ಕುಂದಾನಗರಿಯ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಬಗೆ ಬಗೆಯ ಗಾಳಿಪಟ

ವಿದೇಶಿಗರ ಕೈಯಲ್ಲಿ ತ್ರಿವರ್ಣ ಧ್ವಜದ ಬಣ್ಣಗಳಿರುವ ಹಾರ್ಟ್ ಶೇಪ್ ಗಾಳಿಪಟ, ಅಸ್ಥಿಪಂಜರ ಹೊಲುವ ಗಾಳಿಪಟ, ಆನೆ, ಕಾಳಿಂಗ ಸರ್ಪ, ರಾಣಿ, ಚಿಟ್ಟೆ, ಭಾರತದ ಧ್ವಜ ಸೇರಿದಂತೆ ಐವತ್ತಕ್ಕೂ ಅಧಿಕ ಬಗೆಯ ಗಾಳಿಪಟ ಹಾರಿಸಲಾಯಿತು.

news18-kannada
Updated:January 21, 2020, 12:39 PM IST
ಕುಂದಾನಗರಿಯ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಬಗೆ ಬಗೆಯ ಗಾಳಿಪಟ
ಗಾಳಿಪಟ ಉತ್ಸವ
  • Share this:
ಬೆಳಗಾವಿ(21) : ಬಾನಂಗಳದಲ್ಲಿ ಹಾರಾಡುತ್ತಿರುವ ಬಣ್ಣಬಣ್ಣದ ಪಟಗಳು, ನೀಲಿ  ಆಕಾಶದಲ್ಲಿ ಬುಸುಗುಡುತ್ತಿದ್ದ ಕಾಳಿಂಗ ಸರ್ಪ, ಹುಂಜ, ಆನೆ ಮತ್ತು ವಿದೇಶಿಗನ ಕೈಯಲ್ಲಿ ಹಾರಾಡುತ್ತಿರುವ ತ್ರಿವರ್ಣ ಧ್ವಜದ ಹಾರ್ಟ್ ಶೇಪ್ ಗಾಳಿ ಪಟ ನೆರೆದ ಪ್ರೇಕ್ಷಕರನ್ನು ಆಕರ್ಷಿಸಿದವು.

ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ನೇತೃತ್ವದ ಪರಿವರ್ತನಾ ಪರಿವಾರ ಸಂಸ್ಥೆಯಿಂದ ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಮೈದಾನದಲ್ಲಿ ನಡೆಯುತ್ತಿರುವ 10ನೇ ಅಂತರಾಷ್ಟ್ರೀಯ ಗಾಳಿ ಉತ್ಸವ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಹದಿನೈದು ವಿದೇಶಿ ಪಟುಗಳು, 25 ಅಂತರ್ ರಾಜ್ಯ ಸೇರಿ ಐವತ್ತಕ್ಕೂ ಹೆಚ್ಚು ಪಟುಗಳು ಉತ್ಸವದಲ್ಲಿ ಭಾಗವಹಿಸಿದ್ದರು.‌ ಇನ್ನೂ ಪ್ರತಿಯೊಬ್ಬರೂ ವಿಭಿನ್ನವಾಗಿರುವ ಬೃಹತ್ ಗಾಳಿಪಟಗಳನ್ನ ಹಾರಿಸುವ ಮೂಲಕ ನೋಡುಗರನ್ನ ಕಣ್ಮನ ಸೆಳೆದರು. 150ಕೆಜಿ ಸಾಮರ್ಥದ ಬೃಹತ್ ಡ್ರ್ಯಾಗನ್ ಗಾಳಿ ಪಟ, ಮಹಾತ್ಮ ಗಾಂಧೀಜಿ, ಶಿವಾಜಿ ಮಹಾರಾಜ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರಿರುವ ಗಾಳಿಪಟಗಳನ್ನ ಇಲ್ಲಿ ಹಾರಿಸಲಾಯಿತು.

ಗಾಳಿಪಟ ಉತ್ಸವ ಆಯೋಜನೆ ಮಾಡುವುದರಿಂದ ಬೆಳಗಾವಿ ಟೂರಿಸಂ ಹೆಚ್ಚಾಗುವುದರ ಜತೆಗೆ ಮೊಬೈಲ್ ಸೇರಿದಂತೆ ಬರೀ ಕೆಲಸದಲ್ಲಿ ಬಿಜಿ ಇರುವವರಿಗೆ ಗಾಳಿಪಟ ಉತ್ಸವ ಆಯೋಜನೆಯಿಂದ ಬಂದು ರಿಲ್ಯಾಕ್ಸ್ ಆಗಲು ಅನುಕೂಲ ಆಗಲಿದೆ ಅಂತಿದ್ದಾರೆ ಇದರಲ್ಲಿ ಭಾಗಿಯಾಗಿರುವ ಪಟುಗಳು.ಇಂಗ್ಲೆಂಡ್, ನೆದರ್ಲ್ಯಾಂಡ್, ಇಂಡೋನೇಷ್ಯಾ, ಥಾಯ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಂದ ಪಟುಗಳು ಭಾಗವಹಿಸಿದ್ದರು.

ಇದನ್ನೂ ಓದಿ : ನಾಯಿ ಬೊಗಳದಂತೆ ಮಾಡಿ ಕುರಿಗಳನ್ನು ಕಳ್ಳತನ ಮಾಡಿದ ಖದೀಮರು

ವಿದೇಶಿಗರ ಕೈಯಲ್ಲಿ ತ್ರಿವರ್ಣ ಧ್ವಜದ ಬಣ್ಣಗಳಿರುವ ಹಾರ್ಟ್ ಶೇಪ್ ಗಾಳಿಪಟ, ಅಸ್ಥಿಪಂಜರ ಹೊಲುವ ಗಾಳಿಪಟ, ಆನೆ, ಕಾಳಿಂಗ ಸರ್ಪ, ರಾಣಿ, ಚಿಟ್ಟೆ, ಭಾರತದ ಧ್ವಜ ಸೇರಿದಂತೆ ಐವತ್ತಕ್ಕೂ ಅಧಿಕ ಬಗೆಯ ಗಾಳಿಪಟ ಹಾರಿಸಲಾಯಿತು. ಇನ್ನೂ ನಾಲ್ಕು ದಿನದ ಅವಧಿಯಲ್ಲಿ ಮುನ್ನೂರಕ್ಕೂ ಅಧಿಕ ಬಗೆಯ ಗಾಳಿಪಟಗಳನ್ನ ಇಲ್ಲಿ ಹಾರಿಸಲಾಗುತ್ತಿದ್ದು ಇಲ್ಲಿ ಭಾಗವಹಿಸುವವರಿಗೆ ಉಚಿತ ಪ್ರವೇಶ ಕೂಡ ನೀಡಲಾಗಿದೆ.

ಕಳೆದ ಹತ್ತು ವರ್ಷದಿಂದ ಕುಂದಾನಗರಿಯಲ್ಲಿ ಗಾಳಿಪಟ ಉತ್ಸವ ಆಯೋಜನೆ ಮಾಡುತ್ತಿದ್ದು ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇನ್ನೂ ಮೂರು ದಿನಗಳ ಅವಧಿಯಲ್ಲಿ ನಾಲ್ಕು ಲಕ್ಷ ಜನ ಭೇಟಿ ನೀಡುವ ಸಾಧ್ಯತೆ ಇದ್ದು ಇದ್ರಿಂದ ಪ್ರವಾಸೋದ್ಯಮಕ್ಕೂ ಕೂಡ ಅನುಕೂಲ ಆಗಲಿದೆ. ಇತ್ತ ಕೆಲಸದ ಒತ್ತಡ ಮರೆತು ಕುಟುಂಬ ಸಮೇತರಾಗಿ ಗಾಳಿಪಟ ಉತ್ಸವಕ್ಕೆ ಜನ ಆಗಮಿಸಿ ರಿಲ್ಯಾಕ್ಸ್ ಆಗುತ್ತಿದ್ದಾರೆ.
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ