ಬೆಳಗಾವಿ (ಮಾ. 16): ಬೆಳಗಾವಿ ಗಡಿ, ಭಾಷೆ ವಿಚಾರ ಮುಂದಿಟ್ಟುಕೊಂಡು ಶಿವಸೇನೆ, ಎಂಇಎಸ್ ಪುಂಡಾಟ ಮಿತಿ ಮೀರಿದೆ. ಇದಕ್ಕೆ ಯಾರು ಕಡಿವಾಣ ಹಾಕುವವರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಎಂಇಎಸ್ ಯುವ ಮುಖಂಡ ಶುಭಂ ಸಳಕೆ ಬಹಿರಂಗವಾಗಿ ಕನ್ನಡಿಗರಿಗೆ ಧಮ್ಕಿ ಹಾಕಿದ್ದಾನೆ. ಕೆಂಪು, ಹಳದಿ ಬಾವುಟ ಹಾಕಿಕೊಂಡು ಓಡಾಡಿದ್ರೆ ಅಟ್ಟಾಡಿಸಿ ಹೊಡ್ತಿವಿ. ನಮ್ಮ ಶಾಂತಿಯುತ ಹೋರಾಟವನ್ನ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಕನ್ನಡ ಹೋರಾಟಗಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ನಾವು ಬೇರೆ ಪದ್ಧತಿಯಿಂದ ಉತ್ತರ ಕೊಡಬೇಕಾಗುತ್ತದೆ. ಕಾನೂನು ಕೈಗೆ ತೆಗೆದುಕೊಳ್ಳುತ್ತೇವೆ ಎಂದಿದ್ದ. ಈ ಬಗ್ಗೆ ನ್ಯೂಸ್ 18 ಕನ್ನಡ ಇಂದು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ನಂತರ ಕರವೇ ನಾರಾಯಣಗೌಡ ಬಣದ ಮುಖಂಡರು ಡಿಸಿಪಿ ಡಾ. ವಿಕ್ರಮ ಅಮಟೆ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಜೀವ ಬೇದರಿಕೆ, ಭಾಷಾ ಸಾಮರಸ್ಯ ಬೆಂಕಿ ಹಚ್ಚುವ ಕೆಲಸ ಮಾಡಿದ ಶುಂಭ ನನ್ನು ಗಡಿ ಪಾರು ಮಾಡಲು ಕರವೇ ಮುಖಂಡರು ಆಗ್ರಹಿಸಿದರು.
ಕರವೇ ದೂರಿನ ಅನ್ವಯ ಪೊಲೀಸರು ಶುಭಂ ಸಳಕೆ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಐಪಿಸಿ 1860 ಅಡಿ ಸಹ ಕಲಂ 153A, 506, 153, 505(2) ಅಡಿ ಕೇಸ್ ದಾಖಲು ಮಾಡಲಾಗಿದೆ. ಆರೋಪಿ ಶುಭಂ ಸಳಕೆ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಡಾ. ವಿಕ್ರಮ ಅಮಟೆ ಹೇಳಿದ್ದಾರೆ.
ಇದನ್ನು ಓದಿ: ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ: ಮಾಜಿ ಸಚಿವರ ವಿರುದ್ಧ ಮತ್ತೊಂದು ದೂರು
7 ಕೋಟಿ ಕನ್ನಡಿಗರ ಸಂಕೇತವಾಗಿರುವ ಕೆಂಪು, ಹಳದಿ ಬಾವುಟವನ್ನು ಎಂಇಎಸ್ ಮುಖಂಡ ತೀವ್ರವಾಗಿ ಅವಮಾನಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಗಡಿ ಭಾಷೆ ವಿಚಾರವಾಗಿ ಎಂಇಎಸ್, ಶಿವಸೇನೆ ಪುಂಡಾಟ ನಿಲ್ಲುವ ಯಾವ ಲಕ್ಷ್ಮಣ ಇಲ್ಲ. ಸರ್ಕಾರ ಮೌನ ವಹಿಸದೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಗಡಿ ಹೋರಾಟಗಾರ ಆಗ್ರಹಿಸಿದ್ದಾರೆ.
ಗಡಿಯಲ್ಲಿ ಶಿವಸೇನೆ ಉದ್ದೇಶಪೂರ್ವಕವಾಗಿ ತಾಗದೆ ತೆಗೆಯುತ್ತಿದ್ದು, ಪುಂಡಾಟ ಮುಂದುವರೆಸಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿವಸೇನೆ ಮುಖಂಡ ವಿಜಯ ದೇವಣೆ ಮಾರ್ಚ್ 20ರಂದು ಮಹಾರಾಷ್ಟ್ರದ ಸಾಂಗಲಿ, ಮಿರಜ, ಕೊಲ್ಹಾಪುರ, ಸಾತಾರಾ ಜಿಲ್ಲೆಗಳಲ್ಲಿ ಕನ್ನಡಿಗರ ಅಂಗಡಿಗಳನ್ನು ಬಂದ್ ಮಾಡಿ ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ಬೆಂಬಲ ಸೂಚಿಸಬೇಕೆಂದು ಕರೆ ನೀಡಿದ್ದು, ಮತ್ತಷ್ಟು ಗಡಿ ಕಿಚ್ಚು ಹೆಚ್ಚುವಂತೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ