Indian Army: ಬೆಳಗಾವಿಯಲ್ಲಿ ಭಾರತ-ಜಪಾನ್ ಯೋಧರ ಜಂಟಿ ಸಮರಾಭ್ಯಾಸ, ಮೈನವಿರೇಳಿಸೋ ತಾಲೀಮು

ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಸಮರಾಭ್ಯಾಸದಲ್ಲಿ 10 ದಿನದ ಅಣಕು ಪ್ರದರ್ಶನ ನಡೆಯಿತು. ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಸಮರಾಭ್ಯಾಸ ನಡೆಸಲಾಗುತ್ತಿದೆ.

ಯೋಧರ ಸಮರಾಭ್ಯಾಸ

ಯೋಧರ ಸಮರಾಭ್ಯಾಸ

  • Share this:
ಬೆಳಗಾವಿ (ಮಾ.9):  ಬೆಳಗಾವಿಯ (Belagavi) ಮರಾಠ ಲಘು ಪದಾತಿದಳ (Maratha Light Infantry) ಕೇಂದ್ರದಲ್ಲಿ ಫೆ.27ರಿಂದ ಇಂಡೋ- ಜಪಾನ್‌ (Indo-Japan) ಜಂಟಿ ಸಮರಾಭ್ಯಾಸ ನಡೆಯುತ್ತಿದ್ದು,  ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದ ಬಳಿ ಪ್ರಾತ್ಯಕ್ಷಿಕೆ ನೀಡಲಾಯಿತು. ಭಾರತೀಯ ಸೇನೆಯ (Indian Army) 15ನೇ ಬೆಟಾಲಿಯನ್‌ನ ಮರಾಠ ಲಘು ಪದಾತಿದಳ ಕೇಂದ್ರದ 40 ಯೋಧರು (Soldiers) ಹಾಗೂ ಜಪಾನ್‌ ಗ್ರೌಂಡ್‌ ಸೆಲ್ಫ್‌ ಡಿಫೆನ್ಸ್‌ ಫೋರ್ಸ್‌ನ 30ನೇ ದಳದ 40 ಯೋಧರು ಜಂಟಿ ಸಮರಾಭ್ಯಾಸದಲ್ಲಿ ತೊಡಗಿದ್ದರು. ಮಾ.10ರವರೆಗೆ ಸಮರಾಭ್ಯಾಸ ನಡೆಯಲಿದೆ. ಇದು ವಾರ್ಷಿಕ ತರಬೇತಿ ಭಾಗವಾಗಿರುವ ಧರ್ಮ ಗಾರ್ಡಿಯನ್‌- 2022 ಕಾರ್ಯಕ್ರಮವಾಗಿದ್ದು, ಜಾಗತಿಕ ಭಯೋತ್ಪಾದನೆ (Global Terrorism) ವಿರುದ್ಧದ ಹೋರಾಟಕ್ಕೆ ಅನುಕೂಲಕರವಾಗುವ ತಂತ್ರಗಾರಿಕೆಯನ್ನು ಸೈನಿಕರು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. 

ಭಾರತ-ಜಪಾನ್ ಜಂಟಿ ಸಮರಾಭ್ಯಾಸ

ಇಂದು  ಭಾರತ-ಜಪಾನ್ ಜಂಟಿ ಸಮರಾಭ್ಯಾಸದ  10 ದಿನದ ಅಣಕು ಪ್ರದರ್ಶನ ನಡೆಯಿತು. ವಾರ್ಷಿಕ ತರಬೇತಿ ಭಾಗವಾಗಿರುವ ಧರ್ಮ ಗಾರ್ಡಿಯನ್ 2022ರ ಕಾರ್ಯಕ್ರಮ ನಡೆಯುತ್ತಿದ್ದು,  ಭಾರತೀಯ ಸೇನೆಯ 15ನೇ ಬೆಟಾಲಿಯನ್‍ನ ಮರಾಠ ಲೈಟ್ ಇನಫ್ಯಾಂಟರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ನಿರತರಾಗಿದ್ರು.

10 ದಿನದ ಅಣಕು ಪ್ರದರ್ಶನ

ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಸಮರಾಭ್ಯಾಸ ನಡೆಸಲಾಗುತ್ತಿದೆ. ಹೀಗಾಗಿ ಇಂದೂ ಕೂಡ  ಮರಾಠಾ ಲಘುಪದಾತಿ ದಳದ ರೋಹಿಡೇಶ್ವರ ಕ್ಯಾಂಪ್‌ನಲ್ಲಿ, ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌‌ನ 30ನೇ ದಳದ ಯುದ್ಧ ಅನುಭವಿ ಪಡೆಗಳಿಂದ ಸಮರಾಭ್ಯಾಸ  ರೋಮಾಂಚಕರವಾಗಿತ್ತು.

ಇದನ್ನೂ ಓದಿ: Goa Elections: ಫಲಿತಾಂಶಕ್ಕೂ ಮುನ್ನವೇ ಶುರುವಾಯಿತು ಶಾಸಕರಿಗೆ ಬಲೆ, ರೆಸಾರ್ಟ್ ರಾಜಕೀಯ

ಮೈನವಿರೇಳಿಸೋ ಸಮರಾಭ್ಯಾಸ

ಬೆಳಗಾವಿ ತಾಲೂಕಿನ ಹೊರವಲಯದ ರೋಹಿಡೇಶ್ವರ ಗ್ರಾಮದಲ್ಲಿ ಭಯೋತ್ಪಾದಕರು ನುಗ್ಗಿದ್ದಾರೆ. ಅವರು ಕೆಲವು ಸ್ಥಳೀಯರನ್ನ ಒತ್ತೆಯಾಳಾಗಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಅರಿತ ಸೈನಿಕರು ಸೇನಾ ಹೆಲಿಕ್ಯಾಪ್ಟರ್ ಮೂಲಕ ಭಯೋತ್ಪಾದಕರು ಅಡಗಿದ್ದ ಅಡಗುದಾನಗಳ ಬಳಿ ಇಳಿದು ಕಾರ್ಯಾಚರಣೆ ನಡೆಸಿದ್ದರು. ಉಗ್ರರು ಅಡಗಿದ್ದ ಮನೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹತ್ಯೆಗೈದು ಒತ್ತೆಯಾಳಾಗಿದ್ದ ಗ್ರಾಮಸ್ಥರನ್ನ ರಕ್ಷಣೆ ಮಾಡಲಾಯಿತು.

ಈ ವೇಳೆ ಉಗ್ರರು ಅವಿತಿದ್ದ ಮನೆಯನ್ನು ಗ್ರೇನೆಟ್  ಸ್ಫೋಟಿಸಿ ಒಡೆದು ಒಳ ನುಗ್ಗಿ ಮೈ ನವಿರೇಳಿಸುವ ರೀತಿ ಕಾರ್ಯಾಚರಣೆ ನಡೆಸಲಾಯಿತು. ಇದರಲ್ಲಿ ಓರ್ವ ಸೈನಿಕ ಗಾಯಗೊಂಡ. ಇಷ್ಟಕ್ಕೂ ನಾವ್ ಹೇಳುತ್ತಿರುವ ಈ ಸ್ಟೋರಿ ನೋಡಿ ಅರೇ ಇದೇನಿದು ಬೆಳಗಾವಿಯಲ್ಲಿ ಭಯೋತ್ಪಾದಕರು ಬಂದ್ರಾ ಅಂತ ಹುಬ್ಬೇರಿಸಬೇಡಿ. ಇದು ಕೇವಲ ಅಣಕು ಪ್ರದರ್ಶನ ಮಾತ್ರ. ಇಷ್ಟಕ್ಕೂ ಡ್ರೋಣ ಕ್ಯಾಮರಾ ಬಳಸಿ ಉಗ್ರರ ಚಲನವಲನ ಪತ್ತೆ ಹಚ್ಚಿ ದಾಳಿ ಮಾಡುವ ದೃಶ್ಯ ನಿಜಕ್ಕೂ ರೋಮಾಂಚನವಾಗಿತ್ತು.

ಅತ್ಯಾಧುನಿಕ ಉಪಕರಣಗಳ ಪ್ರದರ್ಶನ

ಜಪಾನ್ ಕೆಲವು ಯುದ್ಧ ಕೌಶಲ್ಯ ಹಾಗೂ ಭಾರತದ ಯುದ್ಧ ಕಲೆಗಳನ್ನ ಪರಸ್ಪರ ವಿನಿಮಯ ಮಾಡಿಕೊಂಡು ಸಮರಾಭ್ಯಾಸದಲ್ಲಿ ಕಮಾಂಡೋಗಳು ಪಾಲ್ಗೊಂಡಿದ್ದಾರೆ. ಕೊನೆಗೆ ಯುದ್ಧ ಸಂದರ್ಭದಲ್ಲಿ ಬಳಸುವ ಅತ್ಯಾಧುನಿಕ ಉಪಕರಣಗಳ ಪ್ರದರ್ಶನ ನಡೆಸಲಾಯಿತು. ಇನ್ನೂ ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಸೇನೆ ಯೋಧರು ಇದು ಹೊಸ ಅನುಭವ ನೀಡುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಇದನ್ನೂ ಓದಿ; Russia-Ukraine: ರಷ್ಯಾದ ತೈಲ, ಇಂಧನದ ಮೇಲೆ ಅಮೆರಿಕ ನಿರ್ಬಂಧ.. ಇದು ಭಾರತದ ಮೇಲೆ ಪರಿಣಾಮ ಬೀರುತ್ತಾ?

ಜಂಟಿ ಸಮರಾಭ್ಯಾಸ,  ಸರ್ಜಿಕಲ್ ಸ್ಟ್ರೈಕ್ ಅಷ್ಟೇ ಅಲ್ಲ ಭಾರತದ ಸಮರ ಕಲೆಗಳು ಜಪಾನ್ ಕಮಾಂಡೋಗಳಿಗೆ ಕಲಿಸುವ ಕೆಲಸ ಮಾಡುವುದಲ್ಲದೇ, ಅವರ ಸಮರ ಕಲೆಗಳನ್ನ ಕಲಿತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಒಟ್ನಲ್ಲಿ ಭಾರತ ಯುದ್ಧ‌ಕಲೆಗಳಲ್ಲಿ ಮುಂದೆ ಇದ್ದು ಭಾರತ ತಂಟೆಗೆ ಬಂದ್ರೆ  ತಕ್ಕ ಪಾಠ ಕಲಿಸುವುದಾಗಿ ಈ ಮೂಲಕ ಶತ್ರು ದೇಶಕ್ಕೆ  ಖಡಕ್ಕಾಗಿ ಸಂದೇಶ ನೀಡಿದೆ.
Published by:Pavana HS
First published: