HOME » NEWS » State » BELGAUM KARNATAKA UNLOCK 2O METRO AND KSRTC BMTC ALLOWED ON 50 PER CAPACITY AMTV SESR

Karnataka Unlock 2.O: ಬಿಎಂಟಿಸಿ, ಮೆಟ್ರೋಗೆ : 50% ಅವಕಾಶ ಕಲ್ಪಿಸಿ ಬಸ್ ಸಂಚಾರಕ್ಕೆ ಅನುಮತಿ‌

ಲಾಕ್ ಡೌನ್ ನಿಂದ ಬಿಎಂಟಿಸಿ ಗೆ 150 ಕೋಟಿ ಲಾಸ್ ಆಗಿದೆ

news18-kannada
Updated:June 19, 2021, 8:19 PM IST
Karnataka Unlock 2.O: ಬಿಎಂಟಿಸಿ, ಮೆಟ್ರೋಗೆ : 50% ಅವಕಾಶ ಕಲ್ಪಿಸಿ ಬಸ್ ಸಂಚಾರಕ್ಕೆ ಅನುಮತಿ‌
ಬಿಎಂಟಿಸಿ, ಮೆಟ್ರೋ
  • Share this:
ಬೆಂಗಳೂರು (ಜೂ. 19): ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ‌ಸರ್ಕಾರ ಹಂತ ಹಂತವಾಗಿ ನಿರ್ಬಂಧ ಸಡಿಲಿಸಿದೆ. ‌ಮೊದಲ ಹಂತದಲ್ಲಿ ಸರ್ಕಾರಿ ಸಾರಿಗೆಗೆ ಅನುಮತಿ ನೀಡದ ಸರ್ಕಾರ  ಎರಡನೇ ಅನ್ ಲಾಕ್ ನಲ್ಲಿ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಿದೆ. ಬಸ್​ ಸಂಚಾರವಿಲ್ಲದೇ ಪ್ರಯಾಣಿಕರು ಆಟೋ ಓಲಾ ಊಬರ್ ಗಳಲ್ಲಿ ದುಪ್ಪಟ್ಟು ಹಣ ಕೊಟ್ಟು ಸಂಚಾರ ಮಾಡಬೇಕಿತ್ತು. ಆದರೀಗ ಅನ್ ಲಾಕ್‌ 2.O ನಲ್ಲಿ ಸಾರ್ವಜನಿಕ ಸಂಚಾರ‌ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ತೆರೆದಿರುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.

ಆದರೆ, ಶೇಕಡ ಅರ್ಧದಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬಿಎಂಟಿಸಿಯಲ್ಲಿ 6400 ಬಸ್ಸುಗಳಿವೆ. ಮೊದಲ ಹಂತದಲ್ಲಿ 1500 ರಿಂದ 2000 ಸಾವಿರ ಬಸ್ಸುಗಳು ರಸ್ತೆಗಿಳಿಯಲಿದೆ.  ಡ್ರೈವರ್ ಕಂಡಕ್ಟರ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದುಕೊಂಡಿರಬೇಕು. 2 ಡೋಸ್ ವ್ಯಾಕ್ಸಿನ್ ತೆಗೆದುಕೊಂಡವರಿಗೆ ಮಾತ್ರ ಅವಕಾಶ ನೀಡಬಹುದು. ಇನ್ನೂ ಬಸ್ ನಲ್ಲಿ ಪ್ರಯಾಣಿಕರು ನಿಂತು ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ. ಪ್ರಯಾಣಿಕರಿಗೆ ಮತ್ತು ಚಾಲಕ ಮತ್ತು ನಿರ್ವಾಹಕರಿಗೆ ಮಾಸ್ಕ್ ಕಡ್ಡಾಯವಾಗಿದೆ.  ಕಳೆದ ವರ್ಷದಂತೆ ಈ ವರ್ಷವೂ ಕೊರೊನಾ ತಡೆಗಟ್ಟಲು ಕ್ಯಾಶ್ಲೆಸ್ ಮಾಡಿ ದಿನದ ಪಾಸ್ ನೀಡಲು ಚಿಂತನೆ ನಡೆದಿದೆ ಎನ್ನಲಾಗಿದೆ. ಗೂಗಲ್ ಪೇ ಪೋನ್ ಪೇಮೂಲಕವೂ ಹಣ ಪಡೆಯಲುಬಹುದು. ಇನ್ನೂ ಈ ಬಗ್ಗೆ ಮಾತನಾಡಿದ್ದ ಬಿಎಂಟಿಸಿ ಎಂಡಿ ಸಿ.ಶಿಖಾ  ಲಾಕ್ ಡೌನ್ ನಿಂದ ಬಿಎಂಟಿಸಿ ಗೆ ಬರೊಬ್ಬರಿ 150 ಕೋಟಿ ಲಾಸ್ ಆಗಿದೆ. ಈಗಾಗಲೇ ಜನ ಬಸ್ ಓಡಿಸುವ ಬಗ್ಗೆ ಡಿಮ್ಯಾಂಡ್ ಇಟ್ಟಿದ್ರು. ನಾವು ಜನ ದಟ್ಟಣೆ ನೋಡಿಕೊಂಡು ಬಸ್ ರಸ್ತೆಗೆ ಇಳಿಸಲಿದ್ದೇವೆ ಎಂದರು.

ಇದನ್ನು ಓದಿ: ಸಂಜೆವರೆಗೆ ಅಂಗಡಿ-ಮುಗ್ಗಟ್ಟು ಓಪನ್​: ಮಾಲ್​​, ದೇವಸ್ಥಾನಕ್ಕಿಲ್ಲ ಅವಕಾಶ

ಇನ್ನು ಕೆಎಸ್ಆರ್​ಟಿಸಿ ಯಲ್ಲಿ 8 ಸಾವಿರ ಬಸ್ಸುಗಳಿವೆ. ಅದ್ರಲ್ಲಿ 2500 ರಿಂದ 3000 ಸಾವಿರ ಬಸ್ಸುಗಳು ಮಾತ್ರ ರಸ್ತೆಗಿಳಿಸಲು ಅನುಮತಿ ‌‌ನೀಡಲು ನಿರ್ಧಾರ ಮಾಡಲಾಗಿದ್ದು, ಬಸ್ ನಲ್ಲಿ ಕೇವಲ 50% ಮಾತ್ರ ಪ್ರಯಾಣಿಕರಿಗೆ ಅವಕಾಶ. ಅತಿ ಹೆಚ್ಚು ಸೋಂಕು ಇರುವ ಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಬಸ್ ಓಡಾಟ ನಡೆಸಲ್ಲ ಎನ್ನುವ ಮಾಹಿತಿ ಇದೆ. ಹೊರ ರಾಜ್ಯಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಮಾಡುವ ಸಾಧ್ಯತೆ ತೀರಾ ಕಡಿಮೆ. ಎಸಿ ,ಸ್ಲೀಪರ್ ಬಸ್ಸುಗಳು ರಸ್ತೆಗಿಳಿಸದಿರಲು ತೀರ್ಮಾನ ಮಾಡಲಾಗಿದ್ದು, ಮೂರು ಸೀಟ್ ನಲ್ಲಿ ಇಬ್ಬರು ಹಾಗೂ ಎರಡು ಸೀಟ್ ನಲ್ಲಿ ಒಬ್ಬ ಪ್ರಯಾಣಿಕರಿಗೆ ಮಾತ್ರ ಅವಕಾಶ. ಡಿಪೋಗಳಿಂದ ಹೊರಗಡೆ ಬರುವ ಬಸ್ ಗಳಿಗೆ ಸ್ಯಾನಿಟೈಸರ್ ಕಡ್ಡಾಯ. ಉಳಿದಂತೆ ಎಲ್ಲಾ‌ ಷರತ್ತುಗಳು ಬಿಎಂಟಿಸಿ ಮಾದರಿಯಲ್ಲೇ ಇರಲಿದೆ.

ನಮ್ಮ ಮೆಟ್ರೋಗೆ ಗ್ರೀನ್ ಸಿಗ್ನಲ್.. ಷರತ್ತು ಬದ್ಧವಾಗಿ ಸೇವೆ ಒದಗಿಸಲು ಸೂಚನೆ.!!

ಬಹು ದಿನಗಳ ನಂತರ ನಮ್ಮ ಮೆಟ್ರೋ ಕೂಡ ಸೇವೆ ಆರಂಭಿಸಲಿದೆ. ಆದರೆ ಬಸ್ ಗಳಂತೆ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ. ಮತ್ತು ಎಂದಿನಂತೆ ಕ್ಯಾಶ್ಲೆಸ್ ಮಾದರಿಯೇ ನಮ್ಮ ಮೆಟ್ರೋದಲ್ಲಿ ಮುಂದುವರೆಯಲಿದೆ. ಈ ಎಲ್ಲಾ ಅಂಶಗಳು ಇಂದು ಸಂಜೆ ಸಿಎಂ ನಡೆಸಿದ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನವಾಗಿದೆ. ಈ ಬಗ್ಗೆ ಆಯಾ ಸಂಸ್ಥೆಗಳು ಶೀಘ್ರವೇ ಸವಿಸ್ತಾರವಾದ ಪ್ರಕಟಣೆಗಳು ಹೊರಡಿಸಲಿದೆ.‌ ಆ ಬಳಿಕ ಅನ್ ಲಾಕ್ 2.O ಕ್ಲಿಯರ್‌ ಕಟ್ ಪಿಕ್ಚರ್ ನಮಗೆ ಸಿಗಲಿದೆ.

(ವರದಿ:  ಆಶಿಕ್ ಮುಲ್ಕಿ)
Published by: Seema R
First published: June 19, 2021, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories