16ರ ಹಿಂದೂ ಹುಡುಗಿ ಹಿಂದೆ ಬಿದ್ದ ಮುಸ್ಲಿಂ ಯುವಕ.. ಒಲ್ಲೆ ಎಂದವಳಿಗೆ ನಡುರಸ್ತೆಯಲ್ಲಿ ತೋರಿಸಿದ ನರಕ

ರಸ್ತೆಯ ಮಧ್ಯೆ ಯುವತಿಯನ್ನು ತಡೆದು ನಾನು ಹೇಳಿದಂತೆ ಕೇಳದೆ ಇದ್ದರೆ ನಿನ್ನ ಇರೋಕೆ ಬಿಡಲ್ಲ ಅಂತ ಚಾಕುವಿನಿಂದ ಯುವತಿಯ ಬಲಗೈಗೆ ಇರಿದಿದ್ದಾನೆ. ನಂತರ   ಹೊಟ್ಟೆ ಹಾಗೂ ಎದೆಯ ಮಧ್ಯ ಭಾಗದಲ್ಲಿ ತೀವ್ರವಾಗಿ ಇರಿದು ಹತ್ಯೆ ಮಾಡಿದ್ದಾನೆ.

ಕೊಲೆಯಾದ ಹುಡುಗಿ, ಆರೋಪಿ ಅಮೀರ

ಕೊಲೆಯಾದ ಹುಡುಗಿ, ಆರೋಪಿ ಅಮೀರ

  • Share this:
ಬೆಳಗಾವಿ: ಯುವಕನೊಬ್ಬನ ಪ್ರೀತಿಯ ಹುಚ್ಚಾಟ ಒಂದು ಜೀವವನ್ನೇ ಬಲಿ ಪಡೆದಿದೆ. ಪ್ರೀತಿ ನಿರಾಕರಿಸಿದ ಅಪ್ರಾಪ್ತೆಯನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ರಾಯಬಾಗ ತಾಲೂಕಿನ ಹಾರೂಗೇರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೇರದಾಳದ ಅಮೀರ ಜಮಾದಾರ ಎಂಬಾತ ರಸ್ತೆಯಲ್ಲಿ 16 ವರ್ಷದ ಹುಡುಗಿಗೆ ಹತ್ತಾರು ಬಾರಿ ಚಾಕುವಿನಿಂದ ಇರಿದು ಬರ್ಬರ ಕೊಲೆ ಮಾಡಿದ್ದಾನೆ. ಆರೋಪಿ ಅಮೀರ ಜಮಾದಾರ ಯುವತಿಯನ್ನು ಹಲವು ದಿನಗಳಿಂದ ಪ್ರೀತಿಸುತ್ತಿದ್ದ. ಆದರೆ ಯುವತಿ ಅಮೀರನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ಅಮೀರ್​​ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಹಾಡುಹಗಲೇ ಕೊಲೆ ಮಾಡಿದ್ದಾರೆ.

ರಸ್ತೆಯ ಮಧ್ಯೆ ಯುವತಿಯನ್ನು ತಡೆದು ನಾನು ಹೇಳಿದಂತೆ ಕೇಳದೆ ಇದ್ದರೆ ನಿನ್ನ ಇರೋಕೆ ಬಿಡಲ್ಲ ಅಂತ ಚಾಕುವಿನಿಂದ ಯುವತಿಯ ಬಲಗೈಗೆ ಇರಿದಿದ್ದಾನೆ. ನಂತರ   ಹೊಟ್ಟೆ ಹಾಗೂ ಎದೆಯ ಮಧ್ಯ ಭಾಗದಲ್ಲಿ ತೀವ್ರವಾಗಿ ಇರಿದು ಹತ್ಯೆ ಮಾಡಿದ್ದಾನೆ. ತನ್ನ ತಂಗಿಯ ಜೊತೆಗೆ ಹಾರೂಗೇರಿ ಗ್ರಾಮದ ಜಾತ್ರೆಗೆ ಹೋಗಿ ತೋಟದ ಮನೆಗೆ ಬರುತ್ತಿದ್ದ ಯುವತಿ ನಡು ರಸ್ತೆಯಲ್ಲಿ ಬಂದ ರಾಕ್ಷಸನಿಗೆ ಬಲಿಯಾಗಿದ್ದಾಳೆ. ಯುವತಿ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡಿ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ  ಕೊನೆಯುಸಿರೆಳೆದಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆ ಕುಡಚಿ ಹಾಗೂ ಹಾರೂಗೇರಿ ಪೊಲೀಸ್ ಅಧಿಕಾರಿಗಳು ಆರೋಪಿಯ ಸೆರೆಗೆ ಮುಂದಾದರು. ಬಾಲಕಿಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಒಂದು ಕಡೆಯಾದರೆ ದುಡಿದು ಹೊಟ್ಟೆ ತುಂಬಿಕೊಳ್ಳಲು ಬಾಲಕಿಯ ಪೋಷಕರು ಅಥಣಿ ತಾಲೂಕಿನ ಪಿ ಕೆ ನಾಗನೂರ ಗ್ರಾಮದಿಂದ ಹಾರೂಗೆರಿಗೆ ಬಂದಿದ್ದರು ಆದರೆ ಈಗ ತಾವು ಮಾಡದ ತಪ್ಪಿಗೆ ಕರುಳ ಕುಡಿಯನ್ನೆ ಕಳೆದುಕೊಂಡು ಮರಗುತ್ತಿದ್ದಾರೆ. ಶಾಲೆಯಲ್ಲಿ ಓದಿನಲ್ಲಿ ಜಾಣೆಯಾಗಿದ್ದ ಮದ್ಯಮ ವರ್ಗದ ಮುಗ್ಧ ಹೆಣ್ಣುಮಗಳೊಬ್ಬಳು ಪೋಲಿ ಅಲೆಯುತ್ತಿದ್ದ ಯುವಕನ ಪ್ರೀತಿ ನಿರಾಕರಿಸಿದ ತಪ್ಪಿಗೆ ಬಲಿಯಾಗಿದ್ದಾಳೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನಿಗೆ ಮುಹೂರ್ತ ಇಟ್ಟ ಪತ್ನಿ: ಐದು ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯ

ಬಾಲಕಿಯನ್ನ ನಡುರಸ್ತೆಯಲ್ಲಿ ಕೈ ಹಿಡಿದು ಎಳೆದಾಡಿ ಮನುಷ್ಯತ್ವವನ್ನೆ ಮರೆತು ಚೂರಿಯಿಂದ ಬೇಕಾಬಿಟ್ಟಿಯಾಗಿ ಇರಿದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಅಲ್ಲೆ ಇದ್ದ ಅವನ ಗೆಳೆಯರು ಹಿಡಿದು ಹೊಡೆಯುತ್ತಿದ್ದಂತೆ, ಅಮೀರ ಜಮಾದಾರ ಕಬ್ಬಿನ ಗದ್ದೆಯ ಒಳಗೆ ಓಡಿಹೋಗಿ ಅವಿತುಕೊಂಡಿದ್ದಾನೆ. ವಿಷಯ ತಿಳಿದ ಪೋಲಿಸರು ಸ್ಥಳೀಯರ ಜೊತೆ ಸೇರಿ ರಾತ್ರಿ ಮೂರುಗಂಟೆಯ ವೇಳೆಗೆ ಆರೋಪಿಯನ್ನು ಪತ್ತೆ ಮಾಡಿ ಹೆಡೆಮುರಿ ಕಟ್ಟಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: