ್ಕಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಮೂರು ಜನರನ್ನು ವಶಕ್ಕೆ  ಪಡೆದು  ಆರೋಪಿಗಳಿಗಾಗಿ ತನಿಖೆ ನಡೆಸಿದ್ದಾರೆ. ‌


ಹಣಕಾಸು ವ್ಯವಹಾರ ಸಂಬಂಧ ಕೊಲೆ ಶಂಕೆ


ಇನ್ನು ಪ್ರಕರಣ ಸಂಬಂಧಿಸಿದಂತೆ ಡಿಸಿಪಿ  ರವೀಂದ್ರ ಗಡಾದ್ ಪ್ರಕ್ರಿಯೆ ನೀಡಿದ್ದಾರೆ. ಹಣಕಾಸು ವ್ಯವಹಾರ ‌ಸಂಬಂಧ ಕೊಲೆಯಾಗಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ಈಗಾಗಲೇ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.


ಜನರ ನಿದ್ದೆಗೆಡಿಸಿದ ಹಂತಕರು


ನಾಗೇಶ ತಾಯಿ ಈ ಮೂವರು ಮಕ್ಕಳೊಂದಿಗೆ ಹೇಗೋ ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದಳು. ಆದ್ರೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹಿರಿ ಮಗನ ಕಳೆದುಕೊಂಡ ತಾಯಿ ಕಣ್ಣೀರು ರೋಧನೆ ಹೇಳತ್ತಿರದ್ದಾಗಿದೆ.


ಇದನ್ನೂ ಓದಿ: Koppala: ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಬಲಿ, ಸಂಬಂಧಿಕರಿಂದ ಆಸ್ಪತ್ರೆಯ ಕಿಟಕಿ, ಬಾಗಿಲು ಪುಡಿ ಪುಡಿ


ಇನ್ನಾದರು ಗ್ರಾಮೀಣ ಪೊಲೀಸರು ತಪ್ಪಿತಸ್ಥ ಕೊಲೆ ಮಾಡಿದ ಕೊಲೆಗಡುಕರನ್ನ  ಪತ್ತೆ ಹಚ್ಚಿ  ಹಿರಿ ಜೀವಕ್ಕೆ ನ್ಯಾಯ  ಒದಗಿಸಿ ಕೊಡಬೇಕಾಗಿದೆ. ಬೆಳಗಾವಿ ನಗರದಲ್ಲಿ ಕಳೆದ ಒದು ತಿಂಗಳಿಂದ ಕೊಲೆಗಳ ಸಂಖ್ಯೆ ಹೆಚ್ಚಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

Published by:Annappa Achari
First published: