ಲಾಕ್​​​ಡೌನ್ ಎಫೆಕ್ಟ್; ಆನ್​​ಲೈನ್​​​ನಲ್ಲಿ ಸಸಿಗಳ ಮಾರಾಟಕ್ಕೆ ಮುಂದಾದ ಬೆಳಗಾವಿ ತೋಟಗಾರಿಕೆ ಇಲಾಖೆ!

ಮುಂದಿನ ವಾರದಿಂದ ರಾಜ್ಯಕ್ಕೆ ಮುಂಗಾರು ಪ್ರವೇಶ ಆಗಲಿದೆ. ಈ ಹಿನ್ನೆಲೆ ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳು ಆರಂಭವಾಗಲಿದೆ. ರೈತರಿಗೆ ಅನುಕೂಲ ಆಗುವ ದೃಷ್ಟಿಯಿಂದ ಆನ್ ಲೈನ್ ಮೂಲಕ ಸಸಿಗಳ ಮಾರಾಟಕ್ಕೆ ಬೆಳಗಾವಿ ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸಿದೆ.

news18-kannada
Updated:May 23, 2020, 6:25 PM IST
ಲಾಕ್​​​ಡೌನ್ ಎಫೆಕ್ಟ್; ಆನ್​​ಲೈನ್​​​ನಲ್ಲಿ ಸಸಿಗಳ ಮಾರಾಟಕ್ಕೆ ಮುಂದಾದ ಬೆಳಗಾವಿ ತೋಟಗಾರಿಕೆ ಇಲಾಖೆ!
ಪ್ರಾತಿನಿಧಿಕ ಚಿತ್ರ
  • Share this:
ಬೆಳಗಾವಿ(ಮಾ.23); ಜಗತ್ತಿನಾದ್ಯಂತ ಮಹಾಮಾರಿ ಕೊರೋನಾದಿಂದಾಗಿ ಜನರು ಮನೆಯಿಂದ ಹೊರ ಬರಲು ಭಯಭೀತರಾಗಿದ್ದಾರೆ. ಸುರಕ್ಷತೆಯ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ದೃಷ್ಠಿಯಲ್ಲಿ ಬೆಳಗಾವಿ ತೋಟಗಾರಿಕೆ ಇಲಾಖೆ ಕೃಷಿಕರಿಗೆ ಬೇಕಾದ ಸಸಿಗಳನ್ನು ಖರೀದಿಸಲು ಆನ್​ಲೈನ್​ ವ್ಯವಸ್ಥೆ ಮಾಡಿದೆ.

ಮುಂದಿನ ವಾರದಿಂದ ರಾಜ್ಯಕ್ಕೆ ಮುಂಗಾರು ಪ್ರವೇಶ ಆಗಲಿದೆ. ಈ ಹಿನ್ನೆಲೆ ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳು ಆರಂಭವಾಗಲಿದೆ. ರೈತರಿಗೆ ಅನುಕೂಲ ಆಗುವ ದೃಷ್ಟಿಯಿಂದ ಆನ್ ಲೈನ್ ಮೂಲಕ ಸಸಿಗಳ ಮಾರಾಟಕ್ಕೆ ಬೆಳಗಾವಿ ತೋಟಗಾರಿಕೆ ಇಲಾಖೆ ಸಿದ್ದತೆ ಮಾಡಿದೆ.

ಆಪೂಸ್ ತಳಿಯ ಮಾವು, ಕಾಲಿಪತ್ತಿ ತಳಿಯ ಸಪೋಟ, ಧೂಪದಾಳ ತಳಿಯ ನೇರಳೆ, ಎಲ್-49 ಲಲೀತ ತಳಿಯ ಪೇರಲೆ, ಬಾಲನಗರ ತಳಿಯ ಸೀತಾಫಲ, ಅರಸಿಕೇರೆ ತಳಿಯ ತೆಂಗು, ನಿಂಬೆ, ಕರಿಬೇವು ಸಸಿಗಳು ಆನ್ ಲೈನ್ ನಲ್ಲಿ ಲಭ್ಯವಿವೆ.

ಇದಲ್ಲದೆ ವಿವಿಧ ಅಲಂಕಾರಿಕ ಸಸಿಗಳು ಸಹ ಆನ್ ಲೈನ್ ನಲ್ಲಿ ಸಿಗಲಿದೆ. ತೋಟಗಾರಿಕೆ ಇಲಾಖೆಯಿಂದ ಅಭಿವೃದ್ಧಿ ಪಡಿಸಿದ ಗುಣಮಟ್ಟದ ಸಸಿಗಳು ಪೂರೈಕೆ ಮಾಡಲು ನಿರ್ಧಾರಿಸಿದೆ. ಪ್ರತಿ ವರ್ಷ ತೋಟಗಾರಿಕೆ ಇಲಾಖೆಯಿಂದ ಸಸ್ಯ ಸಂತೆಯನ್ನು ಮಾಡುತ್ತಾ ಬಂದಿದೆ. ಆದರೆ ಲಾಕ್ ಡೌನ್, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಂತೆ ಈ ಬಾರಿ ಸಾಧ್ಯವಾಗಿಲ್ಲ. ಹೀಗಾಗಿ ಆನ್ ಲೈನ್ ಮೂಲಕ ಸಸಿಗಳು ಮಾರಾಟಕ್ಕೆ ಇಲಾಖೆ ಮುಂದಾಗಿದೆ.

www.raithnamithrabelagavi.in ವೆಬ್ ಸೈಟ್ ಮೂಲಕ ಸಸಿಗಳನ್ನು ರೈತರು ಬುಕ್ ಮಾಡಬಹುದಾಗಿದ್ದು, ವೆಬ್ ಸೈಟ್ ನಲ್ಲಿ ಸಸಿಗಳ ಜತೆಗೆ ದರದ ಮಾಹಿತಿಯು ನೀಡಿದೆ. ಜೊತೆಗೆ ತಮಗೆ ಬೇಕಾಸ ಸಸಿಗಳನ್ನು ಬುಕ್ ಮಾಡಲು ಸಹ ಅವಕಾಶ ಕಲ್ಪಿಸಿದೆ.

ಜಿಲ್ಲೆಯ ಹಿಡಕಲ್, ಧೂಪದಾಳ, ಶೇಡಗಳ್ಳಿ, ಸವದತ್ತಿ, ಕಿತ್ತೂರು ಹಾಗೂ ಗುಂಡೇವಾಡಿಯ ತೋಟಗಾರಿಕೆ ಕ್ಷೇತ್ರದಲ್ಲಿ ಸಸಿಗಳನ್ನು ಬೆಳೆಸಲಾಗಿದೆ. ಸದ್ಯ ಬುಕ್ ಮಾಡುವ ರೈತರಿಗೆ ಜೂನ್ ತಿಂಗಳ ಮೊದಲ ವಾರದಲ್ಲಿ ಸಸಿಗಳ ವಿತರಣೆ ನಡೆಯಲಿದೆ.

ವರದಕ್ಷಿಣೆ ಪಿಡುಗಿಗೆ ಬಲಿಯಾದ ಕೊರೋನಾ ವಾರಿಯರ್; ಗುಮ್ಮಟ ನಗರಿಯಲ್ಲೊಂದು ದಾರುಣ ಘಟನೆ
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading