Parishath fight- ಪರಿಷತ್ ಚುನಾವಣೆ: ಬಿಜೆಪಿಯನ್ನ ಬೆಂಬಲಿಸಲು ಕುಮಾರಸ್ವಾಮಿಗೆ ಬಿಎಸ್​ವೈ ಮನವಿ

Karnataka MLC Elections: ರಾಜ್ಯದ 25 ಪರಿಷತ್ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ 20 ಅಭ್ಯರ್ಥಿಗಳನ್ನ ನಿಲ್ಲಿಸಿದ್ದು, ಅದರಲ್ಲಿ 17ರಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಬಿಜೆಪಿಗೆ ಬೆಂಬಲ ಕೊಡುವಂತೆ ಕುಮಾರಸ್ವಾಮಿಗೆ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

  • Share this:
ಚಿಕ್ಕೋಡಿ: ಪರಿಷತ್ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Former CM BS Yediyurappa) ಭಾನುವಾರದಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಬೆಳಗಾವಿ ನಗರದಲ್ಲಿ ಬಿಜೆಪಿ ಜನ ಸ್ವರಾಜ್ (Jana Swaraj Yatra) ಕಾರ್ಯಕ್ರಮಲ್ಲಿ ಭಾಗಿಯಾದರು. ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಯಡಿಯೂರಪ್ಪ, ಪಕ್ಷದ ತೀರ್ಮಾದಂತೆ ವಿಧಾನ ಪರಿಷತ್​ನ 25 ಕ್ಷೇತ್ರಗಳ ಪೈಕಿ 20 ರಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದೇವೆ. ಅಭ್ಯರ್ಥಿಗಳ ಘೋಷಣೆ ಮಾಡುವ ಮುನ್ನವೇ ರಾಜ್ಯದಲ್ಲಿ ಪ್ರಚಾರ ಮಾಡಿದ್ದೇವೆ ಎಂದರು.

ಕೇಂದ್ರದ ಸಚಿವರು ಮತ್ತು ಮುಖಂಡರು ರಾಜ್ಯದ ವಿವಿಧೆಡೆ ಪ್ರಚಾರ ಮಾಡಲಿದ್ದಾರೆ. ನಾವು 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರೂ ಕಾಂಗ್ರೆಸ್ ನವರು ಮಾತ್ರ ಇದುವರೆಗೂ ಪಟ್ಟಿ ಬಿಟ್ಟಿಲ್ಲ. ಕಾಂಗ್ರೇಸ್ ಪಕ್ಷದಲ್ಲಿ ಇದುವರೆಗೂ ಅಭ್ಯರ್ಥಿ ಘೋಷಣೆ ಗೊಂದಲ ಮುಗಿದಿಲ್ಲ ಎಂದು ಯಡಿಯೂರಪ್ಪ ಅವರು ಟೀಕಿಸಿದರು.

ಇನ್ನು ರಾಜ್ಯದಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಯತ್ತ ಸರ್ಕಾರ ನಿಂತಿದ್ದು ಗ್ರಾಮೀಣ ಭಾಗದಲ್ಲಿ ಶೌಚಾಲಯ ಇಲ್ಲದ ಪ್ರತಿ ಮನೆಗೂ ಶೌಚಾಲಯ ನಿರ್ಮಿಸುವ ಕೆಲಸ ಆಗಿದೆ. 8 ಕೋಟಿಗೂ ಅಧಿಕ ಜನರಿಗೆ ಉಚಿತ ಗ್ಯಾಸ್ ಕನೆಕ್ಷನ್, ಪ್ರತಿ ಹಳ್ಳಿಗೈ ರಸ್ತೆ, ಸುವರ್ಣ ಗ್ರಾಮ ಯೋಜನೆ ಮೂಲಕ ಹಲವು ಒಳ್ಳೆಯ ಕೆಲಸ ಆಗಿವೆ. ನನ್ನ ಕಾಲದಲ್ಲಿ ಶೇ 50 ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡಿದ್ದೇನೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ ಎಂದು ಮಾಜಿ ಸಿಎಂ ಆದ ಅವರು ಹೇಳಿಕೊಂಡರು.

ಇದನ್ನೂ ಓದಿ: Belgaumನ‌ಲ್ಲಿ 2 ಕಡೆ BJP ಜನಸ್ವರಾಜ್ ಸಮಾವೇಶ; ದೂರ ಉಳಿದ ಜಾರಕಿಹೊಳಿ ಸಹೋದರರು.. ಮುಂದಿನ ನಿರ್ಧಾರವೇನು?

ಬೆಳಗಾವಿ ಜಿಲ್ಲೆಯಲ್ಲಿ 8942 ಮತದಾರರು ಇದ್ದಾರೆ. ಮಹೇಶ್ ಕವಟಗಿಮಠ ಅವರು ಈ ಬಾರಿ ಮೊದಲೇ ಸುತ್ತಿನಲ್ಲಿ ಗೆಲುವು ಸಾಧಿಸಲು ಅನುವಾಗುವಂತೆ ಎಲ್ಲ ಮತದಾರರಿಗೆ ವಿನಂತಿ ಮಾಡುತ್ತೇನೆ. ಹೋದಲ್ಲೆಲ್ಲ ಎಲ್ಲ ಕಡೆಯೂ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ. ಜೆಡಿಎಸ್ ಅಭ್ಯರ್ಥಿ ಹಾಕದ ಸ್ಥಳದಲ್ಲಿ ನಮಗೆ ಬೆಂಬಲ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ನಮಗೆ ಬೆಂಬಲ ಸೂಚಿಸಬೇಕು ಎಂದು ಎಂದು ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಬಿಎಸ್​ವೈ ಹೇಳಿದರು.

ಕಾಂಗ್ರೇಸ್ ವಿರುದ್ದ ವಾಗ್ದಾಳಿ:

ಇನ್ನು 20 ಕ್ಷೇತ್ರಗಳ ಪೈಕಿ 17 ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ಕಾರಣಾಂತರಗಳಿಂದ 3 ಕ್ಷೇತ್ರದಲ್ಲಿ ಗೆಲುವು ಕಷ್ಟಕರ ಆಗಲಿದೆ. ಕಾಂಗ್ರೆಸ್ ಸ್ನೇಹಿತರು ಜಾತಿ, ‌ಹಣ, ತೋಳಬಲದಿಂದ ಅಧಿಕಾರ ಬರಲು ಪ್ರಯತ್ನ ಮಾಡುತ್ತಿದೆ ಎಂದು ಬಿ ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ರಷ್ಯಾದ Sputnik V ಲಸಿಕೆ ಭಾರತದಲ್ಲಿ ಇನ್ನೂ ಯಾಕೆ ಸರಿಯಾಗಿ ಸಿಗುತ್ತಿಲ್ಲ? ಇಲ್ಲಿದೆ ಕಾರಣ

ಪ್ರಧಾನಿ ಮೋದಿ ಎಂಟು ವರ್ಷಗಳಲ್ಲಿ ವಿಶ್ವವೇ ಹಿಂತುರುಗಿ ನೋಡುವಂತೆ ಕೆಲಸ  ಮಾಡಿದ್ದಾರೆ. 75 ವರ್ಷಗಳ ಕಾಂಗ್ರೆಸ್ ಆಡಳಿತ ಸಮುದ್ರದ ನೀರಿನಂತೆ. ನೀರು ಎಷ್ಟೇ ಇದ್ದರೂ ಅದನ್ನ ಕುಡಿಯಲು ಸಾಧ್ಯವಿಲ್ಲ ಎಂದು ಬಿಎಸ್​ವೈ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ನನ್ನ ಅವಧಿಯಲ್ಲಿ ಯಾರಿಗೂ ಜಾತಿ ಭೇದ ಭಾವ ಮಾಡದೆ ಯೋಜನೆಗಳನ್ನ ರೂಪಿಸಿದ್ದೇವೆ. ಹಾಗಾಗಿ ಎಲ್ಲಾ ಮುಸ್ಲಿಂ ಭಾಂಧವರು ಕಾಂಗ್ರೇಸ್ ನವರ ಜಾತಿ ರಾಜಕೀಯಕ್ಕೆ ಬಲಿ ಆಗಬಾರು. ಕಾಂಗ್ರೆಸ್ ನಿರ್ನಾಮ ಆಗ್ತಾ ಇದೆ. ನನ್ನ ಆಡಳಿತಾವಧಿಯಲ್ಲಿ ಎಲ್ಲ ಜನಾಂಗವನ್ನು ನಮ್ಮ ಜನ ಎಂದು ತಿಳಿದು ಕೆಲಸ ಮಾಡಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.

ವರದಿ: ಲೋಹಿತ್ ಶಿರೋಳ
Published by:Vijayasarthy SN
First published: