ಆಫ್ರಿಕಾದಲ್ಲಿ ಕುಳಿತು ಭಾರತೀಯರ ಬ್ಯಾಂಕ್ ಖಾತೆಗೆ ಕನ್ನ; ಅಂತರಾಷ್ಟ್ರೀಯ ಹ್ಯಾಕರ್ ಬಂಧಿಸಿದ ಬೆಳಗಾವಿ ಪೋಲಿಸರು!

ಆಫ್ರಿಕಾ ಹಾಗೂ ಮುಂಬೈಯಲ್ಲಿ ಕುಳಿತು ಆನ್‌ಲೈನ್ ಮೂಲಕ ಬ್ಯಾಂಕ್ ಅಕೌಂಟ್ ಹ್ಯಾಕ್  ಮಾಡಿ ಹಣ ಎಗರಿಸುತ್ತಿದ್ದ  ಆರೋಪಿಗಳಾದ ನೈಜಿರಿಯಾ ಮೂಲದ ಬುಜುಕಾ ಪೀಟರ್ ಚಿಗೋಜಿ(40), ಇಂದ್ರೇಶ್ ಹರಿಶಕಂರ್ ಪಾಂಡೆ, ಅಭಿಜಿತ್ ಘನಶ್ಯಾಮ್ ಮಿಶ್ರಾ ಎಂಬ ಆರೋಪಿಗಳನ್ನ ಮುಂಬೈನಲ್ಲಿ ಬಂಧಿಸಿದ್ದಾರೆ.

ಹ್ಯಾಕರ್ ಸಾಂದರ್ಭಿಕ ಚಿತ್ರ

ಹ್ಯಾಕರ್ ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಬ್ಯಾಂಕಿಂಗ್ ವ್ಯವಹಾರ ಜಾಸ್ತಿ ಆಗಿದ್ದು ಬಹುತೇಕ ಜನ ಬ್ಯಾಂಕ್ ಗೆ ತೆರಳದೆ ಕೂತಲ್ಲೆ ಹಣದ ವ್ಯವಹಾರ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಆನ್ಲೈನ್ ವ್ಯವಹಾರ ನಡೆಸುವಾಗ ಎಷ್ಟೆ ಎಚ್ಚರ ವಹಿಸಿದ್ರು ಸೈಬರ್ ಕ್ರೈಮ್ ಕಳ್ಳರು ಒಂದಲ್ಲ ಒಂದು ಕಳ್ಳ ಮಾರ್ಗದ ಮೂಲಕ ಜನರ ಹಣಕ್ಕೆ ಕನ್ನ ಹಾಕುತ್ತಲೆ ಇದ್ದಾರೆ. ಯಾವುದಾದರೂ ಒಂದು ಮಾರ್ಗದ ಮೂಲಕ ನಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಇರೋ ಬರೋ ದುಡ್ಡನ್ನ ದೋಚಿದ ಎಷ್ಟೇ ಪ್ರಕರಣಗಳು ಬೆಳಕಿಗೆ ಬಂದ್ರು ಅದನ್ನ ಹುಡುಕುವುದು ಪೊಲೀಸರಿಗೆ ಕಷ್ಟದ ಕೆಲಸವೇ ಆಗಿರುತ್ತದೆ. ಆದ್ರೆ ಬೆಳಗಾವಿ ಜಿಲ್ಲೆಯ ಪೋಲಿಸರು ಜಿಲ್ಲೆಯ ಬ್ಯಾಂಕ್ ಒಂದರ ಬ್ಯಾಂಕ್ ಖಾತೆಯನ್ನೆ ಹ್ಯಾಕ್ ಮಾಡಿ ಬರೋಬ್ಬರಿ 94.71 ಲಕ್ಷ ಹಣ ಎಗರಿಸಿದ್ದ ಪ್ರಕರಣವನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದು ನೈಜೀರಿಯಾ ಮೂಲದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆನ್‌ಲೈನ್ ವಂಚನೆ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ. ಸಾಕಷ್ಟು ಪ್ರಕರಣಗಳಲ್ಲಿ ಸಾಮಾನ್ಯ ಜನರಿಗೆ ಪೋನ್ ಕರೆ ಮಾಡಿ ನಿಮ್ನ ಕಾರ್ಡ್ ಸಮಸ್ಯೆ ಆಗಿದೆ. ಅಕೌಂಟ್ ಸಮಸ್ಯೆ ಇದೆ. ಅದನ್ನ ಸರಿ ಪಡಿಸಬೇಕು. ನಿಮ್ಮ ಬ್ಯಾಂಕ್ ಖಾತೆ ವಿವರ ನೀಡಿ ಒಟಿಪಿ ನೀಡಿ ಎಂದು ಕರೆ ಮಾಡುವ ಮೂಲಕ ಜನರನ್ನ ನಂಬಿಸಿ ಮೋಸ ಮಾಡಿ ಬ್ಯಾಂಕ್ ಖಾತೆಯಲ್ಲಿನ ಹಣ ಲಪಟಾಯಿಸಿದ ಹಲವು ಪ್ರಕರಣಗಳು ನಡೆದಿವೆ. ಆದ್ರೆ ಈ ಖದಿಮರು ಮಾತ್ರ ದೂರದ ಆಫ್ರಿಕಾದಲ್ಲಿ ಕುಳಿತು ನೇರವಾಗಿ ಬ್ಯಾಂಕ್ ಖಾತೆಯನ್ನೆ ಹ್ಯಾಕ್ ಮಾಡಿ ಬರೋಬ್ಬರಿ 94.71 ಲಕ್ಷ ಹಣವನ್ನು ಎಗರಿಸಿದ್ದಾರೆ.

ಜಿಲ್ಲೆಯ ಸದಲಗಾ ಪಟ್ಟಣದಲ್ಲಿನ ಅರಿಹಂತ ಕೋ ಆಪರೇಟಿವ್ ಬ್ಯಾಂಕ ನ ಮ್ಯಾನೇಜರ್ ಅಶೋಕ್ ಬಂಕಾಪುರೆ ಮೇ. 29 ರಂದು ಸದಲಗಾ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಐಸಿಐಸಿಐ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ‌ದ್ದ ಹ್ಯಾಕರ್ಸ್ 94.71 ಲಕ್ಷ ಎಗರಿಸಿದ್ದಾರೆ ಎನ್ನುವ ದೂರು ನೀಡಿದರು. ದೂರಿನ ಅನ್ವಯ ಪ್ರಕರಣದ ಬೆನ್ನತಿದ್ದ. ಚಿಕ್ಕೋಡಿ ಡಿಎಸ್ಪಿ ಹಾಗೂ ಸಿಪಿಐ ನೇತೃತ್ವದಲ್ಲಿ ‌ಕಾರ್ಯಾಚರಣೆ ನಡೆಸಿ ಆಫ್ರಿಕಾ ಹಾಗೂ ಮುಂಬೈಯಲ್ಲಿ ಕುಳಿತು ಆನ್‌ಲೈನ್ ಮೂಲಕ ಬ್ಯಾಂಕ್ ಅಕೌಂಟ್ ಹ್ಯಾಕ್  ಮಾಡಿ ಹಣ ಎಗರಿಸುತ್ತಿದ್ದ  ಆರೋಪಿಗಳಾದ ನೈಜಿರಿಯಾ ಮೂಲದ ಬುಜುಕಾ ಪೀಟರ್ ಚಿಗೋಜಿ(40), ಇಂದ್ರೇಶ್ ಹರಿಶಕಂರ್ ಪಾಂಡೆ, ಅಭಿಜಿತ್ ಘನಶ್ಯಾಮ್ ಮಿಶ್ರಾ ಎಂಬ ಆರೋಪಿಗಳನ್ನ ಮುಂಬೈನಲ್ಲಿ ಬಂಧಿಸಿದ್ದಾರೆ.

ನೈಜಿರಿಯಾ ಮೂಲದ ಬುಜುಕಾ ಪೀಟರ್ ಚಿಗೋಜಿ


ಇದನ್ನು ಓದಿ: ವಿಶೇಷ ಅನುದಾನ ಮಾತ್ರವಲ್ಲ. ಜಿಎಸ್‌ಟಿ ಪರಿಹಾರ ಕೂಡ ನೀಡಿಲ್ಲ; ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ!

ಇನ್ನು ಈ ಆರೋಪಿಗಳು ತಮ್ಮದೆ ಆದ ವ್ಯವಸ್ಥಿತವಾದ ಜಾಲವನ್ನೆ ರೂಪಿಸಿಕೊಂಡಿದ್ರು. ದೂರದ ಆಫ್ರಿಕಾ ದೇಶದಲ್ಲಿ ಟೋನಿ ಎಂಬ ಸೈಬರ್ ಹ್ಯಾಕರ್ ಇಲ್ಲಿನ ಭಾರತದ ಬ್ಯಾಂಕ್ ಖಾತೆಗನ್ನ ಹ್ಯಾಕ್ ಮಾಡಿ ಬುಜುಕಾ ಪೀಟರ್, ಅಭಿಜಿತ್ ಹಾಗೂ ಇಂದ್ರೇಶ ಸಹಾಯದಿಂದ ಬೇರೆ ಬೇರೆ ಡಮ್ಮಿ ಅಕೌಂಟ್ ಗಳನ್ನ ತೆರೆಸಿ ಆವರ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದ. ಬಳಿಕ ಅವರ ಸಹಾಯದಿಂದಲೆ ಮತ್ತೆ ಆ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಅದರಲ್ಲಿ ಇವರಿಗೂ ಪಾಲು ನೀಡುತ್ತಿದ್ದ ಎಂದು ಬೆಳಗಾವಿ ಎಸ್.ಪಿ ಲಕ್ಷಣ ನಿಂಬರಗಿ ಮಾಹಿತಿ ನೀಡಿದ್ದಾರೆ.

ಸದ್ಯ ಪ್ರಕರಣದಲ್ಲಿ ಪ್ರಾಥಮಿಕವಾಗಿ 3 ಜನರ ಬಂಧನವಾಗಿದೆ. ಅವರಿಂದ 9 ಲಕ್ಷ ರೂಪಾಯಿಗಳ ರಿಕವರಿ ಕೂಡ ಮಾಡಲಾಗಿದೆ. ಇನ್ನು ಈ ಪ್ರಕರಣದಲ್ಲಿ ಹಲವು ಆರೋಪಿಗಳು ಶಾಮೀಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಇನ್ನು ಕೆಲವು ಪ್ರಮುಖರು ಭಾಗಿಯಾಗಿದ್ದು ಅವರ ಪತ್ತೆ ಕಾರ್ಯ ನಡೆಯುತ್ತಿದೆ  ಎಂದು ಚಿಕ್ಕೋಡಿಯಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನೂ  ಮೊಬೈಲ್ ಫೋನ್‌ಗಳಿಗೆ ಬರುವ ಮೆಸೇಜ್, ಕಾಲ್ಸ್‌ಗಳ‌ಗಳಿಗೆ ಬ್ಯಾಂಕ್ ಖಾತೆ ಮಾಹಿತಿ ನೀಡದಂತೆ ಎಸ್ಪಿ ಮನವಿ ಮಾಡಿದ್ದಾರೆ.
Published by:HR Ramesh
First published: