ನಾಡದ್ರೋಹಿಗಳ ಮೇಲೆ ಕ್ರಮಕ್ಕೆ ಸರ್ಕಾರ ಹಿಂದೇಟು... 2 ವರ್ಷಗಳಿಂದ ಕೊಳೆಯುತ್ತಿದೆ ಕಡತ...!

ನವೆಂಬರ್ 1ರಂದು ಇಡೀ ರಾಜ್ಯವೇ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಮಾತ್ರ ನಾಡದ್ರೋಹಿ ಕೆಲಸವನ್ನು ಅನೇಕ ವರ್ಷಗಳಿಂದ ಮಾಡುತ್ತ ಬಂದಿದೆ. ಹೀಗೆ ನಾಡದ್ರೋಹಿಗಳ ಈ ಕೃತ್ಯಕ್ಕೆ ಸರ್ಕಾರದ ಸಡಿಲು ನಿಲುವು ಕಾರಣವಾಗಿದೆ.

Vijayasarthy SN
Updated:October 26, 2018, 10:41 PM IST
ನಾಡದ್ರೋಹಿಗಳ ಮೇಲೆ ಕ್ರಮಕ್ಕೆ ಸರ್ಕಾರ ಹಿಂದೇಟು... 2 ವರ್ಷಗಳಿಂದ ಕೊಳೆಯುತ್ತಿದೆ ಕಡತ...!
ಬೆಳಗಾವಿಯಲ್ಲಿ ಮರಾಠಿಗರಿಂದ ಕರಾಳ ದಿನ ಆಚರಣೆ
Vijayasarthy SN
Updated: October 26, 2018, 10:41 PM IST
- ಚಂದ್ರಕಾಂತ ಸುಗಂಧಿ, ನ್ಯೂಸ್18 ಕನ್ನಡ

ಬೆಳಗಾವಿ(ಅ. 26): ನವೆಂಬರ್ 1ರಂದು ಇಡೀ ರಾಜ್ಯವೇ ಸಡಗರ, ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತದೆ. ಆದರೆ ಬೆಳಗಾವಿಯಲ್ಲಿ ಇರುವ ನಾಡದ್ರೋಹಿ ಎಂಇಎಸ್ ಸಂಘಟನೆ ಮಾತ್ರ ಇದಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಣೆ ಮಾಡುತ್ತ ಬಂದಿದೆ. ಕಳೆದ ಅನೇಕ ದಶಕಗಳಿಂದ ನಡೆಯುತ್ತಿರುವ ಪುಂಡಾಟಕ್ಕೆ ಬ್ರೇಕ್ ಹಾಕುವಲ್ಲಿ ನಮ್ಮ ಸರ್ಕಾರ ವಿಫಲಗೊಂಡಿದೆ. ಆದ್ದರಿಂದ ಕನ್ನಡ ನಾಡಿನಲ್ಲಿ ಇದ್ದು, ಇಲ್ಲಿನ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಮಹಾರಾಷ್ಟ್ರ ಪರ ಘೋಷಣೆ ಹಾಕುವ ಚಾಳಿ ರೂಡಿಸಿಕೊಂಡು ಬಂದಿದೆ ಎಂಇಎಸ್.

2016ರಲ್ಲಿ ನಡೆದಿದ್ದ ಕರಾಳ ದಿನ ಆಚರಣೆಗೆ ಅಂದಿನ ಜಿಲ್ಲಾಧಿಕಾರಿ ಎನ್. ಜಯರಾಂ ಅನೇಕ ಷರತ್ತು ವಿಧಿಸಿ ಅನುಮತಿ ನೀಡಿದ್ದರು.  ಕರಾಳ ದಿನ ಆಚರಣೆಯಲ್ಲಿ ಪಾಲ್ಗೊಂಡು ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದರು. ನಾಡ ವಿರೋಧ ಆಚರಣೆಯಲ್ಲಿ ಪಾಲ್ಗೊಂಡ ಮೇಯರ್, ಉಪ ಮೇಯರ್ ಹಾಗೂ ಪಾಲಿಕೆ ಸದಸ್ಯರ ವಿರುದ್ಧ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಬೆಳಗಾವಿಯ ಪಾಲಿಕೆಯನ್ನು ಸೂಪರ್​ಸೀಡ್ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ ಈ ವರದಿ ಕಳೆದ 2 ವರ್ಷಗಳಿಂದ ಸರ್ಕಾರದಲ್ಲಿ ಕೊಳೆಯುತ್ತಿದೆ. ಈ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂಬರುವ ರಾಜ್ಯೋತ್ಸವ ಸಂದರ್ಭದಲ್ಲಿ ಎಂಇಎಸ್ ಕರಾಳ ದಿನ ಆಚರಣೆಗೆ ಅನುಮತಿ ಕೊಟ್ಟರೆ ಕೋರ್ಟ್​ನಲ್ಲಿ ಪಿಐಎಲ್ ದಾಖಲಿಸುವುದಾಗಿ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಎಚ್ಚರಿಕೆ ನೀಡಿದ್ದಾರೆ.

ಈ ಬಾರಿಯ ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೆ ಕರಾಳ ದಿನ ಆಚರಣೆಗೆ ಅನುಮತಿ ಕೊಡಬಾರದು ಎಂದು ಅನೇಕ ಕನ್ನಡ ಪರ ಸಂಘಟನೆಗಳು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿವೆ. ಒಂದು ವೇಳೆ ಅನುಮತಿ ಕೊಟ್ಟರೆ ಬೆಳಗಾವಿಯಲ್ಲಿ ಮತ್ತೊಮ್ಮೆ ಎಂಇಎಸ್, ಕರವೇ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಲಿದೆ. ಇದೇ ವೇಳೆ, ಎಂಇಎಸ್ ಸಹ ಮುಂದಿನ ಪಾಲಿಕೆ ಚುನಾವಣೆ ದೃಷ್ಟಿಯಿಂದ ಈ ಬಾರಿ ಕರಾಳ ದಿನ ಆಚರಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಒಂದು ವೇಳೆ ಅನುಮತಿ ನೀಡದೇ ಇದ್ದರೂ ಬೀದಿಗೆ ಇಳಿದು ಹೋರಾಟ ಮಾಡಲು ನಿರ್ಧರಿಸಿದೆ. ಜತೆಗೆ ಮರಾಠ ಮತ ಬ್ಯಾಂಕ್ ಒಗ್ಗೂಡಿಸುವ ಯತ್ನಕ್ಕೆ ಕೈ ಹಾಕಿದೆ.

ಗಡಿಯಲ್ಲಿ ಎಂಇಎಸ್​ನ ಈ ಪುಂಡಾಟಕ್ಕೆ ಸರ್ಕಾರದ ಸಡಿಲ ನೀತಿಯೇ ಕಾರಣವಾಗಿದ್ದು, ಇನ್ನಾದರೂ ಸರ್ಕಾರ ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಆಗ್ರಹಿಸಿದ್ದಾರೆ. ನಾರಾಯಗೌಡ ಬಣದ ಕರವೇ ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗಾವಿಗೆ ಬರಲು ಕರೆ ನೀಡಿದೆ.

ಒಟ್ಟಾರೆಯಾಗಿ ಸರ್ಕಾರದ ಸಡಿಲ ನಿಲುವಿನಿಂದ ಗಡಿಯಲ್ಲಿ ಕ್ಯಾತೆ ತೆಗೆಯುವ ಎಂಇಎಸ್ ಈ ಬಾರಿ ತಕ್ಕ ಪಾಠ ಕಲಿಸಲು ಕರವೇ ಮುಂದಾಗಿದೆ. ಆದರೇ ಸರ್ಕಾರದ ನಿಲುವು ಏನು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
First published:October 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626